Car Insurance Claim: ಟಾಟಾ ಎಐಜಿ ಕಾರ್ ಇನ್ಷೂರೆನ್ಸ್ ಕ್ಲೈಮ್ ಮಾಡುವಾಗ ಈ ಸಂಗತಿಗಳು ತಿಳಿದಿರಲಿ
Know Easy Ways To Claim Car Insurance: ಕಾರ್ ಇನ್ಷೂರೆನ್ಸ್ ಮಾಡಿಸಿ, ಅದನ್ನು ಕ್ಲೈಮ್ ಮಾಡುವಾಗ ಬಹಳ ತಲೆನೋವು ಎನಿಸುವುದು ಹೌದು. ಆದರೆ, ಯಾವುದೇ ರಗಳೆ ಇಲ್ಲದೇ ಕಾರ್ ಇನ್ಷೂರೆನ್ಸ್ ಕ್ಲೈಮ್ ಮಾಡಲು ಸಾಧ್ಯ. ಕ್ಲೈಮ್ ಮಾಡುವ ಪ್ರಕ್ರಿಯೆ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇದ್ದರೆ ಯಾವುದೇ ರೀತಿಯ ಅಡೆತಡೆಗಳನ್ನು ದಾಟಿ ಹೋಗಲು ನೀವು ಶಕ್ತರಾಗಿರುತ್ತೀರಿ.
ನಾಲ್ಕು ಚಕ್ರ ವಾಹನಗಳ (4-Wheelers) ಇನ್ಷೂರೆನ್ಸ್ ಕ್ಲೈಮ್ ಅರ್ಜಿಗಳು ತಿರಸ್ಕೃತಗೊಳ್ಳುವುದು ಬಹಳ ಸರ್ವೇಸಾಮಾನ್ಯವಾಗಿದೆ. ಬಹಳ ಮಂದಿಗೆ ಇದು ಅನುಭವಕ್ಕೆ ಬಂದಿರಬಹುದು. ಪಾಲಿಸಿದಾರರು ತಮ್ಮ ಕ್ಲೈಮ್ ಯಾಕೆ ತಿರಸ್ಕೃತಗೊಂಡಿತು (Rejection of Insurance Claim) ಎಂಬುದನ್ನು ಅರಿತುಕೊಳ್ಳಬೇಕು. ಅದೇನೇ ಇರಲಿ, ನಿಮಗೆ ಸಹಾಯಕ್ಕೆಂದು ನಾವಿಲ್ಲಿ ಇದ್ದೇವೆ.
ನಿಮ್ಮ ಕಾರ್ ಇನ್ಷೂರೆನ್ಸ್ ಕ್ಲೈಮ್ ತಿರಸ್ಕೃತಗೊಳ್ಳುವ ಸಾಧ್ಯತೆಯನ್ನು ತೀರಾ ಕಡಿಮೆಗೊಳಿಸುವಂತಹ ಐದು ಪ್ರಮುಖ ಅಂಶಗಳನ್ನು ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ದಯವಿಟ್ಟು ತಪ್ಪದೇ ಈ ಓದು ಮುಂದುವರಿಸಿ…
ಕ್ಲೈಮ್ ಸಲ್ಲಿಸುವಾಗ ಈ 5 ಅಂಶಗಳು ನೆನಪಿನಲ್ಲಿರಲಿ
ಹೊಂಡಾ ಕಾರಿಗಾಗಲೀ, ಮಾರುತಿ ಕಾರಿಗಾಗಲೀ ನೀವು ಇನ್ಷೂರೆನ್ಸ್ ಕ್ಲೈಮ್ ಸಲ್ಲಿಸುವ ಪ್ರಕ್ರಿಯೆ ಹೆಚ್ಚು ಸರಾಗವಾಗಿ ಮತ್ತು ಯಶಸ್ವಿಯಾಗಿ ಸಾಗಲು ಹಲವು ಪ್ರಮುಖ ಅಂಶಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಈ ಕೆಳಕಾಣಿಸಿದ ಐದು ಅಂಶಗಳನ್ನು ಗಮನಿಸಿ ನೋಡಿ:
ಪೊಲೀಸರಿಗೆ ಘಟನೆಯ ಮಾಹಿತಿ ಕೊಡುವುದು ಮತ್ತು ದೂರು ಸಲ್ಲಿಸುವುದು
ನಿಮ್ಮ ಕಾರಿಗೆ ಹಾನಿಯಾಗಿ ಅದರ ಇನ್ಷೂರೆನ್ಸ್ ಕ್ಲೈಮ್ ಮಾಡುವ ಪ್ರಕ್ರಿಯೆಯಲ್ಲಿ ಮೊದಲ ಮುಖ್ಯ ಹೆಜ್ಜೆ ಎಂದರೆ ಪೊಲೀಸರಿಗೆ ಆ ಘಟನೆಯ ಮಾಹಿತಿ ನೀಡುವುದು ಮತ್ತು ಎಫ್ಐಆರ್ ದಾಖಲಿಸುವುದು. ಯಾವುದೇ ರೀತಿಯ ಕ್ಲೈಮ್ ಅದಾಗಿರಲಿ, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಲ್ಲಿಕೆಯಾಗುವುದು ಬಹಳ ಅಗತ್ಯ. ಅಪಘಾತ, ಕಳ್ಳತನ, ಅಥವಾ ಥರ್ಡ್ ಪಾರ್ಟಿ ಇಂಜುರಿ ಇತ್ಯಾದಿ ಘಟನೆಗಳಲ್ಲಿ ಇನ್ಷೂರೆನ್ಸ್ ಕ್ಲೈಮ್ ಮಾಡಲು ಎಫ್ಐಆರ್ ಬಹಳ ಅವಶ್ಯಕ. ಆದ್ದರಿಂದ ಘಟನೆ ಸಂಭವಿಸಿದ ಕೂಡಲೇ ನೀವು ಪೊಲೀಸರಿಗೆ ಮಾಹಿತಿ ಕೊಡುವುದು ಬಹಳ ಬಹಳ ಮುಖ್ಯ.
ನೀವು ಕ್ಲೈಮ್ ಮಾಡುವಾಗ, ಎಫ್ಐಆರ್ನ ಒಂದು ಪ್ರತಿಯನ್ನು ನಿಮ್ಮಲ್ಲಿ ಇಟ್ಟುಕೊಂಡು, ಇನ್ನೊಂದು ಪ್ರತಿಯನ್ನು ಇನ್ಷೂರೆನ್ಸ್ ಕ್ಯಾರಿಯರ್ಗೆ ಕೊಡಿ. ಈ ಎಫ್ಐಆರ್ ಎಂಬುದು ಘಟನೆಯ ಪ್ರಮುಖ ಮಾಹಿತಿಯನ್ನು ಹೊಂದಿರುವ ಅಧಿಕೃತ ದಾಖಲೆ ಆಗಿರುತ್ತದಾದ್ದರಿಂದ ಕಾರ್ ಇನ್ಷೂರೆನ್ಸ್ ಕಂಪನಿ ಅನಗತ್ಯವಾಗಿ ವಿಳಂಬಿಸದೇ ಕ್ಲೇಮ್ ಅರ್ಜಿಯನ್ನು ಪುರಸ್ಕರಿಸುತ್ತದೆ. ಈ ಕೆಳಗಿನ ವಿಧಾನವನ್ನು ಅನುಸರಿಸಿದರೆ ನೀವು ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ ಮಾಡಬಹುದು.
- ಅಪಘಾತ ಸ್ಥಳದಲ್ಲಿ ಪ್ರಮುಖ ಸಾಕ್ಷ್ಯಾಧಾರ ಕಲೆಹಾಕುವುದು
ಅಪಘಾತ ಅಥವಾ ಕಳ್ಳತನ ಘಟನೆಗಳನ್ನು ದೃಢೀಕರಿಸುವ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಅದನ್ನು ತಪ್ಪದೇ ಕಲೆಹಾಕಿ. ಇದು ನಿಮ್ಮ ಇನ್ಷೂರೆನ್ಸ್ ಕ್ಲೈಮ್ಗೆ ಸಹಾಯಕವಾಗುತ್ತದೆ. ನೀವು ಎಚ್ಚರಿಕೆಯಿಂದ ಇದ್ದರೆ ನಿಮ್ಮ ಪ್ರಕರಣ ಬಲಪಡಿಸುವಂತಹ ಮಾಹಿತಿಯನ್ನು ಕಲೆಹಅಕಬಹುದು. ಸಾಕ್ಷ್ಯಾಧಾರಗಳನ್ನು ಹೇಗೆಲ್ಲಾ ಸಂಗ್ರಹಿಸಬಹುದು ಎಂಬುದು ಈ ಕೆಳಕಂಡಂತಿದೆ:
- ನಿಮ್ಮ ವಾಹನಕ್ಕೆ ಹಾನಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುವಂತೆ ಒಂದು ಫೋಟೋ ಕ್ಲಿಕ್ಕಿಸಿ.
- ಘಟನೆ ಅಥವಾ ಕಳ್ಳತನ ಘಟನೆಗೆ ಸಾಕ್ಷಿಯಾಗುವಂತಹ ವಿಡಿಯೋ ರೆಕಾರ್ಡಿಂಗ್ ಮಾಡಿ.
- ಘಟನೆ ವೇಳೆ ಏನೇನು ಆಯಿತು ಎಂಬುದನ್ನು ಬರೆದಿಡಿ.
- ಘಟನೆ ವೇಳೆ ಸ್ಥಳದಲ್ಲಿದ್ದವರು ಯಾರಾದರೂ ಇದ್ದರೆ ಅವರ ಹೆಸರು, ವಿಳಾಸ ಮತ್ತು ಫೋನ್ ನಂಬರ್ಗಳನ್ನು ಪಡೆದುಕೊಳ್ಳಿ
- ನೀವು ಕಾರ್ ಇನ್ಷೂರೆನ್ಸ್ ಕ್ಲೈಮ್ ಸಲ್ಲಿಸುವಾಗ ಎಫ್ಐಆರ್ ಪ್ರತಿ ಜೊತೆಗೆ ನೀವು ಕಲೆಹಾಕಿದ ಸಾಕ್ಷ್ಯಗಳನ್ನೂ ಸೇರಿಸಿ.
ಇನ್ಷೂರೆನ್ಸ್ ಪ್ರೊವೈಡರ್ಗೆ ಸೂಕ್ತ ಮಾಹಿತಿ ನೀಡುವುದು
ನೀವು ಎಲ್ಲಾ ಅಗತ್ಯ ಮಾಹಿತಿ ಕಲೆಹಾಕಿದ ಬಳಿಕ ಅದನ್ನು ಕಾರ್ ಇನ್ಷೂರೆನ್ಸ್ ಪ್ರೊವೈಡರ್ಗೆ ಕೊಡುವುದು ಬಹಳ ಮುಖ್ಯ ಹಂತ. ಈ ಪ್ರಕ್ರಿಯೆ ಸುಗಮವಾಗಿ ಆಗಲು ಈ ಕ್ರಮಗಳನ್ನು ಅನುಸರಿಸಿ:
- ಇನ್ಷೂರೆನ್ಸ್ ಕ್ಲೈಮ್ ಫಾರ್ಮ್ ಅನ್ನು ನಿಖರವಾಗಿ ಮತ್ತು ಪೂರ್ಣವಾಗಿ ಭರ್ತಿ ಮಾಡಿ. ನಿಮ್ಮ ಪಾಲಿಸಿಯ ಮಾಹಿತಿ ಮತ್ತು ಘಟನೆಯ ಎಲ್ಲಾ ಅಗತ್ಯ ವಿವರಗಳನ್ನು ಒದಗಿಸಿ. ಅರ್ಜಿ ಭರ್ತಿ ಮಾಡಿದ ಮೇಲೆ ಮತ್ತೊಮ್ಮೆ ಫಾರ್ಮ್ ಅನ್ನು ಮೊದಲಿಂದ ಕೊನೆಯವರೆಗೂ ಗಮನಿಸಿ ನೋಡಿ. ಯಾವ ಅಗತ್ಯ ವಿವರವೂ ಕೈತಪ್ಪಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ನೀವು ಕಲೆಹಾಕಿದ ಎಲ್ಲಾ ಸೂಕ್ತ ಸಾಕ್ಷ್ಯ ಹಾಗೂ ದಾಖಲೆಗಳನ್ನು ಕ್ಲೈಮ್ ಫಾರ್ಮ್ ಜೊತೆಗೆ ಸೇರಿಸಿ. ಈ ದಾಖಲೆಗಳು ಈ ಕೆಳಕಾಣಿಸಿದ್ದಿರಬಹುದು:
- ಕಾರ್ ಇನ್ಷೂರೆನ್ಸ್ ಪಾಲಿಸಿಯ ದಾಖಲೆ
- ಕಾರ್ನ ನೊಂದಣಿ ಪ್ರಮಾಣಪತ್ರ (RC- Registration Certification) ನಕಲು ಪ್ರತಿ
- ಚಾಲಕ ಪರವಾನಿಗೆ (ಡಿಎಲ್) ಪ್ರತಿ
- ಪೊಲೀಸರಿಗೆ ನೀವು ಸಲ್ಲಿಸಿದ ಎಫ್ಐಆರ್ನ ಪ್ರತಿ
- ನೀವು ಫೋರ್–ವೀಲರ್ನ ಆನ್ಲೈನ್ ಪಾಲಿಸಿ ಹೊಂದಿದ್ದರೆ ಅದನ್ನು ನಿಮ್ಮ ಅನುಕೂಲತೆಗೆ ಬಳಸಿಕೊಳ್ಳಬಹುದು. ಎಲ್ಲಾ ಅವಶ್ಯಕತ ಸಾಕ್ಷ್ಯ ಮತ್ತು ಪೂರಕ ದಾಖಲೆಗಳನ್ನು ಮನೆ ಅಥವಾ ಕಚೇರಿ ಹೀಗೆ ನಿಮಗೆ ಅನುಕೂಲಕರ ಸ್ಥಳದಲ್ಲಿದ್ದುಕೊಂಡೇ ಆನ್ಲೈನ್ನಲ್ಲಿ ಸಲ್ಲಿಕೆ ಮಾಡಬಹುದು. ಟಾಟಾ ಎಐಜಿ ಇತ್ಯಾದಿ ಬಹುತೇಕ ಇನ್ಷೂರೆನ್ಸ್ ಕಂಪನಿಗಳು ಆನ್ಲೈನ್ ಕ್ಲೈಮ್ ಸಲ್ಲಿಕೆ ಪ್ರಕ್ರಿಯೆಯನ್ನು ಬಹಳ ತ್ವರಿತವಾಗಿ ಮತ್ತು ಸಮರ್ಪಕವಾಗಿ ಕೈಗೊಳ್ಳುತ್ತವೆ.
- ನೀವು ಕ್ಲೈಮ್ ಸಲ್ಲಿಕೆ ಮಾಡಿದ ಬಳಿಕ ಇನ್ಷೂರೆನ್ಸ್ ಕಂಪನಿ ಅದನ್ನು ಪರಿಶೀಲಿಸುತ್ತದೆ. ಕೆಲವೇ ದಿನಗಳೊಳಗೆ ನಿಮ್ಮ ಕ್ಲೈಮ್ ಸ್ಥಿತಿ ಏನೆಂಬುದರ ಮಾಹಿತಿಯನ್ನು ನಿಮಗೆ ರವಾನಿಸುತ್ತದೆ. ಇನ್ಷೂರೆನ್ಸ್ ಕಂಪನಿ ಹೆಚ್ಚುವರಿ ಮಾಹಿತಿಯೋ ಅಥವಾ ಇನ್ನೇನಾದರೂ ಕೇಳಿದಾಗ ಅದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿ. ಇನ್ಷೂರೆನ್ಸ್ ಕಂಪನಿ ಜೊತೆ ಸಂಪರ್ಕದಲ್ಲಿ ಇರಿ.
