AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ  ಡ್ಯಾನಿ ವ್ಯಾಟ್-ಹಾಡ್ಜ್!

Danni Wyatt-Hodge: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಪೋಟಕ ಓಪನರ್ ಡ್ಯಾನಿ ವ್ಯಾಟ್-ಹಾಡ್ಜ್ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ತವರಿನ ಅಂಗಳದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಅವರು, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ‘ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ’ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ  ಡ್ಯಾನಿ ವ್ಯಾಟ್-ಹಾಡ್ಜ್!
Danni Wyatt HodgeImage Credit source: ICC
ಝಾಹಿರ್ ಯೂಸುಫ್
|

Updated on:Jun 29, 2026 | 11:08 AM

Share

ಇಂಗ್ಲೆಂಡ್‌ ತಂಡದ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.  ಈ ಇತಿಹಾಸದೊಂದಿಗೆ ಆಸ್ಟ್ರೇಲಿಯಾ ಆಟಗಾರ್ತಿ ಬೆತ್ ಮೂನಿ ಹೆಸರಿನಲ್ಲಿದ್ದ 6 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಮಹಿಳಾ ಟಿ20 ವಿಶ್ವಕಪ್​ನ 28ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಡ್ಯಾನಿ ವ್ಯಾಟ್-ಹಾಡ್ಜ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 163 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ವ್ಯಾಟ್-ಹಾಡ್ಜ್ ಕೇವಲ 53 ಎಸೆತಗಳಲ್ಲಿ ಅಜೇಯ 89 ರನ್ (15 ಬೌಂಡರಿ, 1 ಸಿಕ್ಸರ್) ಬಾರಿಸಿದರು. ಇನ್ನು ಸೋಫಿಯಾ ಡಂಕ್ಲಿ (ಅಜೇಯ 49) ಅವರೊಂದಿಗೆ ಸೇರಿ 128 ರನ್‌ಗಳ ಮುರಿಯದ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್‌ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಈ ಅದ್ಭುತ ಗೆಲುವಿನೊಂದಿಗೆ ಇಂಗ್ಲೆಂಡ್ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರೆ, ನ್ಯೂಝಿಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.

ಡ್ಯಾನಿ ವ್ಯಾಟ್-ಹಾಡ್ಜ್ ವಿಶ್ವ ದಾಖಲೆ:

ಈ ಪಂದ್ಯದಲ್ಲಿ ಬಾರಿಸಿದ 89 ರನ್​ಗಳೊಂದಿಗೆ ಮಹಿಳಾ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಡ್ಯಾನಿ ವ್ಯಾಟ್-ಹಾಡ್ಜ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಬೆತ್ ಮೂನಿ ಹೆಸರಿನಲ್ಲಿತ್ತು.

  • 2020ರ ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಬೆತ್ ಮೂನಿ ಒಟ್ಟು 259 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
  • ಪ್ರಸ್ತುತ ಟಿ20 ವಿಶ್ವಕಪ್​ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ವ್ಯಾಟ್-ಹಾಡ್ಜ್, ಈಗಾಗಲೇ 282 ರನ್ ಕಲೆಹಾಕಿದ್ದಾರೆ.

ಈ ಮೂಲಕ ಮಹಿಳಾ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಡ್ಯಾನಿ ವ್ಯಾಟ್-ಹಾಡ್ಜ್ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಬಾರಿಸಿದವರು

ಶ್ರೇಯಾಂಕ ಆಟಗಾರ್ತಿ ದೇಶ ಒಟ್ಟು ರನ್ ವಿಶ್ವಕಪ್ ಆವೃತ್ತಿ
1 ಡ್ಯಾನಿ ವ್ಯಾಟ್-ಹಾಡ್ಜ್ ಇಂಗ್ಲೆಂಡ್ 282* 2026 (ಇಂಗ್ಲೆಂಡ್)
2 ಬೆತ್ ಮೂನಿ ಆಸ್ಟ್ರೇಲಿಯಾ 259 2020 (ಆಸ್ಟ್ರೇಲಿಯಾ)
3 ಮೆಗ್ ಲ್ಯಾನಿಂಗ್ ಆಸ್ಟ್ರೇಲಿಯಾ 257 2014 (ಬಾಂಗ್ಲಾದೇಶ್)
4 ಸ್ಟಾಫನಿ ಟೇಲರ್ ವೆಸ್ಟ್ ಇಂಡೀಸ್ 246 2016 (ಭಾರತ)
5 ಅಲಿಸ್ಸಾ ಹೀಲಿ ಆಸ್ಟ್ರೇಲಿಯಾ 236 2020 (ಆಸ್ಟ್ರೇಲಿಯಾ)

ಇದನ್ನೂ ಓದಿ: ಸೌತ್ ಆಫ್ರಿಕಾ ಎಷ್ಟು ರನ್​​​ಗಳಿಂದ ಗೆದ್ದರೆ ಟೀಮ್ ಇಂಡಿಯಾ ಹೊರಬೀಳಲಿದೆ?

ಡ್ಯಾನಿ ವ್ಯಾಟ್-ಹಾಡ್ಜ್ ಪ್ರಸ್ತುತ ಟೂರ್ನಿಯಲ್ಲಿ 94.00 ಸರಾಸರಿಯಲ್ಲಿ ರನ್ ಕಲೆಹಾಕಿದ್ದು, ಈ ಮೂಲಕ 5 ಪಂದ್ಯಗಳಲ್ಲಿ ಮೂರು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಹಾಡ್ಜ್​ ಅವರ ಈ ಭರ್ಜರಿ ಪ್ರದರ್ಶನದೊಂದಿಗೆ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೆ ಲೆಗ್ಗೆಯಿಟ್ಟಿದೆ.

Published On - 3:27 pm, Sun, 28 June 26

Follow Us
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ಆಸೆ
‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ಆಸೆ
12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು