PBKS vs RCB, IPL 2021 Match 26 Result: ಹರ್​ಪ್ರೀತ್ ಬ್ರರ್ ಬೌಲಿಂಗ್ ಕಮಾಲ್; ಸೋಲುಂಡ ಆರ್​ಸಿಬಿ!

RCB vs PBKS Scorecard: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 26ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

 • TV9 Web Team
 • Published On - 23:12 PM, 30 Apr 2021
PBKS vs RCB, IPL 2021 Match 26 Result: ಹರ್​ಪ್ರೀತ್ ಬ್ರರ್ ಬೌಲಿಂಗ್ ಕಮಾಲ್; ಸೋಲುಂಡ ಆರ್​ಸಿಬಿ!
ಹರ್​ಪ್ರೀತ್ ಬ್ರರ್ ಬೌಲಿಂಗ್ ಕಮಾಲ್

ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 34 ರನ್​ಗಳ ಗೆಲುವು ದಾಖಲಿಸಿದೆ. ಪಂಜಾಬ್ ಕಿಂಗ್ಸ್​ ಪರವಾಗಿ ಹರ್​ಪ್ರೀತ್ ಬ್ರರ್ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. 4 ಓವರ್​ಗೆ ಕೇವಲ 19 ರನ್ ನೀಡಿ 3 ಮುಖ್ಯ ವಿಕೆಟ್ ಕಬಳಿಸಿದ್ದಾರೆ. ರವಿ ಬಿಶ್ನೊಯಿ 4 ಓವರ್​ಗೆ 17 ರನ್ ದಾಖಲಿಸಿ 2 ವಿಕೆಟ್ ಪಡೆದಿದ್ಧಾರೆ. ಆರ್​ಸಿಬಿ ಪರ ಯಾವೊಬ್ಬ ದಾಂಡಿಗನೂ ತಂಡ ಗೆಲ್ಲಿಸುವ ಪ್ರದರ್ಶನ ನೀಡಿಲ್ಲ. ಕೊಹ್ಲಿ 35, ಪಾಟೀದಾರ್ 31 ರನ್ ಗಳಿಸಿದ್ದರ ಹೊರತಾಗಿ ಉಳಿದ ಬ್ಯಾಟ್ಸ್​ಮನ್​ಗಳು ಒಂದಂಕಿ ದಾಟಿಲ್ಲ. ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಎರಡರಲ್ಲೂ ವೈಫಲ್ಯ ಅನುಭವಿಸಿ ಸೋಲೊಪ್ಪಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 179 ರನ್ ದಾಖಲಿಸಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 180 ರನ್ ಟಾರ್ಗೆಟ್ ನೀಡಿತ್ತು. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅವರು 57 ಬಾಲ್​ಗೆ 91 ರನ್ (7 ಬೌಂಡರಿ, 5 ಸಿಕ್ಸರ್) ಕಲೆಹಾಕಿದ್ದರು. ಮೊದಲ ವಿಕೆಟ್ ಬಳಿಕ ಕ್ರಿಸ್ ಗೈಲ್ 46 (24) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೂ ಹೆಚ್ಚು ಹೊತ್ತು ಉಳಿಯಲಿಲ್ಲ. ಅಂತಿಮವಾಗಿ ಹರ್​ಪ್ರೀತ್ ಬ್ರರ್ 25 (17) ರನ್ ಸೇರಿಸಿದ್ದರು. ಉಳಿದಂತೆ ಪಂಜಾಬ್ ಬ್ಯಾಟಿಂಗ್ ಲೈನ್​ಅಪ್ ಕುಸಿತ ಕಂಡಿತ್ತು. ಪೂರನ್ ಹಾಗೂ ಶಾರುಖ್ ಖಾನ್ ಸೊನ್ನೆಗೆ ಔಟ್ ಆಗಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜಾಮಿಸನ್ 2 ವಿಕೆಟ್ ಕಬಳಿಸಿದ್ದರು. ಡೇನಿಯಲ್ ಸ್ಯಾಮ್ಸ್ ಮತ್ತು ಶಹಬಾಜ್ ಅಹಮದ್ ರನ್ ನಿಯಂತ್ರಿಸಿದ್ದರು. ಪಂದ್ಯದ ಸಂಪೂರ್ಣ ವಿವರ ಈ ಕೆಳಗಿದೆ.

LIVE Cricket Score & Updates

The liveblog has ended.
 • 30 Apr 2021 23:11 PM (IST)

  ಪಂಜಾಬ್ ಕಿಂಗ್ಸ್​ಗೆ 34 ರನ್​ಗಳ ಗೆಲುವು

  ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ 34 ರನ್ ಗೆಲುವು ದಾಖಲಿಸಿದೆ. ತಂಡದ ಪರ ಹರ್​ಪ್ರೀತ್ ಬ್ರರ್ ಅದ್ಭುತ ಬೌಲಿಂಗ್ ನಡೆಸಿದ್ದಾರೆ. ಆರ್​ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿ ಸೋತಿದೆ.

 • 30 Apr 2021 23:00 PM (IST)

  ಆರ್​ಸಿಬಿ ಗೆಲ್ಲಲು 6 ಬಾಲ್​ಗೆ 47 ರನ್ ಬೇಕು

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ 6 ಬಾಲ್​ಗೆ 47 ರನ್ ಬೇಕಿದೆ. ತಂಡದ ಮೊತ್ತ 19 ಓವರ್​ಗೆ 7 ವಿಕೆಟ್ ಕಳೆದುಕೊಂಡು 133 ರನ್ ಆಗಿದೆ.

 • 30 Apr 2021 22:50 PM (IST)

  100 ರನ್ ಗಡಿ ದಾಟಿದ ಆರ್​ಸಿಬಿ

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ಓವರ್​ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 102 ರನ್ ದಾಖಲಿಸಿದೆ. ಕೈಲ್ ಜಾಮಿಸನ್ ಹಾಗೂ ಹರ್ಷಲ್ ಪಟೇಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 18 ಬಾಲ್​ಗೆ 78 ರನ್ ಬೇಕಾಗಿದೆ. ಸೂಕ್ತ ವಿಕೆಟ್​ಗಳು ಕೂಡ ಉಳಿದಿಲ್ಲದ ಕಾರಣ ಆರ್​ಸಿಬಿ ಸೋಲಿನ ದವಡೆಯಲ್ಲಿದೆ.

 • 30 Apr 2021 22:44 PM (IST)

  ಶಹಬಾಜ್ ಅಹಮದ್, ಡೇನಿಯಲ್ ಸ್ಯಾಮ್ಸ್ ಔಟ್

  img

  ರವಿ ಬಿಶ್ನೊಯಿ ಬೌಲಿಂಗ್​ಗೆ ಹರ್​ಪ್ರೀತ್ ಬ್ರರ್​ಗೆ ಕ್ಯಾಚ್ ನೀಡಿ ಶಹಬಾಜ್ ಅಹಮದ್ ಔಟ್ ಆಗಿದ್ದಾರೆ. ಇದೇ ಓವರ್​ನ ಮತ್ತೊಂದು ಎಸೆತದಲ್ಲಿ ಡೇನಿಯಲ್ ಸ್ಯಾಮ್ಸ್ ಬೌಲ್ಡ್ ಆಗಿದ್ದಾರೆ. ಹರ್ಷಲ್ ಪಟೇಲ್ ಹಾಗೂ ಕೈಲ್ ಜಾಮಿಸನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 16 ಓವರ್​ಗೆ ಆರ್​ಸಿಬಿ ಮೊತ್ತ 96/7 ಆಗಿದೆ. ತಂಡ ಗೆಲ್ಲಲು 24 ಬಾಲ್​ಗೆ 84 ರನ್ ಬೇಕಿದೆ.

 • 30 Apr 2021 22:36 PM (IST)

  ರಜತ್ ಪಾಟೀದಾರ್ ಔಟ್

  img

  30 ಬಾಲ್​ಗೆ 31 ರನ್ ಗಳಿಸಿ ಆಡುತ್ತಿದ್ದ ರಜತ್ ಪಾಟೀದಾರ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಕ್ರಿಸ್ ಜೋರ್ಡನ್ ಬೌಲಿಂಗ್​ಗೆ ಪೂರನ್​ಗೆ ಕ್ಯಾಚ್ ಕೊಟ್ಟು ಔಟ್ ಆಗಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಖ್ಯ 5 ವಿಕೆಟ್​ಗಳನ್ನು ಕಳೆದುಕೊಂಡಿದೆ. 15 ಓವರ್​ನ ಅಂತ್ಯಕ್ಕೆ ತಂಡದ ಮೊತ್ತ 92 ಆಗಿದೆ. ಆರ್​ಸಿಬಿ ಗೆಲ್ಲಲು 30 ಬಾಲ್​ಗೆ 88 ರನ್ ಬೇಕಿದೆ.

 • 30 Apr 2021 22:32 PM (IST)

  ಆರ್​ಸಿಬಿ ಗೆಲ್ಲಲು 36 ಬಾಲ್​ಗೆ 96 ರನ್ ಬೇಕು

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು 36 ಬಾಲ್​ಗೆ 96 ರನ್ ಬೇಕಾಗಿದೆ. ಪ್ರಮುಖ 4 ವಿಕೆಟ್ ಕಳೆದುಕೊಂಡಿರುವ ಆರ್​ಸಿಬಿ ಆತಂಕದ ಸ್ಥಿತಿಯಲ್ಲಿದೆ. ತಂಡದ ಮೊತ್ತ 14 ಓವರ್​ಗೆ 84/4 ಆಗಿದೆ. ರಾಯಲ್ ಚಾಲೆಂಜರ್ಸ್ ಪರ ರಜತ್ ಪಾಟೀದಾರ್ ಹಾಗೂ ಶಹಬಾಜ್ ಅಹಮದ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 30 Apr 2021 22:27 PM (IST)

  ಡಿವಿಲಿಯರ್ಸ್ ವಿಕೆಟ್ ಪತನ

  img

  ಆರ್​ಸಿಬಿಯ ಮತ್ತೊಂದು ವಿಕೆಟ್ ಪತನವಾಗಿದೆ. 9 ಬಾಲ್​ಗೆ 3 ರನ್ ಗಳಿಸಿದ್ದ ಎಬಿ ಡಿವಿಲಿಯರ್ಸ್ ಹರ್​ಪ್ರೀತ್ ಬ್ರರ್​ಗೆ ವಿಕೆಟ್ ಒಪ್ಪಿಸಿದ್ದಾರೆ. 13 ಓವರ್​ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊತ್ತ 71/4 ಆಗಿದೆ. ಗೆಲ್ಲಲು 42 ಬಾಲ್​ಗೆ 109 ರನ್ ಬೇಕಿದೆ.

 • 30 Apr 2021 22:18 PM (IST)

  ಕೊಹ್ಲಿ- ಮ್ಯಾಕ್ಸ್​ವೆಲ್ ಬೌಲ್ಡ್!

  img

  ಹರ್​ಪ್ರೀತ್ ಬ್ರರ್ ಬೌಲಿಂಗ್ ಕಮಾಲ್ ಮಾಡುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್ ಬೆನ್ನುಬೆನ್ನಿಗೆ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದ್ದಾರೆ. ವಿರಾಟ್ 35 (34) ಹಾಗೂ ಮ್ಯಾಕ್ಸ್​ವೆಲ್ ಗೋಲ್ಡನ್ ಡಕ್​ಗೆ ನಿರ್ಗಮಿಸಿದ್ದಾರೆ. ಆರ್​ಸಿಬಿ ಪರ ಎಬಿ ಡಿವಿಲಿಯರ್ಸ್ ಮತ್ತು ರಜತ್ ಪಾಟೀದಾರ್ ಕ್ರೀಸ್​ನಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಮೊತ್ತ 11 ಓವರ್​ಗೆ 62/3 ಆಗಿದೆ. ತಂಡ ಗೆಲ್ಲಲು 54 ಬಾಲ್​ಗೆ 118 ರನ್ ಬೇಕಿದೆ.

 • 30 Apr 2021 22:14 PM (IST)

  ಆರ್​ಸಿಬಿ 62/1 (10 ಓವರ್)

  ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 61 ರನ್ ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 30 Apr 2021 21:55 PM (IST)

  ರಜತ್ ಬೌಂಡರಿ

  img

  ಪಂಜಾಬ್ ಕಿಂಗ್ಸ್ ಇಲ್ಲಿಯವರೆಗೆ ಉತ್ತಮವಾಗಿ ಆಡುತ್ತಿದೆ. ತಂಡದ ವೇಗದ ಬೌಲರ್‌ಗಳು ಇಬ್ಬರೂ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ವೇಗ ಮತ್ತು ನಿಖರ ದಾಳಿಯಿಂದ ಕಟ್ಟಿಹಾಕಿದ್ದಾರೆ. ಕೊಹ್ಲಿಯ ಯಾವುದೇ ಹೊಡೆತಗಳು ಬೌಂಡರಿ ದಾಟಲು ಸಾಧ್ಯವಿಲ್ಲ. ಆದರೆ, ರಜತ್ ಪೈಡಿದಾರ್ ಉತ್ತಮ ಫ್ಲಿಕ್ ಗಳಿಸಿದರು ಮತ್ತು ಮಿಡ್‌ವಿಕೆಟ್‌ನಲ್ಲಿ ನಾಲ್ಕು ರನ್ ಗಳಿಸಿದರು. ಮೆರೆಡಿತ್ ಓವರ್ ಕೂಡ ಉತ್ತಮವಾಗಿತ್ತು.

 • 30 Apr 2021 21:51 PM (IST)

  ಶಮಿ ಬೆಸ್ಟ್ ಬೌಲಿಂಗ್

  ಮೊಹಮ್ಮದ್ ಶಮಿ ಸತತ ಎರಡನೇ ಓವರ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದಾರೆ. ಶಮಿ ವಿಶೇಷವಾಗಿ ಕೊಹ್ಲಿಯನ್ನು ತೊಂದರೆಗೊಳಗಾಗಿಸುತ್ತಿದ್ದಾರೆ. ಅವರ ವಿರುದ್ಧ ಕೊಹ್ಲಿಗೆ ಯಾವುದೇ ಬೌಂಡರಿ ಗಳಿಸಲಾಗಲಿಲ್ಲ.

 • 30 Apr 2021 21:44 PM (IST)

  ಪಡಿಕ್ಕಲ್ ಔಟ್

  img

  ಬೆಂಗಳೂರಿಗೆ ಮೊದಲ ಹಿನ್ನಡೆ ಬಂದಿದೆ. ಮೆರೆಡಿತ್ ದೇವದತ್ತ ಪಡಿಕ್ಕಲ್ ಅವರನ್ನು ಬಲಿ ಪಡೆದರು. ಮೆರೆಡಿತ್‌ನ ಓವರ್‌ನಲ್ಲಿ, ಪಡಿಕಲ್ ಬ್ಯಾಟಿಂಗ್ ಮಾಡಿ, ಸ್ಟಂಪ್‌ನಿಂದ ತಾನೇ ಜಾಗವನ್ನು ಮಾಡಿಕೊಂಡರು, ಆದರೆ ಮೆರೆಡಿತ್‌ನ ಚೆಂಡಿನ ವೇಗವನ್ನು ತಪ್ಪಿಸಿಕೊಂಡರು ಮತ್ತು ಚೆಂಡು ಆಫ್-ಸ್ಟಂಪ್ ಅನ್ನು ಕಿತ್ತುಹಾಕಿತು. ಇದರ ಮೇಲೆ ಕೊನೆಯ ಎಸೆತದಲ್ಲಿ ಅದೇ ರೀತಿಯಲ್ಲಿ ಪಾಡಿಕ್ಕಲ್ ಪಾಯಿಂಟ್ ಬೌಂಡರಿಯ ಹೊರಗೆ ಸಿಕ್ಸರ್ ಬಾರಿಸಿದರು.

 • 30 Apr 2021 21:42 PM (IST)

  ಕೊಹ್ಲಿ ಬೌಂಡರಿ

  img

  ಮೊಹಮ್ಮದ್ ಶಮಿ ಉತ್ತಮ ಓವರ್ ತೆಗೆದುಕೊಂಡಿದ್ದಾರೆ. ಬೌಂಡರಿಯೊಂದಿಗೆ ಓವರ್ ಪ್ರಾರಂಭವಾಯಿತು. ಕೊಹ್ಲಿ ಕ್ರೀಸ್‌ನಿಂದ ಹೊರಬಂದು ಚೆಂಡನ್ನು ನೇರವಾಗಿ ಬೌಲರ್‌ನ ಮೇಲೆ ಆಡಿದರು ಮತ್ತು ನಾಲ್ಕು ರನ್ ಗಳಿಸಿದರು. ಆದರೆ, ಶಮಿ ಇದರ ನಂತರ ಹಿಂತಿರುಗಿ ರನ್ ಗಳಿಸಲು ಕಡಿವಾಣ ಹಾಕಿದರು.

 • 30 Apr 2021 21:15 PM (IST)

  ಪಂಜಾಬ್ ಕಿಂಗ್ಸ್ 179/5 (20 ಓವರ್)

  ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 179 ರನ್ ದಾಖಲಿಸಿದೆ. ಈ ಮೂಲಕ ಆರ್​ಸಿಬಿ ಗೆಲ್ಲಲು 180 ರನ್ ಟಾರ್ಗೆಟ್ ನೀಡಿದೆ. ಪಂಜಾಬ್ ಕಿಂಗ್ಸ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಆಟ ಆಡಿದ್ದಾರೆ. 91 ರನ್ ಗಳಿಸಿ ಔಟ್ ಆಗದೆ ಉಳಿದಿದ್ದಾರೆ.

 • 30 Apr 2021 21:06 PM (IST)

  150 ರನ್ ಪೂರೈಸಿದ ಪಂಜಾಬ್

  ಪಂಜಾಬ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು 150 ರನ್ ಪೂರೈಸಿದೆ. ಪಂಜಾಬ್ ಮೊತ್ತ 19 ಓವರ್​ಗೆ 157 ಆಗಿದೆ. ಕೆ.ಎಲ್. ರಾಹುಲ್ 76 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಹರ್​ಪ್ರೀತ್ ಬ್ರರ್ 18 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 30 Apr 2021 20:57 PM (IST)

  ಪಂಜಾಬ್ ಕಿಂಗ್ಸ್ 132/5 (17 ಓವರ್)

  17ನೇ ಓವರ್ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 5 ವಿಕೆಟ್ ಕಳೆದುಕೊಂಡು 132 ರನ್ ದಾಖಲಿಸಿದೆ. ಕೆ.ಎಲ್ ರಾಹುಲ್ 64 ರನ್ ಬಾರಿಸಿ ನಾಯಕನ ಆಟವಾಡುತ್ತಿದ್ದಾರೆ. ಹರ್​ಪ್ರೀತ್ ಬ್ರರ್ ಮತ್ತೊಂದೆಡೆ ಕ್ರೀಸ್​ನಲ್ಲಿದ್ದಾರೆ.

 • 30 Apr 2021 20:47 PM (IST)

  ಶೂನ್ಯಕ್ಕೆ ನಿರ್ಗಮಿಸಿದ ಶಾರುಖ್!

  img

  3 ಬಾಲ್​ಗೆ ರನ್ ಗಳಿಸದೇ ಶಾರುಖ್ ಖಾನ್ ಔಟ್ ಆಗಿದ್ದಾರೆ. ಚಹಾಲ್ ಬಾಲ್​ಗೆ ಬೌಲ್ಡ್ ಆಗಿದ್ದಾರೆ. ಪಂಜಾಬ್ ಕಿಂಗ್ಸ್ 15 ಓವರ್​ಗೆ 5 ವಿಕೆಟ್ ಕಳೆದುಕೊಂಡು 119 ರನ್ ದಾಖಲಿಸಿದೆ. ರಾಹುಲ್ 56 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

 • 30 Apr 2021 20:40 PM (IST)

  ದೀಪಕ್ ಹೂಡಾ ಔಟ್

  img

  ಪಂಜಾಬ್ ತಂಡ ಒಂದರ ಹಿಂದೆ ಒಂದರಂತೆ ವಿಕೆಟ್ ಕಳದುಕೊಳ್ಳುತ್ತಿದೆ. ಹೂಡಾ 9 ಬಾಲ್​ಗೆ 5 ರನ್ ಗಳಿಸಿ ನಿರ್ಗಮಿಸಿದ್ದಾರೆ. ರಾಹುಲ್ ಏಕಾಂಗಿ ಹೋರಾಟ ಮುಂದುವರಿದಿದೆ. ಪಂಜಾಬ್ ತಂಡದ ಮೊತ್ತ 14 ಓವರ್​ಗೆ 117/4 ಆಗಿದೆ.

 • 30 Apr 2021 20:39 PM (IST)

  ರಾಹುಲ್ ಅರ್ಧಶತಕ

  ಪಂಜಾಬ್ ಪರ ನಾಯಕ ರಾಹುಲ್ ಅರ್ಧಶತಕ ಸಿಡಿಸಿದ್ದಾರೆ. 39 ಬಾಲ್​ಗೆ 4 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 53 ರನ್ ಪೇರಿಸಿದ್ದಾರೆ. ಪಂಜಾಬ್ ತಂಡ 13 ಓವರ್​ಗೆ 3 ವಿಕೆಟ್ ನಷ್ಟಕ್ಕೆ 113 ರನ್ ದಾಖಲಿಸಿದೆ.

 • 30 Apr 2021 20:36 PM (IST)

  ಮತ್ತೆ ಸೊನ್ನೆ ಸುತ್ತಿದ ಪೂರನ್!

  img

  ನಿಕೊಲಸ್ ಪೂರನ್ ಇಂದು ಕೂಡ ನಿರಾಸೆ ಮೂಡಿಸಿದ್ದಾರೆ. 3 ಬಾಲ್ ಆಟವಾಡಿ ರನ್ ಗಳಿಸದೇ ನಿರ್ಗಮಿಸಿದ್ದಾರೆ. ಜಾಮಿಸನ್ ಬೌಲಿಂಗ್​ಗೆ ಶಹಬಾಜ್ ಅಹ್ಮದ್ ಕ್ಯಾಚ್ ಪಡೆದಿದ್ದಾರೆ. ರಾಹುಲ್ ಅರ್ಧಶತಕ ಪೂರೈಸಿದ್ದಾರೆ. ದೀಪಕ್ ಹೂಡಾ ರಾಹುಲ್​ಗೆ ಜೊತೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ 12 ಓವರ್​ಗೆ 3 ವಿಕೆಟ್ ಕಳೆದುಕೊಂಡು 109 ರನ್ ದಾಖಲಿಸಿದೆ.

