IND vs AFG: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ
India vs Afghanistan T20 series: ಭಾರತ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಇಬ್ರಾಹಿಂ ಝದ್ರಾನ್ ತಂಡದ ನಾಯಕತ್ವ ವಹಿಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ನವೀನ್ ಉಲ್ ಹಕ್ ತಂಡಕ್ಕೆ ಮರಳಿದ್ದಾರೆ. ಸೆಪ್ಟೆಂಬರ್ 13 ರಿಂದ 17 ರವರೆಗೆ ದೆಹಲಿಯಲ್ಲಿ ಮೂರು ಟಿ20 ಪಂದ್ಯಗಳು ನಡೆಯಲಿದ್ದು, ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಸ್ತುತ ಶ್ರೀಲಂಕಾದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿರುವ ಟೀಂ ಇಂಡಿಯಾ ಈ ಸರಣಿಯ ಬಳಿಕ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ನಲ್ಲಿ ಅಫ್ಘಾನಿಸ್ತಾನ (India vs Afghanistan) ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಟಿ20 ಸರಣಿ ಭಾರತದಲ್ಲಿ ನಡೆಯುತ್ತಾದರೂ, ಟೀಂ ಇಂಡಿಯಾ ಪ್ರವಾಸಿ ತಂಡವಾಗಿ ಕಣಕ್ಕಿಳಿದರೆ, ಅಫ್ಘಾನಿಸ್ತಾನ ತಂಡ ಆತಿಥೇಯ ತಂಡವಾಗಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 13 ರಿಂದ ಆರಂಭವಾಗಲಿದ್ದು, ಇದೀಗ ಈ ಸರಣಿಗೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿಸಿದೆ. ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಅವರಿಗೆ ತಂಡದ ನಾಯಕತ್ವವಹಿಸಲಾಗಿದೆ. ಸೆಪ್ಟೆಂಬರ್ 13 ರಿಂದ ಆರಂಭವಾಗಲಿರುವ ಈ ಸರಣಿ ಸೆಪ್ಟೆಂಬರ್ 17 ರವರೆಗೆ ನಡೆಯಲಿದ್ದು, ಈ ಮೂರೂ ಪಂದ್ಯಗಳು ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ.
ನವೀನ್ ಉಲ್ ಹಕ್ ಕಂಬ್ಯಾಕ್
ಬಹಳ ದಿನಗಳ ಬಳಿಕ ವೇಗದ ಬೌಲರ್ ನವೀನ್ ಉಲ್ ಹಕ್ ಅಫ್ಘಾನಿಸ್ತಾನ ತಂಡಕ್ಕೆ ಮರಳಿದ್ದಾರೆ. ಟಿ20 ವಿಶ್ವಕಪ್‌ಗೆ ಸ್ವಲ್ಪ ಮೊದಲು ಬಲ ಭುಜದ ಗಾಯಕ್ಕೆ ತುತ್ತಾಗಿದ್ದ ನವೀನ್ ಉಲ್ ಹಕ್ ಇದರಿಂದಾಗಿ ಪಂದ್ಯಾವಳಿಯನ್ನು ಹೊರಬಿದ್ದಿದ್ದರು. ಇದೀಗ ಚೇತರಿಸಿಕೊಂಡಿರುವ ನವೀನ್ ತಂಡಕ್ಕೆ ಮರಳುತ್ತಿರುವುದು ಅಫ್ಘನ್ ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದೆ. ಅಲ್ಲದೆ ನವೀನ್ ಜೊತೆಗೆ, ತಂಡದಲ್ಲಿ ಫಜಲ್ ಹಕ್ ಫಾರೂಕಿ, ಅಬ್ದುಲ್ಲಾ ಅಹ್ಮದ್ಜೈ ಮತ್ತು ಆಲ್ರೌಂಡರ್ ಅಜ್ಮತುಲ್ಲಾ ಉಮರ್ಜೈ ಕೂಡ ತಂಡದಲ್ಲಿದ್ದಾರೆ.
ತಂಡದಲ್ಲಿ ಅನುಭವಿಗಳು
ಆಲ್ ರೌಂಡರ್ ಗುಲ್ಬಾದಿನ್ ನೈಬ್ ಅಫ್ಘಾನಿಸ್ತಾನ ತಂಡಕ್ಕೆ ಮರಳಿದ್ದು, ರಶೀದ್ ಖಾನ್ ಸ್ಪಿನ್ ಬೌಲಿಂಗ್ ಘಟಕವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಯುವ ಸ್ಪಿನ್ನರ್‌ಗಳಾದ ನೂರ್ ಅಹ್ಮದ್ ಮತ್ತು ನಂಗ್ಯಾಲ್ ಖರೋಟಿ ಕೂಡ ಆಯ್ಕೆಯಾಗಿದ್ದು, ಅನುಭವಿ ಆಲ್ ರೌಂಡರ್ ಮೊಹಮ್ಮದ್ ನಬಿ ಕೂಡ ತಂಡದಲ್ಲಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನೂರ್ ರೆಹಮಾನ್ ಅವರನ್ನು ರಹಮಾನಲ್ಲಾ ಗುರ್ಬಾಜ್ ಜೊತೆಗೆ ಎರಡನೇ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ACB Names Squad for the T20I Series against India
Kabul, August 24, 2026: Afghanistan Cricket Board’s National Selection Committee has finalized the Afghanistan National Team squad for the upcoming three-match T20I series against India, scheduled to be played from September 13… pic.twitter.com/GPvqLP2rFT
— Afghanistan Cricket Board (@ACBofficials) August 24, 2026
ಅಫ್ಘಾನಿಸ್ತಾನ ಟಿ20 ತಂಡ: ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನೂರ್ ರಹಮಾನ್ (ವಿಕೆಟ್ ಕೀಪರ್), ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ಅಜ್ಮತುಲ್ಲಾ ಉಮರ್ಜಾಯ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ಮುಜೀರ್ ಅಹ್ಮದ್, ನೂರ್ ಅಹ್ಮದ್, ನೂರ್ ಅಹ್ಮದ್ ಅಬ್ದುಲ್ಲಾ ಅಹ್ಮದ್ಜಾಯ್, ಮತ್ತು ನವೀನ್-ಉಲ್-ಹಕ್.
ಮೀಸಲು ಆಟಗಾರರು: ಇಜಾಜ್ ಅಹ್ಮದ್‌ಜೈ, ಶಾಹಿದುಲ್ಲಾ ಕಮಾಲ್ ಮತ್ತು ಫರೀದ್ ಅಹ್ಮದ್ ಮಲಿಕ್.
ಭಾರತ-ಅಫ್ಘನ್ ನಡುವಿನ ಟಿ20 ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ
ಟಿ20 ಸರಣಿ ವೇಳಾಪಟ್ಟಿ:
- ಸೆಪ್ಟೆಂಬರ್ 13: ಮೊದಲ ಟಿ20 ಪಂದ್ಯ
- ಸೆಪ್ಟೆಂಬರ್ 15: ಎರಡನೇ ಟಿ20 ಪಂದ್ಯ
- ಸೆಪ್ಟೆಂಬರ್ 17: ಮೂರನೇ ಟಿ20 ಪಂದ್ಯ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:04 pm, Mon, 24 August 26




