AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ಎಸೆತಗಳಲ್ಲಿ 95 ರನ್: ರಿಷಭ್ ಪಂತ್‌ ರುದ್ರತಾಂಡವ ಬಿಚ್ಚಿಟ್ಟ ಕೋಚ್!

IPL 2026: ಲಕ್ನೋ ಸೂಪರ್ ಜೈಂಟ್ಸ್ ಪಾಲಿಗೆ ಈ ಬಾರಿಯ ಐಪಿಎಲ್ ಹಾದಿ ಸುಲಭವಾಗಿಲ್ಲ. ಸತತ ಸೋಲು ಮತ್ತು ನಾಯಕ ರಿಷಭ್ ಪಂತ್ ಅವರ ಬ್ಯಾಟಿಂಗ್ ಲಯದ ಬಗ್ಗೆ ಟೀಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಕೋಚ್ ಜಸ್ಟಿನ್ ಲ್ಯಾಂಗರ್ ಸ್ಫೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಕ್ರೀಡಾಂಗಣದಲ್ಲಿ ಸೈಲೆಂಟ್ ಆಗಿರುವ ಪಂತ್, ಅಭ್ಯಾಸದ ವೇಳೆ ಎಷ್ಟು ವೈಲೆಂಟ್ ಆಗಿದ್ದರು ಎಂಬ ಲ್ಯಾಂಗರ್ ಅವರ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

30 ಎಸೆತಗಳಲ್ಲಿ 95 ರನ್: ರಿಷಭ್ ಪಂತ್‌ ರುದ್ರತಾಂಡವ ಬಿಚ್ಚಿಟ್ಟ ಕೋಚ್!
Rishabh Pant
ಝಾಹಿರ್ ಯೂಸುಫ್
|

Updated on: May 05, 2026 | 3:25 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ LSG ತಂಡದ ಭವಿಷ್ಯ ಮತ್ತು ನಾಯಕ ರಿಷಭ್ ಪಂತ್ ಅವರ ಫಾರ್ಮ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯ ನಡುವೆ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಸುದ್ದಿಗೋಷ್ಠಿಯಲ್ಲಿ ನೀಡಿದ ಒಂದು ಹೇಳಿಕೆ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಅಭ್ಯಾಸದ ವೇಳೆ ಪಂತ್ ಆರ್ಭಟ!

ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 15 ರನ್ ಗಳಿಸಿ ಔಟಾಗಿದ್ದರು. ಈ ಕಳಪೆ ಪ್ರದರ್ಶನದ ಹೊರತಾಗಿಯೂ ಎಲ್​ಎಸ್​ಜಿ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಪಂತ್ ಅವರ ಬೆನ್ನಿಗೆ ನಿಂತಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ 7ನೇ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಜಸ್ಟಿನ್ ಲ್ಯಾಂಗರ್​ಗೆ ಪಂತ್ ಅವರ ಫಾರ್ಮ್ ಹಾಗೂ ಬ್ಯಾಟಿಂಗ್ ಕ್ರಮಾಂಕದ​​ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಈ ಪ್ರಶ್ನೆಗೆ ಉತ್ತರಿಸಿದ ಲ್ಯಾಂಗರ್, “ಪಂದ್ಯಕ್ಕೆ ಎರಡು ದಿನಗಳ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 30 ರಿಂದ 40 ಎಸೆತಗಳಲ್ಲಿ 95 ರನ್ ಸಿಡಿಸಿದ್ದರು. ಅದು ಪಂತ್ ಅವರ ಅಸಲಿ ಆಟವಾಗಿತ್ತು. ಅಂತಹ ಅಮೋಘ ಬ್ಯಾಟಿಂಗ್ ನೋಡಿದ ಮೇಲೆಯೇ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

