Shani Jayanti 2021: ಶನಿ ದೇವರ ಆರಾಧನೆಯ ಮಹತ್ವ, ಪೂಜಾ ವಿಧಾನ ತಿಳಿಯಿರಿ

ಶನಿ ಜಯಂತಿ: ಅಮಾವಾಸ್ಯೆಯ ದಿನದಂದು ಪವಿತ್ರವಾದ ಶುದ್ಧ ಜನದಲ್ಲಿ ಸ್ನಾನ ಮಾಡಿ ಶನಿ ದೇವನ ಮೊರೆ ಹೋಗುವ ಪದ್ಧತಿ ಸಾಂಪ್ರದಾಯಿಕವಾಗಿ ಬಂಧಂತದ್ದು. ನಾವು ಗೊತ್ತಿದ್ದು ಮಾಡಿರುವ ಹಾಗೂ ಕೆಲವು ಅಚಾತುರ್ಯದಿಂದ ನಡೆದ ತಪ್ಪುಗಳಿಗೆಲ್ಲಾ ಶನಿ ದೇವನು ಫಲ ನೀಡುತ್ತಾನೆ ಎಂಬ ನಂಬಿಕೆ ಇದೆ.

Shani Jayanti 2021: ಶನಿ ದೇವರ ಆರಾಧನೆಯ ಮಹತ್ವ, ಪೂಜಾ ವಿಧಾನ ತಿಳಿಯಿರಿ
ಶನಿ ಜಯಂತಿ

ನಾವು ಮಾಡಿದ ತಪ್ಪು-ಸರಿಗಳಿಗೆ ಶನೀಶ್ವರ ನಮಗೆ ತಕ್ಕ ಫಲ ಕೊಡುತ್ತಾನೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ಇಂದು (ಜೂನ್​ 10) ಶನೀಶ್ವರನ ಆರಾಧನೆಯನ್ನು ಮಾಡಲಾಗುತ್ತಿದೆ. ಶನಿ ದೇವರನ್ನು ಆರಾಧನೆಯ ಮಹತ್ವವೇನು ಮತ್ತು ಈ ದಿನವನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತಾಗಿ ತಿಳಿದುಕೊಳ್ಳೋಣ.

ಶನಿ ದೇವನು ಜ್ಯೇಷ್ಠ ಅಮಾವಾಸ್ಯೆಯ ದಿನದಂದು ಹುಟ್ಟಿದನು. ಹಾಗಾಗಿ ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನದಂದು ಪವಿತ್ರವಾದ ಶುದ್ಧ ಜಲದಲ್ಲಿ ಸ್ನಾನ ಮಾಡಿ ಶನಿ ದೇವನ ಮೊರೆ ಹೋಗುವ ಪದ್ಧತಿ ಸಾಂಪ್ರದಾಯಿಕವಾಗಿ ಬಂಧಂತದ್ದು. ನಾವು ಗೊತ್ತಿದ್ದು ಮಾಡಿರುವ ಹಾಗೂ ಕೆಲವು ಅಚಾತುರ್ಯದಿಂದ ನಡೆದ ತಪ್ಪುಗಳಿಗೆಲ್ಲಾ ಶನಿ ದೇವನು ಫಲ ನೀಡುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಇಂದು ಶನಿ ದೇವರ ಮಂತ್ರ ಪಠಿಸುತ್ತಾ ಈ ದಿನ ಭಕ್ತರು ಧ್ಯಾನಸ್ಥರಾಗುತ್ತಾರೆ.

ಇಂದಿನ ಪೂಜಾ ಕ್ರಮ ಹೇಗೆ?
ನಿನ್ನೆ ಮಧ್ಯಾಹ್ನ 1 ಗಂಟೆ 57 ನಿಮಿಷದಿಂದ ಶನಿ ದೇವರ ಪೂಜೆಯ ಮೂಹೂರ್ತ ಪ್ರಾರಂಭವಾಗಿದೆ. ಇಂದು ಸಂಜೆ ನಾಲ್ಕು ಗಂಟೆ 22 ನಿಮಿಷದ ವರೆಗೂ ಪೂಜಿಸಲು ಮುಹೂರ್ತವಿದೆ.

* ಶುದ್ಧ ನೀರಿನಲ್ಲಿ ಸ್ನಾನ ಮಾಡಿ
* ಶುಭ್ರ ಬಟ್ಟೆಯನ್ನು ಧರಿಸಿ
* ಇಂದು ಸಂಕಲ್ಪ ಕೈಗೊಳ್ಳಲು ಒಳ್ಳೆಯ ದಿನ
* ಪ್ರಾಮಾಣಿಕವಾಗಿ ವೃತವನ್ನು ಕೈಗೊಂಡು ಭಕ್ತಿಯಿಂದ ಶನಿ ದೇವರನ್ನು ನೆನೆಯಿರಿ
* ಎಳ್ಳೆಣ್ಣೆಯಿಂದ ದೀಪ ಬೆಳಗಿಸಿ
* ಹನುಮಾನ್​ ಚಾಲೀಸ​ ಮಂತ್ರವನ್ನು ಪಠಿಸಿ
* ನಿಮ್ಮ ಕೈಲಾದಷ್ಟು ದಾನ-ಧರ್ಮ ಮಾಡುವುದರದಲ್ಲಿ ಈ ದಿನವನ್ನು ತೊಡಗಿಸಿಕೊಳ್ಳಿ

ಈ ದಿನದಂದು ಏನು ಮಾಡಬಾರದು?
* ಅಕ್ಕಿ-ಗೋಧಿಯಿಂದ ತಯಾರಿಸಿ ಯಾವುದೇ ಆಹಾರವನ್ನು ಸೇವಿಸಬೇಡಿ
* ಈರುಳ್ಳಿ-ಬೆಳ್ಳಿ ಪದಾರ್ಥದಿಂದ ದೂರವಿರಿ
* ಮಾಂಸ-ಮೊಟ್ಟೆಗಳನ್ನು ಇಂದು ಸೇವಿಸುವುದು ಬೇಡ
* ತಂಬಾಕು-ಮದ್ಯ ಸೇವನೆಯನ್ನು ಇಂದು ಕಟ್ಟುನಿಟ್ಟಾಗಿ ಸೇವಿಸಿ
* ನಿಮ್ಮ ಕೋಪದ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ
* ಹೆಚ್ಚು ಚರ್ಚೆ ಅಥವಾ ವಾದಗಳಿಗೆ ಇಳಿಯಬೇಡಿ
* ಇತರರಿಗೆ ನೋವುಂಟು ಮಾಡುವ ಕೆಲಸಗಳನ್ನು ಮಾಡಬೇಡಿ

ಇದನ್ನೂ ಓದಿ:

ಜಗತ್ತಿಗೆ ಬೆಳಕು ನೀಡುವ ಸೂರ್ಯನ ಆರಾಧನೆಯಿಂದ ಬಾಳಲ್ಲಿರುವ ಕತ್ತಲು ದೂರವಾಗುತ್ತೆ; ಇಲ್ಲಿದೆ ಅಧಿಪತಿಯನ್ನು ಒಲಿಸಿಕೊಳ್ಳುವ ಮಂತ್ರಗಳು

Sade sati: ಏಳರಾಟ ಶನಿ ಅಂದರೇನು, ಏನಿದರ ಪ್ರಭಾವ, ಜನರು ಯಾಕಿಷ್ಟು ಹೆದರುತ್ತಾರೆ?