AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ ಓವರ್​ನಲ್ಲಿ 23 ರನ್​: ಟೀಮ್ ಇಂಡಿಯಾಗೆ ರೋಚಕ ಜಯ

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯದಲ್ಲೂ ಗೆಲ್ಲದೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಮೊದಲು ಪಾಕಿಸ್ತಾನದ ವಿರುದ್ಧ, ಆ ಬಳಿಕ ಯುಎಇ ಹಾಗೂ ಇಂಗ್ಲೆಂಡ್ ವಿರುದ್ಧ ಸೋತಿದ್ದ ಟೀಮ್ ಇಂಡಿಯಾ ಕೊನೆಯ ಮ್ಯಾಚ್​ನಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.

ಕೊನೆಯ ಓವರ್​ನಲ್ಲಿ 23 ರನ್​: ಟೀಮ್ ಇಂಡಿಯಾಗೆ ರೋಚಕ ಜಯ
Shashank SinghImage Credit source: HKS
ಝಾಹಿರ್ ಯೂಸುಫ್
|

Updated on: Nov 01, 2026 | 8:17 AM

Share

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಬೌಲ್ ಪ್ಲೇಆಫ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.  ಮೌಂಗ್ ಕಾಕ್‌ನ ಮಿಷನ್ ರೋಡ್ ಗ್ರೌಂಡ್​ನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಕೃನಾಲ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಪರ ನಾಯಕ ಅಬು ಹೈದರ್ ರೋನಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಬು ಹೈದರ್ ಕೇವಲ 18 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 62 ರನ್ ಬಾರಿಸಿದರು.

ಈ ಭರ್ಜರಿ ಅರ್ಧಶತಕದ ನೆರವಿನೊಂದಿಗೆ ಬಾಂಗ್ಲಾದೇಶ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 116 ರನ್ ಕಲೆಹಾಕಿತು.

117 ರನ್​ಗಳ ಗುರಿ:

6 ಓವರ್​ಗಳಲ್ಲಿ 117 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾಗೆ ಶಶಾಂಕ್ ಸಿಂಗ್ ಹಾಗೂ ರಾಹುಲ್ ತ್ರಿಪಾಠಿ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಅಬ್ಬರಿಸಿದ ಈ ಜೋಡಿಯು 2.5 ಓವರ್​ಗಳಲ್ಲಿ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು.

ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ರಾಹುಲ್ ತ್ರಿಪಾಠಿ (32) ಕ್ಲೀನ್ ಬೌಲ್ಡ್ ಆದರು.  ಇದಾಗ್ಯೂ ಪ್ರಚಂಡ ಬ್ಯಾಟಿಂಗ್ ಮುಂದುವರೆಸಿದ ಶಶಾಂಕ್ ಸಿಂಗ್ 15 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 1 ಫೋರ್​ನೊಂದಿಗೆ 50 ರನ್​ ಬಾರಿಸಿದರು.

ಪರಿಣಾಮ ಟೀಮ್ ಇಂಡಿಯಾಗೆ ಗೆಲ್ಲಲು ಕೊನೆಯ ಓವರ್​ನಲ್ಲಿ 23 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ  ರಾಹುಲ್ ತೆವಾಟಿಯಾ 6,4,4 ಬಾರಿಸಿದರು. ಅಲ್ಲದೆ ನಾಲ್ಕನೇ ಎಸೆತದಲ್ಲಿ 1 ರನ್ ಓಡಿದರು. ಅದರಂತೆ ಕೊನೆಯ ಎರಡು ಎಸೆತಗಳಲ್ಲಿ 8 ರನ್​ಗಳ ಗುರಿ ಪಡೆಯಿತು. ಈ ವೇಳೆ ನಿತೀಶ್ ರಾಣಾ ಭರ್ಜರಿ ಸಿಕ್ಸರ್ ಸಿಡಿಸಿದರು. ಅಲ್ಲದೆ ಅಂತಿಮ ಎಸೆತದಲ್ಲಿ 2 ರನ್ ಓಡುವ ಮೂಲಕ ಟೀಮ್ ಇಂಡಿಯಾ 6 ಓವರ್​ಗಳಲ್ಲಿ 117 ರನ್​ ಬಾರಿಸಿ ರೋಚಕ ಜಯ ಸಾಧಿಸಿತು.

ಈ ರೋಚಕ ಗೆಲುವಿನೊಂದಿಗೆ ಭಾರತ ತಂಡವು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ 11ನೇ ಸ್ಥಾನವನ್ನು ಪಡೆದುಕೊಂಡು ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ.

ಭಾರತ ತಂಡ: ನಿತೀಶ್ ರಾಣಾ , ರಾಹುಲ್ ತ್ರಿಪಾಠಿ , ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ , ಕೃನಾಲ್ ಪಾಂಡ್ಯ (ನಾಯಕ) , ಕುಲ್ವಂತ್ ಖೇಜ್ರೋಲಿಯಾ, ಟಿ. ನಟರಾಜನ್.

ಇದನ್ನೂ ಓದಿ: ಹಾಂಗ್ ಕಾಂಗ್ ಸಿಕ್ಸಸ್: 6 ತಂಡಗಳು ಫೈನಲ್​ಗೆ ಎಂಟ್ರಿ

ಬಾಂಗ್ಲಾದೇಶ್ ತಂಡ: ಹಬೀಬುರ್ ರೆಹಮಾನ್ ಸೋಹನ್ , ಸಬ್ಬೀರ್ ರೆಹಮಾನ್,  ಅಬು ಹೈದರ್ ರೋನಿ (ನಾಯಕ) , ಮೃತ್ಯುಂಜಯ್ ಚೌಧರಿ , ಅಹ್ರಾರ್ ಅಮೀನ್ , ಚೌಧರಿ ಎಂಡಿ ರಿಜ್ವಾನ್, ಸಮಿಯುನ್ ಬಸಿರ್ ರತುಲ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ
ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು