AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರ್ವಸ್ ನೈಂಟೀಸ್: ವೈಭವ್ ತಪ್ಪಿಸಿಕೊಂಡ ಶತಕಗಳು ಎಷ್ಟು ಗೊತ್ತಾ?

Vaibhav Sooryavanshi: ಕ್ರಿಕೆಟ್ ಜಗತ್ತಿನಲ್ಲಿ 90 ರನ್‌ಗಳ ಗಡಿ ತಲುಪುತ್ತಿದ್ದಂತೆ ಎಂತಹ ದಿಗ್ಗಜ ಬ್ಯಾಟರ್‌ಗಳ ಎದೆಯಲ್ಲೂ ನಡುಕ ಶುರುವಾಗುತ್ತದೆ. ಶತಕದ ಮೈಲಿಗಲ್ಲು ತಲುಪುವ ಧಾವಂತದಲ್ಲಿ ರನ್ ಗಳಿಕೆಯ ವೇಗ ಕುಸಿಯುತ್ತದೆ, ಬ್ಯಾಟಿಂಗ್ ಶೈಲಿ ರಕ್ಷಣಾತ್ಮಕವಾಗುತ್ತದೆ. ಆದರೆ, ಭಾರತೀಯ ಕ್ರಿಕೆಟ್‌ನ 15 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ವಿಷಯಕ್ಕೆ ಬಂದರೆ ಈ 'ನರ್ವಸ್ ನೈಂಟೀಸ್' ನಿಯಮವೇ ಉಲ್ಟಾ ಆಗುತ್ತದೆ!

ನರ್ವಸ್ ನೈಂಟೀಸ್: ವೈಭವ್ ತಪ್ಪಿಸಿಕೊಂಡ ಶತಕಗಳು ಎಷ್ಟು ಗೊತ್ತಾ?
Vaibhav Sooryavanshi
ಝಾಹಿರ್ ಯೂಸುಫ್
|

Updated on: Aug 31, 2026 | 1:42 PM

Share

ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಶತಕ ವಂಚಿತರಾಗಿದ್ದಾರೆ. ಸೆಂಟ್ರಲ್ ಝೋನ್ ವಿರುದ್ಧದ ಪಂದ್ಯದಲ್ಲಿ ಈಸ್ಟ್ ಝೋನ್ ಪರ ಕಣಕ್ಕಿಳಿದ ವೈಭವ್, ಕೇವಲ 81 ಎಸೆತಗಳಲ್ಲಿ 92 ರನ್ ಚಚ್ಚಿ ಔಟ್ ಆಗುವ ಮೂಲಕ ವೃತ್ತಿಜೀವನದಲ್ಲಿ 7ನೇ ಬಾರಿಗೆ ನರ್ವಸ್ ನೈಂಟೀಸ್ (90s) ಗೆ ಬಲಿಯಾಗಿದ್ದಾರೆ.

ವೈಭವ್​ನ ಕಾಡುತ್ತಿರುವ ನರ್ವಸ್ ನೈಂಟೀಸ್:

ಕಳೆದ ಎರಡು ವರ್ಷಗಳಲ್ಲಿ ವೈಭವ್ ಸೂರ್ಯವಂಶಿ ಏಳು ಬಾರಿ 90 ಕ್ಕಿಂತ ಹೆಚ್ಚು ರನ್​ಗಳಿಸಿ ಶತಕ ವಂಚಿತರಾಗಿದ್ದಾರೆ.

  1. ನವೆಂಬರ್ 4, 2025 ರಂದು, ವೈಭವ್ ಸೂರ್ಯವಂಶಿ ರಣಜಿ ಟ್ರೋಫಿ ಪಂದ್ಯದಲ್ಲಿ ಮೇಘಾಲಯ ವಿರುದ್ಧ ಬಿಹಾರ ಪರ  93 ರನ್‌ಗಳಿಸಿ ಔಟಾಗಿದ್ದರು.
  2. ಜನವರಿ 10, 2026 ರಂದು, ವೈಭವ್ ಸೂರ್ಯವಂಶಿ ಸ್ಕಾಟ್ಲೆಂಡ್ ಅಂಡರ್-19 ತಂಡದ ವಿರುದ್ಧ ನಡೆದ ಅಂಡರ್-19 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 96 ರನ್‌ಗಳಿಗೆ ಔಟಾಗಿದ್ದರು.
  3. ಮೇ 19, 2026 ರಂದು, ವೈಭವ್ ಸೂರ್ಯವಂಶಿ ಐಪಿಎಲ್ 2026 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವಾಗ ತಮ್ಮ ಚೊಚ್ಚಲ ಶತಕ ಗಳಿಸುವ ಸುವರ್ಣ ಅವಕಾಶವನ್ನು ಕಳೆದುಕೊಂಡರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ ಭರ್ಜರಿ 93 ರನ್ ಗಳಿಸಿ ಔಟ್ ಆದ ಅವರು, ಕೇವಲ ಏಳು ರನ್‌ಗಳಿಂದ ಶತಕ ವಂಚಿತರಾಗಿದ್ದರು.
  4. ಮೇ 27, 2026 ರಂದು ನಡೆದ ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ಪರ ಆಡಿದ ವೈಭವ್ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 29 ಎಸೆತಗಳಲ್ಲಿ 12 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 97 ರನ್ ಚಚ್ಚಿ ಔಟಾಗಿದ್ದರು.
  5. ಮೇ 29, 2026 ರಂದು ನಡೆದ ಐಪಿಎಲ್ 2026 ರ ಕ್ವಾಲಿಫೈಯರ್ 2 ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ  96 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದರು.
  6. ಜೂನ್ 21, 2026 ರಂದು ನಡೆದ ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ, ಭಾರತ ಎ ಪರ ಆಡಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚಿ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾಗಿದ್ದರು.
  7. ಆಗಸ್ಟ್ 31, 2026 ರಂದು ನಡೆದ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ, ಈಸ್ಟ್​ ಝೋನ್ ಪರ ಬ್ಯಾಟ್ ಬೀಸಿದ ವೈಭವ್ ಸೂರ್ಯವಂಶಿ ಕೇವಲ 81 ಎಸೆತಗಳಲ್ಲಿ 92 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

ಅಂದರೆ ಎರಡು ವರ್ಷಗಳ ಅವಧಿಯಲ್ಲಿ ವೈಭವ್ ಸೂರ್ಯವಂಶಿ ಬರೋಬ್ಬರಿ 7 ಬಾರಿ ಶತಕ ವಂಚಿತರಾಗಿದ್ದಾರೆ. ಇದರ ನಡುವೆ ಅವರು 6 ಶತಕಗಳನ್ನು ಬಾರಿಸಿದ್ದಾರೆ ಎಂಬುದು ಉಲ್ಲೇಖಾರ್ಹ.

ವೈಭವ್ ಔಟ್ ಆಗಲು ಕಾರಣವೇನು?

ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಯಾವುದೇ ಒಬ್ಬ ಬ್ಯಾಟರ್ 90 ರನ್‌ಗಳ ಗಡಿ ತಲುಪುತ್ತಿದ್ದಂತೆ, ಅವರಲ್ಲಿ ಶತಕದ ಆಸೆ ಮತ್ತು ಒತ್ತಡ ಹೆಚ್ಚಾಗುತ್ತದೆ. ಮೈಲಿಗಲ್ಲು ತಲುಪುವ ಧಾವಂತದಲ್ಲಿ ಬ್ಯಾಟರ್‌ಗಳು ತಮ್ಮ ನೈಜ ಆಟವನ್ನು ಮರೆತು, ರಕ್ಷಣಾತ್ಮಕ ಶೈಲಿಗೆ ಶರಣಾಗುತ್ತಾರೆ. ಈ ಮಾನಸಿಕ ಒತ್ತಡವನ್ನೇ ಕ್ರಿಕೆಟ್ ಜಗತ್ತಿನಲ್ಲಿ ‘ನರ್ವಸ್ ನೈಂಟೀಸ್’ ಎಂದು ಕರೆಯಲಾಗುತ್ತದೆ.

ಆದರೆ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ವಿಷಯದಲ್ಲಿ ಈ ನಿಯಮ ಸಂಪೂರ್ಣ ಉಲ್ಟಾ ಆಗುತ್ತದೆ! ಅವರು 90ರ ರನ್‌ಗಳ ಗಡಿಯಲ್ಲಿ ಔಟ್ ಆಗಲು ಒತ್ತಡ ಅಥವಾ ಶತಕದ ಭಯ ಕಾರಣವಲ್ಲ. ಬದಲಿಗೆ ಅವರ ಅತಿಯಾದ ಆಕ್ರಮಣಕಾರಿ ಆಟವೇ ಕಾರಣ.

ವೈಭವ್ ಕ್ರೀಸ್‌ಗೆ ಬಂದ ಮೊದಲ ಎಸೆತದಿಂದಲೇ ಅತ್ಯಂತ ಅಪಾಯಕಾರಿ ಹಾಗೂ ವಿಸ್ಫೋಟಕ ಆಟಕ್ಕೆ ಕೈಹಾಕುತ್ತಾರೆ. ಅವರಿಗೆ ತಮ್ಮ ವೈಯಕ್ತಿಕ ಸ್ಕೋರ್ ಅಥವಾ ಶತಕದ ಮೈಲಿಗಲ್ಲಿನ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ. ತಾನು 0 ರನ್‌ನಲ್ಲಿದ್ದಾಗ ಹೇಗೆ ಆಡುತ್ತಾರೋ, 90 ರನ್ ತಲುಪಿದಾಗಲೂ ಅದೇ ನಿರ್ಭಯ ಮನೋಭಾವದಿಂದ ಚೆಂಡನ್ನು ಬೌಂಡರಿ ಗೆರೆ ದಾಟಿಸಲಷ್ಟೇ ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: ವೈಭವ್ ಆರ್ಭಟಕ್ಕೆ 57 ವರ್ಷಗಳ ಹಳೆಯ ದಾಖಲೆ ಧೂಳೀಪಟ!

ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲೂ ಅವರು ಮಾಡಿದ್ದು ಇದನ್ನೇ. 92 ರನ್‌ಗಳಲ್ಲಿದ್ದಾಗಲೂ ಅವರು ರನ್ ಗತಿಯನ್ನು ಕಾಯ್ದುಕೊಳ್ಳಲು ದೊಡ್ಡ ಶಾಟ್‌ಗೆ ಯತ್ನಿಸಿ ಔಟ್ ಆದರೇ ಹೊರತು, ಶತಕಕ್ಕಾಗಿ ನಿಧಾನಗತಿಯ ಆಟ ಆಡಲಿಲ್ಲ. ಈ ನಿಸ್ವಾರ್ಥ ಮತ್ತು ಸ್ವಾರ್ಥವಿಲ್ಲದ ಆಟವೇ ಅವರನ್ನು ಇತರರಿಗಿಂತ ಭಿನ್ನವಾಗಿಸಿದೆ, ಜೊತೆಗೆ ಅವರ ಶತಕಗಳು ಕೈತಪ್ಪಲು ಮುಖ್ಯ ಕಾರಣವಾಗಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್