ಇತ್ತ ಜಸ್ಟಿನ್ ಲ್ಯಾಂಗರ್ ನೀಡಿದ ಹೇಳಿಕೆಯು ಇದೀಗ ಸಾಕಷ್ಟು ಟ್ರೋಲ್ ಆಗಿದೆ. ಏಕೆಂದರೆ ಅಭ್ಯಾಸದ ವೇಳೆ ಪಂತ್ ಬ್ಯಾಟ್ ಬೀಸಿದ್ದು ಲಕ್ನೋ ಸೂಪರ್ ಜೈಂಟ್ಸ್ ಬೌಲರ್​ಗಳ ವಿರುದ್ಧ. ಇಲ್ಲಿ ಅವರು ಪಂತ್​ ಅವರನ್ನು ಸಮರ್ಥಿಸಲು ಮುಂದಾಗಿ ಎಲ್​ಎಸ್​ಜಿ ಬೌಲರ್​ಗಳ ವೈಫಲ್ಯವನ್ನೂ ಸಹ ಎತ್ತಿ ತೋರಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯಲಾಗುತ್ತಿದೆ.

ಪಂತ್​ಗೆ ಬಹುಪರಾಕ್:

ಇನ್ನು ಇದೇ ಸುದ್ದಿಗೋಷ್ಠಿಯಲ್ಲಿ ರಿಷಭ್ ಪಂತ್ ಅವರ ನಾಯಕತ್ವದ ಗುಣವನ್ನು ಶ್ಲಾಘಿಸಿದ ಲ್ಯಾಂಗರ್, ನಿಕೋಲಸ್ ಪೂರನ್ ಅವರಿಗೆ ಹೆಚ್ಚಿನ ಅವಕಾಶ ನೀಡಲು ಪಂತ್ ಸ್ವತಃ ಮೂರನೇ ಕ್ರಮಾಂಕವನ್ನು ಬಿಟ್ಟುಕೊಟ್ಟು ಕೆಳಗಿನ ಕ್ರಮಾಂಕದಲ್ಲಿ ಆಡಿದ್ದರು. ತಂಡದ ಹಿತದೃಷ್ಟಿಯಿಂದ ಪಂತ್ ಈ ನಿರ್ಧಾರ ಕೈಗೊಂಡಿದ್ದರು. ಇದು ಒಬ್ಬ ಉತ್ತಮ ನಾಯಕನ ನಡೆ ಎಂದು ಶ್ಲಾಘಿಸಿದ್ದಾರೆ.

ಆದರೆ ಈ ಹೇಳಿಕೆಗೂ ಕೂಡ ಎಲ್​ಎಸ್​ಜಿ ಅಭಿಮಾನಿಗಳಿಂದ ಅಪಸ್ವರಗಳು ಕೇಳಿ ಬಂದಿವೆ. ಏಕೆಂದರೆ ಈ ಹಿಂದೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಪಂತ್ ಈ ಹಿಂದೆ ಶೂನ್ಯಕ್ಕೆ ಔಟಾಗಿದ್ದರು. ಅಲ್ಲದೆ ಕೆಕೆಆರ್ ವಿರುದ್ಧ ಗಳಿಸಿದ್ದು ಕೇವಲ 10 ರನ್​ ಮಾತ್ರ. ಆರ್​ಸಿಬಿ ವಿರುದ್ಧ 1 ರನ್​ಗೆ ಮುಗ್ಗರಿಸಿದ್ದರು. ಹೀಗಾಗಿಯೇ ಅವರು ಪೂರನ್​ಗೆ ಮೇಲಿನ ಕ್ರಮಾಂಕದಲ್ಲಿ ಅವಕಾಶ ನೀಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸುತ್ತಿದ್ದಾರೆ.

ಒಟ್ಟಿನಲ್ಲಿ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ (27 ಕೋಟಿ ರೂ.) ಎಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯುತ್ತಿರುವ ರಿಷಭ್ ಪಂತ್ ಅವರ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಅದರಲ್ಲೂ ಅವರ ನಾಯಕತ್ವದ ಯಾವುದೇ ಪರಿಣಾಮ ಬೀರುತ್ತಿಲ್ಲ. ಇದಕ್ಕೆ ಸಾಕ್ಷಿ ಮುಂಬೈ ಇಂಡಿಯನ್ಸ್ ವಿರುದ್ಧ  228 ರನ್​ಗಳಿಸಿದರೂ ಲಕ್ನೋ ಸೂಪರ್ ಜೈಂಟ್ಸ್​ 6 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿರುವುದು.

ಇದನ್ನೂ ಓದಿ: ಜ್ವರದಿಂದ ಮಲಗಿದ್ದ ಆಟಗಾರನಿಗೆ ಪ್ರೈವೇಟ್ ಪ್ಲೇನ್ ಆಫರ್ ನೀಡಿದ್ದ IPL ಮಾಲೀಕ!

ಈ ಸೋಲುಗಳ ಹೊರತಾಗಿಯೂ ಲಕ್ನೋ ಸೂಪರ್ ಜೈಂಟ್ಸ್​ ತಂಡ ಇನ್ನೂ ಸಹ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿಲ್ಲ. ಆದರೆ ಪ್ಲೇಆಫ್​ಗೇರಲು ಎಲ್​ಎಸ್​ಜಿ ಪಡೆ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಜಯಗಳಿಸಬೇಕು. ಅದರ ಜೊತೆಗೆ ಅದೃಷ್ಟ ಕೂಡ ಕೈ ಹಿಡಿಯಬೇಕು. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಅದೃಷ್ಟದ ಆಧಾರದ ಮೇಲೆ ಪ್ಲೇಆಫ್​ಗೇರಲಿದೆಯಾ ಕಾದು ನೋಡಬೇಕಿದೆ.

Follow Us
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ
ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ
ಇಂದು ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಿದೆ
ಇಂದು ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಿದೆ
ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ
ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ
ತಪ್ಪಿದ ಭಾರೀ ದುರಂತ; ಕಾರು ಚಾಲಕ ಬ್ರೇಕ್ ಹಾಕಿದ್ದರಿಂದ ಉಳಿಯಿತು ಜೀವ
ತಪ್ಪಿದ ಭಾರೀ ದುರಂತ; ಕಾರು ಚಾಲಕ ಬ್ರೇಕ್ ಹಾಕಿದ್ದರಿಂದ ಉಳಿಯಿತು ಜೀವ
ಹುತಾತ್ಮ ಅಂಬಾರಿ ಆನೆ ಅರ್ಜುನ ಸ್ಮಾರಕ ಉದ್ಘಾಟನೆ, ಹೇಗಿದೆ, ಎಲ್ಲಿದೆ ನೋಡಿ
ಹುತಾತ್ಮ ಅಂಬಾರಿ ಆನೆ ಅರ್ಜುನ ಸ್ಮಾರಕ ಉದ್ಘಾಟನೆ, ಹೇಗಿದೆ, ಎಲ್ಲಿದೆ ನೋಡಿ
ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಸ್ಪಷ್ಟನೆ
ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಸ್ಪಷ್ಟನೆ
ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಬಿಜೆಪಿ ಸಹಿಸುವುದಿಲ್ಲ; ಸುವೇಂದು ಅಧಿಕಾರಿ
ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಬಿಜೆಪಿ ಸಹಿಸುವುದಿಲ್ಲ; ಸುವೇಂದು ಅಧಿಕಾರಿ
ಆ ಸ್ಟಾರ್ ನಟನ ಸಿನಿಮಾ ನೋಡುವುದೇ ಬಿಟ್ಟ ಯಶ್: ವಿಡಿಯೋ
ಆ ಸ್ಟಾರ್ ನಟನ ಸಿನಿಮಾ ನೋಡುವುದೇ ಬಿಟ್ಟ ಯಶ್: ವಿಡಿಯೋ
ಎರಡುವರೆ ವರ್ಷ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಜೀವರಾಜ್
ಎರಡುವರೆ ವರ್ಷ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಜೀವರಾಜ್