AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನ್​ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ ಅರ್ಷದೀಪ್ ಸಿಂಗ್

"ಅಶ್ವಿನ್ ಭಾಯ್ ಕ್ಷಮಿಸಿ, ನಿಮಗೊಂದು ಪರ್ಸನಲ್ ಮೆಸೇಜ್ ಮಾಡ್ತೀನಿ!" – ಹೀಗಂದಿರುವುದು ಮತ್ಯಾರೂ ಅಲ್ಲ, ಟೀಮ್ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್. ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಾವು ಆಯ್ಕೆ ಮಾಡಿದ ಭಾರತದ 'ಟಾಪ್-5 ಅತ್ಯಂತ ಪ್ರತಿಭಾವಂತ ಬೌಲರ್‌ಗಳ' ಪಟ್ಟಿಯೇ ಈ ಕುತೂಹಲಕಾರಿ ಘಟನೆಯೇ ಈ ಕ್ಷಮಾಪಣೆಗೆ ಕಾರಣ!

ಅಶ್ವಿನ್​ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ ಅರ್ಷದೀಪ್ ಸಿಂಗ್
Arshadeep - Ashwin
ಝಾಹಿರ್ ಯೂಸುಫ್
|

Updated on:Aug 04, 2026 | 11:20 AM

Share

ಭಾರತ ತಂಡದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತದ ಅನುಭವಿ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ವೈಯಕ್ತಿಕವಾಗಿ ಮೆಸೇಜ್ ಮಾಡಿ ಮಾತನಾಡಿಸುವುದಾಗಿಯೂ ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಇತ್ತೀಚೆಗೆ ಹೆಸರಿಸಿದ ಟಾಪ್-5 ಬೌಲರ್​ಗಳು.

ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಭಾರತದ ಅತ್ಯಂತ ಪ್ರತಿಭಾವಂತ ಅಥವಾ ನೆಚ್ಚಿನ 5 ಬೌಲರ್‌ಗಳನ್ನು ಶ್ರೇಯಾಂಕದ  ಆಧಾರದಲ್ಲಿ ಹೆಸರಿಸಲು ಕೇಳಲಾಯಿತು. ವೇಗದ ಬೌಲರ್‌ಗಳ ಬಗ್ಗೆ ಕೊಂಚ ಹೆಚ್ಚು ಒಲವು ಹೊಂದಿದ್ದ ಅರ್ಷದೀಪ್ , ಆರಂಭದಲ್ಲೇ ಅಗ್ರ ಸ್ಥಾನಗಳನ್ನು ಭರ್ತಿ ಮಾಡಿದರು. ಕೊನೆಗೆ ಉಳಿದ ಏಕೈಕ ಸ್ಥಾನಕ್ಕೆ ಅಶ್ವಿನ್ ಅವರ ಹೆಸರನ್ನು ಇರಿಸಬೇಕಾಯಿತು.

ಅರ್ಷದೀಪ್ ಸಿಂಗ್​ರ ಟಾಪ್ 5 ಬೌಲರ್‌ಗಳು:

  1. ಭುವನೇಶ್ವರ್ ಕುಮಾರ್: ತಮ್ಮ ವೈಯಕ್ತಿಕ ನೆಚ್ಚಿನ ಬೌಲರ್ ಎಂದು ಮೊದಲ ಸ್ಥಾನ ನೀಡಿದರು.
  2. ಮೊಹಮ್ಮದ್ ಶಮಿ: ಚೆಂಡನ್ನು ಸೀಮ್ ಮಾಡುವ ಅದ್ಭುತ ಕಲೆಗಾಗಿ ಎರಡನೇ ಸ್ಥಾನ ನೀಡಿದರು.
  3.  ಕುಲ್ದೀಪ್ ಯಾದವ್: ವಿಶಿಷ್ಟ ಎಡಗೈ ಚೈನಾಮನ್ ಶೈಲಿಗಾಗಿ ಮೂರನೇ ಸ್ಥಾನದಲ್ಲಿರಿಸಿದರು.
  4. ಯುಜ್ವೇಂದ್ರ ಚಹಲ್: ಪಂಜಾಬ್ ದೇಶಿ ತಂಡದ ಆಟಗಾರ ಹಾಗೂ ವಿಕೆಟ್ ಟೇಕರ್ ಆಗಿರುವುದರಿಂದ ನಾಲ್ಕನೇ ಸ್ಥಾನ ನೀಡಿದರು.
  5. ರವಿಚಂದ್ರನ್ ಅಶ್ವಿನ್: ಕೊನೆಯಲ್ಲಿ ಬೇರೆ ಸ್ಥಾನಗಳಿಲ್ಲದ ಕಾರಣ ಅಶ್ವಿನ್ ಅವರಿಗೆ 5ನೇ ಸ್ಥಾನ ನೀಡಿದ್ದರು.

ಕ್ಷಮೆಯಾಚಿಸಲು ಮುಖ್ಯ ಕಾರಣವೇನು?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ದಿಗ್ಗಜ ಆಟಗಾರನನ್ನು ಕೊನೆಯ ಸ್ಥಾನದಲ್ಲಿ ಇರಿಸಿದ್ದನ್ನು ಅರಿತ ಅರ್ಷದೀಪ್ ಸಿಂಗ್ ತಕ್ಷಣವೇ ನಗುತ್ತಾ ಗೌರವಪೂರ್ವಕವಾಗಿ ಕ್ಷಮೆ ಕೇಳಿದರು.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..!

ಅಶ್ವಿನ್ ಅವರೊಂದಿಗೆ ತಮಗಿರುವ ವಿಶೇಷ ಬಾಂಧವ್ಯವನ್ನು ನೆನೆದ ಅರ್ಷದೀಪ್ ಸಿಂಗ್, “2019 ರಲ್ಲಿ ನಾನು ಪಂಜಾಬ್ ಕಿಂಗ್ಸ್ ಪರ ಐಪಿಎಲ್ ಪಾದಾರ್ಪಣೆ ಮಾಡಿದಾಗ ಆರ್. ಅಶ್ವಿನ್ ಅವರೇ ನನ್ನ ಮೊದಲ ನಾಯಕರಾಗಿದ್ದರು. ಅಶ್ವಿನ್ ಭಾಯ್ ಅವರನ್ನು ಕೊನೆಯ ಸ್ಥಾನದಲ್ಲಿ ಇರಿಸಲು ನನಗೆ ಇಷ್ಟವಿರಲಿಲ್ಲ. ಆದರೆ ಬೇರೆ ಯಾವುದೇ ಸ್ಥಾನಗಳು ಬಾಕಿ ಇರಲಿಲ್ಲ. ಕ್ಷಮಿಸಿ ಅಶ್ವಿನ್ ಭಾಯ್, ನಾನು ನಿಮಗೆ ವೈಯಕ್ತಿಕವಾಗಿ ಮೆಸೇಜ್ ಮಾಡುತ್ತೇನೆ,” ಎಂದು ಹಾಸ್ಯಭರಿತವಾಗಿ ಹೇಳಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Published On - 11:16 am, Tue, 4 August 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