DC vs GT IPL 2026 Highlights: ರಣ ರೋಚಕ ಪಂದ್ಯದಲ್ಲಿ 1 ರನ್ಗಳಿಂದ ಗೆದ್ದ ಗುಜರಾತ್
Delhi Capitals vs Gujarat Titans, IPL 2026 Highlights: ಐಪಿಎಲ್ 2026 ರ 14 ನೇ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ತವರು ಮೈದಾನವಾದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಲಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.

ಐಪಿಎಲ್ 2026 ರ 14 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಕೇವಲ 1 ರನ್ ನಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 210 ರನ್ ಗಳಿಸಿತು. 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 209 ರನ್ ಗಳಿಸಲಷ್ಟೇ ಶಕ್ತವಾಗಿ 1 ರನ್‌ನಿಂದ ಪಂದ್ಯ ಸೋತಿತು. ಕೊನೆಯ ಎಸೆತದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಮಾಡಿದ ತಪ್ಪು ದುಬಾರಿಯಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಆಕ್ರಮಣಕಾರಿ ಆರಂಭವನ್ನೇ ಪಡೆಯಿತು. ನಾಯಕತ್ವದ ಇನ್ನಿಂಗ್ಸ್ ಆಡಿದ ಗಿಲ್ 70 ರನ್ ಬಾರಿಸಿದರು. ಜೋಸ್ ಬಟ್ಲರ್ ಕೂಡ 27 ಎಸೆತಗಳಲ್ಲಿ 52 ರನ್ ಗಳಿಸಿ ಚುರುಕಾದ ಇನ್ನಿಂಗ್ಸ್ ಆಡಿದರು. 4ನೇ ಕ್ರಮಾಂಕದಲ್ಲಿ ಬಂದ ವಾಷಿಂಗ್ಟನ್ ಸುಂದರ್ ಕೂಡ 30 ಎಸೆತಗಳಲ್ಲಿ 55 ರನ್ ಗಳಿಸಿದರು. ಈ ಇನ್ನಿಂಗ್ಸ್ ನಿಂದಾಗಿ ಗುಜರಾತ್ 210 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ದೆಹಲಿ ಪರ ಮುಖೇಶ್ ಕುಮಾರ್ ಎರಡು ವಿಕೆಟ್ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
211 ರನ್‌ಗಳಿಗೆ ಉತ್ತರವಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಕೆಎಲ್ ರಾಹುಲ್ 52 ಎಸೆತಗಳಲ್ಲಿ 92 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು, ಇದರಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಪಾಥುಮ್ ನಿಸ್ಸಂಕಾ ಕೂಡ 24 ಎಸೆತಗಳಲ್ಲಿ 41 ರನ್ ಗಳಿಸಿದರು. ಕೊನೆಯಲ್ಲಿ ಕೆಚ್ಚೆದೆಯ ಹೋರಾಟ ನೀಡಿದ ಡೇವಿಡ್ ಮಿಲ್ಲರ್ ಪಂದ್ಯವನ್ನು ರಣರೋಚಕಗೊಳಿಸಿ 20 ಎಸೆತಗಳಲ್ಲಿ 41 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲ್ಲಿಸುವಲ್ಲಿ ಎಡವಿದರು.
ವಾಸ್ತವವಾಗಿ ಕೊನೆಯ ಎರಡು ಎಸೆತಗಳಲ್ಲಿ ಡೆಲ್ಲಿ ತಂಡಕ್ಕೆ ಎರಡು ರನ್ ಗಳ ಅಗತ್ಯವಿತ್ತು. ಆದರೆ 20 ನೇ ಓವರ್ ನ ಐದನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಒಂದು ರನ್ ಗಳಿಸಲು ನಿರಾಕರಿಸಿದರು, ಇದು ತಂಡಕ್ಕೆ ದುಬಾರಿಯಾಯಿತು. ಲಯದಲ್ಲಿದ್ದ ಮಿಲ್ಲರ್ ಸ್ಟ್ರೈಕ್ ಉಳಿಸಿಕೊಂಡು ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸಲು ಪ್ರಯತ್ನಿಸಿದರು, ಆದರೆ ಪಂದ್ಯದ ಕೊನೆಯ ಎಸೆತವನ್ನು ಡಾಟ್ ಮಾಡಿದರು. ಇದರಿಂದಾಗಿ ಗುಜರಾತ್ ತಂಡಕ್ಕೆ ಅನಿರೀಕ್ಷಿತ ಗೆಲುವು ಧಕ್ಕಿತು.
