PAK vs AFG, ICC World Cup: ಪಾಕ್ ವಿರುದ್ಧ ಜಯ: ಅಫ್ಘಾನಿಸ್ತಾನದಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ, ಭಯಾನಕ ವಿಡಿಯೋ
Gunfire Celebrations In Kabul, Pakistan vs Afghanistan: ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನದ ಮೊದಲ ಏಕದಿನ ಗೆಲುವನ್ನು ಕಾಬೂಲ್‌ನಲ್ಲಿ ವಿಶೇಷವಾಗಿ ಸಂಭ್ರಮಾಚರಣೆ ಮಾಡಲಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ. ಅಫ್ಘನ್ನರು ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದಾಗ ಅಲ್ಲಿನ ರಾಜಧಾನಿ ಕಾಬೂಲ್‌ನಲ್ಲಿ ಪಟಾಕಿ ಮತ್ತು ಗುಂಡಿನ ಸದ್ದು ಜೋರಾಗಿ ಕೇಳಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ತಂಡವು 2023 ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸೋಮವಾರ ಪಾಕಿಸ್ತಾನದ (Afghanistan vs Pakistan) ವಿರುದ್ಧ ಐತಿಹಾಸಿಕ ಜಯ ಸಾಧಿಸಿತು, ಮಾಜಿ ಚಾಂಪಿಯನ್‌ಗಳನ್ನು 8 ವಿಕೆಟ್‌ಗಳಿಂದ ಸೋಲಿಸಿ ವಿಶ್ವಕಪ್‌ನಲ್ಲಿ ತಮ್ಮ ಅಭಿಯಾನವನ್ನು ಜೀವಂತವಾಗಿರಿಸಿದೆ. ಈ ಸೋಲು ಪಾಕಿಸ್ತಾನದ ಸೆಮಿ-ಫೈನಲ್ ಭರವಸೆಯನ್ನು ಉಳಿಸಿಕೊಂಡಿದ್ದರೂ, ಬಾಬರ್ ಪಡೆಗೆ ದೊಡ್ಡ ಹಿನ್ನಡೆಯಾಗಿದೆ. ಈಗಾಗಲೇ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಸೋಲುಣಿಸಿರುವ ಅಫ್ಘಾನ್ ಮುಂದಿನ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತೆ ಎಂಬುದು ಕುತೂಹಲ ಕೆರಳಿಸಿದೆ. ಅಫ್ಘಾನ್ನ ಐತಿಹಾಸಿಕ ಜಯವನ್ನು ಭರ್ಜರಿ ಆಗಿ ಸಂಭ್ರಮಿಸಲಾಗುತ್ತಿದೆ.
ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನದ ಮೊದಲ ಏಕದಿನ ಗೆಲುವನ್ನು ಕಾಬೂಲ್‌ನಲ್ಲಿ ವಿಶೇಷವಾಗಿ ಸಂಭ್ರಮಾಚರಣೆ ಮಾಡಲಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ. ಅಫ್ಘನ್ನರು ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದಾಗ ಅಲ್ಲಿನ ರಾಜಧಾನಿ ಕಾಬೂಲ್‌ನಲ್ಲಿ ಪಟಾಕಿ ಮತ್ತು ಗುಂಡಿನ ಸದ್ದು ಜೋರಾಗಿ ಕೇಳಿದೆ. AFP ವರದಿಯ ಪ್ರಕಾರ, ಪಂದ್ಯ ಮುಗಿದ ನಂತರ ಕನಿಷ್ಠ 15 ನಿಮಿಷಗಳ ಕಾಲ ಅಫ್ಘಾನ್ ರಾಜಧಾನಿ ಕಾಬೂಲ್‌ನಾದ್ಯಂತ ಸಂಭ್ರಮಾಚರಣೆ ನಡೆದಿದ್ದು, ಗುಂಡು ಹಾರಿಸಿ, ಪಟಾಕಿ ಸಿಡಿಸಿ ವಿಜಯವನ್ನು ಸ್ವಾಗತಿಸಿದ್ದಾರೆ.