ಕ್ಲೈಮ್ ಫಾರ್ಮ್ ಬರೆಯುವಾಗ ನಿಖರತೆ ಇರುವುದು ಮುಖ್ಯ
ಕ್ಲೈಮ್ ಫಾರ್ಮ್ ಅನ್ನು ನೀವು ಭರ್ತಿ ಮಾಡುವಾಗ ನಿಖರತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ಕೊಡಿ. ಸಣ್ಣ ವಿವರಗಳಿಗೂ ಗಮನ ಕೊಡುವುದು, ವ್ಯಾಕರಣ ದೋಷವೋ, ಅಕ್ಷರ ದೋಷವೋ ಆಗದಂತೆ ಎಚ್ಚರ ವಹಿಸುವುದೂ ಮುಖ್ಯ. ನಿಮ್ಮ ಕ್ಲೈಮ್ ಫಾರ್ಮ್ ಕರಾರುವಾಕ್ಕಾಗಿ ಇರಲು ಈ ಕ್ರಮ ಕೈಗೊಳ್ಳಿ:
ಫಾರ್ಮ್ ಫಿಲ್ ಮಾಡುವಾಗ ನಿಖರವಾದ ಮತ್ತು ಸತ್ಯವಾದ ಮಾಹಿತಿಯನ್ನು ಒದಗಿಸಿ. ಘಟನೆಯ ವಿವರವನ್ನು ಅತಿರೇಕವಾಗಿ ಬಣ್ಣಿಸುವುದು ಅಥವಾ ತಪ್ಪಾಗಿ ತೋರ್ಪಡುವಂತೆ ಮಾಡುವುದು ಬೇಡ.
ಫಾರ್ಮ್ನಲ್ಲಿ ನೀವು ನಮೂದಿಸಿದ ಎಲ್ಲಾ ಮಾಹಿತಿಯನ್ನು ಗಮನಕೊಟ್ಟು ಮತ್ತೊಮ್ಮೆ ಪರಿಶೀಲಿಸಿ. ಹೆಸರು, ಪಾಲಿಸಿ ನಂಬರ್, ಕಾರಿನ ನೊಂದಣಿ ಸಂಖ್ಯೆ ಇತ್ಯಾದಿ ವಿವರ ಸರಿಯಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ಕ್ಲೈಮ್ ಫಾರ್ಮ್ ಅನ್ನು ಕಾರ್ ಇನ್ಷೂರೆನ್ಸ್ ಕಂಪನಿಗೆ ಸಲ್ಲಿಸುವ ಮುನ್ನ, ಪೂರಕ ದಾಖಲೆಗಳ ಬಗೆಗಿನ ವಿವರ ಸರಿಯಾಗಿ ನಮೂದಾಗಿದೆಯಾ ಎಂದು ಎರಡೆರಡು ಬಾರಿ ಪರಿಶೀಲಿಸಿ ನೋಡಿ.
ಪಾಲಿಸಿ ದಾಖಲೆ ಪರಿಶೀಲಿಸಿ
ಹಾನಿಯಾದ ಕಾರಿಗೆ ಕ್ಲೈಮ್ ಸಲ್ಲಿಸುವ ಮುನ್ನ ನಿಮ್ಮ ಇನ್ಷೂರೆನ್ಸ್ ಪಾಲಿಸಿಯ ನಿಬಂಧನೆಗಳನ್ನು ಓದುವುದು ಉತ್ತಮ. ಪಾಲಿಸಿ ದಾಖಲೆ ಓದಿದಾಗ ಅದರ ಕವರೇಜ್ ಹಾಗೂ ಕ್ಲೈಮ್ ಪ್ರಕ್ರಿಯೆ ಹೇಗೆ ಎಂಬುದು ನಿಮಗೆ ತಿಳಿಯುತ್ತದೆ. ಈ ಪಾಲಿಸಿ ದಾಖಲೆಯು ಕ್ಲೈಮ್ ಪ್ರಕ್ರಿಯೆ ಹೇಗೆಂದು ನಿಮಗೆ ಮಾರ್ಗದರ್ಶನ ಮಾಡುವುದಷ್ಟೇ ಅಲ್ಲದೆ, ಏನೇನು ಒಳ್ಳಗೊಳ್ಳಬೇಕು, ಏನೇನು ಒಳಗೊಳ್ಳಬಾರದು ಎಂಬುದರ ಪಟ್ಟಿಯನ್ನೂ ಹೊಂದಿರುತ್ತದೆ. ಇದರಿಂದ ನಿಮ್ಮ ಕ್ಲೈಮ್ ಎಷ್ಟು ಸಮಂಜಸ ಎಂಬುದು ನಿಮಗೆ ಗೊತ್ತಾಗುತ್ತದೆ. ವಿವಿಧ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಬೇರೆ ಬೇರೆ ರೀತಿಯ ಕವರೇಜ್ ಇರುತ್ತದೆ ಎಂಬುದು ನಿಮಗೆ ತಿಳಿದಿರಲಿ.
