AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anuj Rawat: ಥೇಟ್ ಎಂಎಸ್ ಧೋನಿ ರೀತಿಯಲ್ಲಿ ರನೌಟ್: ಅನುಜ್ ರಾವತ್ ಕಲೆಗೆ ದಂಗಾದ ಜೈಪುರ ಸ್ಟೇಡಿಯಂ

RR vs RCB, IPL 2023: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಕೇವಲ 11 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 29 ರನ್ ಚಚ್ಚಿದ ಆರ್​ಸಿಬಿರ ಅನುಜ್ ರಾವತ್ ವಿಕೆಟ್ ಕೀಪರ್ ಆಗಿಯೂ ತಮ್ಮ ಕೈಚಳಕ ತೋರಿಸಿದರು.

Anuj Rawat: ಥೇಟ್ ಎಂಎಸ್ ಧೋನಿ ರೀತಿಯಲ್ಲಿ ರನೌಟ್: ಅನುಜ್ ರಾವತ್ ಕಲೆಗೆ ದಂಗಾದ ಜೈಪುರ ಸ್ಟೇಡಿಯಂ
Anuj Rawat Runout
Vinay Bhat
|

Updated on: May 15, 2023 | 9:37 AM

Share

ಮುಖ್ಯಾಂಶಗಳು

  • ಥೇಟ್ ಎಂಎಸ್ ಧೋನಿ ರೀತಿಯಲ್ಲಿ ರನೌಟ್
  • ಅನುಜ್ ರಾವತ್ ಕಲೆಗೆ ದಂಗಾದ ಜೈಪುರ ಸ್ಟೇಡಿಯಂ
  • ಕೀಪರ್ ಆಗಿಯೂ ತಮ್ಮ ಕೈಚಳಕ ತೋರಿದ ರಾವತ್

ಐಪಿಎಲ್ 2023 ರಲ್ಲಿ (IPL 2023) ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ನಡುವಣ ಪಂದ್ಯ ಕುತೂಹಲ ಕೆರಳಿಸಿತ್ತು. ಬೌಲಿಂಗ್​ನಲ್ಲಿ ಸತತ ಕಳಪೆ ಪ್ರದರ್ಶನ ತೋರುತ್ತಿದ್ದ ಆರ್​ಸಿಬಿ ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಆರ್​ಆರ್​ ವಿರುದ್ಧದ ಪಂದ್ಯದಲ್ಲಿ ಊಹಿಸಲಾಗದ ರೀತಿಯ ಪ್ರದರ್ಶನ ತೋರಿತು. ಸ್ಯಾಮ್ಸನ್ ಪಡೆಯನ್ನು ಕೇವಲ 59 ರನ್​ಗೆ ಆಲೌಟ್ ಮಾಡಿ ಬರೋಬ್ಬರಿ 112 ರನ್​ಗಳ ಜಯ ಸಾಧಿಸಿತು. ಈ ಮೂಲಕ ಬೆಂಗಳೂರು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಫೀಲ್ಡಿಂಗ್​ನಲ್ಲೂ ಆರ್​ಸಿಬಿ ಪ್ಲೇಯರ್ಸ್ ಮೋಡಿ ಮಾಡಿದರು. ಅದರಲ್ಲೂ ಅನುಜ್ ರಾವತ್ (Anuj Rawat) ಮಾಡಿದ ರನೌಟ್ ಥೇಟ್ ಧೋನಿ ರೀತಿಯಲ್ಲೇ ಇತ್ತು.

ಬ್ಯಾಟಿಂಗ್​ನಲ್ಲಿ ಕೇವಲ 11 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 29 ರನ್ ಚಚ್ಚಿದ ಅನುಜ್ ರಾವತ್ ವಿಕೆಟ್ ಕೀಪರ್ ಆಗಿಯೂ ತಮ್ಮ ಕೈಚಳಕ ತೋರಿಸಿದರು. ದಿನೇಶ್ ಕಾರ್ತಿಕ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತ ರಾವತ್ ಒಂದು ರನೌಟ್ ಮಾಡಿ ಎಲ್ಲರ ನಿಬ್ಬೆರಗಾಗಿಸಿದರು. ಈ ರನೌಟ್ ಥೇಟ್ ಎಂಎಸ್ ಧೋನಿ ಮಾಡಿದ ರೀತಿಯಲ್ಲೇ ಇತ್ತು. 8ನೇ ಓವರ್​ನ ಕರ್ಣ್ ಶರ್ಮಾ ಬೌಲಿಂಗ್​ನ ಕೊನೆಯ ಎಸೆತದಲ್ಲಿ ಶಿಮ್ರೊನ್ ಹೆಟ್ಮೇರ್ ಎರಡು ರನ್​ಗೆಂದು ಓಡಿದರು. ಆದರೆ, ಚೆಂಡನ್ನ ಬೇಗನೆ ಪಡೆದು ಸಿರಾಜ್ ವಿಕೆಟ್ ಕೀಪರ್ ಕಡೆ ಎಸೆದರು. ಇದನ್ನು ಗಮನಿಸಿದ ಹೆಟ್ಮೇರ್ ಒಂದು ರನ್ ಸಾಕೆಂದು ರವಿಚಂದ್ರನ್ ಅಶ್ವಿನ್​ಗೆ ಹೇಳಿದರು.

