ಕೋಪ ಎಂಬುದು ಈ ನಾಲ್ಕು ರಾಶಿಯ ಜನರ ಬಳಿ ಸುಳಿಯುವುದೇ ಇಲ್ಲ, ಯಾಕೆ ಗೊತ್ತಾ?

ಬುಧ ಅಧಿಪತಿಯ ಈ ರಾಶಿಯವರು ತುಂಬಾ ಬುದ್ಧಿವಂತರು ಮತ್ತು ಸಾಹಸಿಗಳು. ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ. ಚೀರುವಿಕೆ, ಕೂಗಾಟವೆಂದರೆ ಇವರಿಗೆ ಆಗುವುದಿಲ್ಲ. ಪ್ರತಿ ಕ್ಷಣವೂ ಆನಂದದಿಂದ ಇರುತ್ತಾರೆ. ಅದೊಮ್ಮೆ ಅವರಿಗೆ ಕೋಪವೇ ಬಂದರೂ ಅದನ್ನು ತೋರ್ಪಡಿಸುವುದಿಲ್ಲ. ನುಗ್ಗಿ ಬರುವ ಕೋಪವನ್ನು ಒಳಗೊಳಗೇ ನುಂಗಿಬಿಡುತ್ತಾರೆ.

ಕೋಪ ಎಂಬುದು ಈ ನಾಲ್ಕು ರಾಶಿಯ ಜನರ ಬಳಿ ಸುಳಿಯುವುದೇ ಇಲ್ಲ, ಯಾಕೆ ಗೊತ್ತಾ?
ಈ 4 ರಾಶಿಯ ಜನರಿಗೆ ಶೀಘ್ರ ಕೋಪ ಉಕ್ಕುವುದಿಲ್ಲ; ಕೂಲ್​ ಕೂಲ್​ ಆಗಿದ್ದು ಪ್ರತಿಕ್ಷಣ ಆನಂದ ಅನುಭವಿಸುತ್ತಾರೆ!
Follow us
TV9 Web
| Updated By: ಆಯೇಷಾ ಬಾನು

Updated on: Oct 22, 2021 | 7:27 AM

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯ ಜನರಿಗೆ ತಕ್ಷಣಕ್ಕೆ ಕೋಪ ಬರುವುದಿಲ್ಲ. ಈ ರಾಶಿಯವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿ, ನಗುನಗುತಾ ಇರುತ್ತಾರೆ. ಅವರುಗಳ ಈ ಸ್ವಭಾವದಿಂದಾಗಿ ಎಲ್ಲರೂ ಅವರನ್ನು ಇಷ್ಟಪಡುತ್ತಾರೆ. ಆ ನಾಲ್ಕು ರಾಶಿಯ ಜನರನ್ನು ತಿಳಿಯೋಣ ಬನ್ನೀ.

