AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ 5 ವರ್ಷಗಳಲ್ಲಿ 11 ಹೆಡ್ ಕೋಚ್ ಬದಲಿಸಿದ ಪಾಕಿಸ್ತಾನ

ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ 11 ಕೋಚ್‌ಗಳನ್ನು ಬದಲಾಯಿಸಿದೆ. ನಿರಂತರ ವಿವಾದಗಳು ಮತ್ತು ಕಳಪೆ ಪ್ರದರ್ಶನದಿಂದ ತಂಡವು ಅಸ್ಥಿರತೆಯನ್ನು ಎದುರಿಸುತ್ತಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸೋಲಿನ ನಂತರ ಮತ್ತೊಬ್ಬ ಕೋಚ್ ಬದಲಾಗಿದ್ದಾರೆ, ಮೈಕ್ ಹೆಸ್ಸನ್ ಈಗ ಮುಖ್ಯ ಕೋಚ್. ಈ ಲೇಖನವು ಪಾಕ್ ಕ್ರಿಕೆಟ್‌ನ ಈ ಅನಿಶ್ಚಿತ ಪರಿಸ್ಥಿತಿ ಮತ್ತು ತಂಡದ ಮೇಲೆ ಅದರ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ.

ಕಳೆದ 5 ವರ್ಷಗಳಲ್ಲಿ 11 ಹೆಡ್ ಕೋಚ್ ಬದಲಿಸಿದ ಪಾಕಿಸ್ತಾನ
Pak Cricket
ಪೃಥ್ವಿಶಂಕರ
|

Updated on: Sep 02, 2026 | 9:55 PM

Share

ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್ ತನ್ನ ಆಟದಿಂದ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಕೆಲವೊಮ್ಮೆ ಆಟಗಾರರು ವಿವಾದ ಸೃಷ್ಟಿಸಿದರೆ, ಇನ್ನು ಕೆಲವೊಮ್ಮೆ ಆಡಳಿತ ಮಂಡಳಿ ಹಾಗೂ ಕೋಚಿಂಗ್ ಸಿಬ್ಬಂದಿಗಳ ವಿಚಾರದಲ್ಲಿ ಪಾಕ್ ಮಂಡಳಿಯಲ್ಲಿನ ವಿವಾದ ಮುನ್ನೆಲೆಗೆ ಬರುತ್ತದೆ. ಅದರಲ್ಲೂ ಯಾವುದೇ ಪ್ರಮುಖ ಪಂದ್ಯಾವಳಿಯಲ್ಲಿ ಪಾಕ್ ತಂಡ ಹೀನಾಯ ಪ್ರದರ್ಶನ ನೀಡದ ಕೂಡಲೇ ತಂಡದಲ್ಲಿ ಕೋಚ್​ನಿಂದ ಹಿಡಿದು ನಾಯಕನವರೆಗೆ ಹಲವು ಬಾರಿ ಬದಲಾವಣೆಗಳಾಗುತ್ತವೆ. ಅದರಂತೆ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನ ಸೋಲನ್ನು ಅನುಭವಿಸಿತು. ಇದರ ಪರಿಣಾಮವಾಗಿ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ಮತ್ತೊಂದು ಬದಲಾವಣೆಯಾಗಿದೆ. ಪಾಕ್ ತಂಡದ ಪ್ರವೃತ್ತಿ ಇದೇ ಮೊದಲ ಬಾರಿಗಲ್ಲ, ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನ 11 ತರಬೇತುದಾರರನ್ನು ಬದಲಾಯಿಸಿದೆ.

ಟೆಸ್ಟ್ ತಂಡದ ಕಳಪೆ ಪ್ರದರ್ಶನ

ಕಳೆದ ಐದಾರು ವರ್ಷಗಳಲ್ಲಿ, ಪಾಕಿಸ್ತಾನ ತಂಡದ ಪ್ರದರ್ಶನ ಮೂರು ಸ್ವರೂಪಗಳಲ್ಲಿಯೂ ಕಳಪೆಯಾಗಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಪ್ರದರ್ಶನ ತೀರ ಕಳಪೆಯಾಗಿದೆ. ಒಂದು ವರ್ಷದೊಳಗೆ, ಪಾಕಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ ಸತತ ಎರಡು ಕ್ಲೀನ್ ಸ್ವೀಪ್‌ ಮುಖಭಂಗವನ್ನು ಅನುಭವಿಸಿದೆ. ಅದರಲ್ಲಿ ಒಂದು ಸರಣಿಯನ್ನು ಪಾಕಿಸ್ತಾನ ತನ್ನ ನೆಲದಲ್ಲೇ ಸೋತಿದೆ. ಅಲ್ಲದೆ ಪಾಕ್ ತಂಡವು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಈಗ ಇಂಗ್ಲೆಂಡ್‌ನಲ್ಲಿಯೂ ಸೋಲುಗಳನ್ನು ಅನುಭವಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಪಿಸಿಬಿ ಟೆಸ್ಟ್ ತರಬೇತುದಾರರಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.

2023 ರಿಂದ ಇಲ್ಲಿಯವರೆಗೆ, ಪಾಕಿಸ್ತಾನವು ಮೂರು ವರ್ಷಗಳಲ್ಲಿ ಆರು ಬಾರಿ ಕೋಚ್‌ಗಳನ್ನು ಬದಲಾಯಿಸಿದೆ. ಇದೀಗ ಮೈಕ್ ಹೆಸನ್ ಅವರನ್ನು ಟೆಸ್ಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಹಾಗಿದ್ದರೆ ಕಳೆದ ಐದು ವರ್ಷಗಳಲ್ಲಿ ಪಾಕ್ ತಂಡ ಬದಲಿಸಿದ ಕೋಚ್​ಗಳು ಯಾರ್ಯಾರು ಎಂಬುದನ್ನು ನೋಡುವುದಾದರೆ..

  • ಗ್ರಾಂಟ್ ಬ್ರಾಡ್ಬರ್ನ್ – ಮಾರ್ಚ್ 2023 ರಿಂದ ನವೆಂಬರ್ 2023 ರವರೆಗೆ
  • ಮೊಹಮ್ಮದ್ ಹಫೀಜ್ – ನವೆಂಬರ್ 2023 ರಿಂದ ಫೆಬ್ರವರಿ 2024 ರವರೆಗೆ
  • ಜೇಸನ್ ಗಿಲ್ಲೆಸ್ಪಿ – ಏಪ್ರಿಲ್ 2024 ರಿಂದ ಡಿಸೆಂಬರ್ 2024
  • ಅಜರ್ ಮಹಮೂದ್ – ಜನವರಿ 2025 ರಿಂದ ಡಿಸೆಂಬರ್ 2025
  • ಸರ್ಫರಾಜ್ ಅಹ್ಮದ್ – ಏಪ್ರಿಲ್ 2026 ರಿಂದ ಆಗಸ್ಟ್ 2026
  • ಮೈಕ್ ಹೆಸ್ಸನ್ – ಸೆಪ್ಟೆಂಬರ್ 2026 ರಿಂದ ಪ್ರಾರಂಭ

ಐದು ವರ್ಷಗಳಲ್ಲಿ 11 ಕೋಚ್ ಬದಲಾವಣೆ

ಟೆಸ್ಟ್ ತಂಡ ಮಾತ್ರವಲ್ಲ ಉಳಿದೆರಡು ಮಾದರಿಗಳಲ್ಲೂ ಕೋಚ್ ಬದಲಾವಣೆಗಳಾಗಿವೆ. ಪಾಕಿಸ್ತಾನ ಕಳೆದ ಐದು ವರ್ಷಗಳಲ್ಲಿ ಎಲ್ಲಾ ಸ್ವರೂಪಗಳಲ್ಲಿ 11 ಬಾರಿ ಕೋಚ್‌ಗಳನ್ನು ಬದಲಾಯಿಸಿದೆ. ಇದು 2021 ರಲ್ಲಿ ತಂಡದ ಕೋಚ್ ಆಗಿದ್ದ ಮಿಸ್ಬಾ-ಉಲ್-ಹಕ್ ಅವರ ನಿರ್ಗಮನದೊಂದಿಗೆ ಪ್ರಾರಂಭವಾಯಿತು. ಇದರ ನಂತರ, ಸಕ್ಲೇನ್ ಮುಷ್ತಾಕ್ ಸುಮಾರು ಎರಡು ವರ್ಷಗಳ ಕಾಲ ಮೂರು ಸ್ವರೂಪಗಳಿಗೆ ಕೋಚ್ ಆಗಿದ್ದರು. ಮೊಹಮ್ಮದ್ ಹಫೀಜ್, ಗ್ಯಾರಿ ಕರ್ಸ್ಟನ್ ಮತ್ತು ಆಕಿಬ್ ಜಾವೇದ್ ಕೂಡ ಅಲ್ಪಾವಧಿಗೆ ಕೋಚ್ ಆಗಿದ್ದರು, ಆದರೆ ಅವರಲ್ಲಿ ಯಾರೂ ತಂಡಕ್ಕೆ ಯಶಸ್ಸನ್ನು ತಂದುಕೊಡಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!