AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs RR: 19 ವರ್ಷಗಳ ಐಪಿಎಲ್‌ನಲ್ಲಿ ಇದೇ ಮೊದಲು; ಇತಿಹಾಸ ಸೃಷ್ಟಿಸಿದ ಆರ್ಚರ್

Jofra Archer Record: ಐಪಿಎಲ್ 2026ರಲ್ಲಿ ಕೆಕೆಆರ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ, ರಾಜಸ್ಥಾನ್ ವೇಗಿ ಜೋಫ್ರಾ ಆರ್ಚರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಸತತ ಮೂರು ಬಾರಿ ವಿಕೆಟ್ ಪಡೆದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ, ಐಪಿಎಲ್ ಇತಿಹಾಸದಲ್ಲಿ ಐದು ಮೊದಲ ಎಸೆತದ ವಿಕೆಟ್‌ಗಳನ್ನು ಪಡೆದ ಮೊಹಮ್ಮದ್ ಶಮಿ ಅವರ ದಾಖಲೆಯನ್ನು ಆರ್ಚರ್ ಸರಿಗಟ್ಟಿದ್ದಾರೆ.

KKR vs RR: 19 ವರ್ಷಗಳ ಐಪಿಎಲ್‌ನಲ್ಲಿ ಇದೇ ಮೊದಲು; ಇತಿಹಾಸ ಸೃಷ್ಟಿಸಿದ ಆರ್ಚರ್
Jofra Archer
ಪೃಥ್ವಿಶಂಕರ
|

Updated on: Apr 19, 2026 | 8:59 PM

Share

2026 ರ ಐಪಿಎಲ್‌ನಲ್ಲಿ (IPL 2026) ಕೆಕೆಆರ್ (KKR) ತಂಡ ಮೊದಲ ಗೆಲುವು ದಾಖಲಿಸಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ವಿಕೆಟ್​ಗಳಿಂದ ಗೆದ್ದ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 155 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್‌ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು. ಇತ್ತ ಈ ಸೋಲಿನ ಹೊರತಾಗಿಯೂ ರಾಜಸ್ಥಾನ್ ತಂಡದ ವೇಗಿ ಚೋಫ್ರಾ ಆರ್ಚರ್ (Jofra Archer) 19 ವರ್ಷಗಳ ಐಪಿಎಲ್‌ನಲ್ಲಿ ಈವರೆಗೆ ಯಾವ ವೇಗಿಯೂ ಮಾಡದ ದಾಖಲೆಯೊಂದನ್ನು ನಿರ್ಮಿಸಿದರು.

ಮೊದಲ ಎಸೆತದಲ್ಲೇ ವಿಕೆಟ್

155 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್​​ಗೆ ಮೊದಲ ಓವರ್​ನ ಮೊದಲ ಎಸೆತದಲ್ಲೇ ಆಘಾತ ಎದುರಾಯಿತು. ವೇಗಿ ಆರ್ಚರ್, ಕೆಕೆಆರ್ ಆರಂಭಿಕ ಟಿಮ್ ಸೈಫರ್ಟ್​ ಅವರನ್ನ ಮೊದಲ ಎಸೆತದಲ್ಲೇ ಔಟ್ ಮಾಡಿದರು. ವಾಸ್ತವವಾಗಿ ಆರ್ಚರ್ ಈ ರೀತಿಯಾಗಿ ಮೊದಲ ಎಸೆತದಲ್ಲೇ ಔಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಆವೃತ್ತಿಯ ಕಳೆದ ಮೂರು ಪಂದ್ಯಗಳಲ್ಲೂ ಆರ್ಚರ್ ಇನ್ನಿಂಗ್ಸ್​ನ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಮೊದಲ ವೇಗಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಮೊದಲ ಬೌಲರ್ ಆರ್ಚರ್

ಮೇಲೆ ಹೇಳಿದಂತೆ ಆರ್ಚರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಸತತ ಮೂರನೇ ಪಂದ್ಯ ಇದಾಗಿದೆ. ಇದಕ್ಕೂ ಮೊದಲು, ಆರ್ಚರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಫಿಲ್ ಸಾಲ್ಟ್ ಅವರನ್ನು ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಭಿಷೇಕ್ ಶರ್ಮಾ ಅವರನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಆರ್ಚರ್ ಪಾತ್ರರಾದರು.

KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್​ಗೆ ಮೊದಲ ಜಯ

ಇಷ್ಟೇ ಅಲ್ಲ, ಆರ್ಚರ್ ಮೊಹಮ್ಮದ್ ಶಮಿ ಅವರ ದಾಖಲೆಯನ್ನು ಸಹ ಸರಿಗಟ್ಟಿದರು. ಇಲ್ಲಿಯವರೆಗೆ, ಐಪಿಎಲ್‌ನಲ್ಲಿ ಐದು ಬಾರಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಏಕೈಕ ಬೌಲರ್ ಶಮಿ ಆಗಿದ್ದರು. ಸೀಫರ್ಟ್ ಅವರನ್ನು ಔಟ್ ಮಾಡುವ ಮೂಲಕ ಆರ್ಚರ್ ಈ ದಾಖಲೆಯನ್ನು ಸರಿಗಟ್ಟಿದರು. ಈಗ ಅವರು ಕೂಡ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us