ಅಂತಿಮ ಮಾತು
ಕಾರ್ ಇನ್ಷೂರೆನ್ಸ್ ಕ್ಲೈಮ್ಗೆ ನೀವು ಅನುಮೋದನೆ ಪಡೆಯುವ ಕೆಲಸ ಜಟಿಲ ಎನಿಸಬಹುದು. ನಿಮ್ಮ ಕ್ಲೈಮ್ ಅನ್ನು ಇನ್ಷೂರೆನ್ಸ್ ಕಂಪನಿ ತಿರಸ್ಕರಿಸಿದಾಕ್ಷಣ ಎಲ್ಲಾ ಮುಗಿಯಿತು ಎಂದಲ್ಲ. ಆಗಲೂ ನಿಮಗೆ ಆಯ್ಕೆಗಳಿರುತ್ತವೆ. ಕಂಪನಿಯ ನಿರ್ಧಾರವನ್ನು ನೀವು ಒಪ್ಪಬೇಕಿಲ್ಲ. ನಿಮ್ಮ ತಿರಸ್ಕೃತ ಕ್ಲೈಮ್ಗೆ ಪರಿಹಾರ ಇರಬಹುದು. ಈ ನಿಟ್ಟಿನಲ್ಲಿ ಇನ್ಷೂರೆನ್ಸ್ ಕಂಪನಿಯನ್ನು ಸಂಪರ್ಕಿಸಿ ಅವರೊಂದಿಗೆ ಚರ್ಚಿಸಿ, ಪರಿಹಾರ ಸಿಗುವ ಅವಕಾಶ ಇದ್ದರೆ ನಿವೇದಿಸಿಕೊಳ್ಳಿ. ಅಥವಾ ಕ್ಲೈಮ್ ತಿರಸ್ಕೃತಗೊಳ್ಳಲು ಕಾರಣವೇನು ಎಂಬುದನ್ನಾದರೂ ಚರ್ಚಿಸಿ ತಿಳಿದುಕೊಳ್ಳಿ.
ಕ್ಲೈಮ್ ಪ್ರಕ್ರಿಯೆ ಹೆಚ್ಚು ಸುಗಮವಾಗಲು ಟಾಟಾ ಎಐಜಿಯಂತಹ ಪ್ರತಿಷ್ಠಿತ ಇನ್ಷೂರೆನ್ಸ್ ಕಂಪನಿಗಳಿಂದ ಆನ್ಲೈನ್ ಇನ್ಷೂರೆನ್ಸ್ ಪಾಲಿಸಿ ಖರೀದಿಸಿ. ಈ ಸಂಸ್ಥೆಗಳು ಪರಿಪೂರ್ಣವಾದ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತವೆ. ಕ್ಲೈಮ್ ಸೆಟಲ್ಮೆಂಟ್ನ ಮೂಲ ಸಂಗತಿಗಳನ್ನು ನಿಮಗೆ ಮನದಟ್ಟಾಗುವಂತೆ ತಿಳಿಸಿಕೊಡುತ್ತವೆ. ವಿಶ್ವಾಸಾರ್ಹ ಎನಿಸಿದ ಇನ್ಷೂರೆನ್ಸ್ ಕಂಪನಿಯನ್ನು ನೀವು ಆರಿಸಿಕೊಂಡರೆ, ಅದರ ಪರಿಣಿತಿ, ಮಾರ್ಗದರ್ಶನದಿಂದ ನಿಮ್ಮ ಕ್ಲೈಮ್ ಪ್ರಕ್ರಿಯೆಯ ಸಂಕೀರ್ಣತೆ ನೀಗಬಹುದು.
ಇದರ ಜೊತೆಗೆ, ಕಾರ್ ಇನ್ಷೂರೆನ್ಸ್ ಪಾಲಿಸಿಯನ್ನು ಸಕಾಲಕ್ಕೆ ನವೀಕರಿಸುವುದರಿಂದ ನಿಮ್ಮ ವಾಹನಕ್ಕೆ ವಿಮಾ ಕವರೇಜ್ ನಿರಂತರವಾಗಿ ಇರುತ್ತದೆ. ಹೆಚ್ಚು ಗೋಜಲು ಇಲ್ಲದೇ ನೀವು ಕ್ಲೈಮ್ ಫಾರ್ಮ್ ಸಲ್ಲಿಸಬಹುದು.