ಉದ್ದೀಪನ ದ್ರವ್ಯ ಸೇವನೆ: ಬಾಕ್ಸರ್ ಸುಮಿತ್ಗೆ 1 ವರ್ಷ ನಿಷೇಧದ ಪಂಚ್
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಬಾಕ್ಸರ್ ಸುಮಿತ್ ಸಂಗ್ವಾನ್ಗೆ ನಾಡಾ ಒಂದು ವರ್ಷ ನಿಷೇಧ ಹೇರಿದೆ. ಸುಮಿತ್ ಉದ್ದೀಪನ ದ್ರವ್ಯ ಸೇವನೆ ಮಾಡಿರೋದು ಸಾಬೀತಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಂಗ್ವಾನ್ಗೆ ನಿಷೇಧ ಹೇರಲಾಗಿದೆ. ಗಂಗೂಲಿ ಚಿಂತನೆಗೆ ಆಸಿಸ್ ಮೆಚ್ಚುಗೆ: ಸೌರವ್ ಗಂಗೂಲಿ ಅಧ್ಯಕ್ಷರಾಗ ಬಳಿಕ ಬದಲಾವಣಿಗೆ ಗಾಳಿ ಬೀಸುತ್ತಿದ್ದು, ಸೂಪರ್ ಸರಣಿ ಚಿಂತನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಮೆಚ್ಚುಗೆ ವ್ಯಕ್ತಪಡಿಸಿದೆ. ಸರಣಿ ಆಯೋಜನೆ ಕುರಿತು ಇಂಗ್ಲೆಂಡ್ ಬೋರ್ಡ್ ಜೊತೆ ಮಾತನಾಡಿದ್ದು, ಸದ್ಯದಲ್ಲೇ ನಿರ್ಧಾರ ಪ್ರಕಟಿಸೋದಾಗಿ ಕ್ರಿಕೆಟ್ ಆಸ್ಟ್ರೇಲಿಯಾ […]
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಬಾಕ್ಸರ್ ಸುಮಿತ್ ಸಂಗ್ವಾನ್ಗೆ ನಾಡಾ ಒಂದು ವರ್ಷ ನಿಷೇಧ ಹೇರಿದೆ. ಸುಮಿತ್ ಉದ್ದೀಪನ ದ್ರವ್ಯ ಸೇವನೆ ಮಾಡಿರೋದು ಸಾಬೀತಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಂಗ್ವಾನ್ಗೆ ನಿಷೇಧ ಹೇರಲಾಗಿದೆ.
ಗಂಗೂಲಿ ಚಿಂತನೆಗೆ ಆಸಿಸ್ ಮೆಚ್ಚುಗೆ: ಸೌರವ್ ಗಂಗೂಲಿ ಅಧ್ಯಕ್ಷರಾಗ ಬಳಿಕ ಬದಲಾವಣಿಗೆ ಗಾಳಿ ಬೀಸುತ್ತಿದ್ದು, ಸೂಪರ್ ಸರಣಿ ಚಿಂತನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಮೆಚ್ಚುಗೆ ವ್ಯಕ್ತಪಡಿಸಿದೆ. ಸರಣಿ ಆಯೋಜನೆ ಕುರಿತು ಇಂಗ್ಲೆಂಡ್ ಬೋರ್ಡ್ ಜೊತೆ ಮಾತನಾಡಿದ್ದು, ಸದ್ಯದಲ್ಲೇ ನಿರ್ಧಾರ ಪ್ರಕಟಿಸೋದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಕಾಂಗರೂಗಳ ಸವಾರಿ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಬೌಲರ್ಗಳ ಮೇಲೆ ಕಾಂಗರೂಗಳ ಭರ್ಜರಿ ಸವಾರಿ ಮಾಡಿದ್ದಾರೆ. ಶತಕದ ಅಂಚಿನಲ್ಲಿದ್ದ ಸ್ಟೀವ್ ಸ್ಮಿತ್ 85ರನ್ ಗಳಿಸಿ ನೀಲ್ ವ್ಯಾಗ್ನರ್ಗೆ ವಿಕೆಟ್ ಒಪ್ಪಿಸಿದ್ರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ವಿಲಿಯಮ್ಸನ್ ಪಡೆಯ ಬೌಲರ್ಗಳನ್ನ ಸರಿಯಾಗೇ ಬೇಟೆಯಾಡಿದ ಟ್ರಾವಿಸ್ ಹೆಡ್, 114ರನ್ ಗಳಿಸಿದ್ರು. ಇದ್ರೊಂದಿಗೆ ಆಸಿಸ್ ಮೊದಲ ಇನ್ನಿಂಗ್ಸ್ನಲ್ಲಿ 467ರನ್ ಕಲೆಹಾಕಿದೆ.
284ರನ್ಗೆ ಆಫ್ರಿಕಾ ಆಲೌಟ್: ಜೋಹಾನ್ಸ್ ಬರ್ಗ್ನಲ್ಲಿ ನಡೀತಿರೋ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ 284ರನ್ಗೆ ಆಲೌಟ್ ಆಗಿದೆ. ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 95ರನ್ ಗಳಿಸೋದ್ರೊಂದಿಗೆ, ಆಂಗ್ಲರಿಗೆ ವಿಲನ್ ಆಗಿ ಕಾಡಿದ್ರು. ಸ್ಟುವರ್ಟ್ ಬ್ರಾಡ್ ಹಾಗೂ ಸ್ಯಾಮ್ ಕರ್ರನ್ ತಲಾ 4ವಿಕೆಟ್ ಪಡೆದು ಮಿಂಚಿದ್ರು.
Published On - 9:04 am, Sat, 28 December 19