MahaLakshmi Vrat 2023: ಇಂದು ಮಹಾಲಕ್ಷ್ಮಿ ವ್ರತದ ಕೊನೆಯ ದಿನ, ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ಈ ವರ್ಷ ಮಹಾಲಕ್ಷ್ಮಿ ವ್ರತವು ಸೆಪ್ಟೆಂಬರ್ 22ರಂದು ಪ್ರಾರಂಭವಾಗಿದ್ದು, ಇದು ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಅಂದರೆ ಇಂದು(ಅ06) ಕೊನೆಗೊಳ್ಳುತ್ತಿದೆ. ಆದ್ದರಿಂದ ನಿಮ್ಮ ವ್ರತವು ಸಂಪೂರ್ಣವಾಗಿ ಫಲಪ್ರದವಾಗಬೇಕಾದರೆ ಈ ಕೊನೆಯ ದಿನದಂದು ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.

MahaLakshmi Vrat 2023: ಇಂದು ಮಹಾಲಕ್ಷ್ಮಿ ವ್ರತದ ಕೊನೆಯ ದಿನ, ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
Maha Lakshmi Vrat 2023Image Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Oct 06, 2023 | 11:03 AM

ಇಂದು ಪಿತೃ ಪಕ್ಷದಲ್ಲಿ ಬರುವ ಮಹಾಲಕ್ಷ್ಮೀ ವೃತದ ಕೊನೆಯ ದಿನ. ಈ ವರ್ಷ ಸೆಪ್ಟೆಂಬರ್ 22 ರಿಂದ ಪ್ರಾರಂಭವಾದ ಈ ಉಪವಾಸವನ್ನು 16 ದಿನಗಳವರೆಗೆ ಅಂದರೆ ಇಂದಿನ ವರೆಗೆ ಆಚರಿಸಲಾಗುತ್ತದೆ. 16 ದಿನಗಳಲ್ಲಿ ಯಾರಿಗಾದರೂ ಮಹಾಲಕ್ಷ್ಮಿಯ ವ್ರತವನ್ನು ಆಚರಿಸಲು ಸಾಧ್ಯವಾಗದಿದ್ದರೆ, ಈ ಉಪವಾಸವನ್ನು ಆಚರಿಸಲು ಇಂದು ಕೊನೆಯ ಅವಕಾಶವಾಗಿದೆ. ಹಿಂದೂ ಧರ್ಮದಲ್ಲಿ ಮಹಾಲಕ್ಷ್ಮಿ ಉಪವಾಸಕ್ಕೆ ಹೆಚ್ಚಿನ ಮಹತ್ವವಿದೆ. ಈ ಅವಧಿಯಲ್ಲಿ, ಒಬ್ಬರು ಲಕ್ಷ್ಮಿ ದೇವಿಗೆ 16 ದಿನಗಳ ಕಾಲ ಉಪವಾಸವನ್ನು ಆಚರಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವು ಶಾಶ್ವತವಾಗಿ ನಿಮ್ಮ ಮೇಲಿರುತ್ತದೆ ಎಂಬುದು ನಂಬಿಕೆ.

ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಅಂದರೆ ಇಂದು ಕೊನೆಗೊಳ್ಳುವ ಈ ದಿನ ಲಕ್ಷ್ಮಿ ದೇವಿಯನ್ನು ಹಿಂದೂ ಸಂಪ್ರದಾಯದ ವಿಧಿವಿಧಾನಗಳ ಪ್ರಕಾರ ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕುಟುಂಬವು ಸಮೃದ್ಧಿಯನ್ನು ಹೊಂದುತ್ತದೆ. ಅನೇಕ ಜನರು ತಮ್ಮ ಮಕ್ಕಳ ದೀರ್ಘಾಯುಷ್ಯ ಮತ್ತು ಉತ್ತಮ ಭವಿಷ್ಯಕ್ಕಾಗಿ ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಸಂಜೆ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ, ಅವರು ನಕ್ಷತ್ರಗಳಿಗೆ ಅರ್ಘ್ಯವನ್ನು ಅರ್ಪಿಸಿ ಉಪವಾಸವನ್ನು ಮುರಿಯುತ್ತಾರೆ.

ಇದನ್ನೂ ಓದಿ: ಪಿತೃಪಕ್ಷದ ಆಚರಣೆ, ಮಹತ್ವ, ಧರ್ಮ ಸಮ್ಮತವಾದ ಶಾಸ್ತ್ರೋಕ್ತ ವಿವರಗಳು ಇಲ್ಲಿವೆ

ಮಹಾಲಕ್ಷ್ಮಿ ವ್ರತದ ಕೊನೆಯ ದಿನ ಈ ತಪ್ಪುಗಳನ್ನು ಮಾಡಬೇಡಿ:

ಮಹಾಲಕ್ಷ್ಮಿ ವ್ರತದ ದಿನದಂದು ವಿಶೇಷ ಕಾಳಜಿ ವಹಿಸಬೇಕಾದ ಕೆಲವು ನಿಯಮಗಳನ್ನು ತಿಳಿಸಲಾಗಿದೆ. ಮಹಾಲಕ್ಷ್ಮಿ ವ್ರತದ ದಿನ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.

  • ಮಹಾಲಕ್ಷ್ಮಿಯ ವ್ರತವನ್ನು ಆಚರಿಸುವ ಮೊದಲು, ಶುದ್ಧೀಕರಣ ಬಹಳ ಮುಖ್ಯ.ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಿ. ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿ.
  • ಮಹಾಲಕ್ಷ್ಮಿ ವ್ರತದ ಉಪವಾಸವನ್ನು ಸಂಜೆ ವಿಧಿವಿಧಾನಗಳೊಂದಿಗೆ ಕೊನೆಗೊಳಿಸಲಾಗುತ್ತದೆ. ಆದರೆ ಈ ದಿನ ಲಕ್ಷ್ಮೀ ನಾರಾಯಣ ಮಂತ್ರ ಪಠಿಸಲು ಮರೆಯಬೇಡಿ. ಈ ಮಂತ್ರ ಪಠಣೆಯಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗಿದ್ದಾಳೆ.
  • ಮಹಾಲಕ್ಷ್ಮಿ ವ್ರತದ ದಿನ ಯಾರಿಗೂ ಸಾಲ ಕೊಡಬೇಡಿ, ಯಾರ ಬಳಿಯೂ ಸಾಲ ಮಾಡಬೇಡಿ.
  • ಈ ದಿನ ತಪ್ಪಾಗಿಯೂ ಯಾರನ್ನೂ ಅವಮಾನಿಸಬೇಡಿ ಅಥವಾ ಕೋಪಗೊಳ್ಳಬೇಡಿ. ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು. ಉಪವಾಸದ ಸಮಯದಲ್ಲಿ ಮನಸ್ಸು ಸಂಪೂರ್ಣವಾಗಿ ಶಾಂತವಾಗಿರಬೇಕು.
  • ಈ ದಿನ ಪ್ರತೀಕಾರದ ವಿಷಯಗಳಿಂದ ದೂರವಿರಬೇಕು. ಹೀಗೆ ಮಾಡದಿದ್ದರೆ ತಾಯಿ ಲಕ್ಷ್ಮಿಗೆ ಕೋಪ ಬರಬಹುದು.
  • ಮಹಾಲಕ್ಷ್ಮಿ ವ್ರತದ ದಿನ  ಸೋಮಾರಿಗಳಾಗಬೇಡಿ, ಅಂದರೆ ಇಡೀ ದಿನ ಮಲಗಿಕೊಂಡೇ ಇರಬೇಡಿ. ಇದರಿಂದಾಗಿ ಉಪವಾಸದ ಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