DK Gaekwad: ಭಾರತದ ಮಾಜಿ ಕ್ರಿಕೆಟಿಗ ದತ್ತಾ ಗಾಯಕ್ವಾಡ್ ನಿಧನ

DK Gaekwad: ಭಾರತ ತಂಡದ ಮಾಜಿ ಕ್ರಿಕೆಟಿಗ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ ವಿಧಿವಶರಾಗಿದ್ದಾರೆ. 1952 ರಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಅವರು ಒಟ್ಟು 11 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ದೇಶೀಯ ಅಂಗಳದಲ್ಲಿ ಆಲ್​ರೌಂಡರ್ ಆಟದೊಂದಿಗೆ ಗಮನ ಸೆಳೆದಿದ್ದರು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇದೀಗ 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

DK Gaekwad: ಭಾರತದ ಮಾಜಿ ಕ್ರಿಕೆಟಿಗ ದತ್ತಾ ಗಾಯಕ್ವಾಡ್ ನಿಧನ
Dattajirao Gaekwad
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 13, 2024 | 2:15 PM

ಭಾರತ ತಂಡದ ಮಾಜಿ ಆಟಗಾರ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ (DK Gaekwad) ವಿಧಿವಶರಾಗಿದ್ದಾರೆ. 95 ವರ್ಷದ ಡಿಕೆ ಗಾಯಕ್ವಾಡ್ ಅವರು ಶನಿವಾರ ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದು, ಪುತ್ರ ಟೀಮ್ ಇಂಡಿಯಾದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರನ್ನು ಅಗಲಿದ್ದಾರೆ. 1952 ರಲ್ಲಿ ಭಾರತದ ಪರ ಪಾದರ್ಪಣೆ ಮಾಡಿದ್ದ ದತ್ತಾಜಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 11 ಟೆಸ್ಟ್ ಪಂದ್ಯಗಳನ್ನಾಡಿದ್ದರು.

9 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 11 ಪಂದ್ಯಗಳಿಂದ 18.42 ಸರಾಸರಿಯಲ್ಲಿ 350 ರನ್​ ಕಲೆಹಾಕಿದ್ದರು. ಈ ವೇಳೆ ಒಂದು ಅರ್ಧಶತಕ ಬಾರಿಸಿ ಕೂಡ ಮಿಂಚಿದ್ದರು. ಇನ್ನು ದೇಶೀಯ ಕ್ರಿಕೆಟ್​ನಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸಿದ್ದ ಡಿಕೆ ಗಾಯಕ್ವಾಡ್ 110 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ.

ಈ ವೇಳೆ ಒಟ್ಟು 5,788 ರನ್‌ಗಳನ್ನು ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ ಅವರಧಿಯಲ್ಲಿ ದತ್ತಾಜಿ ಬ್ಯಾಟ್​ನಿಂದ 17 ಶತಕಗಳು ಮತ್ತು 23 ಅರ್ಧಶತಕಗಳು ಮೂಡಿಬಂದಿದ್ದವು.

ಹಾಗೆಯೇ ಆಲ್​ರೌಂಡರ್ ಆಟದೊಂದಿಗೆ ದೇಶೀಯ ಅಂಗಳದಲ್ಲಿ ಮಿಂಚಿದ್ದ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ ಅವರ ಲೆಗ್ ಬ್ರೇಕ್​ ಬೌಲಿಂಗ್​ನೊಂದಿಗೆ 25 ವಿಕೆಟ್​ಗಳನ್ನೂ ಕೂಡ ಕಬಳಿಸಿದ್ದರು.

ಇನ್ನು ನಿವೃತ್ತಿಯ ನಂತರ, ಅವರು ಬರೋಡಾ ಕ್ರಿಕೆಟ್ ಅಸೋಸಿಯೇಷನ್‌ ಪರ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುವಲ್ಲಿ ಕಾರ್ಯ ನಿರ್ವಹಿಸಿದ್ದರು. 1953 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ ಭಾರತೀಯ ತಂಡದ ಭಾಗವಾಗಿದ್ದ ಅವರು ಅಂದಿನ ತಂಡದ ಕೊನೆಯ ಕೊಂಡಿಯಾಗಿದ್ದರು. ಇದೀಗ ತಮ್ಮ 95ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

  • ಭಾರತ ಕ್ರಿಕೆಟ್ ಕ್ಷೇತ್ರಕ್ಕೆ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ ಅವರ ಕೊಡುಗೆಯನ್ನು ಗೌರವಿಸಿ 2020 ರಲ್ಲಿ ಅಂಚೆ ಇಲಾಖೆಯು ಅವರ ಕವರ್ ಅನ್ನು ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: James Anderson: ಜಿಮ್ಮಿ ಮಾರಕ ದಾಳಿಗೆ ಶೇನ್ ವಾರ್ನ್ ವಿಶ್ವ ದಾಖಲೆ ಶೇಕಿಂಗ್..!

ತಂದೆ-ಮಗ ಕ್ರಿಕೆಟಿಗರು:

ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ ಅವರ ಪುತ್ರ ಅಂಶುಮಾನ್ ಗಾಯಕ್ವಾಡ್ ಕೂಡ ಟೀಮ್ ಇಂಡಿಯಾದ ಮಾಜಿ ಆಟಗಾರ. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಗಾಯಕ್ವಾಡ್ 1985 ರನ್ ಕಲೆಹಾಕಿದ್ದಾರೆ. ಹಾಗೆಯೇ 15 ಏಕದಿನ ಪಂದ್ಯಗಳಿಂದ 269 ರನ್​ಗಳಿಸಿದ್ದರು. ಇದಾದ ಬಳಿಕ ಅಂಶುಮಾನ್ ಗಾಯಕ್ವಾಡ್ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