ಪಾಕ್ಗೆ ಮಣ್ಣುಮುಕ್ಕಿಸಿದ ಅಫ್ಘಾನ್: ಖುಷಿಯಲ್ಲಿ ಮೈದಾನದಲ್ಲೇ ರಶೀದ್ ಜೊತೆ ಪಠಾಣ್ ಡ್ಯಾನ್ಸ್
ಕಾಬೂಲ್‌ನಿಂದ ಬಂದಿರುವುದಾಗಿ ಹೇಳಲಾದ ವಿಡಿಯೋಗಳು ಇಲ್ಲಿವೆ:
The celebrations in Afghanistan. pic.twitter.com/7d040PgQgM
— Mufaddal Vohra (@mufaddal_vohra) October 23, 2023
Celebrations in Kabul after Afghanistan’s victory over Pakistan in the Cricket World Cup in India.
Gun firing and firecrackers both at same time😅
#PAKvsAFG#PKMKBForever#Afghanistan #CWC23 pic.twitter.com/mJMrkMScfs
— Puneet Kumar jha (@puneetjha07) October 23, 2023
Cute little kids celebrating Afghanistan’s win over Pakistan in Kabul.pic.twitter.com/ZYcGLpcnWi
— Mufaddal Vohra (@mufaddal_vohra) October 23, 2023
ಅಫ್ಘಾನಿಸ್ತಾನಕ್ಕೆ ಇದು ಮರೆಯಲಾಗದ ಐತಿಹಾಸಿಕ ಗೆಲುವು. ಮೊದಲಿಗೆ, 18 ವರ್ಷದ ಲೆಗ್ ಸ್ಪಿನ್ನರ್ ನೂರ್ ಅಹ್ಮದ್ ತಮ್ಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಎದುರಾಳಿ ನಾಯಕ ಬಾಬರ್ ಅಝಂ ಮತ್ತು ಮಾಸ್ಟರ್ ರನ್-ಗೇಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ಪೆವಿಲಿಯನ್ಗೆ ಅಟ್ಟಿ 49 ರನ್ ನೀಡಿ ಮುಖ್ಯವಾಗ 3 ವಿಕೆಟ್ ಕಬಳಿಸಿದರು. ನಂತರ 21ರ ಹರೆಯದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಇಬ್ರಾಹಿಂ ಜದ್ರಾನ್ 87 ರನ್ ಮತ್ತು ರಹಮಾನುಲ್ಲಾ ಗುರ್ಬಾಜ್ 65 ರನ್ ಗಳಿಸಿ ಮೊದಲ ವಿಕೆಟ್‌ಗೆ 130 ರನ್ ಪೇರಿಸುವ ಮೂಲಕ ಅಫ್ಘಾನ್ ಎಂಟು ವಿಕೆಟ್‌ಗಳ ಅದ್ಭುತ ಗೆಲುವು ಕಂಡಿತು.
ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಸಂಪೂರ್ಣ ಸಪೋರ್ಟ್ ಅಫ್ಘಾನಿಸ್ತಾನ ತಂಡಕ್ಕೆ ಸಿಕಿತ್ತು. ಇದಕ್ಕಾಗಿ ಅಫ್ಘಾನ್ ಆಟಗಾರರು ಗೆಲುವಿನ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಕೂಡ ಹೇಳಿದರು. ಪಂದ್ಯ ಮುಗಿದ ನಂತರ ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಜೊತೆ ನೃತ್ಯ ಮಾಡಿ ಸಂಭ್ರಮಿಸಿದರು. ಅಫ್ಘಾನಿಸ್ತಾನ ತಂಡದ ಈ ಗೆಲುವನ್ನು ಭಾರತೀಯರು ಕೂಡ ಸಂಭ್ರಮಿಸಿದರು ಎಂದು ಹೇಳಬಹುದು. ಭಾರತದ ಕ್ರಿಕೆಟ್ ದಿಗ್ಗಜರು ಕೂಡ ಅಫ್ಘಾನ್ ಗೆಲುವಿಗೆ ತಮ್ಮ ಎಕ್ಸ್ ಖಾತೆಯಲ್ಲಿ ಶುಭಕೋರಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Tue, 24 October 23