LIVE NEWS & UPDATES
-
DC vs GT IPL 2026: 1 ರನ್ ಗೆಲುವು
20ನೇ ಓವರ್ ಎಸೆದ ಪ್ರಸಿದ್ಧ್ ಕೃಷ್ಣ ಮೊದಲ ಎಸೆತದಲ್ಲಿ ಬೌಂಡರಿ ನೀಡಿದರು. ಮುಂದಿನ ಎಸೆತದಲ್ಲಿ ವಿಕೆಟ್ ಪಡೆದರು. ವಿಪ್ರಜ್ ನಿಗಮ್ ಔಟಾದರು. ನಂತರ ಬಂದ ಕುಲ್ದೀಪ್ ಯಾದವ್ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಸ್ಟ್ರೈಕ್‌ಗೆ ಬಂದ ಮಿಲ್ಲರ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಹೀಗಾಗಿ ದೆಹಲಿ ಗೆಲುವಿಗೆ ಎರಡು ರನ್‌ಗಳ ಅಗತ್ಯವಿತ್ತು. ಐದನೇ ಎಸೆತದಲ್ಲಿ ಮಿಲ್ಲರ್ ಸಿಂಗಲ್ ತೆಗೆದುಕೊಳ್ಳಲಿಲ್ಲ. ಆರನೇ ಎಸೆತದಲ್ಲಿ ಕುಲ್ದೀಪ್ ಯಾದವ್ ರನೌಟ್ ಆದರು. ಗುಜರಾತ್ ಒಂದು ರನ್‌ನಿಂದ ಪಂದ್ಯವನ್ನು ಗೆದ್ದಿತು.
-
DC vs GT IPL 2026: 36 ರನ್ ಅಗತ್ಯ
ಕೊನೆಯ ಎರಡು ಓವರ್‌ಗಳಲ್ಲಿ ಡೆಲ್ಲಿ ತಂಡಕ್ಕೆ 36 ರನ್‌ಗಳು ಬೇಕಾಗಿವೆ. ರಬಾಡ 18 ನೇ ಓವರ್‌ನಲ್ಲಿ ಕೇವಲ 9 ರನ್‌ಗಳನ್ನು ಬಿಟ್ಟುಕೊಟ್ಟರು. ಆದಾಗ್ಯೂ, ಮಿಲ್ಲರ್ ಮತ್ತು ವಿಪ್ರರಾಜ್ ಕ್ರೀಸ್‌ನಲ್ಲಿದ್ದಾರೆ. ಇಬ್ಬರೂ ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. 19 ನೇ ಓವರ್‌ನಲ್ಲಿ ಪಂದ್ಯವು ತಿರುವು ಪಡೆಯಬಹುದು
-
-
DC vs GT IPL 2026: ರಾಹುಲ್ ಕೂಡ ಔಟ್
ಸಿರಾಜ್ ಓವರ್ ನಲ್ಲಿ ರಾಹುಲ್ ಕೂಡ ಔಟಾದರು. ಕೊನೆಯ ಎಸೆತದಲ್ಲಿ ಬಟ್ಲರ್ ಗೆ ಕ್ಯಾಚ್ ನೀಡಿ ಔಟ್ ಆದರು. 52 ಎಸೆತಗಳಲ್ಲಿ 92 ರನ್ ಗಳಿಸಿ ರಾಹುಲ್ ಔಟಾದರು. ದೆಹಲಿ ಸಂಕಷ್ಟದಲ್ಲಿದೆ.
-
DC vs GT IPL 2026: ಸ್ಟಬ್ಸ್ ರನ್ ಔಟ್
17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಟ್ರಿಸ್ಟಾನ್ ಸ್ಟಬ್ಸ್ ರನೌಟ್ ಆದರು. ಕೆಎಲ್ ರಾಹುಲ್ ಇದ್ದಕ್ಕಿದ್ದಂತೆ ರನ್ ತೆಗೆದುಕೊಳ್ಳಲು ನಿರಾಕರಿಸಿದರು, ಮತ್ತು ಸಾಯಿ ಸುದರ್ಶನ್ ಅದ್ಭುತ ಎಸೆತದಿಂದ ರನ್ ಔಟ್ ಮಾಡಿದರು.
