AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಮಳೆಯಿಂದ ಕೆಕೆಆರ್- ಪಂಜಾಬ್ ನಡುವಿನ ಪಂದ್ಯ ರದ್ದು

Rain Washes Out IPL 2026 KKR vs Punjab Kings Match: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ 2026ರ ಕೆಕೆಆರ್ vs ಪಂಜಾಬ್ ಕಿಂಗ್ಸ್ ಪಂದ್ಯ ಮಳೆಯಿಂದ ರದ್ದಾಗಿದೆ. ಇದರಿಂದ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ದೊರೆತಿದೆ. ಆರಂಭಿಕ ಎರಡು ಸೋಲುಗಳ ನಂತರ ಕೆಕೆಆರ್​ಗೆ ಇದು ಮೊದಲ ಅಂಕದ ಲಾಭ ತಂದರೆ, ಪಂಜಾಬ್ ಕಿಂಗ್ಸ್ 6 ಅಂಕಗಳ ಅವಕಾಶ ಕಳೆದುಕೊಂಡಿತು. ಆದರೂ ಪಂಜಾಬ್ 5 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

IPL 2026: ಮಳೆಯಿಂದ ಕೆಕೆಆರ್- ಪಂಜಾಬ್ ನಡುವಿನ ಪಂದ್ಯ ರದ್ದು
Kkr Vs Pbks
ಪೃಥ್ವಿಶಂಕರ
|

Updated on:Apr 06, 2026 | 11:22 PM

Share

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಪಂಜಾಬ್ ಕಿಂಗ್ಸ್ (KKR vs PBKS) ನಡುವಿನ ಐಪಿಎಲ್ 2026 (IPL 2026) ರ 12ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಕ್ಕಿದೆ. ಇದರಿಂದ ಕೆಕೆಆರ್​ಗೆ ಲಾಭವಾದರೆ, ಪಂಜಾಬ್ ತಂಡ ಬೇಸರದಿಂದ ಮೈದಾನ ತೊರೆದಿದೆ. ಏಕೆಂದರೆ ಕೆಕೆಆರ್ ತಂಡ ಆಡಿದ ಮೊದಲ ಎರಡು ಪಂದ್ಯಗಳನ್ನು ಸೋತಿತ್ತು. ಇದರಿಂದ ತಂಡ ಯಾವುದೇ ಅಂಕಗಳನ್ನು ಹೊಂದಿರಲಿಲ್ಲ. ಆದರೆ ಈ ಪಂದ್ಯ ರದ್ದಾದ ಕಾರಣ ಕೆಕೆಆರ್​ಗೆ 1 ಅಂಕ ಸಿಕ್ಕಿದೆ. ಇತ್ತ ಪಂಜಾಬ್ ಮೊದಲ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಹೊಂದಿತ್ತು. ಇದೀಗ ಈ ಪಂದ್ಯವನ್ನು ಗೆದ್ದು 6 ಅಂಕಗಳನ್ನು ಪಡೆಯುವ ಅವಕಾಶ ಹೊಂದಿತ್ತು. ಆದರೆ ಅದಕ್ಕೆ ಮಳೆರಾಯ ಅವಕಾಶ ಮಾಡಿಕೊಡಲಿಲ್ಲ. ಆದಾಗ್ಯೂ ಪಂಜಾಬ್ 5 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಕೆಕೆಆರ್​​ಗೆ ವರವಾದ ಮಳೆ

ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಇಬ್ಬರು ಪ್ರಮುಖ ಬ್ಯಾಟರ್​ಗಳಾದ ಫಿನ್ ಅಲೆನ್ ಹಾಗೂ ಕ್ಯಾಮರೂನ್ ಗ್ರೀನ್ ಬಹುಬೇಗನೇ ವಿಕೆಟ್ ಒಪ್ಪಿಸಿದರು. ಇದರಿಂದ ಈ ಪಂದ್ಯದಲ್ಲೂ ಕೆಕೆಆರ್ ಸೋಲು ಖಚಿತ ಎಂದು ತೋರುತ್ತಿತ್ತು. ಆದರೆ ಕೆಕೆಆರ್ ಇನ್ನಿಂಗ್ಸ್​ನ 4ನೇ ಓವರ್​ ನಡೆಯುತ್ತಿದ್ದಾಗ ಮಳೆ ಸುರಿಯಲಾರಂಬಿಸಿತು. ಇದರಿಂದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಆ ಸಂದರ್ಭದಲ್ಲಿ ಕೆಕೆಆರ್ ಎರಡು ವಿಕೆಟ್‌ಗಳಿಗೆ 25 ರನ್ ಗಳಿಸಿತ್ತು.ಸಮಯ ಕಳೆದಂತೆ ಮಳೆ ತೀವ್ರಗೊಂಡ ಕಾರಣ ಪಂದ್ಯವನ್ನು ಆರಂಭಿಸಲು ಸಾಕಷ್ಟು ಸಮಯ ಕಾಯಲಾಯಿತು.

KKR vs PBKS IPL 2026 Highlights: ಕೆಕೆಆರ್​ಗೆ ವರವಾದ ವರುಣ; ಮಳೆಯಿಂದ ಪಂದ್ಯ ರದ್ದು

ಪಿಚ್​ನಲ್ಲಿ ನೀರು ಸಂಗ್ರಹ

ತಲಾ ಐದು ಓವರ್‌ಗಳ ಪಂದ್ಯವನ್ನು ನಡೆಸಲು ಕಟ್ಆಫ್ ಸಮಯ ರಾತ್ರಿ 11:14 ಆಗಿದ್ದ ಕಾರಣ ಅಂಪೈರ್​ಗಳು ಅಲ್ಲಿಯವರೆಗೆ ಕಾದರು. ಅಷ್ಟರಲ್ಲಿ ಮಳೆ ಕೂಡ ನಿಂತಿತು. ಆದರೆ ಕವರ್‌ಗಳನ್ನು ತೆಗೆದುಹಾಕಿದಾಗ, ಮೈದಾನವು ತುಂಬಾ ತೇವವಾಗಿತ್ತು, ಬೌಂಡರಿಯ ಬಳಿ ನೀರು ಸಂಗ್ರಹವಾಗಿತ್ತು. ನಿಗದಿತ ಸಮಯದೊಳಗೆ ಮೈದಾನವನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅಂಪೈರ್‌ಗಳು ಮೈದಾನವನ್ನು ಪರಿಶೀಲಿಸಿದ ನಂತರ, ಎರಡೂ ನಾಯಕರೊಂದಿಗೆ ಚರ್ಚಿಸಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಹೀಗಾಗಿ ಕೆಕೆಆರ್ ಮತ್ತು ಪಂಜಾಬ್‌ಗೆ ತಲಾ ಒಂದು ಪಾಯಿಂಟ್ ನೀಡಲಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 pm, Mon, 6 April 26

Follow Us
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಹ್ಲಾದ ಜೋಶಿ ಮಹತ್ವದ ಕರೆ
ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಹ್ಲಾದ ಜೋಶಿ ಮಹತ್ವದ ಕರೆ
ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!
ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 
ಕಾದು ಕುಳಿತು ರೈಲು ಬರುತ್ತಿದ್ದಂತೆ ಪ್ರಯಾಣಿಕನನ್ನು ತಳ್ಳಿದ ವ್ಯಕ್ತಿ
ಕಾದು ಕುಳಿತು ರೈಲು ಬರುತ್ತಿದ್ದಂತೆ ಪ್ರಯಾಣಿಕನನ್ನು ತಳ್ಳಿದ ವ್ಯಕ್ತಿ