AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLC 2023: ಪೊಲಾರ್ಡ್ vs ಪಾರ್ನೆಲ್​: ಫೈನಲ್ ಫೈಟ್​ನಲ್ಲಿ ಸಿಯಾಟಲ್-ನ್ಯೂಯಾರ್ಕ್ ಮುಖಾಮುಖಿ

Seattle Orcas vs MI New York: ಎಂಐ ನ್ಯೂಯಾರ್ಕ್ ತಂಡವು ಲೀಗ್ ಹಂತದಲ್ಲಿ ಗೆದ್ದಿರುವುದು ಕೇವಲ 2 ಪಂದ್ಯಗಳನ್ನು ಮಾತ್ರ. ಅಂದರೆ 3 ಪಂದ್ಯಗಳನ್ನು ಸೋತಿದ್ದ ಕೀರನ್ ಪೊಲಾರ್ಡ್ ಪಡೆಯು ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಪ್ರವೇಸಿತ್ತು.

MLC 2023: ಪೊಲಾರ್ಡ್ vs ಪಾರ್ನೆಲ್​: ಫೈನಲ್ ಫೈಟ್​ನಲ್ಲಿ ಸಿಯಾಟಲ್-ನ್ಯೂಯಾರ್ಕ್ ಮುಖಾಮುಖಿ
Seattle Orcas vs MI New York
TV9 Web
| Edited By: |

Updated on:Jul 29, 2023 | 3:01 PM

Share

MLC 2023: ಯುಎಸ್​ಎನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. ಗುರುವಾರ ನಡೆದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಗೆಲ್ಲುವ ಮೂಲಕ ವೇಯ್ನ್ ಪಾರ್ನೆಲ್ ನಾಯಕತ್ವದ ಸಿಯಾಟಲ್ ಒರ್ಕಾಸ್ ತಂಡವು ಫೈನಲ್ ಪ್ರವೇಶಿಸಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ವಿರುದ್ಧ 16 ರನ್​ಗಳಿಂದ ಗೆದ್ದ ಎಂಐ ನ್ಯೂಯಾರ್ಕ್​ ತಂಡವು ಚಾಲೆಂಜರ್ ಪಂದ್ಯದಲ್ಲೂ ಗೆದ್ದು ಬೀಗಿದೆ.

ಶುಕ್ರವಾರ ನಡೆದ ಚಾಲೆಂಜರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳಿಂದ ಗೆದ್ದು ಬೀಗಿದ ಕೀರನ್ ಪೊಲಾರ್ಡ್ ನಾಯಕತ್ವದ ಎಂಐ ನ್ಯೂಯಾರ್ಕ್ ತಂಡವು ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಅದರಂತೆ ಜುಲೈ 30 ರಂದು ಡಲ್ಲಾಸ್​ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಹಣಾಹಣಿಯಲ್ಲಿ ಎಂಐ ನ್ಯೂಯಾರ್ಕ್ ಹಾಗೂ ಸಿಯಾಟಲ್ ಒರ್ಕಾಸ್ ತಂಡಗಳು ಮುಖಾಮುಖಿಯಾಗಲಿದೆ.

ಸಿಯಾಟಲ್ ನಾಗಾಲೋಟ:

ಸೌತ್ ಆಫ್ರಿಕಾದ ಎಡಗೈ ವೇಗಿ ವೇಯ್ನ್ ಪಾರ್ನೆಲ್ ಮುಂದಾಳತ್ವದ ಸಿಯಾಟಲ್ ಒರ್ಕಾಸ್ ತಂಡವು ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ಕೇವಲ 1 ರಲ್ಲಿ ಮಾತ್ರ ಸೋಲನುಭವಿಸಿದೆ. ಅದರಲ್ಲೂ ಮೊದಲ ಕ್ವಾಲಿಫೈಯರ್​ನಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್​ಗೆ ಸೋಲುಣಿಸಿ ಫೈನಲ್​ಗೆ ಪ್ರವೇಶಿಸಿದೆ.

ಇತ್ತ ಎಂಐ ನ್ಯೂಯಾರ್ಕ್ ತಂಡವು ಲೀಗ್ ಹಂತದಲ್ಲಿ ಗೆದ್ದಿರುವುದು ಕೇವಲ 2 ಪಂದ್ಯಗಳನ್ನು ಮಾತ್ರ. ಅಂದರೆ 3 ಪಂದ್ಯಗಳನ್ನು ಸೋತಿದ್ದ ಕೀರನ್ ಪೊಲಾರ್ಡ್ ಪಡೆಯು ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಪ್ರವೇಸಿತ್ತು. ಇದೀಗ ಪ್ಲೇಆಫ್ ಹಂತದಲ್ಲಿ ವಾಷಿಂಗ್ಟನ್ ಫ್ರೀಡಮ್ ಹಾಗೂ ಟೆಕ್ಸಾಸ್ ಸೂಪರ್ ಕಿಂಗ್ಸ್​ ತಂಡಗಳಿಗೆ ಸೋಲುಣಿಸಿ ಫೈನಲ್​ಗೆ ಪ್ರವೇಶಿಸಿರುವುದು ವಿಶೇಷ.

ಇತ್ತ ಬ್ಯಾಕ್ ಟು ಬ್ಯಾಕ್ ಎರಡು ಗೆಲುವಿನ ಹುಮ್ಮಸ್ಸಿನಲ್ಲಿರುವ ಎಂಐ ನ್ಯೂಯಾರ್ಕ್ ತಂಡವು ಅಂತಿಮ ಹಣಾಹಣಿಯಲ್ಲಿ ಸಿಯಾಟಲ್​ ಒರ್ಕಾಸ್ ತಂಡಕ್ಕೆ ಭರ್ಜರಿ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ. ಹೀಗಾಗಿ ಫೈನಲ್​ ಫೈಟ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಎಂಐ ನ್ಯೂಯಾರ್ಕ್ ತಂಡ: ಕೀರನ್ ಪೊಲಾರ್ಡ್ (ನಾಯಕ), ಶಯಾನ್ ಜಹಾಂಗೀರ್ , ಡೆವಾಲ್ಡ್ ಬ್ರೆವಿಸ್ , ಸ್ಲೇಡ್ ವ್ಯಾನ್ ಸ್ಟೇಡೆನ್ , ಟಿಮ್ ಡೇವಿಡ್ , ನಿಕೋಲಸ್ ಪೂರನ್, ಡೇವಿಡ್ ವೀಝ, ಸ್ಟೀವನ್ ಟೇಲರ್ , ರಶೀದ್ ಖಾನ್ , ನೋಸ್ತುಶ್ ಕೆಂಜಿಗೆ , ಟ್ರೆಂಟ್ ಬೌಲ್ಟ್ , ಎಹ್ಸಾನ್ ಆದಿಲ್, ಜೇಸನ್ ಬೆಹ್ರೆಂಡಾರ್ಫ್ , ಕಗಿಸೊ ರಬಾಡ , ಹಮ್ಮದ್ ಅಜಮ್ , ಟ್ರಿಸ್ಟಾನ್ ಸ್ಟಬ್ಸ್ , ವಕಾರ್ ಸಲಾಮ್ಖೈಲ್ , ಜಸ್ದೀಪ್ ಸಿಂಗ್ , ಸರಬ್ಜಿತ್ ಲಡ್ಡಾ , ಮೊನಾಂಕ್ ಪಟೇಲ್.

ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

ಸಿಯಾಟಲ್ ಒರ್ಕಾಸ್ ತಂಡ: ಕ್ವಿಂಟನ್ ಡಿ ಕಾಕ್, ನೌಮನ್ ಅನ್ವರ್ , ಶೆಹನ್ ಜಯಸೂರ್ಯ , ಹೆನ್ರಿಕ್ ಕ್ಲಾಸೆನ್ , ಶುಭಂ ರಂಜನೆ , ಡ್ವೈನ್ ಪ್ರಿಟೋರಿಯಸ್ , ಇಮಾದ್ ವಾಸಿಮ್ , ವೇಯ್ನ್ ಪಾರ್ನೆಲ್ (ನಾಯಕ) , ಹರ್ಮೀತ್ ಸಿಂಗ್ , ಆಂಡ್ರ್ಯೂ ಟೈ , ಕ್ಯಾಮರೂನ್ ಗ್ಯಾನನ್, ದಸುನ್ ಶಾನಕ , ಏಂಜೆಲೊ ಪೆರೇರಾ , ಹೇಡನ್ ವಾಲ್ಷ್ , ಆರನ್ ಜೋನ್ಸ್ , ನಿಸರ್ಗ್ ಪಟೇಲ್ , ಫಣಿ ಸಿಂಹಾದ್ರಿ , ಮ್ಯಾಥ್ಯೂ ಟ್ರಂಪ್.

Published On - 3:01 pm, Sat, 29 July 23

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