AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs LSG: 6,6,6,6,6,6,6,6,6..! ಲಕ್ನೋ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಪ್ರಿಯಾಂಶ್

Priyansh Arya 93 runs: ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪ್ರಿಯಾಂಶ ಆರ್ಯರ 93 ರನ್​ಗಳ ಅಮೋಘ ಇನ್ನಿಂಗ್ಸ್ ನೆರವಿನಿಂದ ಪಂಜಾಬ್ ಕಿಂಗ್ಸ್ 254 ರನ್​ಗಳ ದಾಖಲೆಯ ಮೊತ್ತ ಕಲೆಹಾಕಿದೆ. ಕೇವಲ 7 ರನ್‌ಗಳಿಂದ ಶತಕ ವಂಚಿತರಾದರೂ, 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪ್ರಿಯಾಂಶ, ತಂಡಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ್ದಾರೆ. ದೆಹಲಿ ದೇಶೀಯ ಕ್ರಿಕೆಟ್ ಆಟಗಾರರಾಗಿರುವ ಇವರು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

PBKS vs LSG: 6,6,6,6,6,6,6,6,6..! ಲಕ್ನೋ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಪ್ರಿಯಾಂಶ್
Priyansh Arya
ಪೃಥ್ವಿಶಂಕರ
|

Updated on:Apr 19, 2026 | 9:41 PM

Share

ಐಪಿಎಲ್ 2026 (IPL 2026) ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ (PBKS vs LSG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಆರಂಭಿಕ ಪ್ರಿಯಾಂಶ್ ಆರ್ಯ (Priyansh Arya) 93 ರನ್​ಗಳ ಇನ್ನಿಂಗ್ಸ್ ಆಡಿದರು. ಪ್ರಿಯಾಂಶ್ ಅವರ ಈ ಇನ್ನಿಂಗ್ಸ್​ನಲ್ಲಿ ನಾಲ್ಕು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್‌ಗಳು ಸೇರಿದ್ದವು. ಕೇವಲ 37 ಎಸೆತಗಳಲ್ಲಿ ಈ ಸ್ಮರಣೀಯ ಇನ್ನಿಂಗ್ಸ್ ಆಡಿದ ಪ್ರಿಯಾಂಶ್ ಕೇವಲ 7 ರನ್​​ಗಳಿಂದ ಶತಕ ವಂಚಿತರಾದರು.

ಏಳು ರನ್‌ಗಳಿಂದ ಶತಕ ವಂಚಿತ

ಈ ಪಂದ್ಯದಲ್ಲಿ ಶತಕ ವಂಚಿತರಾದರು ಪಂಜಾಬ್ ತಂಡ ದಾಖಲೆಯ ಮೊತ್ತ ಕಲೆಹಾಕುವಲ್ಲಿ ಪ್ರಿಯಾಂಶ್ ಪ್ರಮುಖ ಪಾತ್ರವಹಿಸಿದರು. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪ್ರಿಯಾಂಶ್​​ಗೆ ಇದು ನಾಲ್ಕನೇ ಐಪಿಎಲ್ ಅರ್ಧಶತಕವಾದರೆ, ಎಲ್‌ಎಸ್‌ಜಿ ವಿರುದ್ಧ ಅವರ ಮೊದಲ ಅರ್ಧಶತಕವಾಗಿದೆ. ದುರದೃಷ್ಟವಶಾತ್ ಅವರು ತಮ್ಮ ಎರಡನೇ ಐಪಿಎಲ್ ಶತಕವನ್ನು ಕೇವಲ ಏಳು ರನ್‌ಗಳಿಂದ ತಪ್ಪಿಸಿಕೊಂಡರು. ಆದಾಗ್ಯೂ ಪ್ರಿಯಾಂಶ್ ಎರಡನೇ ವಿಕೆಟ್​ಗೆ ಕೂಪರ್ ಕನೊಲಿ ಅವರ ಜೊತೆಗೂಡಿ ಕೇವಲ 81 ಎಸೆತಗಳಲ್ಲಿ ದಾಖಲೆಯ 181 ರನ್​ಗಳ ಜೊತೆಯಾಟವನ್ನಾಡಿದರು.

PBKS vs LSG IPL 2026 Live Score: ಲಕ್ನೋಗೆ 255 ರನ್ ಗುರಿ ನೀಡಿದ ಪಂಜಾಬ್

ಪ್ರಿಯಾಂಶ್ ಆರ್ಯ ಯಾರು?

ಸೆಪ್ಟೆಂಬರ್ 18, 2001 ರಂದು ಜನಿಸಿದ ಪ್ರಿಯಾಂಶ್ ಆರ್ಯ ಎಡಗೈ ಬ್ಯಾಟಿಂಗ್ ಮತ್ತು ಬಲಗೈ ಆಫ್ ಬ್ರೇಕ್‌ ಬೌಲಿಂಗ್ ಮಾಡುತ್ತಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವ ಪ್ರಿಯಾಂಶ್ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಪರ ಆಡುತ್ತಾರೆ. 2025 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪ್ರಿಯಾಂಶ್ 22 ಪಂದ್ಯಗಳಲ್ಲಿ 28.24 ಸರಾಸರಿ ಮತ್ತು 196 ಸ್ಟ್ರೈಕ್ ರೇಟ್‌ನಲ್ಲಿ 680 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ. ಡಿಪಿಎಲ್‌ನಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ಪರ ಆಡುವಾಗ ಅವರು ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ಸುದ್ದಿ ಮಾಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 pm, Sun, 19 April 26

Follow Us