ಇದನ್ನೂ ಓದಿ
Image
MS Dhoni: ತನ್ನ ಶರ್ಟ್ ಮೇಲೆ ಧೋನಿಯ ಆಟೋಗ್ರಾಫ್ ಹಾಕಿಸಿಕೊಂಡ ಲೆಜೆಂಡ್ ಸುನಿಲ್ ಗವಾಸ್ಕರ್
Image
Faf Duplessis: 112 ರನ್​ಗಳ ಗೆಲುವಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದೇನು ನೋಡಿ
Image
GT vs SRH, IPL 2023: ಐಪಿಎಲ್​ನಲ್ಲಿಂದು ಗುಜರಾತ್-ಹೈದರಾಬಾದ್ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್​ಸಿಬಿಗೆ ಸಹಕಾರಿ?
Image
IPL 2023 Points Table: RCBಗೆ ಭರ್ಜರಿ ಜಯ, CSKಗೆ ಸೋಲು: ಹೊಸ ಪಾಯಿಂಟ್ಸ್​ ಟೇಬಲ್ ಹೀಗಿದೆ

IPL 2023: ಐಪಿಎಲ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್​ ಆದ ಟಾಪ್-5 ತಂಡಗಳಾವುವು ಗೊತ್ತಾ?

ಆದರೆ, ಅಷ್ಟೊತ್ತಿಗೆ ಅಶ್ವಿನ್ ಕೊಂಚ ಕ್ರೀಸ್ ಬಿಟ್ಟಾಗಿತ್ತು. ಇತ್ತ ಚೆಂಡು ತನ್ನ ಕೈಗೆ ಸಿಗುತ್ತಿದ್ದಂತೆ ಕೀಪರ್ ರಾವತ್  ವಿಕೆಟ್ ಅನ್ನು ನೋಡದೆ ಹಿಂಬದಿಯಿಂದ ಬಾಲ್ ಎಸೆದಿದ್ದು ಚೆಂಡು ವಿಕೆಟ್​ಗೆ ಬಡಿದಿದೆ. ಅಶ್ವಿನ್ ಕೂಡಲೇ ಕ್ರೀಸ್​ನೊಳಗೆ ಬ್ಯಾಟ್ ತಂದರೂ ಕೂದಲೆಳೆಯಿಂದ ರನೌಟ್ ಆಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​​ಸಿಬಿಗೆ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ (18) ಅರ್ಧಶತಕದ ಜೊತೆಯಾಟ ನೀಡಿದರು. ಬಳಿಕ ಗ್ಲೆನ್ ಮ್ಯಾಕ್ಸ್​ವೆಲ್ ಜೊತೆಯಾದ ಫಾಫ್ ಬೊಂಬಾಟ್ ಆಟ ಪ್ರದರ್ಶಿಸಿದರು. ಡುಪ್ಲೆಸಿಸ್ 44 ಎಸೆತಗಳಲ್ಲಿ 55 ರನ್ ಗಳಿಸಿದರೆ, ಮ್ಯಾಕ್ಸ್​ವೆಲ್ 54 ರನ್ ಚಚ್ಚಿದರು. ಕೊನೆಯಲ್ಲಿ ರಾವತ್ 11 ಎಸೆತಗಳಲ್ಲಿ 29 ರನ್ ಸಿಡಿಸಿದ ಪರಿಣಾಮ ಆರ್​ಸಿಬಿ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ಮೊದಲ ಓವರ್​ನಿಂದಲೇ ವಿಕೆಟ್ ಕಳೆದುಕೊಂಡು ಸಾಗಿ ಕೇವಲ 59 ರನ್​ಗೆ ಸರ್ವಪತನ ಕಂಡಿತು. ತಂಡದ ಪರ ಹೆಟ್ಮೇರ್ (35) ಅತಿ ಹೆಚ್ಚು ಕಲೆಹಾಕಿದರು. ಆರ್​ಸಿಬಿ ಪರ ವೇಯ್ನ್ ಪಾರ್ನೆಲ್ 3 ವಿಕೆಟ್ ಕಿತ್ತರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