AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs New Zealand 1st ODI: ಬ್ರೇಸ್​ವೆಲ್ ವಿರೋಚಿತ ಹೋರಾಟ : ಕೊನೆಗೂ ಗೆದ್ದು ಬೀಗಿದ ಟೀಮ್ ಇಂಡಿಯಾ

India vs New Zealand 1st ODI: 350 ರನ್​ಗಳ ಬಿಗ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಸಿರಾಜ್ ಅವರ ಕರಾರುವಾಕ್ ದಾಳಿಗೆ ಡೆವೊನ್ ಕಾನ್ವೆ (10) ಬೇಗನೆ ನಿರ್ಗಮಿಸಿದರು.

India vs New Zealand 1st ODI: ಬ್ರೇಸ್​ವೆಲ್ ವಿರೋಚಿತ ಹೋರಾಟ : ಕೊನೆಗೂ ಗೆದ್ದು ಬೀಗಿದ ಟೀಮ್ ಇಂಡಿಯಾ
IND vs NZ 1st ODI
TV9 Web
| Edited By: |

Updated on:Jan 18, 2023 | 9:57 PM

Share

India vs New Zealand 1st ODI: ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 60 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ಟಿಕ್ನರ್ ಯಶಸ್ವಿಯಾದರು. 13ನೇ ಓವರ್​ನಲ್ಲಿ ರೋಹಿತ್ ಶರ್ಮಾ (34) ವಿಕೆಟ್​ ಪಡೆದ ಟಿಕ್ನರ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (8) ಸ್ಯಾಂಟ್ನರ್ ಎಸೆತದಲ್ಲಿ ಬೌಲ್ಡ್ ಆದರು. ಆ ಬಳಿಕ ಬಂದ ಇಶಾನ್ ಕಿಶನ್ 5 ರನ್​ಗಳಿಸಿ ನಿರ್ಗಮಿಸಿದರು.

ಇದಾಗ್ಯೂ ಮತ್ತೊಂದೆಡೆ ಶುಭ್​ಮನ್ ಗಿಲ್ ಇನಿಂಗ್ಸ್​ ಕಟ್ಟುವ ಕಾಯಕ ಮುಂದುವರೆಸಿದ್ದರು. ಸೂರ್ಯಕುಮಾರ್ ಜೊತೆಗೂಡಿ ತಂಡದ ಮೊತ್ತವನ್ನು 150 ರ ಗಡಿದಾಟಿಸಿದ ಗಿಲ್ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಈ ವೇಳೆ 31 ರನ್​ಗಳಿಸಿದ್ದ ಸೂರ್ಯ ಡೆರಿಲ್ ಮಿಚೆಲ್ ಎಸೆತದಲ್ಲಿ ಔಟಾದರು. ನಂತರದ ಬಂದ ಹಾರ್ದಿಕ್ ಪಾಂಡ್ಯ 28 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಶುಭ್​ಮನ್ ಗಿಲ್ 87 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಸಿಡಿಸಿದ ಬೆನ್ನಲ್ಲೇ ರನ್​ಗಳಿಕೆಯ ವೇಗ ಹೆಚ್ಚಿಸಿಕೊಂಡ ಶುಭ್​ಮನ್ ಗಿಲ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ 145 ಎಸೆತಗಳಲ್ಲಿ ಗಿಲ್ ಡಬಲ್ ಸೆಂಚುರಿ ಸಿಡಿಸಿ ಬ್ಯಾಟ್ ಮೇಲೆಕ್ಕೆತಿದರು. ಇನ್ನು ದ್ವಿಶತಕ ಬಳಿಕ 149 ಎಸೆತಗಳನ್ನು ಎದುರಿಸಿದ ಶುಭ್​ಮನ್ ಗಿಲ್ 9 ಭರ್ಜರಿ ಸಿಕ್ಸ್ ಹಾಗೂ 19 ಫೋರ್​ನೊಂದಿಗೆ 208 ರನ್​ ಬಾರಿಸಿ ಶಿಪ್ಲಿ ಎಸೆತದಲ್ಲಿ ಕ್ಯಾಚ್ ನೀಡಿದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಮೊತ್ತ 300 ರ ಗಡಿದಾಟಿತ್ತು. ಅಂತಿಮವಾಗಿ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 349 ರನ್​​ ಕಲೆಹಾಕಿತು.

