‘ಹೌಸ್‌ಫುಲ್ 5’ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಕೇಳಿ ಬರ್ತಿದೆ ಹೊಸ ಅಪ್ಡೇಟ್
Housefull 5 OTT Release date: ‘ಹೌಸ್‌ಫುಲ್ 5’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಚಿತ್ರದ ಒಟಿಟಿ ಬಿಡುಗಡೆಯ ಬಗ್ಗೆ ಸಾಕಷ್ಟು ಕುತೂಹಲವಿದೆ. ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾನ ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದು.

ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್ ನಟನೆಯ ‘ಹೌಸ್‌ಫುಲ್ 5′ ಚಿತ್ರ ಪ್ರಪಂಚದಾದ್ಯಂತ ಜೂನ್ ಆರಂಭದಲ್ಲಿ ರಿಲೀಸ್ ಆಯಿತು. ಈ ಚಿತ್ರವನ್ನು ಸಾಜಿದ್ ನಾಡಿಯಾದ್ವಾಲಾ ನಿರ್ಮಾಣ ಮಾಡಿದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿಯೂ ಉತ್ತಮ ವ್ಯಾಪಾರ ಮಾಡುತ್ತಿದೆ. ಆದರೆ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯುತ್ತಿದೆ. ಅದೇ ರೀತಿ, ‘ಹೌಸ್‌ಫುಲ್ 5’ನ (Housefull 5) OTT ಬಿಡುಗಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಚಿತ್ರ ಯಾವಾಗ ಮತ್ತು ಯಾವ OTT ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತದೆ ಎಂದು ತಿಳಿಯಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.
ಜೂನ್ 6ರಂದು ಚಿತ್ರವು ಬಿಡುಗಡೆಯಾಯಿತು. ಮೊದಲ ದಿನ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಒಳ್ಳೆಯ ಕಮಾಯಿ ಮಾಡಿತು. ಆದಾಯದ ಅಂಕಿ ಅಂಶಗಳು ಕ್ರಮೇಣ ಹೆಚ್ಚಿವೆ. ಈ ಸಿನಿಮಾದ ಒಟಿಟಿ ಬಿಡುಗಡೆಗಾಗಿ ಅನೇಕರು ಕಾಯುತ್ತಿದ್ದಾರೆ. ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಲು ಸಮಯವಿಲ್ಲದವರಿಗೆ ಅಥವಾ ಮನೆಯಲ್ಲಿ ಅಥವಾ ಮೊಬೈಲ್‌ನಲ್ಲಿ ಚಿತ್ರವನ್ನು ವೀಕ್ಷಿಸಲು ಬಯಸುವವರಿಗೆ, OTT ಬಿಡುಗಡೆಯ ಬಗ್ಗೆ ಮಾಹಿತಿ ಬಂದಿದೆ. ಈ ಹಾಸ್ಯ ಚಿತ್ರದ ಡಿಜಿಟಲ್ ಹಕ್ಕುಗಳು ಅಮೆಜಾನ್ ಪ್ರೈಮ್ ವೀಡಿಯೊ ಬಳಿ ಇವೆ.
‘ಹೌಸ್‌ಫುಲ್ 5′ ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ ನಂತರ ನೇರವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಆದರೆ ಈ ಸ್ಟ್ರೀಮಿಂಗ್ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದ ವೇಳೆಗೆ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬಹುದು. ಒಂದು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಅದರ ಒಟಿಟಿ ಸ್ಟ್ರೀಮಿಂಗ್‌ಗೆ ಸುಮಾರು 45 ರಿಂದ 60 ದಿನಗಳು ತೆಗೆದುಕೊಳ್ಳಬಹುದು. ‘ಹೌಸ್‌ಫುಲ್ 5′ ಚಿತ್ರದಲ್ಲೂ ಹೀಗೆಯೇ ಆಗಲಿದೆ. ಅಂದರೆ, ಇನ್ನು 3 ವಾರಗಳಲ್ಲಿ ಸಿನಿಮಾ ಒಟಿಟಿಗೆ ಬರಲಿದೆ.
ಇದನ್ನೂ ಓದಿ: ‘ಹೌಸ್‌ಫುಲ್’ ಸಿನಿಮಾ ಕಾರಣಕ್ಕೆ ವಿದೇಶದಲ್ಲಿ ಬಂಧನಕ್ಕೊಳಗಾಗುತ್ತಿದ್ದ ಚಂಕಿ ಪಾಂಡೆ
‘ಹೌಸ್‌ಫುಲ್ 5′ ಭಾರತದಲ್ಲಿ 188 ಕೋಟಿ ರೂ. ಗಳಿಸಿದೆ. ವಿಶ್ವಾದ್ಯಂತದ ಗಳಿಕೆ 244 ಕೋಟಿ ರೂ. ತಲುಪಿದೆ. ಈ ಚಿತ್ರದ ಬಜೆಟ್ 200 ಕೋಟಿ ರೂ. ಎಂದು ವರದಿಯಾಗಿದೆ. ಈ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್ನ ಇಡಲಾಗಿದೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.