AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 7 ರಲ್ಲಿ 5 ಬಾರಿ ವಿಫಲ; ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗದ ಬುಮ್ರಾ..!

Jasprit Bumrah's England Struggle: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ 12 ವಿಕೆಟ್‌ಗಳನ್ನು ಪಡೆದಿದ್ದಾರೆ, ಆದರೆ ಹೊಸ ಚೆಂಡಿನೊಂದಿಗೆ ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. 39 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗಳು ಪಡೆದಿದ್ದಾರೆ. ಲೀಡ್ಸ್ ಮತ್ತು ಲಾರ್ಡ್ಸ್‌ನಲ್ಲಿ ಅವರು 5 ವಿಕೆಟ್‌ಗಳನ್ನು ಪಡೆದರೂ, ಹೊಸ ಚೆಂಡಿನೊಂದಿಗೆ ಅವರ ಪರಿಣಾಮಕಾರಿತ್ವ ಕಡಿಮೆಯಾಗಿದೆ.

IND vs ENG: 7 ರಲ್ಲಿ 5 ಬಾರಿ ವಿಫಲ; ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗದ ಬುಮ್ರಾ..!
Jasprit Bumrah
ಪೃಥ್ವಿಶಂಕರ
|

Updated on:Jul 25, 2025 | 3:02 PM

Share

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ವೇಗದ ದಾಳಿಯನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಇಲ್ಲಿಯವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ 24.08 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 2 ಬಾರಿ ಇನ್ನಿಂಗ್ಸ್​ವೊಂದರಲ್ಲಿ ಐದು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಹೊಸ ಚೆಂಡಿನಲ್ಲಿ ಬುಮ್ರಾ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಅಂಕಿ ಅಂಶಗಳು ಬಹಿರಂಗಪಡಿಸಿವೆ. ಯಾವುದೇ ಬೌಲರ್ ಹೊಸ ಚೆಂಡಿನಿಂದ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವುದು ಮತ್ತು ಅವರ ವಿಕೆಟ್‌ಗಳನ್ನು ಪಡೆಯುವುದು ಬಹಳ ಮುಖ್ಯ. ಆದಾಗ್ಯೂ, ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಇದನ್ನು ಮಾಡಲು ಸಾಧ್ಯವಾಗಿಲ್ಲ. ಈ ಟೆಸ್ಟ್ ಸರಣಿಯಲ್ಲಿ ಇದುವರೆಗೆ ಬುಮ್ರಾ 7 ಬಾರಿ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸಿದ್ದಾರೆ. ಈ ಪೈಕಿ, ಅವರು 5 ಬಾರಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.

ಹೊಸ ಚೆಂಡಿನಲ್ಲಿ ಬುಮ್ರಾ ವಿಫಲ

ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಹೊಸ ಚೆಂಡಿನಲ್ಲಿ 39 ಓವರ್ ಬೌಲಿಂಗ್ ಮಾಡಿದ್ದಾರೆ. ಈ ಅವಧಿಯಲ್ಲಿ ಅವರು 130 ರನ್ ಬಿಟ್ಟುಕೊಟ್ಟು ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಅಂದರೆ 12 ವಿಕೆಟ್‌ಗಳಲ್ಲಿ ಅವರು ಹೊಸ ಚೆಂಡಿನಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಬುಮ್ರಾ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದ ಅವರು, ಎರಡನೇ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ಪುನರಾಗಮನ ಮಾಡಿದ ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದರು. ಇದರ ಲಾಭ ಪಡೆದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸುಲಭವಾಗಿನ ಗುರಿ ಬೆನ್ನಟ್ಟಿದರು.

IND vs ENG: ಮ್ಯಾಂಚೆಸ್ಟರ್​ನಲ್ಲಿ ಇಮ್ರಾನ್ ಖಾನ್​ ದಾಖಲೆಯನ್ನು ಮುರಿಯುತ್ತಾರಾ ಬುಮ್ರಾ?

ಇಂಗ್ಲೆಂಡ್‌ನಲ್ಲಿ ಬುಮ್ರಾ ಪ್ರದರ್ಶನ

ಇಂಗ್ಲೆಂಡ್ ವಿರುದ್ಧದ 12 ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ 25.73 ಸರಾಸರಿಯಲ್ಲಿ 49 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಮ್ಯಾಂಚೆಸ್ಟರ್​ನಲ್ಲಿ ಬುಮ್ರಾ ಒಂದು ವಿಕೆಟ್ ಪಡೆದರೆ ಇಂಗ್ಲೆಂಡ್‌ನಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಲಿದ್ದಾರೆ. ಇದರೊಂದಿಗೆ, ಬುಮ್ರಾ ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ ಬೌಲರ್ ಆಗಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Fri, 25 July 25

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!