AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನೋ ಮಾಡ್ತಿದ್ದೀಯಾ? ಇಶಾನ್ ಮೇಲೆ ಅಭಿಷೇಕ್ ಶರ್ಮಾ ಆಕ್ರೋಶ!

India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಪಂದ್ಯ ಮಳೆಯ ಕಾರಣ ರದ್ದಾಗಿದೆ. ಚೆಸ್ಟರ್-ಲೆ-ಸ್ಟ್ರೀಟ್​ನಲ್ಲಿ ಆರಂಭವಾಗಿದ್ದ ಈ ಮ್ಯಾಚ್ ಮೊದಲ ಇನಿಂಗ್ಸ್​ಗೆ ಸೀಮಿತವಾಯಿತು. ಆ ಬಳಿಕ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಏನೋ ಮಾಡ್ತಿದ್ದೀಯಾ? ಇಶಾನ್ ಮೇಲೆ ಅಭಿಷೇಕ್ ಶರ್ಮಾ ಆಕ್ರೋಶ!
Ishan Kishan - Abhishek SharmaImage Credit source: BCCI
ಝಾಹಿರ್ ಯೂಸುಫ್
|

Updated on: Jul 02, 2026 | 10:25 AM

Share

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಹೀಗೆ ಆರಂಭದಲ್ಲೇ ಆಘಾತಕ್ಕೊಳಗಾಲು ಮುಖ್ಯ ಕಾರಣ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್. ಅದರಲ್ಲೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಸುಖಾ ಸುಮ್ಮನೆ ರನೌಟ್​ಗೆ ಬಲಿಯಾಗಿದ್ದರು. ಈ ರನೌಟ್ ಬೆನ್ನಲ್ಲೇ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೈದಾನದಲ್ಲಿ ನಡೆದಿದ್ದೇನು?

ಭಾರತದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಇಶಾನ್ ಕಿಶನ್ ಚೆಂಡನ್ನು ಮಿಡ್-ವಿಕೆಟ್ ಕಡೆಗೆ ತಳ್ಳಿ, ತಮ್ಮ ಸಹ-ಆಟಗಾರ ಅಭಿಷೇಕ್ ಶರ್ಮಾ ಅವರನ್ನು ನೋಡದೆಯೇ ರನ್‌ಗಾಗಿ ಓಡಿದರು. ಆದರೆ ಅಲ್ಲಿ ಫೀಲ್ಡರ್ ಹ್ಯಾರಿ ಬ್ರೂಕ್ ಚೆಂಡನ್ನು ತಡೆದಿದ್ದನ್ನು ಗಮನಿಸಿದ ಅಭಿಷೇಕ್ ಶರ್ಮಾ ರನ್ ಬೇಡವೆಂದು ಅಲ್ಲೇ ನಿಂತರು.

ಅಷ್ಟರಲ್ಲಾಗಲೇ ಕ್ರೀಸ್‌ನ ಅರ್ಧದಷ್ಟು ದೂರ ಬಂದಿದ್ದ ಇಶಾನ್ ಕಿಶನ್ ಕಂಗಾಲಾದರು. ಬ್ರೂಕ್ ಎಸೆದ ಚೆಂಡನ್ನು ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಪಡೆದು ರನೌಟ್ ಮಾಡಿದರು.

ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್!

ಇಶಾನ್ ಕಿಶನ್ ರನೌಟ್ ಆಗುತ್ತಿದ್ದಂತೆ ಅಸಮಾಧಾನಗೊಂಡ ಅಭಿಷೇಕ್ ಶರ್ಮಾ ಮೈದಾನದಲ್ಲೇ ತಮ್ಮ ಆಕ್ರೋಶ ಹೊರಹಾಕಿದರು. ಅಲ್ಲದೆ ಇಬ್ಬರು ಯುವ ದಾಂಡಿಗರ ಮಾತುಕತೆ ಸ್ಟಂಪ್ ಮೈಕ್​ನಲ್ಲಿ ಸೆರೆಯಾಗಿದೆ.

    • ಅಭಿಷೇಕ್ ಶರ್ಮಾ: ನೀನು ತಲುಪಿದೆಯೋ ಇಲ್ಲವೋ?
    • ಇಶಾನ್ ಕಿಶನ್: ನಂಗೆ ಗೊತ್ತಿಲ್ಲ. ಕ್ಲೋಸ್ ಇದೆ.
    • ಅಭಿಷೇಕ್ ಶರ್ಮಾ: ಏನು ಮಾಡ್ತಾ ಇದ್ದೀಯಾ ಇಶಾನ್?
    • ಇಶಾನ್ ಕಿಶನ್: ಮುಂದೆ ಹೋಗಿತ್ತಲ್ವಾ? ಬಿಡು, ಅದು ನನ್ನ ಕರೆಯಾಗಿತ್ತು.
    • ಅಭಿಷೇಕ್ ಶರ್ಮಾ: ಕನಿಷ್ಠ ಪಕ್ಷ ಅವನೆಲ್ಲಿ ನಿಂತಿದ್ದಾನೆ ಅಂತಲಾದರೂ ನೋಡಬೇಕಲ್ವಾ!

ಇದೀಗ ವಿನಾಕಾರಣ ವಿಕೆಟ್ ಒಪ್ಪಿಸಿದ ಇಶಾನ್ ಕಿಶನ್ ವಿರುದ್ಧ ಅಸಮಾಧಾನ ಹೊರಹಾಕಿದ ಅಭಿಷೇಕ್ ಶರ್ಮಾ  ಅವರ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ದಾಖಲೆ ಉಡೀಸ್: ಹೊಸ ಇತಿಹಾಸ ಬರೆದ ಶ್ರೇಯಸ್ ಅಯ್ಯರ್

ಪಂದ್ಯ ರದ್ದು:

ಚೆಸ್ಟರ್-ಲೆ-ಸ್ಟ್ರೀಟ್​ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯವು ಮೊದಲ ಇನಿಂಗ್ಸ್​ಗೆ ಸೀಮಿತವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​​ಗಳಲ್ಲಿ 189 ರನ್​ ಕಲೆಹಾಕಿತು. ಆದರೆ ದ್ವಿತೀಯ ಇನಿಂಗ್ಸ್ ಆರಂಭಕ್ಕೂ ಮುನ್ನ ಸುರಿದ ಭಾರೀ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

Follow Us