Commonwealth Games 2026: ಇಂದಿನಿಂದ ಪದಕ ಬೇಟೆ ಶುರು: ಇಲ್ಲಿದೆ ವೇಳಾಪಟ್ಟಿ
Commonwealth Games 2026 Schedule: ಇಡೀ ಕ್ರೀಡಾಲೋಕದ ಕಣ್ಣು ಈಗ ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದತ್ತ ನೆಟ್ಟಿದೆ. ಇಂದಿನಿಂದ (ಜುಲೈ 23) ಜಗತ್ತಿನ ಪ್ರತಿಷ್ಠಿತ 'ಕಾಮನ್‌ವೆಲ್ತ್ ಗೇಮ್ಸ್ 2026' ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ವಿಶ್ವದ ದಿಗ್ಗಜ ಅಥ್ಲೀಟ್‌ಗಳು ಪದಕಕ್ಕಾಗಿ ಸೆಣಸಾಡಲಿದ್ದಾರೆ. ಮೊದಲ ದಿನವೇ ಭಾರತ ತಂಡ ಲಾನ್ ಬೌಲ್ಸ್ ಸ್ಪರ್ಧೆಯಲ್ಲಿ ಕಣಕ್ಕಿಳಿಯುವ ಮೂಲಕ ಪದಕ ಬೇಟೆಯನ್ನು ಆರಂಭಿಸಲಿದ್ದಾರೆ.

ಜಗತ್ತಿನ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್‌ವೆಲ್ತ್ ಗೇಮ್ಸ್ 2026 ಇಂದಿನಿಂದ (ಜುಲೈ 23) ಶುರುವಾಗಲಿದೆ. ಬಜೆಟ್ ಉಳಿತಾಯದ ಕಾರಣಕ್ಕಾಗಿ ಈ ಬಾರಿ ಕ್ರೀಡಾಕೂಟವನ್ನು ಅತ್ಯಂತ ಸರಳ ಹಾಗೂ ಸುಧಾರಿತ ರೂಪದಲ್ಲಿ ಆಯೋಜಿಸಲಾಗುತ್ತಿದೆ. ಭಾರತದ ಪಾಲಿಗೆ ಪದಕ ತಂದುಕೊಡುತ್ತಿದ್ದ ಪ್ರಮುಖ ಕ್ರೀಡೆಗಳಾದ ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಕ್ರಿಕೆಟ್, ಶೂಟಿಂಗ್ ಮತ್ತು ಟೇಬಲ್ ಟೆನಿಸ್‌ಗಳನ್ನು ಈ ಬಾರಿ ಕೈಬಿಡಲಾಗಿದೆ. ಆದಾಗ್ಯೂ, ಭಾರತದ 126 ಅಥ್ಲೀಟ್‌ಗಳ ಬಲಿಷ್ಠ ತಂಡ ಒಟ್ಟು 13 ವಿಭಾಗಗಳಲ್ಲಿ ಪದಕಕ್ಕಾಗಿ ಸೆಣಸಾಡಲಿದೆ. ಅದರಂತೆ ಭಾರತೀಯರು ಕಣಕ್ಕಿಳಿಯಲಿರುವ ಕ್ರೀಡೆಗಳ ದಿನಾವಾರು ವೇಳಾಪಟ್ಟಿ ಈ ಕೆಳಗಿನಂತಿದೆ.
- ಜುಲೈ 23
- ಮಧ್ಯಾಹ್ನ 4:50 ರಿಂದ ಲಾನ್ ಬೌಲ್ಸ್ (ಮಹಿಳೆಯರ ಡಬಲ್ಸ್) – ಪಿಂಕಿ ಸಿಂಗ್ ಮತ್ತು ರೂಪಾ ರಾಣಿ ತಿರ್ಕಿ ತಂಡ vs ಮಾಲ್ಟಾ.
- ಸಂಜೆ 6:15 ರಿಂದ ಲಾನ್ ಬೌಲ್ಸ್ (ಪುರುಷರ ಸಿಂಗಲ್ಸ್) – ಪುಟುಲ್ ಸೋನೊವಾಲ್ vs ಕೆನಡಾ.
- ರಾತ್ರಿ 10:30: ಅದ್ಧೂರಿ ಉದ್ಘಾಟನಾ ಸಮಾರಂಭ (ಭಾರತದ ಧ್ವಜಧಾರಿ: ಮೀರಾಬಾಯಿ ಚಾನು).
__________________________________________________________________________
- ಜುಲೈ 24
- ಮಧ್ಯಾಹ್ನ 1:30 ರಿಂದ ಈಜು ಸ್ಪರ್ಧೆಯ ಹೀಟ್ಸ್ (ಶ್ರೀಹರಿ ನಟರಾಜ್).
- ಸಂಜೆ ಪ್ಯಾರಾ ಪವರ್‌ಲಿಫ್ಟಿಂಗ್ ಫೈನಲ್ಸ್ ನಡೆಯಲಿದ್ದು, ಪರಂಜೀತ್ ಕುಮಾರ್ ಮತ್ತು ಸುಮಾ ದೇವಿ ಕಣದಲ್ಲಿದ್ದಾರೆ.
__________________________________________________________________________
- ಜುಲೈ 25
- ಮಧ್ಯಾಹ್ನ 3:30 ರಿಂದ ಬಾಕ್ಸಿಂಗ್ ಪ್ರಾಥಮಿಕ ಸುತ್ತುಗಳು ಆರಂಭ (ಪ್ರೀತಿ ಪವಾರ್, ಜೈಸ್ಮಿನ್ ಲಂಬೋರಿಯಾ).
- ಜಿಮ್ನಾಸ್ಟಿಕ್ಸ್ ತಂಡದ ಫೈನಲ್ಸ್.
__________________________________________________________________________
- ಜುಲೈ 26
- ಜಿಮ್ನಾಸ್ಟಿಕ್ಸ್ ವೈಯಕ್ತಿಕ ಫೈನಲ್ಸ್.
- ಸಂಜೆಯ ಸೆಷನ್‌ನಲ್ಲಿ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಪದಕದ ಪಂದ್ಯ.
__________________________________________________________________________
- ಜುಲೈ 27
- ಮಧ್ಯಾಹ್ನ 2:30 ರಿಂದ ಅಥ್ಲೆಟಿಕ್ಸ್ (ಟ್ರಾಕ್ ಅಂಡ್ ಫೀಲ್ಡ್) ಸ್ಪರ್ಧೆಗಳು ಆರಂಭ.
- 4×400 ಮೀಟರ್ ಮಿಶ್ರ ರಿಲೇ ಹೀಟ್ಸ್.
__________________________________________________________________________
- ಜುಲೈ 28
- ಜಿಮ್ನಾಸ್ಟಿಕ್ಸ್ ಅಪಾರಾಟಸ್ ಫೈನಲ್ಸ್
- ಸಂಜೆ 6:30 ರ ನಂತರ ಪುರುಷರ ಮತ್ತು ಮಹಿಳೆಯರ 100 ಮೀಟರ್ ಓಟದ ಫೈನಲ್ಸ್.
__________________________________________________________________________
- ಜುಲೈ 29
- ಮುಂಜಾನೆ 11:30 ರಿಂದ 3×3 ಬಾಸ್ಕೆಟ್‌ಬಾಲ್ ಸೆಮಿಫೈನಲ್ಸ್ ಮತ್ತು ಸಂಜೆ ಪದಕದ ಪಂದ್ಯಗಳು.
- ಲಾಂಗ್ ಜಂಪ್ ಫೈನಲ್ಸ್‌ನಲ್ಲಿ ಮುರಳಿ ಶ್ರೀಶಂಕರ್ ಕಣಕ್ಕೆ.
__________________________________________________________________________
- ಜುಲೈ 30
- ಮಧ್ಯಾಹ್ನ 2:00 ರಿಂದ ವೇಟ್‌ಲಿಫ್ಟಿಂಗ್ ಹೆವಿವೇಟ್ ವಿಭಾಗದ ಪಂದ್ಯಗಳು.
- ವೆಲೋಡ್ರೋಮ್‌ನಲ್ಲಿ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆಗಳು ಆರಂಭ.
__________________________________________________________________________
- ಜುಲೈ 31
- ಮಧ್ಯಾಹ್ನ 2:30 ರಿಂದ ಜೂಡೋ ಪ್ರಾಥಮಿಕ ಸುತ್ತುಗಳು.
- ರಾತ್ರಿ 7:30 ಕ್ಕೆ ಜೂಡೋ ಪದಕದ ಪಂದ್ಯಗಳು.
__________________________________________________________________________
- ಆಗಸ್ಟ್ 1
- ರಾತ್ರಿ 11:00 ಕ್ಕೆ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಒಲಿಂಪಿಕ್ ಹೀರೋ ನೀರಜ್ ಚೋಪ್ರಾ ಕಣಕ್ಕಿಳಿಯಲಿದ್ದಾರೆ.
- ಇದೇ ದಿನ ಬಾಕ್ಸಿಂಗ್ ಗೋಲ್ಡ್ ಮೆಡಲ್ ಪಂದ್ಯಗಳೂ ನಡೆಯಲಿವೆ.
__________________________________________________________________________
- ಆಗಸ್ಟ್ 2
- ಸೈಕ್ಲಿಂಗ್ ಮತ್ತು ಜೂಡೋ ಹೆವಿವೇಟ್ (ತುಲಿಕಾ ಮಾನ್) ಫೈನಲ್ ಪಂದ್ಯಗಳು.
- ತಡರಾತ್ರಿ ಕ್ರೀಡಾಕೂಟಕ್ಕೆ ತೆರೆ ಎಳೆಯುವ ಸಮಾರೋಪ ಸಮಾರಂಭ.
ಇದನ್ನೂ ಓದಿ: ಕೊಹ್ಲಿಯಿಂದ ನಾಯಕತ್ವ ಕಿತ್ತುಕೊಂಡಿದ್ದು ಬಿಸಿಸಿಐ ಮಾಡಿದ ಅತೀ ದೊಡ್ಡ ತಪ್ಪು!
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಡಿ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಸೋನಿ ಲಿವ್ ಆ್ಯಪ್ ಮತ್ತು ವೆಬ್ಸೈಟ್ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
Published On - 9:58 am, Thu, 23 July 26