AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ತಿಕ ಮಾಸದುದ್ದಕ್ಕೂ ದಾನ ಧರ್ಮ ಮಾಡಿ, ಆದರೆ ಅಪ್ಪಿತಪ್ಪಿಯೂ ನಾಲ್ಕು ಕೆಟ್ಟ ಕೆಲಸ ಮಾಡಬೇಡಿ

ಕಾರ್ತಿಕ ಮಾಸದಲ್ಲಿ ದೀಪ ದಾನ ಮಾಡುವುದರಿಂದ ಮನೆಯಲ್ಲಿನ ಅಂಧಕಾರ ದೂರವಾಗುತ್ತದೆ. ನಕಾರಾತ್ಮಕತೆ ಛಾಯೆ ಹತ್ತಿರಕ್ಕೂ ಸುಳಿಯುವುದಿಲ್ಲ. ಹಾಗಾಗಿ ಈ ತಿಂಗಳಲ್ಲಿ ದೇವಸ್ಥಾನ, ತೀರ್ಥಯಾತ್ರೆ, ಪವಿತ್ರ ನದಿ ಸಂಚಾರ, ವೃಕ್ಷ ಮಾತೆಯ ಆರಾಧನೆಯಂತಹ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಜೊತೆಗೆ ದೀಪಾರಾಧನೆ ಮಾಡಿ. ಇದರಿಂದ ಮನೆಯಲ್ಲಿ ಧನ ಧಾನ್ಯ ತುಂಬಿಬರುತ್ತದೆ.

ಕಾರ್ತಿಕ ಮಾಸದುದ್ದಕ್ಕೂ ದಾನ ಧರ್ಮ ಮಾಡಿ, ಆದರೆ ಅಪ್ಪಿತಪ್ಪಿಯೂ ನಾಲ್ಕು ಕೆಟ್ಟ ಕೆಲಸ ಮಾಡಬೇಡಿ
ವಿಷ್ಣು
TV9 Web
| Edited By: |

Updated on: Oct 22, 2021 | 7:29 AM

Share

ಕಾರ್ತಿಕ ಮಾಸ ಎಂಬುದು ಅತ್ಯಂತ ಮಹತ್ವದ ತಿಂಗಳು. ಪೂಜೆ ಪುನಸ್ಕಾರಗಳಿಗೆ ಈ ತಿಂಗಳಲ್ಲಿ ಜಾಸ್ತಿಯಾಗಿರುತ್ತದೆ. ಹಾಗಾಗಿ ತಿಂಗಳ ಪೂರ್ತಿ ದಾನ ಧರ್ಮ ಮಾಡಿ, ಆದರೆ ಅಪ್ಪಿತಪ್ಪಿಯೂ ಈ 4 ಕೆಲಸ ಮಾಡಬೇಡಿ. ಹೀಗೆ ಕಾರ್ತಿಕ ಮಾಸದಲ್ಲಿ ಅನೇಕ ಶುಭ ಕಾರ್ಯಗಳು ಮಾಡುವುದರಿಂದ ಬಹಳಷ್ಟು ಒಳ್ಳೆಯದಾಗುತ್ತದೆ. ಯಾವುದು ಪುಣ್ಯ,ಯಾವುದು ಪಾಪ ಎಂಬುದನ್ನು ಇಲ್ಲಿ ತಿಳಿಯೋಣ.

ಹಿಂದೂ ಪಂಚಾಂಗದಲ್ಲಿ 8ನೆಯ ತಿಂಗಳು ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಭಗವಾನ್ ತನ್ನ ನಾಲ್ಕು ತಿಂಗಳ ನಿದ್ರಾವಸ್ಥೆಯನ್ನು ಪೂರೈಸಿ, ಭೂಮಂಡಲದಲ್ಲಿ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ. ಜೊತೆಗೆ ಲಕ್ಷ್ಮಿ ದೇವಿ ಸಹ ಶ್ರೀಮನ್ನಾರಾಯಣನ ಜೊತೆ ಭೂಲೋಕ ಸಂಚಾರವಾಸಿಗಳಾಗುತ್ತಾರೆ. ಹಾಗಾಗಿ ಈ ತಿಂಗಳಲ್ಲಿ ಧಾರ್ಮಿಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಉತ್ತಮ ನಡತೆ ತೀರಬೇಕು ಅಂದರೆ ಈ ಕೆಳಗಿನ ಕೆಲಸಗಳನ್ನು ಮಾಡಬೇಕು.

1. ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಿ: ವರ್ಷದುದ್ದಕ್ಕೂ ನೀವು ಎಷ್ಟೊತ್ತಿಗೆ ಆದರೂ ಎದ್ದೇಳಿ, ಆದರೆ ಈ ಕಾರ್ತಿಕ ಆಂಸದಲ್ಲಿ ಮಾತ್ರ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿಬಿಡಿ. ಇದರಿಂದ ತುಂಬಾ ಶುಭಪ್ರದವಾಗುತ್ತದೆ. ತಾವುದಾದರೂ ನದಿಯಲ್ಲಿ ನೀವು ಸ್ನಾನ ಮಾಡಿದರೆ ಅದು ಇನ್ನೂ ತುಂಬಾ ಒಳ್ಳೆಯದು. ಹಾಗೆ ನದಿಯಲ್ಲಿ ಸ್ನಾನ ಮಾಡಲು ಆಗಲಿಲ್ಲ ಎಂದಾದರೆ ಸ್ನಾನ ಮಾಡುವ ನೀರಿನಲ್ಲಿ ಒಂದಷ್ಟು ಗಂಗಾಜಲ ಹಾಕಿ, ಸ್ನಾನ ಮಾಡಿ. ಇದರಿಂದ ನಿಮಗೆ ಸೌಭಾಗ್ಯ ಒಲಿದುಬರುತ್ತದೆ.

2. ತುಳಸಿ ಪೂಜೆ ಮಾಡಿ: ಧರ್ಮ ಶಾಸ್ತ್ರಗಳಲ್ಲಿ ತುಳಸಿಯನ್ನು ಪವಿತ್ರ ಗಿಡ ಎಂದು ಪರಿಗಣಿಸಲಾಗಿದೆ. ಪವಿತ್ರ ತುಳಸಿಗೆ ಕಾರ್ತಿಕ ಮಾಸದಲ್ಲಿ ದಿನಾ ಪೂಜೆ ಮಾಡಿ. ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವುದಕ್ಕೆ ವಿಶೇಷ ವಿಧಾನ ಇದೆ ಎಂಬುದನ್ನು ತಿಳಿಯಿರಿ. ಪುರಾಣಗಳಲ್ಲಿ ಹೇಳಿರುವಂತೆ ಕಾರ್ತಿಕ ಮಾಸದುದ್ದಕ್ಕೂ ತುಳಸಿಕಟ್ಟೆಯ ಮುಂದೆ ದೀಪಗಳ ಸಾಲು ಹಚ್ಚಿ, ಪೂಜೆ ಮಾಡುವುದರಿಂದ ಹೆಚ್ಚು ಪುಣ್ಯ ಲಭಿಸುತ್ತದೆ.

3. ದೀಪಾರಾಧನೆ ಮಾಡಿ: ಕಾರ್ತಿಕ ಮಾಸದಲ್ಲಿ ದೀಪ ದಾನ ಮಾಡುವುದರಿಂದ ಮನೆಯಲ್ಲಿನ ಅಂಧಕಾರ ದೂರವಾಗುತ್ತದೆ. ನಕಾರಾತ್ಮಕತೆ ಛಾಯೆ ಹತ್ತಿರಕ್ಕೂ ಸುಳಿಯುವುದಿಲ್ಲ. ಹಾಗಾಗಿ ಈ ತಿಂಗಳಲ್ಲಿ ದೇವಸ್ಥಾನ, ತೀರ್ಥಯಾತ್ರೆ, ಪವಿತ್ರ ನದಿ ಸಂಚಾರ, ವೃಕ್ಷ ಮಾತೆಯ ಆರಾಧನೆಯಂತಹ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಜೊತೆಗೆ ದೀಪಾರಾಧನೆ ಮಾಡಿ. ಇದರಿಂದ ಮನೆಯಲ್ಲಿ ಧನ ಧಾನ್ಯ ತುಂಬಿಬರುತ್ತದೆ.

4. ದಾನ ಮಾಡುವುದು ಶುಭದಾಯಕ: ಧರ್ಮ ಶಾಸ್ತ್ರಗಳಲ್ಲಿ ದಾನ ಮಾಡುವುದು ಶುಭದಾಯಕವಾಗಿದೆ. ಇದು ನಿಮ್ಮ ಕೆಟ್ಟ ಕರ್ಮಗಳ ಫಲವನ್ನು ದೂರ ಮಾಡಿಬಿಡುತ್ತದೆ. ಜೀವನವನ್ನು ಸುಖದಾಯವಾಗಿಸುತ್ತದೆ. ಕಾರ್ತಿಕ ಮಾಸದಲ್ಲಿ ಕೆಲವು ವಿಶೇಷ ಧವಸ ಧಾನ್ಯಗಳನ್ನು ದಾನ ಮಾಡಿ. ಅದರಲ್ಲಿ ಅನ್ನದಾನ ಶ್ರೇಷ್ಠದಾನ. ತುಳಸಿ ಅಥವಾ ನೆಲ್ಲಿಕಾಯಿ ಗಿಡಗಳನ್ನು ದಾನ ಮಾಡಿ. ಗೋದಾನ ತುಂಬಾ ಪುಣ್ಯದ ಕಾರ್ಯ.

(kartik month 2021 this month should be full of charity and donations 4 things that you should do)

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