 • 30 Apr 2021 20:26 PM (IST)

  ಅಬ್ಬರಿಸುತ್ತಿದ್ದ ಗೈಲ್ ಔಟ್!

  img

  ಆರ್​ಸಿಬಿ ವಿರುದ್ಧ ಅಬ್ಬರಿಸುತ್ತಿದ್ದ ಕ್ರಿಸ್ ಗೈಲ್ ಔಟ್ ಆಗಿದ್ದಾರೆ. 24 ಬಾಲ್​ಗೆ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 46 ರನ್ ಗಳಿಸಿ ಅರ್ಧಶತಕ ವಂಚಿತರಾಗಿದ್ದಾರೆ. ಡೇನಿಯಲ್ ಸ್ಯಾಮ್ಸ್ ಬೌಲಿಂಗ್​ಗೆ ಡಿವಿಲಿಯರ್ಸ್​ಗೆ ಕ್ಯಾಚ್ ಒಪ್ಪಿಸಿ ಪೆವಿಲಿಯನ್​ಗೆ ಮರಳಿದ್ದಾರೆ. ಕೆ. ಎಲ್ ರಾಹುಲ್ ಹಾಗೂ ನಿಕೊಲಸ್ ಪೂರನ್ ಕ್ರೀಸ್​ನಲ್ಲಿ ಜೊತೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ 11 ಓವರ್​ಗೆ 2 ವಿಕೆಟ್ ಕಳೆದುಕೊಂಡು 100 ರನ್ ದಾಖಲಿಸಿದೆ.

 • 30 Apr 2021 20:22 PM (IST)

  ಪಂಜಾಬ್ ಕಿಂಗ್ಸ್ 90/1 (10 ಓವರ್)

  10ನೇ ಓವರ್ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 91 ರನ್ ದಾಖಲಿಸಿದೆ. ಕೆ.ಎಲ್. ರಾಹುಲ್ 31 ಬಾಲ್​ಗೆ 36 ಹಾಗೂ ಗೈಲ್ 23 ಬಾಲ್​ಗೆ 46 ರನ್ ಪೇರಿಸಿ ಕ್ರಿಸ್​ನಲ್ಲಿದ್ದಾರೆ.

 • 30 Apr 2021 20:13 PM (IST)

  ಪಂಜಾಬ್ ಕಿಂಗ್ಸ್ 70/1 (8 ಓವರ್)

  8 ಓವರ್​ನ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿದೆ. ಪಂಜಾಬ್ ಪರ ಕ್ರಿಸ್ ಗೈಲ್ 15 ಬಾಲ್​ಗೆ 38 ಹಾಗೂ ರಾಹುಲ್ 26 ಬಾಲ್​ಗೆ 24 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 30 Apr 2021 20:08 PM (IST)

  ಮತ್ತೆ ಎರಡು ಸಿಕ್ಸರ್

  img

  ರಾಯಲ್ ಚಾಲೆಂಜರ್ಸ್ ತಂಡದ ಮಾಜಿ ದಾಂಡಿಗ, ಯೂನಿವರ್ಸಲ್ ಬಾಸ್ ಕ್ರಿಸ್ ಗೈಲ್ ಇಂದು ಆರ್​ಸಿಬಿ ವಿರುದ್ಧ ಸಿಡಿದು ನಿಂತಿದ್ದಾರೆ. ಚಹಾಲ್​ನ 7ನೇ ಓವರ್​ನಲ್ಲಿ 2 ಸಿಕ್ಸರ್ ಬಾರಿಸಿದ್ದಾರೆ. ಪಂಜಾಬ್ ಕಿಂಗ್ಸ್ 7 ಓವರ್​ಗೆ 1 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ.

 • 30 Apr 2021 20:03 PM (IST)

  ಸಿಡಿದ ಗೈಲ್; 5 ಫೋರ್!

  img

  ಆರ್​ಸಿಬಿ ವಿರುದ್ಧ ಕ್ರಿಸ್ ಗೈಲ್ ಅಬ್ಬರಿಸಿದ್ದಾರೆ. 8 ಬಾಲ್​ಗೆ 5 ಬೌಂಡರಿ ಸಹಿತ 22 ರನ್ ದಾಖಲಿಸಿದ್ದಾರೆ. ತಂಡದ ರನ್ ಗತಿ ಏರಿಕೆಯಾಗಿದೆ. ಪವರ್​ಪ್ಲೇ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 49 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಕೈಲ್ ಜಾಮಿಸನ್ ಎಸೆದ ಪವರ್ ಪ್ಲೇನ ಕೊನೆಯ ಓವರ್​ನಲ್ಲಿ 5 ಬೌಂಡರಿ ದಾಖಲಾಗಿದೆ.

 • 30 Apr 2021 19:53 PM (IST)

  ಪಂಜಾಬ್ ಕಿಂಗ್ಸ್ ಮೊದಲ ವಿಕೆಟ್ ಪತನ

  img

  ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಭ್​ಸಿಮ್ರನ್ ವಿಕೆಟ್ ಪತನವಾಗಿದೆ. ಪ್ರಭ್​ಸಿಮ್ರನ್ 7 ಬಾಲ್​ಗೆ 7 ರನ್ ಗಳಿಸಿ, ಜಾಮಿಸನ್ ಬಾಲ್​ಗೆ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮೊದಲ ವಿಕೆಟ್ ಪತನದ ಬಳಿಕ ಕೆ.ಎಲ್. ರಾಹುಲ್​ಗೆ ಕ್ರಿಸ್ ಗೈಲ್ ಜೊತೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ 4 ಓವರ್​ಗೆ 1 ವಿಕೆಟ್ ಕಳೆದುಕೊಂಡು 21 ರನ್ ದಾಖಲಿಸಿದೆ.

 • 30 Apr 2021 19:42 PM (IST)

  ಸಿಕ್ಸ್ ಬಾರಿಸಿದ ರಾಹುಲ್

  img

  ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಎರಡನೇ ಓವರ್​ನಲ್ಲಿ ಸಿಕ್ಸರ್ ಸಿಡಿಸಿದ್ದಾರೆ. ಸಿರಾಜ್ ಓವರ್​ನ 3ನೇ ಬಾಲ್​ನ್ನು ಸಿಕ್ಸ್​ಗೆ ಅಟ್ಟಿದ್ದಾರೆ. ಈ ಮೂಲಕ ಪಂಜಾಬ್ ಮೊತ್ತ 2 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 13 ಆಗಿದೆ.

 • 30 Apr 2021 19:37 PM (IST)

  ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್

  ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ನಾಯಕ ಕೆ.ಎಲ್. ರಾಹುಲ್ ಹಾಗೂ ಪರಬ್​ಸಿಮ್ರನ್ ಸಿಂಗ್ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಪಂಜಾಬ್ 1 ಓವರ್​ನ ಅಂತ್ಯಕ್ಕೆ 3 ರನ್ ಕಲೆಹಾಕಿದೆ. ಡೇನಿಯಲ್ ಸ್ಯಾಮ್ಸ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.

 • 30 Apr 2021 19:10 PM (IST)

  ಟಾಸ್​ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ

  ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಲು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ತಂಡದಲ್ಲಿ ಒಂದೇ ಒಂದು ಬದಲಾವಣೆ ಇದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಶಹಬಾಜ್ ಅಹ್ಮದ್ ಅವರನ್ನು ಬದಲಾಯಿಸಲಾಗಿದೆ.

  ಅದೇ ಸಮಯದಲ್ಲಿ, ಪಂಜಾಬ್ ತಂಡದಲ್ಲಿ 3 ಬದಲಾವಣೆಗಳಾಗಿವೆ. ಮಾಯಾಂಕ್ ಅಗರ್ವಾಲ್, ಮೊಜೆಸ್ ಹೆನ್ರಿಕ್ಸ್ ಮತ್ತು ಅರ್ಷದಿಪ್ ಸಿಂಗ್ ಅವರನ್ನು ಕೈಬಿಡಲಾಗಿದ್ದು, ಪ್ರಭಾಸಿಮ್ರಾನ್ ಸಿಂಗ್, ಮಂದೀಪ್ ಸಿಂಗ್ ಮತ್ತು ರೈಲಿ ಮೆರೆಡಿತ್ ಅವರನ್ನು ಸೇರಿಸಿಕೊಳ್ಳಲಾಗಿದೆ.