ಕೊಹ್ಲಿಯ ಒಂದು ವರ್ಷದ ಸಂಬಳ 18 ಪಾಕ್​ ಕ್ರಿಕೆಟಿಗರ ವಾರ್ಷಿಕ ವೇತನಕ್ಕೆ ಸಮ! ಸಿರಾಜ್​ ಸ್ಯಾಲರಿಗೂ ಸಮವಿಲ್ಲ ಬಾಬರ್​ ಪಡೆಯುವ ಸಂಬಳ​!

ವಿರಾಟ್ ಕೊಹ್ಲಿಯ ವಾರ್ಷಿಕ ವೇತನ 7 ಕೋಟಿ ರೂಪಾಯಿಯಾಗಿದ್ದರೆ, ಬಾಬರ್ ಅಜಮ್‌ಗೆ ವಾರ್ಷಿಕ ವೇತನವಾಗಿ ಕೇವಲ 64 ಲಕ್ಷ ರೂಪಾಯಿಗಳು ಸಿಗುತ್ತದೆ.

ಕೊಹ್ಲಿಯ ಒಂದು ವರ್ಷದ ಸಂಬಳ 18 ಪಾಕ್​ ಕ್ರಿಕೆಟಿಗರ ವಾರ್ಷಿಕ ವೇತನಕ್ಕೆ ಸಮ! ಸಿರಾಜ್​ ಸ್ಯಾಲರಿಗೂ ಸಮವಿಲ್ಲ ಬಾಬರ್​ ಪಡೆಯುವ ಸಂಬಳ​!
ಬಾಬರ್ ಅಜಮ್, ವಿರಾಟ್ ಕೊಹ್ಲಿ
Follow us
|

Updated on: Apr 17, 2021 | 4:58 PM

ಭಾರತೀಯ ಕ್ರಿಕೆಟಿಗರ ಗಳಿಕೆಯ ಬಗ್ಗೆ ಹೊಸ ಅಂಕಿ ಅಂಶಗಳನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಈ ಸಂಬಳವಲ್ಲದೆ ಟೀಂ ಇಂಡಿಯಾ ಆಟಗಾರರು ಜಾಹೀರಾತುಗಳ ಮೂಲಕ ಕೋಟ್ಯಾಂತರ ರೂಗಳನ್ನು ಸಂಪಾದಿಸುತ್ತಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದ ಆಟಗಾರರ ವಾರ್ಷಿಕ ಆಟಗಾರರ ವೇತನ ಪಟ್ಟಿಯನ್ನು ಪ್ರಕಟಿಸಿದೆ. ಅಂದರೆ, ಒಬ್ಬ ಆಟಗಾರನಿಗೆ ವಾರ್ಷಿಕವಾಗಿ ಎಷ್ಟು ಹಣ ಸಿಗುತ್ತದೆ ಮತ್ತು ಯಾವ ಆಟಗಾರರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಬಿಸಿಸಿಐ ಈ ಪಟ್ಟಿಯಲ್ಲಿ ಬಹಿರಂಗಪಡಿಸಿದೆ. ಬಿಸಿಸಿಐನ ಇತ್ತೀಚಿನ ಪ್ರಕಟಣೆಯ ಪ್ರಕಾರ, ಭಾರತೀಯ ಕ್ರಿಕೆಟಿಗರನ್ನು ನಾಲ್ಕು ವಿಭಾಗಗಳಲ್ಲಿ ಇರಿಸಲಾಗಿದೆ, ಅಂದರೆ ಎ ಪ್ಲಸ್, ಎ, ಬಿ ಮತ್ತು ಸಿ.

ಮೂವರಿಗೂ ವಾರ್ಷಿಕವಾಗಿ 7 ಕೋಟಿ ರೂಪಾಯಿ ಪ್ಲಸ್ ವಿಭಾಗದಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಸೇರಿದ್ದಾರೆ. ಮೂವರಿಗೂ ವಾರ್ಷಿಕವಾಗಿ 7 ಕೋಟಿ ರೂಪಾಯಿಗಳನ್ನು ನೀಡಲಾಗುವುದು. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಎ ವಿಭಾಗದಲ್ಲಿ ಸೇರಿದ್ದಾರೆ.

ಇವರೆಲ್ಲರಿಗೂ ವಾರ್ಷಿಕವಾಗಿ 5 ಕೋಟಿ ರೂ. ಹಾಗೂ ಬಿ ವಿಭಾಗದಲ್ಲಿ ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಶಾರ್ದುಲ್ ಠಾಕೂರ್ ಮತ್ತು ಮಾಯಾಂಕ್ ಅಗರ್ವಾಲ್ ಇದ್ದಾರೆ, ಅವರಿಗೆ 3 ಕೋಟಿ ರೂ ನೀಡಲಾಗುತ್ತದೆ. ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಹರ್, ಶುಬ್ಮನ್ ಗಿಲ್, ಹನುಮಾ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಾರ್ಷಿಕವಾಗಿ 1 ಕೋಟಿ ರೂ ವೇತನ ನೀಡಲಾಗುತ್ತಿದೆ.

18 ಪಾಕಿಸ್ತಾನಿ ಕ್ರಿಕೆಟಿಗರ ಒಟ್ಟು ವೇತನ ಎಷ್ಟು ಗೊತ್ತಾ? ಮೇಲಿನದ್ದು ಭಾರತೀಯ ಕ್ರಿಕೆಟಿಗರ ಸಂಬಳದ ವಿಚಾರವಾಗಿದೆ. ಆದರೆ ನಿಜವಾದ ವಿಷಯವೆಂದರೆ ಟೀಂ ಇಂಡಿಯಾದ ಪ್ರತಿಸ್ಪರ್ಧಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರ ವೇತನವನ್ನು ಟೀಮ್ ಇಂಡಿಯಾದ ಆಟಗಾರರಿಗೆ ಹೋಲಿಸಿದರೆ ಎಷ್ಟು ಸಿಗುತ್ತದೆ ಎಂಬುದು. ನೀವು ಇದನ್ನು ಹೋಲಿಸಿದರೆ, ಇಡೀ ಪಾಕಿಸ್ತಾನ ತಂಡಕ್ಕೆ ಸಿಗುವ ಸಂಬಳ, ವಿರಾಟ್ ಕೊಹ್ಲಿ ಒಬ್ಬರ ವೇತನಕ್ಕೆ ಸಮ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಕೇಂದ್ರ ಒಪ್ಪಂದದಲ್ಲಿ ಭಾಗಿಯಾಗಿರುವ ಪಾಕ್ ತಂಡದ 18 ಆಟಗಾರರಿಗೆ ನೀಡಲಾಗುವ ಒಟ್ಟು ವೇತನ 77829768 ರೂ. ಅಂದರೆ 7 ಕೋಟಿ 78 ಲಕ್ಷ ರೂ., ವಿರಾಟ್ ಕೊಹ್ಲಿಯ ವಾರ್ಷಿಕ ವೇತನ ಕೇವಲ 7 ಕೋಟಿ ರೂ.

ಪಿಸಿಬಿಯ ಎ ಗ್ರೇಡ್‌ನಲ್ಲಿರುವ ಬಾಬರ್ ಅಜಮ್ ಸಿ ಗ್ರೇಡ್‌ನ ಮೊಹಮ್ಮದ್ ಸಿರಾಜ್‌ಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗರ ಸಂಬಳಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರನ್ನು ಎ, ಬಿ ಮತ್ತು ಸಿ ವಿಭಾಗಗಳನ್ನು ಒಳಗೊಂಡಂತೆ ಮೂರು ವಿಭಾಗಗಳಲ್ಲಿ ಇರಿಸಿದೆ. ಒಂದು ವರ್ಗದಲ್ಲಿ ಬಾಬರ್ ಅಜಮ್, ಅಜರ್ ಅಲಿ ಮತ್ತು ಶಾಹೀನ್ ಅಫ್ರಿದಿ ಇದ್ದಾರೆ, ಅವರಿಗೆ ವಾರ್ಷಿಕವಾಗಿ 64,12,932 ರೂ. ಅಂದರೆ, ವಿರಾಟ್ ಕೊಹ್ಲಿಯ ವಾರ್ಷಿಕ ವೇತನ 7 ಕೋಟಿ ರೂಪಾಯಿಯಾಗಿದ್ದರೆ, ಬಾಬರ್ ಅಜಮ್‌ಗೆ ವಾರ್ಷಿಕ ವೇತನವಾಗಿ ಕೇವಲ 64 ಲಕ್ಷ ರೂಪಾಯಿಗಳು ಸಿಗುತ್ತದೆ. ಅಂದರೆ, ವಾರ್ಷಿಕ ಗಳಿಕೆಯ ವಿಷಯದಲ್ಲಿ ಬಾಬರ್ ಅಜಮ್ ಕೂಡ ಮೊಹಮ್ಮದ್ ಸಿರಾಜ್ ಅವರ ಹಿಂದೆ ಇದ್ದಾರೆ.

ಬಿ ವಿಭಾಗದಲ್ಲಿ ಅಬಿದ್ ಅಲಿ, ಅಸಾದ್ ಶಫೀಕ್, ಹರಿಸ್ ಸೊಹೈಲ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ರಿಜ್ವಾನ್, ಸರ್ಫರಾಜ್ ಅಹ್ಮದ್, ಶಾದಾಬ್ ಖಾನ್, ಶಾನ್ ಮಸೂದ್ ಮತ್ತು ಯಾಸಿರ್ ಷಾ ಅವರಿಗೆ ವಾರ್ಷಿಕವಾಗಿ 43,72,452 ರೂ. ಸಿ ವಿಭಾಗದಲ್ಲಿ ಫಖರ್ ಜಮಾನ್, ಇಫ್ತಿಖರ್ ಅಹ್ಮದ್, ಇಮದ್ ವಾಸಿಮ್, ಇಮಾಮ್ ಉಲ್ ಹಕ್, ನಸೀಮ್ ಷಾ ಮತ್ತು ಉಸ್ಮಾನ್ ಶಿನ್ವಾರಿ ವಾರ್ಷಿಕ 32,06,484 ರೂ. ವೇತನ ಪಡೆಯುತ್ತಿದ್ದಾರೆ.

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್