Brazil vs Argentina: ಪಂದ್ಯದ ನಡುವೆ ಮೈದಾನಕ್ಕಿಳಿದು ಆಟಗಾರರನ್ನು ವಶಕ್ಕೆ ಪಡೆದ ಆರೋಗ್ಯಾಧಿಕಾರಿ

Brazil vs Argentina: ಕೋಪಾ ಅಮೆರಿಕ ಫೈನಲ್ ಪಂದ್ಯದ ಬಳಿಕ ಬ್ರೆಜಿಲ್ ಹಾಗೂ ಅರ್ಜೆಂಟೀನಾ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು.

Brazil vs Argentina: ಪಂದ್ಯದ ನಡುವೆ ಮೈದಾನಕ್ಕಿಳಿದು ಆಟಗಾರರನ್ನು ವಶಕ್ಕೆ ಪಡೆದ ಆರೋಗ್ಯಾಧಿಕಾರಿ
Brazil vs Argentina

ಫುಟ್ಬಾಲ್ ಪಂದ್ಯದ ನಡುವೆ ಅಹಿತಕರ ಘಟನೆಗಳು ನಡೆಯುವುದು ಸಾಮಾನ್ಯ. ಸಾಮಾನ್ಯವಾಗಿ ಆಟಗಾರರ ನಡುವಣ ಗುದ್ದಾಟಕ್ಕೆ ಸಾಕ್ಷಿಯಾಗುವ ಫುಟ್ಬಾಲ್​ ಅಂಗಳದಲ್ಲಿ ಈ ಬಾರಿ ಸ್ವಲ್ಪ ವಿಭಿನ್ನವಾದ ಘಟನೆ ನಡೆದಿರುವುದು ವಿಶೇಷ. ಹೌದು, ಅರ್ಜೆಂಟೀನಾ ಹಾಗೂ ಬ್ರೆಜಿಲ್ (Brazil vs Argentina) ನಡುವಣ ವಿಶ್ವಕಪ್ ಅರ್ಹತಾ ಸುತ್ತಿನ ಹೈವೋಲ್ಟೇಜ್ ಪಂದ್ಯದ ವೇಳೆ ಮೈದಾನಕ್ಕಿಳಿದ ಆರೋಗ್ಯಾಧಿಕಾರಿಗಳು ನಾಲ್ವರು ಆಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಹೀಗೆ ವಶಕ್ಕೆ ಪಡೆಯಲಾದ ಆಟಗಾರರನ್ನು ಅರ್ಜೆಂಟೀನಾ ತಂಡದ ಮಾರ್ಟಿನೆಜ್, ಗಿವೊನಿ, ರೊಮೆರೊ ಮತ್ತು ಬುಯೆಂಡಿಯಾ ಎಂದು ಗುರುತಿಸಲಾಗಿದೆ. ಈ ಆಟಗಾರರು ಕೊರೋನಾ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಲಾಗಿದೆ. ಇನ್ನು ಈ ನಾಲ್ವರು ಆಟಗಾರರನ್ನು ವಶಕ್ಕೆ ಪಡೆಯುತ್ತಿದ್ದಂತೆ, ಇಡೀ ಪಂದ್ಯವನ್ನು ರದ್ದು ಮಾಡಲಾಯಿತು.

ಇಂಗ್ಲೆಂಡ್​ನಲ್ಲಿ ಪ್ರೀಮಿಯರ್ ಲೀಗ್ ಮುಗಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕಾಗಿ ಅರ್ಜೆಂಟೀನಾದ ನಾಲ್ವರು ಆಟಗಾರರು ಬ್ರೆಜಿಲ್​ಗೆ ಆಗಮಿಸಿದ್ದರು. ಅಲ್ಲಿನ ಸ್ಥಳೀಯ ನಿಯಮದ ಪ್ರಕಾರ ಹೊರ ದೇಶದಿಂದ ಬಂದವರು 10 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯು ಅರ್ಜೆಂಟೀನಾ ಆಟಗಾರರಿಗೆ ಮಾಹಿತಿ ನೀಡಿದ್ದರು. ಇದಾಗ್ಯೂ ನಾಲ್ವರು ಆಟಗಾರರು ನಿಯಮ ಉಲ್ಲಂಘಿಸಿ ಪಂದ್ಯವನ್ನಾಡಲು ಮೈದಾನಕ್ಕಿಳಿದಿದ್ದರು.

ಇದನ್ನು ಗುರುತಿಸಿದ ಆರೋಗ್ಯ ಇಲಾಖೆ, ತಕ್ಷಣವೇ ಪಂದ್ಯ ನಡೆಯುತ್ತಿದ್ದ ಮೈದಾನಕ್ಕೆ ಆಗಮಿಸಿ ನಾಲ್ವರು ಆಟಗಾರರನ್ನು ವಶಕ್ಕೆ ಪಡೆದುಕೊಂಡರು. ಅಷ್ಟರಲ್ಲಾಗಲೇ 10 ನಿಮಿಷಗಳ ಕಾಲ ಪಂದ್ಯ ನಡೆದಿದ್ದರೂ ಯಾವುದೇ ತಂಡ ಗೋಲು ದಾಖಲಿಸಿರಲಿಲ್ಲ. ಆ ಬಳಿಕ ಕೊರೋನಾ ಪ್ರೋಟೋಕಾಲ್ ಉಲ್ಲಂಘನೆಯ ಕಾರಣ, ಪಂದ್ಯವನ್ನು ರದ್ದುಗೊಳಿಸಲಾಯಿತು.

ಕೋಪಾ ಅಮೆರಿಕ ಫೈನಲ್ ಪಂದ್ಯದ ಬಳಿಕ ಬ್ರೆಜಿಲ್ ಹಾಗೂ ಅರ್ಜೆಂಟೀನಾ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಕೋಪಾ ಅಮೆರಿಕ ಫೈನಲ್​ನಲ್ಲಿ ಅರ್ಜೆಂಟೀನಾ ವಿರುದ್ದ ಸೋತಿದ್ದ ಬ್ರೆಜಿಲ್ ಈ ಬಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿತ್ತು. ಹಾಗೆಯೇ ಈ ಪಂದ್ಯವು ಲಿಯೊನೆಲ್ ಮೆಸ್ಸಿ ಹಾಗೂ ನೇಮರ್ ನಡುಣ ಕದನ ಎಂದೇ ಬಿಂಬಿತವಾಗಿತ್ತು. ಆದರೆ ಕೊರೋನಾ ನಿಯಮ ಉಲ್ಲಂಘನೆಯ ಕಾರಣ ಈ ಪಂದ್ಯವು ಕೇವಲ 10 ನಿಮಿಷಗಳಿಗೆ ಸೀಮಿತವಾಗಿದ್ದು, ಅಭಿಮಾನಿಗಳ ನಿರಾಸೆಗೆ ಕಾರಣವಾಯಿತು.

ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್

ಇದನ್ನೂ ಓದಿ: ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್

ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ

(Brazil vs Argentina suspended as health officials attempt)

Click on your DTH Provider to Add TV9 Kannada