ಇದನ್ನೂ ಓದಿ
Image
IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?
Image
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Image
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Image
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

350 ರನ್​ಗಳ ಬಿಗ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಸಿರಾಜ್ ಅವರ ಕರಾರುವಾಕ್ ದಾಳಿಗೆ ಡೆವೊನ್ ಕಾನ್ವೆ (10) ಬೇಗನೆ ನಿರ್ಗಮಿಸಿದರು. ಇದಾಗ್ಯೂ ಅಲೆನ್ ಅಬ್ಬರಿಸುವ ಮೂಲಕ 40 ರನ್​ ಪೇರಿಸಿದರು. ಆದರೆ ಅಲೆನ್ ವಿಕೆಟ್ ಪಡೆದ ಬಳಿಕ ಟೀಮ್ ಇಂಡಿಯಾ ಬೌಲರ್​ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಈ ಹಂತದಲ್ಲಿ ಕುಲ್ದೀಪ್ ಯಾದವ್ 2 ವಿಕೆಟ್ ಕಬಳಿಸಿದರೆ, ಸಿರಾಜ್ ಹಾಗೂ ಸಮಿ ಒಂದೊಂದು ವಿಕೆಟ್ ಉರುಳಿಸಿದರು. ಪರಿಣಾಮ 131 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಮೈಕೆಲ್ ಬ್ರೇಸ್​ವೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಶತಕದ ಜೊತೆಯಾಟವಾಡಿದರು.

ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೇಸ್​ವೆಲ್ 57 ಎಸೆತಗಳಲ್ಲಿ ಶತಕ ಪೂರೈಸಿದರು. ಮತ್ತೊಂದೆಡೆ ಮಿಚೆಲ್ ಸ್ಯಾಂಟ್ನರ್ 38 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಪರಿಣಾಮ ನ್ಯೂಜಿಲೆಂಡ್ ತಂಡಕ್ಕೆ ಕೊನೆಯ 5 ಓವರ್​ಗಳಲ್ಲಿ ಗೆಲ್ಲಲು 59 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಸ್ಯಾಂಟ್ನರ್ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಹೆನ್ರಿ ಶಿಪ್ಲಿ ಅವರನ್ನೂ ಕೂಡ ಸಿರಾಜ್ ಬೌಲ್ಡ್ ಮಾಡಿದರು. ಅದರಂತೆ ಕೊನೆಯ 4 ಓವರ್​ಗಳಲ್ಲಿ 56 ರನ್​ಗಳು ಬೇಕಿತ್ತು. ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಓವರ್​ನಲ್ಲಿ ಬ್ರೇಸ್​ವೆಲ್ 2 ಭರ್ಜರಿ ಸಿಕ್ಸ್​ ಸಿಡಿಸಿದರು. ಇದರಿಂದ ಪಂದ್ಯವು ಕುತೂಹಲಘಟ್ಟದತ್ತ ಸಾಗಿತು.

ಇನ್ನು ಶಮಿ ಎಸೆದ 47ನೇ ಓವರ್​ನಲ್ಲಿ 17 ರನ್​ ಬಾರಿಸುವ ಮೂಲಕ ಬ್ರೇಸ್​ವೆಲ್ ಗೆಲುವಿನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದರು. ಆದರೆ 49ನೇ ಓವರ್​ನ 3ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಲಾಕಿ ಫರ್ಗುಸನ್ ವಿಕೆಟ್ ಪಡೆದರು. ಪರಿಣಾಮ ಕೊನೆಯ ಓವರ್​ನಲ್ಲಿ ನ್ಯೂಜಿಲೆಂಡ್​ಗೆ 20 ರನ್​ಗಳು ಬೇಕಿದ್ದರೆ, ಟೀಮ್ ಇಂಡಿಯಾಗೆ 1 ವಿಕೆಟ್​ನ ಅವಶ್ಯಕತೆಯಿತ್ತು.

ಕ್ರೀಸ್​ನಲ್ಲಿದ್ದ ಬ್ರೇಸ್​ವೆಲ್ ಶಾರ್ದೂಲ್ ಎಸೆದ ಮೊದಲ ಎಸೆತದಲ್ಲೇ ಸಿಕ್ಸ್​ ಸಿಡಿಸಿದರು. 2ನೇ ಎಸೆತ ವೈಡ್. ಮೂರನೇ ಎಸೆತದಲ್ಲಿ ಬ್ರೇಸ್​ವೆಲ್ ಎಲ್​ಬಿಡಬ್ಲ್ಯೂ ಆದರು. ಇದರೊಂದಿಗೆ 78 ಎಸೆತಗಳಲ್ಲಿ 10 ಸಿಕ್ಸ್​ ಹಾಗೂ 12 ಫೋರ್​ಗಳೊಂದಿಗಿನ  140 ರನ್​ಗಳ ಬ್ರೇಸ್​ವೆಲ್ ಅವರ ವಿರೋಚಿತ ಹೋರಾಟ ಅಂತ್ಯವಾಯಿತು. ಇತ್ತ ಟೀಮ್ ಇಂಡಿಯಾ 12 ರನ್​ಗಳ ರೋಚಕ ಜಯ ಸಾಧಿಸಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 10 ಓವರ್​ಗಳಲ್ಲಿ ಕೇವಲ 46 ರನ್ ನೀಡಿ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

ಭಾರತ- 349/8 (50)

ನ್ಯೂಜಿಲೆಂಡ್-  337 (49.2)

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.

Published On - 9:52 pm, Wed, 18 January 23

Follow Us