AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಏಷ್ಯಾಕಪ್​ ಟೂರ್ನಿಯಿಂದ ಹಿಂದೆ ಸರಿದ ಭಾರತ

Asia Cup 2025: ಏಷ್ಯನ್ ದೇಶಗಳ ಕ್ರಿಕೆಟ್ ಕದನ ಏಷ್ಯಾಕಪ್ ಟೂರ್ನಿಯಿಂದ ಟೀಮ್ ಇಂಡಿಯಾ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಬಿಸಿಸಿಐ, ಏಷ್ಯಾನ್ ಕ್ರಿಕೆಟ್ ಕೌನ್ಸಿಲ್​ಗೆ ಪತ್ರ ಬರೆದಿದೆ. ಹೀಗಾಗಿ ಈ ಬಾರಿಯ ಏಷ್ಯಾಕಪ್​ನಲ್ಲಿ ಭಾರತ ತಂಡ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ.

Asia Cup 2025: ಏಷ್ಯಾಕಪ್​ ಟೂರ್ನಿಯಿಂದ ಹಿಂದೆ ಸರಿದ ಭಾರತ
Team India
ಝಾಹಿರ್ ಯೂಸುಫ್
|

Updated on:May 19, 2025 | 9:20 AM

Share

ಭಾರತ-ಪಾಕಿಸ್ತಾನ್ (India vs Pakistan) ನಡುವಿನ ಇತ್ತೀಚಿನ ಘರ್ಷಣೆಗಳ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಡೆಸುವ ಎಲ್ಲಾ ಟೂರ್ನಿಗಳಿಂದ ಸದ್ಯಕ್ಕೆ ದೂರವಿರಲು ನಿರ್ಧರಿಸಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

ಶ್ರೀಲಂಕಾದಲ್ಲಿ ಮುಂದಿನ ತಿಂಗಳಿಂದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ. ಹಾಗೆಯೇ ಈ ವರ್ಷಾಂತ್ಯದಲ್ಲಿ ಪುರುಷರ ಏಷ್ಯಾಕಪ್ ಟೂರ್ನಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿತ್ತು. ಇದೀಗ ಈ ಟೂರ್ನಿಯಿಂದಲೂ ಭಾರತ ಹೊರಗುಳಿಯುವುದಾಗಿ ಬಿಸಿಸಿಐ ತಿಳಿಸಿದೆ.

ಈ ಬಾರಿಯ ಏಷ್ಯಾಕಪ್ ಟೂರ್ನಿಯು ಭಾರತದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಮುಂಬರುವ ಟಿ20 ವಿಶ್ವಕಪ್​ ಅನ್ನು ಕೇಂದ್ರೀಕರಿಸಿ ಟಿ20 ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಯೋಜನೆ ರೂಪಿಸಲಾಗಿತ್ತು. ಆದರೀಗ ಆತಿಥ್ಯದ ಹಕ್ಕನ್ನು ಹೊಂದಿರುವ ಭಾರತವೇ ಟೂರ್ನಿಯಿಂದ ಹಿಂದೆ ಸರಿದಿದೆ. ಹೀಗಾಗಿ ಟೂರ್ನಿ ನಡೆಯುವ ಸಾಧ್ಯತೆಯಿಲ್ಲ ಎನ್ನಬಹುದು.

ಏಕೆಂದರೆ ಏಷ್ಯಾಕಪ್ ಟೂರ್ನಿಗೆ ಅತೀ ಹೆಚ್ಚು ಪ್ರಾಯೋಜಕತ್ವ ಸಿಗುವುದು ಭಾರತದಿಂದ. ಇದೀಗ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಗುಳಿದರೆ, ಪ್ರಾಯೋಜಕರ ಕೊರತೆ ಎದುರಾಗಲಿದೆ. ಅಲ್ಲದೆ ಆದಾಯದ ಮೇಲೂ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಈ ಬಾರಿ ಟೂರ್ನಿ ನಡೆಯದಿದ್ದರೂ ಅಚ್ಚರಿಪಡಬೇಕಿಲ್ಲ.

ಬಿಸಿಸಿಐ ಹಿಂದೆ ಸರಿಯಲು ಕಾರಣವೇನು?

ಇತ್ತೀಚೆಗಷ್ಟೇ ಪಾಕ್ ಬೆಂಬಲಿತ ಉಗ್ರರು ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ 26 ಭಾರತೀಯರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಮೂಲಕ ತಿರುಗೇಟು ನೀಡಿತ್ತು. ಇದಾಗ್ಯೂ ಪಾಕ್ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಪಾಕ್ ಜೊತೆಗಿನ ಎಲ್ಲಾ ರೀತಿಯ ಕ್ರಿಕೆಟ್ ಸಂಬಂಧಕ್ಕೆ ಇತಿಶ್ರೀ ಹಾಡಲು ಬಿಸಿಸಿಐ ಮುಂದಾಗಿದೆ.

ಪಾಕಿಸ್ತಾನದ ಸಚಿವರು ಮುಖ್ಯಸ್ಥರಾಗಿರುವ ಎಸಿಸಿ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾರತ ತಂಡ ಆಡಲು ಸಾಧ್ಯವಿಲ್ಲ. ಹೀಗಾಗಿ ಮುಂಬರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ನಿಂದ ಹಿಂದೆ ಸರಿಯುವ ಬಗ್ಗೆ ನಾವು ಈಗಾಗಲೇ ಎಸಿಸಿಗೆ ಮೌಖಿಕವಾಗಿ ತಿಳಿಸಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೀಗಾಗಿ ಈ ವರ್ಷದ ನಡೆಯಲಿರುವ ಏಷ್ಯಾಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಳ್ಳುವುದಿಲ್ಲ. ಈ ಮೂಲಕ ಪಾಕಿಸ್ತಾನದ ಕ್ರಿಕೆಟ್ ಆದಾಯಕ್ಕೂ ಹೊಡೆತ ನೀಡಲು ಭಾರತ ಮುಂದಾಗಿದೆ.

ಹಾಲಿ ಚಾಂಪಿಯನ್ ಭಾರತ:

2023 ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಕೇವಲ 50 ರನ್​ಗಳಿಗೆ ಆಲೌಟ್ ಮಾಡಿ, ಟೀಮ್ ಇಂಡಿಯಾ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ: KL Rahul: ಹಿಸ್ಟರಿ, ಹಿಸ್ಟರಿ, ಹಿಸ್ಟರಿ… ಐಪಿಎಲ್​ನಲ್ಲಿ ಹೊಸ ಹಿಸ್ಟರಿ ನಿರ್ಮಿಸಿದ ಕೆಎಲ್ ರಾಹುಲ್

ಏಷ್ಯಾಕಪ್ ವಿಜೇತರ ಪಟ್ಟಿ (1984-2023)

ವರ್ಷ
ವಿಜೇತ ತಂಡ
ರನ್ನರ್-ಅಪ್
ಆತಿಥ್ಯ ದೇಶ
1984
ಭಾರತ
ಶ್ರೀಲಂಕಾ
ಯುಎಇ
1986
ಶ್ರೀಲಂಕಾ
ಪಾಕಿಸ್ತಾನ್
ಶ್ರೀಲಂಕಾ
1988
ಭಾರತ
ಶ್ರೀಲಂಕಾ
ಬಾಂಗ್ಲಾದೇಶ್
1990/91
ಭಾರತ
ಶ್ರೀಲಂಕಾ
ಬಾಂಗ್ಲಾದೇಶ್
1995
ಭಾರತ
ಶ್ರೀಲಂಕಾ
ಯುಎಇ
1997
ಶ್ರೀಲಂಕಾ
ಭಾರತ
ಶ್ರೀಲಂಕಾ
2000
ಪಾಕಿಸ್ತಾನ್
ಶ್ರೀಲಂಕಾ
ಬಾಂಗ್ಲಾದೇಶ್
2004
ಶ್ರೀಲಂಕಾ
ಭಾರತ
ಶ್ರೀಲಂಕಾ
2008
ಶ್ರೀಲಂಕಾ
ಭಾರತ
ಪಾಕಿಸ್ತಾನ್
2010
ಭಾರತ
ಶ್ರೀಲಂಕಾ
ಶ್ರೀಲಂಕಾ
2012
ಪಾಕಿಸ್ತಾನ್
ಬಾಂಗ್ಲಾದೇಶ್
ಬಾಂಗ್ಲಾದೇಶ್
2014
ಶ್ರೀಲಂಕಾ
ಪಾಕಿಸ್ತಾನ್
ಬಾಂಗ್ಲಾದೇಶ್
2016
ಭಾರತ
ಬಾಂಗ್ಲಾದೇಶ್
ಬಾಂಗ್ಲಾದೇಶ್
2018
ಭಾರತ
ಬಾಂಗ್ಲಾದೇಶ್
ಯುಎಇ
2022
ಶ್ರೀಲಂಕಾ
ಪಾಕಿಸ್ತಾನ್
ಯುಎಇ
2023
ಭಾರತ
ಶ್ರೀಲಂಕಾ
ಪಾಕಿಸ್ತಾನ್ – ಶ್ರೀಲಂಕಾ

Published On - 9:05 am, Mon, 19 May 25