-
DC vs GT IPL 2026: ರಾಣಾ ಔಟ್
ರಶೀದ್ ಖಾನ್ ಎಸೆತದಲ್ಲಿ ನಿತೀಶ್ ರಾಣಾ ಔಟ್ ಆಗುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿತು. ಸಾಯಿ ಸುದರ್ಶನ್ ಅದ್ಭುತ ಕ್ಯಾಚ್ ಹಿಡಿದರು.
-
-
DC vs GT IPL 2026: ರಾಹುಲ್ ಅರ್ಧಶತಕ
9ನೇ ಓವರ್‌ನ ಮೊದಲ ಎಸೆತದಲ್ಲಿ ಕೃಷ್ಣ ವಿಕೆಟ್ ಪಡೆದರು, ಆದರೆ ನಂತರ ಕೆಎಲ್ ರಾಹುಲ್ ಆ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು. ರಾಹುಲ್ 29 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು.
-
DC vs GT IPL 2026: ಪವರ್ ಪ್ಲೇ ಅಂತ್ಯ
ಐಪಿಎಲ್ 2026 ರಲ್ಲಿ ಅತ್ಯಂತ ವೇಗದ ಬೌಲರ್ ಆಗಿದ್ದ ಅಶೋಕ್ ಶರ್ಮಾ ತಮ್ಮ ಮೊದಲ ಓವರ್ ನಲ್ಲೇ 23 ರನ್ ಬಿಟ್ಟುಕೊಟ್ಟರು. ಪಾಥುಮ್ ನಿಸ್ಸಂಕಾ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರೆ, ರಾಹುಲ್ ಒಂದು ಬೌಂಡರಿ ಬಾರಿಸಿದರು. ಪವರ್ ಪ್ಲೇನಲ್ಲಿ ದೆಹಲಿ 63 ರನ್ ಗಳಿಸಿತು.
-
DC vs GT IPL 2026: ಎರಡು ಓವರ್ ಪೂರ್ಣ
ಕಗಿಸೊ ರಬಾಡ ಅವರ ಓವರ್‌ನಲ್ಲಿ ಕೆಎಲ್ ರಾಹುಲ್ ಬೌಂಡರಿ ಹೊಡೆದರು, ಆದರೆ ಕೇವಲ ಆರು ರನ್‌ಗಳು ಮಾತ್ರ ಗಳಿಸಿದರು. ಎರಡು ಓವರ್‌ಗಳ ನಂತರ ದೆಹಲಿಯ ಸ್ಕೋರ್ 20 ಆಗಿತ್ತು.
-
DC vs GT IPL 2026: 211 ರನ್ ಗುರಿ
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 210 ರನ್ ಗಳಿಸಿತು. ಗುಜರಾತ್ ಪರ ಮೂವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಗಳಿಸಿದರು. ನಾಯಕ ಶುಭಮನ್ ಗಿಲ್ 70 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಬಟ್ಲರ್ 27 ಎಸೆತಗಳಲ್ಲಿ 52 ರನ್ ಗಳಿಸಿದರು. ಸುಂದರ್ 32 ಎಸೆತಗಳಲ್ಲಿ 55 ರನ್ ಗಳಿಸಿದರು. ದೆಹಲಿ ಪರ ಮುಖೇಶ್ ಕುಮಾರ್ ಎರಡು ವಿಕೆಟ್ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
-
DC vs GT IPL 2026: ಸುಂದರ್ ಅರ್ಧಶತಕ
ವಾಷಿಂಗ್ಟನ್ ಸುಂದರ್ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ಅರ್ಧಶತಕವಾಗಿತ್ತು. ಆಶ್ಚರ್ಯಕರವೆಂದರೆ, ಈ ಆಟಗಾರ ಕಳೆದ 10 ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದು ಇದೇ ಮೊದಲ ಬಾರಿಗೆ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.
-
DC vs GT IPL 2026: ಗಿಲ್ ಔಟ್
18ನೇ ಓವರ್‌ನಲ್ಲಿ ದೆಹಲಿ ತಂಡಕ್ಕೆ ದೊಡ್ಡ ಬ್ರೇಕ್‌ಥ್ರೂ ಸಿಕ್ಕಿತು. ಶುಭಮನ್ ಗಿಲ್ ಅವರನ್ನು ಎನ್‌ಗಿಡಿ ಔಟ್ ಮಾಡಿದರು. ಅವರು 70 ರನ್ ಗಳಿಸಿದರು. ಲುಂಗಿ ಎನ್‌ಗಿಡಿ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 24 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಅತ್ಯುತ್ತಮ ಬೌಲಿಂಗ್.
-
DC vs GT IPL 2026: ಗಿಲ್ ಅರ್ಧಶತಕ
ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಸೀಸನ್ನಲ್ಲಿ ಇದು ಅವರ ಮೊದಲ ಅರ್ಧಶತಕ.
-
DC vs GT IPL 2026: ಸುಂದರ್ ಸೂಪರ್ ಬ್ಯಾಟಿಂಗ್
12ನೇ ಓವರ್‌ನಲ್ಲಿ ಸುಂದರ್ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರನೇ ಎಸೆತದಲ್ಲಿ ಒಂದು ಸಿಕ್ಸರ್ ಬಾರಿಸಿದರು. ಶುಭ್ಮನ್ ಗಿಲ್ ಕೂಡ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ 23 ರನ್‌ಗಳು ಬಂದವು.
-
DC vs GT IPL 2026: 100 ರನ್ ಪೂರ್ಣ
ಕುಲದೀಪ್ ಯಾದವ್ ಅವರ 10 ನೇ ಓವರ್ ದುಬಾರಿಯಾಯಿತು. ಶುಭಮನ್ ಗಿಲ್ ಮೊದಲ ಎಸೆತದಲ್ಲೇ ಅದ್ಭುತ ಸಿಕ್ಸರ್ ಬಾರಿಸಿದರು. ಗುಜರಾತ್ 9.5 ಓವರ್‌ಗಳಲ್ಲಿ 100 ರನ್ ಗಳಿಸಿತು.
-
DC vs GT IPL 2026:
ಜೋಸ್ ಬಟ್ಲರ್ 27 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. ಹಾಗೆಯೇ ಗಿಲ್ ಅವರೊಂದಿಗೆ 27 ಎಸೆತಗಳಲ್ಲಿ 52 ರನ್ ಸೇರಿಸಿದರು.
-
DC vs GT IPL 2026: ಬಟ್ಲರ್ ಬಿರುಗಾಳಿಯ ಬ್ಯಾಟಿಂಗ್
ಮುಖೇಶ್ ಕುಮಾರ್ ಎಸೆದ ಐದನೇ ಓವರ್‌ನಲ್ಲಿ ಜೋಸ್ ಬಟ್ಲರ್ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ 23 ರನ್ ಗಳಿಸಿದರು. ಅದ್ಭುತ ಬ್ಯಾಟಿಂಗ್. ಈ ಆಟಗಾರ ಅರ್ಧಶತಕದ ಸಮೀಪದಲ್ಲಿದ್ದಾರೆ.
-
DC vs GT IPL 2026: ಮೊದಲ ವಿಕೆಟ್
ಮುಖೇಶ್ ಕುಮಾರ್, ಸಾಯಿ ಸುದರ್ಶನ್ ಅವರನ್ನು ತಮ್ಮ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಬೌಲ್ಡ್ ಮಾಡಿದರು. ಅವರು 7 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು.
-
DC vs GT IPL 2026: ದೆಹಲಿ ತಂಡ
ಕೆಎಲ್ ರಾಹುಲ್, ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ವಿಪ್ರಾಜ್ ನಿಗಮ್, ಅಕ್ಸರ್ ಪಟೇಲ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಕುಲ್ದೀಪ್ ಯಾದವ್, ಲುಂಗಿ ಎನ್‌ಗಿಡಿ, ಟಿ ನಟರಾಜನ್, ಮುಖೇಶ್ ಕುಮಾರ್.
-
DC vs GT IPL 2026: ಗುಜರಾತ್ ತಂಡ
ಸಾಯಿ ಸುದರ್ಶನ್, ಶುಭ್ಮನ್ ಗಿಲ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಮತ್ತು ಅಶೋಕ್ ಶರ್ಮಾ.
-
DC vs GT IPL 2026: ಟಾಸ್ ಗೆದ್ದ ಡೆಲ್ಲಿ
ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಲಿದೆ.
-
DC vs GT IPL 2026: ಸೀಸನ್ನ 14 ನೇ ಪಂದ್ಯ
ಐಪಿಎಲ್ 2026 ರ 14 ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ನಡೆಯಲಿದೆ.
Published On - Apr 08,2026 6:28 PM