ಕೆಲವರು ಇರುತ್ತಾರೆ ಸದಾ ಅವರ ಮೂಗುನ ತುದಿಯಲ್ಲಿ ಕೋಪ ಎಂಬುದು ನರ್ತನ ಮಾಡುತ್ತಿರುತ್ತದೆ. ಏನೋ ಸ್ವಲ್ಪ ವ್ಯತ್ಯಯದಿಂದ ಮಾತನಾಡಿದರೂ ಗುಮ್​ ಅಂತಾ ಕುಳಿತುಬಿಡ್ತಾರೆ. ಇಲ್ಲಾಂದ್ರೆ ಜೋರಾಗಿ ಕೂಗಾಡಿಬಿಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಸ್ವಭಾವದವರೂ ಇರುತ್ತಾರೆ. ಅವರಿಗೆ ನೀವು ಏನೇ ಹೇಳಿ, ಏನೇ ಮಾಡಿ. ಉಹುಃ ಬಲ್ಕುಲ್​ ಅವರು ಕದಲುವುದಿಲ್ಲ. ಅಂದರೆ ಶಾಂತ ಪರ್ವತದಂತೆ ಆರಾಮವಾಗಿ ಇದ್ದುಬಿಡುತ್ತಾರೆ. ನೀವು ಹೇಳಿದ್ದನ್ನು ಅವರು ತಮ್ಮ ಮನಸ್ಸಿಗೆ ಹಚ್ಚಿಕೊಳ್ಳುವುದೇ ಇಲ್ಲ. ಅವರು ಪ್ರತಿ ಕ್ಷಣದ ಆನಂದವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಇದೆಲ್ಲ ಮನುಷ್ಯ ಸ್ವಭಾವಗಳು ಅವರಜಾತಕದ ಪ್ರಕಾರ ನಡೆಯುತ್ತಿರುತ್ತವೆ. ಜ್ಯೋತಿಷ್ಯದ ಪ್ರಕಾರ ಪ್ರತಿವ್ಯಕ್ತಯ ಗುಣ ಅವಗುಣಗಳು ಅವರ ಜನ್ಮಸ್ಯ ಪ್ರಾಪ್ತಿಯಾಗಿರುವ ಜಾತಕದ ಅನುಸಾರವೇ ನಡೆಯುತ್ತದೆ. ಅದರ ಆಚೀಚೆ ಒಂಚೂರು ಘಟಿಸದು. ಈ ಗುಣ ಸ್ವಭಾವಗಳು ಅವರ ರಾಶಿ ಮತ್ತು ಗ್ರಹ ಗತಿಯಿಂದ ನಿರ್ದೇಶಿತವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯ ಜನ ತುಂಬಾ ಕೂಲ್​ ಕೂಲ್​ ಆಗಿರುತ್ತಾರೆ. ಬನ್ನೀ ಆ ರಾಶಿಯವರು ಯಾರು ಅಂತಾ ನೋಡೋಣ.

ಮಿಥುನ ರಾಶಿ: ಮಿಥುನ ರಾಶಿಯ ಜನ ತುಂಬಾ ಈಸಿ ಗೋಯಿಂಗ್​ ಆಗಿರುತ್ತಾರೆ. ಜಿಗುಟು ಸ್ವಭಾವದವರು ಅವರಲ್ಲ. ತಮ್ಮ ಲೆಕ್ಕಾಚಾರದಂತೆಯೇ ಜೀವನ ನಡೆಸುತ್ತಾರೆ. ಯಾರು ಏನೇ ಸಂದರೂ ತಮ್ಮ ಆನಂದದ ಲೆಕ್ಕವನ್ನು ಗೋಜಲು ಗೋಜಲು ಮಾಡಿಕೊಳ್ಳದೆ ಸ್ವಚ್ಚಂದವಾಗಿ ಇದ್ದುಬಿಡುತ್ತಾರೆ. ಬೇರೆಯವರು ಏನೇ ಹೇಳಿದರೂ ಅದರಲ್ಲಿ ತಮಗೆ ಎಷ್ಟು ಅನ್ವಯವಾಗುತ್ತದೋ, ತಾವು ಎಷ್ಟು ಜೀರ್ಣಿಸಿಕೊಳ್ಳಬಹುದೋ ಅಷ್ಟನ್ನು ಮಾತ್ರವೇ ತೆಗೆದುಕೊಂಡು ನೆಮ್ಮದಿಯಾಗಿ ಇದ್ದುಬಿಡುತ್ತಾರೆ. ಹಾಗಾಗಿಯೇ ಕೋಪ ಎಂಬುದು ಈ ರಾಶಿಯ ಜನರ ಬಳಿ ಸುಳಿಯುವುದೇ ಇಲ್ಲ. ಒಂದು ವೇಳೆ ಆಕಸ್ಮಾತ್​ ಇವರಿಗೆ ಕೋಪ ಬಂದೇ ಬಿಡ್ತು ಅನ್ನೀ.. ಅದು ಕ್ಷಣಿಕವಾಗಿದ್ದು ಅಲ್ಲಿಗಲ್ಲೇ ಕೊನೆಗೊಳ್ಳುತ್ತದೆ. ಶಾಂತಿ ಮತ್ತು ಸರಳತೆಯಿಂದ ಜೀವನ ನಡೆಸುವುದು ಇವರಿಗೆ ಹೆಚ್ಚು ಆಪ್ಯಾಯಮಾನವಾಗಿರುತ್ತದೆ.

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರ ದೇವರು ಚಂದ್ರ. ಚಂದ್ರನ ಸ್ವಭಾವದಂತೆ ಶಾಂತ ಮತ್ತು ಸೌಮ್ಯದವರಾಗಿರುತ್ತಾರೆ. ಕರ್ಕಾಟಕ ರಾಶಿಯವರು ಇತರರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಅಸಲಿಗೆ ಅವರಲ್ಲಿ ಕೋಪ ಉಕ್ಕುವುದಿಲ್ಲ. ಅಲ್ಲಿಗೂ ಒಮ್ಮೊಮ್ಮೆ ಕೋಪ ಬಂದರೂ ಅಷ್ಟೇ ಶೀಘ್ರವಾಗಿ ಕೋಪ ಅವರಿಂದ ದೂರವಾಗಿಬಿಡುತ್ತದೆ. ಈ ಗುಣ ವಿಶೇಷಗಳಿಂದಾಗಿಯೇ ಜನ ಇವರ ಬಳಿ ಬರುತ್ತಾರೆ.

ಕನ್ಯಾ ರಾಶಿ: ಬುಧ ಅಧಿಪತಿಯ ಈ ರಾಶಿಯವರು ತುಂಬಾ ಬುದ್ಧಿವಂತರು ಮತ್ತು ಸಾಹಸಿಗಳು. ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ. ಚೀರುವಿಕೆ, ಕೂಗಾಟವೆಂದರೆ ಇವರಿಗೆ ಆಗುವುದಿಲ್ಲ. ಪ್ರತಿ ಕ್ಷಣವೂ ಆನಂದದಿಂದ ಇರುತ್ತಾರೆ. ಅದೊಮ್ಮೆ ಅವರಿಗೆ ಕೋಪವೇ ಬಂದರೂ ಅದನ್ನು ತೋರ್ಪಡಿಸುವುದಿಲ್ಲ. ನುಗ್ಗಿ ಬರುವ ಕೋಪವನ್ನು ಒಳಗೊಳಗೇ ನುಂಗಿಬಿಡುತ್ತಾರೆ. ಇವರ ಜೊತೆ ಇರುವ ಪರಿವಾರದವರೂ ಸಹ ಇವರ ಶಾಂತ ಸ್ವಭಾವದ ದೆಸೆಯಿಂದ ಆನಂದದಿಂದ ಇದ್ದುಬಿಡುತ್ತಾರೆ.

ಕುಂಭ ರಾಶಿ: ಕುಂಭ ರಾಶಿಯ ಜನರು ತುಂಬಾ ಶಿಸ್ತುಬದ್ಧ, ನಿರ್ದಿಷ್ಟ ರೀತಿರಿವಾಜುಗಳೊಂದಿಗೆ ಜೀವನವನ್ನು ನಡೆಸುತ್ತಾರೆ. ಹಾಗಾಗಿಯೇ ಎಲ್ಲರೊಂದಿಗೆ ಅಡ್ಜಸ್ಟ್ ಜೀವನ ನಡೆಸುವುದಿಲ್ಲ. ತಮ್ಮ ಶಾಂತ ಸ್ವಭಾವವನ್ನು ಕಾಪಾಡಿಕೊಂಡು, ಜೀವನ ಮುನ್ನಡೆಸುತ್ತಾರೆ. ಬೇರೆಯವರ ಮಾತುಗಳನ್ನು ಕೇಳಿಸಿಕೊಂಡು ತಮ್ಮ ಕೂಲ್​ ಕೂಲ್​ ಸ್ವಭಾವವನ್ನು ಕಳೆದುಕೊಳ್ಳುವುದಿಲ್ಲ. ಆನಂದದ ಜೀವನವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಜೊತೆಗೆ ಸಂಬಂಧಗಳನ್ನೂ ಚೆನ್ನಾಗಿ ಉಳಿಸಿಕೊಳ್ಳುತ್ತಾರೆ. ಇತರರಿಗೆ ನೆರವಾಗುವ ಮತ್ತು ಬೇರೆಯವರ ಬಗ್ಗೆ ಕಾಳಜಿ ವಹಿಸುವ ಗುಣಗಳಿಂದಾಗಿ ಇವರು ಇತರರಿಗೆ ಇಷ್ಟವಾಗುತ್ತಾರೆ.

(these 4 zodiac sign people do not get angry enjoy every moment they are cool know these zodiacs )

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು