ವಿಶಿಷ್ಟ ದಾಖಲೆ ಬರೆದ ಸ್ಮಿತ್: 1 ರನ್ ಗಳಿಸೋಕೆ ತೆಗೆದುಕೊಂಡ ಸಮಯವೆಷ್ಟು ಗೊತ್ತಾ?
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಸ್ಟೀವ್ ಸ್ಮಿತ್ ನಿಧಾನಗತಿಯ ಬ್ಯಾಟಿಂಗ್ ಮಾಡಿ, ವಿಶಿಷ್ಟ ದಾಖಲೆ ಬರೆದಿದ್ದಾರೆ. ಸ್ಮಿತ್ ಮೊದಲ ರನ್ ಗಳಿಸೋದಕ್ಕೆ ಬರೋಬ್ಬರಿ 39ಎಸೆತ ಹಾಗೂ 46 ನಿಮಿಷಗಳನ್ನ ತೆಗೆದುಕೊಂಡ್ರು. ನಿಧಾನಗತಿ ಬ್ಯಾಟಿಂಗ್ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಅನ್ನೋ ಖ್ಯಾತಿಗೆ ಸ್ಮಿತ್ ಭಾಜನರಾದ್ರು. ನಿಷೇಧದ ಭೀತಿಯಲ್ಲಿ ಕೆಕೆಆರ್ ಆಟಗಾರರು: ವಯಸ್ಸಿನ ವಂಚನೆಗೆ ಸಂಬಂಧಿಸಿದಂತೆ ದೆಹಲಿ ಆಟಗಾರ ಮಂಜೋತ್ ಕಲ್ರಾ ಈಗಾಲೇ, ರಣಜಿ ಟೂರ್ನಿಯಿಂದ ನಿಷೇಧಗೊಂಡಿದ್ದಾರೆ. ಇದ್ರ ಬೆನ್ನಲ್ಲೇ ನಿತಿಶ್ ರಾಣಾ ಕೂಡ ನಿಷೇಧ ಭೀತಿಯನ್ನ ಎದುರಿಸ್ತಿದ್ದಾರೆ. […]
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಸ್ಟೀವ್ ಸ್ಮಿತ್ ನಿಧಾನಗತಿಯ ಬ್ಯಾಟಿಂಗ್ ಮಾಡಿ, ವಿಶಿಷ್ಟ ದಾಖಲೆ ಬರೆದಿದ್ದಾರೆ. ಸ್ಮಿತ್ ಮೊದಲ ರನ್ ಗಳಿಸೋದಕ್ಕೆ ಬರೋಬ್ಬರಿ 39ಎಸೆತ ಹಾಗೂ 46 ನಿಮಿಷಗಳನ್ನ ತೆಗೆದುಕೊಂಡ್ರು. ನಿಧಾನಗತಿ ಬ್ಯಾಟಿಂಗ್ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಅನ್ನೋ ಖ್ಯಾತಿಗೆ ಸ್ಮಿತ್ ಭಾಜನರಾದ್ರು.
ನಿಷೇಧದ ಭೀತಿಯಲ್ಲಿ ಕೆಕೆಆರ್ ಆಟಗಾರರು: ವಯಸ್ಸಿನ ವಂಚನೆಗೆ ಸಂಬಂಧಿಸಿದಂತೆ ದೆಹಲಿ ಆಟಗಾರ ಮಂಜೋತ್ ಕಲ್ರಾ ಈಗಾಲೇ, ರಣಜಿ ಟೂರ್ನಿಯಿಂದ ನಿಷೇಧಗೊಂಡಿದ್ದಾರೆ. ಇದ್ರ ಬೆನ್ನಲ್ಲೇ ನಿತಿಶ್ ರಾಣಾ ಕೂಡ ನಿಷೇಧ ಭೀತಿಯನ್ನ ಎದುರಿಸ್ತಿದ್ದಾರೆ. ಇಬ್ಬರು ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನ ಪ್ರತಿನಿಧಿಸುತ್ತಿದ್ದ, ಇಬ್ಬರ ಮೇಲೂ ನಿಷೇಧದ ತೂಗುಗತ್ತಿ ಇದೆ.
ಕಿವೀಸ್ ಪರದಾಟ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ, ಆಸಿಸ್ ವಿಕೆಟ್ ಪಡೆಯೋದಕ್ಕೆ ಪರದಾಡ್ತಿದೆ. ಮೊದಲ ದಿನ ಆಸಿಸ್ ಬ್ಯಾಟ್ಸ್ಮನ್ಗಳ ಅಬ್ಬರಕ್ಕೆ ಕಂಗಾಲಾದ ಕಿವೀಸ್, ಒಂದೊಂದು ವಿಕೆಟ್ ಪಡೆಯೋಕೆ ಹರಸಾಹಸ ಮಾಡ್ತು. ಮೊದಲ ದಿನದಾಟದಂತ್ಯಕ್ಕೆ ಆಸಿಸ್ 3ವಿಕೆಟ್ ಕಳೆದುಕೊಂಡು 283ರನ್ ಗಳಿಸಿದೆ.
194ಕ್ಕೆ ಮುಂಬೈ ಆಲೌಟ್: ಮುಂಬೈ ವಿರುದ್ಧದ ರಣಜಿ ಟ್ರೋಫಿಯ ಮೊದಲ ದಿನ ಕರ್ನಾಟಕ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಕೇವಲ 194ರನ್ಗಳಿಗೆ ಆಲೌಟ್ ಆಗಿದೆ. ಸೂರ್ಯಕುಮಾರ್ ಯಾದವ್ 77ರನ್ ಗಳಿಸಿದ್ರೆ, ಕರ್ನಾಟಕ ಪರ ಕೌಶಿಕ್ 3ವಿಕೆಟ್ ಪಡೆದ್ರು.