AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್ ಟ್ರೋಫಿ ಭಾರತದ ಕೈಸೇರುವುದು ಯಾವಾಗ? ಹೊರಬಿತ್ತು ಹೊಸ ಅಪ್​ಡೇಟ್

Asia Cup Trophy Dispute: 2025ರ ಏಷ್ಯಾಕಪ್ ಗೆದ್ದು ತಿಂಗಳುಗಳಾದರೂ ಟೀಂ ಇಂಡಿಯಾಗೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಮೊಹ್ಸಿನ್ ನಖ್ವಿ ಕಾರಣದಿಂದ ಟ್ರೋಫಿ ವಿವಾದ ಭುಗಿಲೆದ್ದಿದ್ದು, ಬಿಸಿಸಿಐ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐಸಿಸಿ ಸಭೆಯಲ್ಲಿ ಪ್ರಯತ್ನಿಸಿದೆ. ಇದೀಗ ಪಿಸಿಬಿ ಮುಖ್ಯಸ್ಥರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಮಾತುಕತೆ ನಡೆಸಿರುವ ಕಾರಣ, ಭಾರತಕ್ಕೆ ಶೀಘ್ರದಲ್ಲೇ ಏಷ್ಯಾಕಪ್ ಟ್ರೋಫಿ ತಲುಪುವ ಭರವಸೆ ಹೆಚ್ಚಿದೆ.

ಏಷ್ಯಾಕಪ್ ಟ್ರೋಫಿ ಭಾರತದ ಕೈಸೇರುವುದು ಯಾವಾಗ? ಹೊರಬಿತ್ತು ಹೊಸ ಅಪ್​ಡೇಟ್
Saikia, Nakvi
ಪೃಥ್ವಿಶಂಕರ
|

Updated on:Nov 08, 2025 | 6:42 PM

Share

2025 ರ ಏಷ್ಯಾಕಪ್ (Asia Cup 2025) ಮುಗಿದು ತಿಂಗಳು ಕಳೆದರೂ ಚಾಂಪಿಯನ್ ಟೀಂ ಇಂಡಿಯಾಕ್ಕೆ (Team India) ಇದುವರೆಗೂ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಭಾಗ್ಯ ದೊರೆತಿಲ್ಲ. ಮೊಹ್ಸಿನ್ ನಖ್ವಿಯ (Mohsin Naqvi) ಕಪಿಮುಷ್ಠಿಯಲ್ಲಿರುವ ಟ್ರೋಫಿಯನ್ನು ಪಡೆದುಕೊಳ್ಳಲು ಬಿಸಿಸಿಐ (BCCI) ನಾನಾ ಪ್ರಯತ್ನಗಳನ್ನು ಮಾಡುತ್ತಿದೆಯಾದರೂ ಅದಾಗ್ಯೂ ಕ್ರಿಕೆಟ್​ನ ಬಿಗ್ ಬಾಸ್ ಬಿಸಿಸಿಐಗೂ ಏಷ್ಯಾಕಪ್ ಟ್ರೋಫಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ತನ್ನ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ ಬಳಿಕ ಇದೀಗ ಬಿಸಿಸಿಐ, ಐಸಿಸಿ ಸಭೆಯಲ್ಲಿ ಏಷ್ಯಾಕಪ್ ಟ್ರೋಫಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಪೂರಕವಾಗಿ, ತಿಂಗಳುಗಳ ಬಳಿಕ ಟ್ರೋಫಿ ಭಾರತ ತಂಡದ ಕೈಸೇರುವ ವಿಶ್ವಾಸ ಹೆಚ್ಚಾಗಿದೆ.

ಎಸಿಸಿ ಕಚೇರಿಯಲ್ಲಿ ಟ್ರೋಫಿ

ವಾಸ್ತವವಾಗಿ ಏಷ್ಯಾಕಪ್ ಗೆದ್ದ ಬಳಿಕ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತು. ಇದರಿಂದ ಮುಜುಗರಕ್ಕೊಳಗಾದ ನಖ್ವಿ, ಏಷ್ಯಾಕಪ್ ಟ್ರೋಫಿಯನ್ನು ತನ್ನದೊಂದಿಗೆ ತೆಗೆದುಕೊಂಡು ಹೋಗಿದ್ದರು. ಆ ಬಳಿಕ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬದಲು ಎಸಿಸಿ ಕೇಂದ್ರ ಕಚೇರಿಯಲ್ಲಿ ಇಟ್ಟಿದ್ದಾರೆ. ಅಲ್ಲದೆ ಅವರ ಅನುಮತಿಯಿಲ್ಲದೆ ಟ್ರೋಫಿಯನ್ನು ಅಲ್ಲಿಂದ ತೆಗೆಯಬಾರದು ಎಂದು ಸೂಚನೆಯನ್ನು ನೀಡಿದ್ದರು. ಇದೀಗ ತನ್ನ ಕೈನಿಂದಲೇ ಟೀಂ ಇಂಡಿಯ ಟ್ರೋಫಿಯನ್ನು ಸ್ವೀಕರಿಸಬೇಕು ಎಂದು ನಖ್ವಿ ಹಟಕ್ಕೆ ಬಿದ್ದಿದ್ದಾರೆ.

ಉಭಯರ ನಡುವೆ ಪ್ರತ್ಯೇಕ ಸಭೆ

ನಖ್ವಿಯ ಈ ನಡೆಯಿಂದ ಕೋಪಗೊಂಡಿದ್ದ ಬಿಸಿಸಿಐ, ನವೆಂಬರ್ 4 ರಿಂದ ಆರಂಭವಾಗಿರುವ ಐಸಿಸಿ ಸಾಮಾನ್ಯ ಸಭೆಯಲ್ಲಿ ಈ ವಿವಾದವನ್ನು ಐಸಿಸಿ ಮುಂದಿಡಲು ನಿರ್ಧರಿಸಿತ್ತು. ಅದರಂತೆ ಈಗ ಮೊಹ್ಸಿನ್ ನಖ್ವಿ ಹಾಗೂ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನಡುವೆ ಪ್ರತ್ಯೇಕ ಸಭೆ ನಡೆದಿದ್ದು, ಟ್ರೋಫಿ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

ಏಷ್ಯಾಕಪ್ ಟ್ರೋಫಿ ವಿವಾದದ ನಡುವೆ ಭಾರತ- ಪಾಕಿಸ್ತಾನ ಮತ್ತೆ ಮುಖಾಮುಖಿ

ಶೀಘ್ರದಲ್ಲೇ ಪರಿಹಾರ

ಈ ಬಗ್ಗೆ ಪಿಟಿ​ಐಗೆ ಮಾತನಾಡಿರುವ ಸೈಕಿಯಾ, ‘ನಾನು ಐಸಿಸಿಯ ಅನೌಪಚಾರಿಕ ಮತ್ತು ಔಪಚಾರಿಕ ಸಭೆಗಳ ಭಾಗವಾಗಿದ್ದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಹಾಜರಿದ್ದರು. ಔಪಚಾರಿಕ ಸಭೆಯ ಸಮಯದಲ್ಲಿ ಇದು ಕಾರ್ಯಸೂಚಿಯಲ್ಲಿ ಇರಲಿಲ್ಲ, ಆದಾಗ್ಯೂ ಐಸಿಸಿ, ನನ್ನ ಮತ್ತು ಪಿಸಿಬಿ ಮುಖ್ಯಸ್ಥರ ನಡುವೆ ಹಿರಿಯ ಅಧಿಕಾರಿ ಮತ್ತು ಇನ್ನೊಬ್ಬ ಹಿರಿಯ ಅಧಿಕಾರಿಯ ಸಮ್ಮುಖದಲ್ಲಿ ಪ್ರತ್ಯೇಕ ಸಭೆಯನ್ನು ಏರ್ಪಡಿಸಿತು. ಉಭಯರ ನಡುವೆ ಮಾತುಕತೆ ಆರಂಭವಾಗಿರುವುದು ಒಳ್ಳೇಯ ಸಂಗತಿ. ಐಸಿಸಿ ಮಂಡಳಿ ಸಭೆಯ ಸಮಯದಲ್ಲಿ ನಡೆದ ಸಭೆಯಲ್ಲಿ ಎರಡೂ ಮಂಡಳಿಗಳ ಪ್ರತಿನಿಧಿಗಳು ಸೌಹಾರ್ದಯುತವಾಗಿ ಭಾಗವಹಿಸಿದ್ದೇವು. ಅಲ್ಲದೆ ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಸೈಕಿಯಾ ಭರವಸೆ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Sat, 8 November 25

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು