AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs LSG IPL 2026: ಎಲ್​ಎಸ್​ಜಿ ವಿರುದ್ಧ ಗೆದ್ದು ಬೀಗಿದ ಆರ್​ಆರ್​

Rajasthan Royals vs Lucknow Super Giants, IPL 2026: ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈವರೆಗೆ 8 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಲಕ್ನೋ ಸೂಪರ್ ಜೈಂಟ್ಸ್ 2 ಬಾರಿ ಗೆಲುವು ದಾಖಲಿಸಿದೆ.

RR vs LSG IPL 2026: ಎಲ್​ಎಸ್​ಜಿ ವಿರುದ್ಧ ಗೆದ್ದು ಬೀಗಿದ ಆರ್​ಆರ್​
Rr Vs Lsg
ಝಾಹಿರ್ ಯೂಸುಫ್
|

Updated on:May 19, 2026 | 11:36 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ನ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ  ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಹಂಗಾಮಿ ನಾಯಕ ಯಶಸ್ವಿ ಜೈಸ್ವಾಲ್ ಬೌಲಿಂಗ್ ಆಯ್ದುಕೊಂಡಿದಗದರು ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್​ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ 19.1 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್ (ನಾಯಕ), ಲುವಾನ್-ಡ್ರೆ ಪ್ರಿಟೋರಿಯಸ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಡೊನೊವನ್ ಫೆರೇರಾ, ಶುಭಂ ದುಬೆ, ದಸುನ್ ಶಾನಕ, ಜೋಫ್ರಾ ಆರ್ಚರ್, ಸುಶಾಂತ್ ಮಿಶ್ರಾ, ಸಂದೀಪ್ ಶರ್ಮಾ, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ಅಬ್ದುಲ್ ಸಮದ್, ಶಹಬಾಝ್ ಅಹ್ಮದ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಆಕಾಶ್ ಮಹಾರಾಜ್ ಸಿಂಗ್, ಪ್ರಿನ್ಸ್ ಯಾದವ್.

ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್​, ಹಿಮ್ಮತ್ ಸಿಂಗ್,  ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ವನಿಂದು ಹಸರಂಗ, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.

LIVE NEWS & UPDATES

The liveblog has ended.
  • 19 May 2026 11:26 PM (IST)

    RR vs LSG IPL 2026 Live Score: ಎಲ್​ಎಸ್​ಜಿ ವಿರುದ್ಧ ಗೆದ್ದು ಬೀಗಿದ ಆರ್​ಆರ್​

    • 20 ಓವರ್​ಗಳಲ್ಲಿ 220 ರನ್ ಕಲೆಹಾಕಿದ್ದ ಲಕ್ನೋ ಸೂಪರ್ ಜೈಂಟ್ಸ್.
    • 19.1 ಓವರ್​ಗಳಲ್ಲಿ 225 ರನ್​ಗಳ ಗುರಿ ಬೆನ್ನತ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್.
    • ರಾಜಸ್ಥಾನ್ ರಾಯಲ್ಸ್ ಪರ 38 ಎಸೆತಗಳಲ್ಲಿ 93 ರನ್ ಚಚ್ಚಿದ ವೈಭವ್ ಸೂರ್ಯವಂಶಿ
    • 10 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಇಡೀ ಪಂದ್ಯದ ಚಿತ್ರದ ಬದಲಿಸಿದ ವೈಭವ್.
    • ವೈಭವ್ ಆರ್ಭಟದೊಂದಿಗೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್
  • 19 May 2026 10:57 PM (IST)

    RR vs LSG IPL 2026 Live Score: ಶತಕದಂಚಿನಲ್ಲಿ ಎಡವಿದ ವೈಭವ್

    38 ಎಸೆತಗಳಲ್ಲಿ 93 ರನ್​ ಬಾರಿಸಿ ಕ್ಯಾಚ್ ನೀಡಿದ ವೈಭವ್ ಸೂರ್ಯವಂಶಿ.

    38 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್​ ಹಾಗೂ 7 ಫೋರ್ ಬಾರಿಸಿದ ವೈಭವ್.

    ಮೊಹ್ಸಿನ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ಯುವ ಎಡಗೈ ದಾಂಡಿಗ.

    14 ಓವರ್​ಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 180/2

    ಕ್ರೀಸ್​ನೊಂದಿಗೆ ಧ್ರುವ್ ಜುರೆಲ್ ಹಾಗೂ ಲುವಾನ್-ಡ್ರೆ ಪ್ರಿಟೋರಿಯಸ್ ಬ್ಯಾಟಿಂಗ್.

  • 19 May 2026 10:42 PM (IST)

    RR vs LSG IPL 2026 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್​

    ಪ್ರಿನ್ಸ್ ಯಾದವ್ ಎಸೆದ 11ನೇ ಓವರ್​ನ 5ನೇ ಮತ್ತು 6ನೇ ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ವೈಭವ್.

    ಈ ಎರಡು ಸಿಕ್ಸರ್​ಗಳೊಂದಿಗೆ ಐಪಿಎಲ್ 2026 ರಲ್ಲಿ 50 ಸಿಕ್ಸ್ ಪೂರೈಸಿದ ವೈಭವ್ ಸೂರ್ಯವಂಶಿ.

    ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ವೈಭವ್.

    11 ಓವರ್​ಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 137/1

  • 19 May 2026 10:35 PM (IST)

    RR vs LSG IPL 2026 Live Score: ಅರ್ಧಶತಕ ಪೂರೈಸಿದ ವೈಭವ್

    23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ ಸೂರ್ಯವಂಶಿ.

    23 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳನ್ನು ಬಾರಿಸಿರುವ ವೈಭವ್.

    10 ಓವರ್​ಗಳ ಮುಕ್ತಾಯದ ವೇಳೆಗೆ 121 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.

    ಕ್ರೀಸ್​ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಬ್ಯಾಟಿಂಗ್.

  • 19 May 2026 10:31 PM (IST)

    RR vs LSG IPL 2026 Live Score: ವೈಭವ್ ಸಿಡಿಲಬ್ಬರ

    ಆಕಾಶ್ ಸಿಂಗ್ ಎಸೆದ 9ನೇ ಓವರ್​ನಲ್ಲಿ 6, 4, 0, 4, 6, 4 ಚಚ್ಚಿದ ವೈಭವ್ ಸೂರ್ಯವಂಶಿ

    ಒಂದೇ ಓವರ್​ನಲ್ಲಿ 24 ರನ್​ ಚಚ್ಚಿದ ವೈಭವ್ ಸೂರ್ಯವಂಶಿ.

    9 ಓವರ್​ಗಳಲ್ಲಿ 110 ರನ್​ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.

    ಕ್ರೀಸ್​ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಬ್ಯಾಟಿಂಗ್.

  • 19 May 2026 10:18 PM (IST)

    RR vs LSG IPL 2026 Live Score: ಆರ್​ಆರ್​ ಮೊದಲ ವಿಕೆಟ್ ಪತನ

    ಆಕಾಶ್ ಸಿಂಗ್ ಎಸೆದ 7ನೇ ಓವರ್​ನ ಮೂರನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್.

    23 ಎಸೆತಗಳಲ್ಲಿ 43 ರನ್​ ಬಾರಿಸಿ ಔಟಾದ ಯಶಸ್ವಿ ಜೈಸ್ವಾಲ್.

    ಕ್ರೀಸ್​ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಬ್ಯಾಟಿಂಗ್.

  • 19 May 2026 10:13 PM (IST)

    RR vs LSG IPL 2026 Live Score: ವೈಭವ್ ಅಬ್ಬರ ಶುರು

    ಪ್ರಿನ್ಸ್ ಯಾದವ್ ಎಸೆದ 6ನೇ ಓವರ್​ನಲ್ಲಿ ಒಂದು ಸಿಕ್ಸ್, 2 ಫೋರ್​ಗಳನ್ನು ಬಾರಿಸಿದ ವೈಭವ್ ಸೂರ್ಯವಂಶಿ.

    ಪವರ್​ಪ್ಲೇ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೋರ್ 71 ರನ್​ಗಳು.

    ಕ್ರೀಸ್​ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.

    221 ರನ್​ಗಳ ಗುರಿ ಬೆನ್ನತ್ತುತ್ತಿರುವ ರಾಜಸ್ಥಾನ್ ರಾಯಲ್ಸ್.

  • 19 May 2026 10:04 PM (IST)

    RR vs LSG IPL 2026 Live Score: ಜೈಸ್ವಾಲ್ ಅಬ್ಬರ

    ಮೊಹ್ಸಿನ್ ಖಾನ್ ಎಸೆದ 4ನೇ ಓವರ್​ನಲ್ಲಿ ಮೂರು ಫೋರ್, ಒಂದು ಸಿಕ್ಸ್​ ಬಾರಿಸಿದ ಯಶಸ್ವಿ ಜೈಸ್ವಾಲ್.

    4ನೇ ಓವರ್​ನಲ್ಲಿ 19 ರನ್ ಚಚ್ಚಿದ ಯಶಸ್ವಿ ಜೈಸ್ವಾಲ್.

    4 ಓವರ್​ಗಳ ಮುಕ್ತಾಯದ ವೇಳೆಗೆ ಆರ್​ಆರ್​ ಸ್ಕೋರ್ 49 ರನ್​ಗಳು.

    ಕ್ರೀಸ್​ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.

  • 19 May 2026 10:00 PM (IST)

    RR vs LSG IPL 2026 Live Score: 3 ಓವರ್​ ಮುಕ್ತಾಯ

    ಮೂರನೇ ಓವರ್​ನಲ್ಲಿ ಕೇವಲ 5 ರನ್ ಮಾತ್ರ ನೀಡಿದ ಮಯಾಂಕ್ ಯಾದವ್.

    3 ಓವರ್​ಗಳಲ್ಲಿ 30 ರನ್ ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್​.

    ಕ್ರೀಸ್​ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.

  • 19 May 2026 09:48 PM (IST)

    RR vs LSG IPL 2026 Live Score: ರಾಯಲ್ಸ್ ಭರ್ಜರಿ ಆರಂಭ

    ಆಕಾಶ್ ಸಿಂಗ್ ಎಸೆದ ಮೊದಲ ಓವರ್​ನ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್.

    4ನೇ ಎಸೆತದಲ್ಲಿ ವೈಡ್ ಎಸೆದ ಆಕಾಶ್… ಚೆಂಡು ಬೌಂಡರಿ ಲೈನ್ ದಾಟಿ ಮತ್ತೊಂದು ಫೋರ್.

    ಕೊನೆಯ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿದ ಜೈಸ್ವಾಲ್.

    ಮೊದಲ ಓವರ್​ನಲ್ಲಿ 23 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.

    ಕ್ರೀಸ್​ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಬ್ಯಾಟಿಂಗ್.

    ರಾಜಸ್ಥಾನ್ ರಾಯಲ್ಸ್​​ಗೆ 221 ರನ್​ಗಳ ಗುರಿ ನೀಡಿರುವ ಲಕ್ನೋ ಸೂಪರ್ ಜೈಂಟ್ಸ್.

  • 19 May 2026 09:24 PM (IST)

    RR vs LSG IPL 2026 Live Score: ಲಕ್ನೋ ಸೂಪರ್ ಜೈಂಟ್ಸ್ ಇನಿಂಗ್ಸ್ ಅಂತ್ಯ

    • 20 ಓವರ್​ಗಳಲ್ಲಿ 220 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್
    • 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್
    • ಲಕ್ನೋ ಸೂಪರ್ ಜೈಂಟ್ಸ್ ಪರ 96 ರನ್ ಕಲೆಹಾಕಿದ ಮಿಚೆಲ್ ಮಾರ್ಷ್
    • ರಾಜಸ್ಥಾನ್ ರಾಯಲ್ಸ್ ತಂ ಡಕ್ಕೆ 221 ರನ್​ಗಳ ಕಠಿಣ ಗುರಿ ನೀಡಿದ ಎಲ್​ಎಸ್​ಜಿ
  • 19 May 2026 09:08 PM (IST)

    RR vs LSG IPL 2026 Live Score: 200 ರನ್ ಪೂರೈಸಿದ ಲಕ್ನೋ

    17.5 ಓವರ್​ಗಳಲ್ಲಿ 200 ರನ್ ಪೂರೈಸಿದ ಲಕ್ನೋ ಸೂಪರ್ ಜೈಂಟ್ಸ್.

    ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್.

    18 ಓವರ್​ಗಳ ಮುಕ್ತಾಯದ ವೇಳೆಗೆ ಲಕ್ನೋ ಸೂಪರ್ ಜೈಂಟ್ಸ್ ಸ್ಕೋರ್ 204/2

    ಕೊನೆಯ ಎರಡು ಓವರ್​ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಎಲ್​ಎಸ್​ಜಿ.

  • 19 May 2026 08:55 PM (IST)

    RR vs LSG IPL 2026 Live Score: ಪಂತ್ ಪವರ್​

    ಬ್ರಿಜೇಶ್ ಶರ್ಮಾ ಎಸೆದ 16ನೇ ಓವರ್​ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಷಭ್ ಪಂತ್.

    16 ಓವರ್​ಗಳ ಮುಕ್ತಾಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಕೋರ್ 182/2

    ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್.

  • 19 May 2026 08:39 PM (IST)

    RR vs LSG IPL 2026 Live Score: ಲಕ್ನೋ 2ನೇ ವಿಕೆಟ್ ಪತನ

    ಯಶ್ ರಾಜ್ ಪೂಂಜಾ ಎಸೆದ 13ನೇ ಓವರ್​ನ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ನಿಕೋಲಸ್ ಪೂರನ್.

    11 ಎಸೆತಗಳಲ್ಲಿ ಕೇವಲ 16 ರನ್​ಗಳಿಸಿ ಔಟಾದ ಪೂರನ್.

    ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್.

  • 19 May 2026 08:27 PM (IST)

    RR vs LSG IPL 2026 Live Score: 10 ಓವರ್​ಗಳು ಮುಕ್ತಾಯ

    • 10 ಓವರ್​ಗಳಲ್ಲಿ 127 ರನ್ ಕಲೆಹಾಕಿರುವ ಲಕ್ನೋ ಸೂಪರ್ ಜೈಂಟ್ಸ್.
    • ಮೊದಲಾರ್ಧದಲ್ಲಿ ಕೇವಲ ಒಂದು ವಿಕೆಟ್ ಪಡೆದಿರುವ ರಾಜಸ್ಥಾನ್ ರಾಯಲ್ಸ್.
    • ಮೊದಲ 10 ಓವರ್​ಗಳಲ್ಲಿ 12.70 ಸರಾಸರಿಯಲ್ಲಿ ರನ್ ಕಲೆಹಾಕಿರುವ ಎಲ್​ಎಸ್​ಜಿ.
    • ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ಬ್ಯಾಟಿಂಗ್.

    ಔಟಾದ ಬ್ಯಾಟರ್:

    • ಜೋಶ್ ಇಂಗ್ಲಿಸ್ (60)
  • 19 May 2026 08:16 PM (IST)

    RR vs LSG IPL 2026 Live Score: ಕ್ಲೀನ್ ಬೌಲ್ಡ್​

    ಸ್ಪಿನ್ನರ್ ಯಶ್ ರಾಜ್ ಪೂಂಜಾ ಎಸೆದ 9ನೇ ಓವರ್​ನ 2ನೇ ಎಸೆತದಲ್ಲಿ ಜೋಶ್ ಇಂಗ್ಲಿಸ್ ಕ್ಲೀನ್ ಬೌಲ್ಡ್​.

    29 ಎಸೆತಗಳಲ್ಲಿ 60 ರನ್ ಸಿಡಿಸಿ ಪೆವಿಲಿಯನ್​ಗೆ ಮರಳಿದ ಜೋಶ್ ಇಂಗ್ಲಿಸ್.

    109 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡ ಲಕ್ನೋ ಸೂಪರ್ ಜೈಂಟ್ಸ್.

    ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ಬ್ಯಾಟಿಂಗ್.

  • 19 May 2026 08:06 PM (IST)

    RR vs LSG IPL 2026 Live Score: ಜೋಶ್ ಫಿಫ್ಟಿ

    ಯಶ್ ರಾಜ್ ಎಸೆದ 7ನೇ ಓವರ್​ನ ಮೊದಲ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿದ ಜೋಶ್ ಇಂಗ್ಲಿಸ್.

    ಈ ಫೋರ್​ನೊಂದಿಗೆ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜೋಶ್ ಇಂಗ್ಲಿಸ್.

    7 ಓವರ್​ಗಳಲ್ಲಿ 95 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್​.

    ಕ್ರೀಸ್​ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.

  • 19 May 2026 07:59 PM (IST)

    RR vs LSG IPL 2026 Live Score: ಪವರ್​ಪ್ಲೇ ಮುಕ್ತಾಯ

    • ಪವರ್​ಪ್ಲೇನಲ್ಲಿ ಬರೋಬ್ಬರಿ 83 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್.
    • ಮೊದಲ 6 ಓವರ್​ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ವಿಫಲವಾದ ರಾಜಸ್ಥಾನ್ ರಾಯಲ್ಸ್​.
    • ಕ್ರೀಸ್​ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
    • ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ರಾಜಸ್ಥಾನ್ ರಾಯಲ್ಸ್​
  • 19 May 2026 07:55 PM (IST)

    RR vs LSG IPL 2026 Live Score: ಭರ್ಜರಿ ಬ್ಯಾಟಿಂಗ್

    ಬ್ರಿಜೇಶ್ ಶರ್ಮಾ ಎಸೆದ 5ನೇ ಓವರ್​ನ 4ನೇ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಿಚೆಲ್ ಮಾರ್ಷ್.

    5ನೇ ಓವರ್​ನಲ್ಲಿ 14 ರನ್​ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕರು.

    5 ಓವರ್​ಗಳಲ್ಲಿ 68 ರನ್ ಗಳಿಸಿದ ಲಕ್ನೋ ಸೂಪರ್ ಜೈಂಟ್ಸ್.

    ಕ್ರೀಸ್​ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.

  • 19 May 2026 07:50 PM (IST)

    RR vs LSG IPL 2026 Live Score: ಅರ್ಧಶತಕ ಪೂರೈಸಿದ ಲಕ್ನೋ

    3.3 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಲಕ್ನೋ ಸೂಪರ್ ಜೈಂಟ್ಸ್​.

    ಸಂದೀಪ್ ಶರ್ಮಾ ಎಸೆದ 4ನೇ ಓವರ್​ನಲ್ಲಿ 16 ರನ್ ಚಚ್ಚಿದ ಲಕ್ನೋ ಬ್ಯಾಟರ್ಸ್​.

    ಕ್ರೀಸ್​ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.

    4 ಓವರ್​ಗಳ ಮುಕ್ತಾಯದ ವೇಳೆಗೆ ಲಕ್ನೋ ಸೂಪರ್ ಜೈಂಟ್ಸ್ ಸ್ಕೋರ್ 54/0

  • 19 May 2026 07:40 PM (IST)

    RR vs LSG IPL 2026 Live Score: ಭರ್ಜರಿ ಸಿಕ್ಸರ್

    ಸುಶಾಂತ್ ಮಿಶ್ರಾ ಎಸೆದ 2ನೇ ಓವರ್​ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜೋಶ್ ಇಂಗ್ಲಿಸ್.

    5ನೇ ಎಸೆತದಲ್ಲಿ ಆಫ್​ ಸೈಡ್​ನತ್ತ ಇಂಗ್ಲಿಸ್​​ ಬ್ಯಾಟ್​ನಿಂದ ಮತ್ತೊಂದು ಫೋರ್​.

    ಕ್ರೀಸ್​ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.

    2 ಓವರ್​ಗಳ ಮುಕ್ತಾಯದ ವೇಳೆಗೆ ಲಕ್ನೋ ಸೂಪರ್ ಜೈಂಟ್ಸ್ ಸ್ಕೋರ್ 25/0

  • 19 May 2026 07:35 PM (IST)

    RR vs LSG IPL 2026 Live Score: ಮೊದಲ ಓವರ್​

    ಜೋಫ್ರಾ ಆರ್ಚರ್ ಎಸೆದ ಮೊದಲ ಓವರ್​ನ 5ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ಮಿಚೆಲ್ ಮಾರ್ಷ್.

    6ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಾರ್ಷ್.

    ಮೊದಲ ಓವರ್​ನಲ್ಲಿ 12 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್.

    ಕ್ರೀಸ್​ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.

  • 19 May 2026 07:17 PM (IST)

    RR vs LSG IPL 2026 Live Score: ಲಕ್ನೋ ಸೂಪರ್ ಜೈಂಟ್ಸ್​ ಪ್ಲೇಯಿಂಗ್ 11

    ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ಅಬ್ದುಲ್ ಸಮದ್, ಶಹಬಾಝ್ ಅಹ್ಮದ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಆಕಾಶ್ ಮಹಾರಾಜ್ ಸಿಂಗ್, ಪ್ರಿನ್ಸ್ ಯಾದವ್.

  • 19 May 2026 07:16 PM (IST)

    RR vs LSG IPL 2026 Live Score: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11

    ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್ (ನಾಯಕ), ಲುವಾನ್-ಡ್ರೆ ಪ್ರಿಟೋರಿಯಸ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಡೊನೊವನ್ ಫೆರೇರಾ, ಶುಭಂ ದುಬೆ, ದಸುನ್ ಶಾನಕ, ಜೋಫ್ರಾ ಆರ್ಚರ್, ಸುಶಾಂತ್ ಮಿಶ್ರಾ, ಸಂದೀಪ್ ಶರ್ಮಾ, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.

  • 19 May 2026 07:03 PM (IST)

    RR vs LSG IPL 2026 Live Score: ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಹಂಗಾಮಿ ನಾಯಕ ಯಶಸ್ವಿ ಜೈಸ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೊದಲು ಬ್ಯಾಟ್ ಮಾಡಲಿದೆ.

  • 19 May 2026 06:57 PM (IST)

    RR vs LSG IPL 2026 Live Score: ಹೆಡ್ ಟು ಹೆಡ್

    ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ 5 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಲಕ್ನೋ ಸೂಪರ್ ಜೈಂಟ್ಸ್ 2 ಬಾರಿ ಗೆಲುವು ದಾಖಲಿಸಿದೆ.

  • 19 May 2026 06:40 PM (IST)

    RR vs LSG IPL 2026 Live Score: ರಾಯಲ್ಸ್​ vs ಸೂಪರ್ ಜೈಂಟ್ಸ್

    • ರಾಜಸ್ಥಾನ್ ರಾಯಲ್ಸ್​ vs ಲಕ್ನೋ ಸೂಪರ್ ಜೈಂಟ್ಸ್
    • ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಪಂದ್ಯ.
    • ರಾಜಸ್ಥಾನ್ ರಾಯಲ್ಸ್ ತಂಡದ ತವರು ಮೈದಾನದಲ್ಲಿ ನಡೆಯಲಿರುವ ಮ್ಯಾಚ್.
    • ಟಾಸ್ ಪ್ರಕ್ರಿಯೆ ರಾತ್ರಿ 7 ಗಂಟೆಗೆ
    • ಪಂದ್ಯ ಶುರು ರಾತ್ರಿ 7.30 ರಿಂದ

Published On - May 19,2026 6:38 PM

Follow Us