AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್‌ಗೆ ಡಬಲ್ ಶಾಕ್‌; ಇಬ್ಬರು ವೇಗಿಗಳು ಔಟ್

ಭಾರತ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಬ್ಲೇರ್ ಟಿಕ್ನರ್, ಲಾಕಿ ಫರ್ಗುಸನ್ ಗಾಯದಿಂದ ಸರಣಿಯಿಂದ ಹೊರಬಿದ್ದಿದ್ದರೆ, ಮ್ಯಾಟ್ ಹೆನ್ರಿ ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಕ್ರಿಸ್ಟಿಯನ್ ಕ್ಲಾರ್ಕ್ ತಂಡ ಸೇರಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಪ್ರಮುಖ ಆಟಗಾರರು ಅಂತಿಮ ಏಕದಿನ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಕೀವೀಸ್ ತಂಡವು ಸರಣಿಯ ಉಳಿದ ಪಂದ್ಯಗಳಿಗೆ ಸವಾಲು ಎದುರಿಸುತ್ತಿದೆ.

ನ್ಯೂಜಿಲೆಂಡ್‌ಗೆ ಡಬಲ್ ಶಾಕ್‌; ಇಬ್ಬರು ವೇಗಿಗಳು ಔಟ್
ನ್ಯೂಜಿಲೆಂಡ್ ತಂಡ
ಪೃಥ್ವಿಶಂಕರ
|

Updated on:Nov 09, 2026 | 3:10 PM

Share

ಭಾರತ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಏಕದಿನ ಸರಣಿಯ ಉಳಿದ ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡದಲ್ಲಿ ಮತ್ತೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವೇಗದ ಬೌಲರ್‌ಗಳಾದ ಬ್ಲೇರ್ ಟಿಕ್ನರ್ ಮತ್ತು ಲಾಕಿ ಫರ್ಗ್ಯುಸನ್ ಸರಣಿಯಿಂದ ಹೊರಬಿದ್ದಿದ್ದಾರೆ. ಇನ್ನು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮ್ಯಾಟ್ ಹೆನ್ರಿ ಮೂರನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಬ್ಲೇರ್ ಟಿಕ್ನರ್‌ಗೆ ಚೆಂಡು ಬಡಿದಿತ್ತು. ಹೀಗಾಗಿ ಅವರು ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರ ಬದಲಿಗೆ ನಾರ್ದರ್ನ್ ಡಿಸ್ಟ್ರಿಕ್ಟ್ಸ್ ತಂಡದ ವೇಗದ ಬೌಲರ್ ಕ್ರಿಸ್ಟಿಯನ್ ಕ್ಲಾರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಏಳು ದಿನಗಳ ಕಡ್ಡಾಯ ವಿಶ್ರಾಂತಿ

ಟಿಕ್ನರ್‌ಗೆ ಯಾವುದೇ ಕನ್ಕಶನ್ ಇಲ್ಲ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ, ಎರಡನೇ ಪಂದ್ಯದಲ್ಲಿ ಅವರ ಬದಲಿಗೆ ಮ್ಯಾಟ್ ಫಿಶರ್ ಆಡಿದ್ದರಿಂದ ಐಸಿಸಿ ನಿಯಮದ ಪ್ರಕಾರ ಏಳು ದಿನಗಳ ಕಡ್ಡಾಯ ವಿಶ್ರಾಂತಿ ಅವಧಿಯನ್ನು ಪೂರ್ಣಗೊಳಿಸಬೇಕಿದೆ. ಈ ಅವಧಿ ಮುಗಿಯುವವರೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವಂತಿಲ್ಲ. ಈ ಕುರಿತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಟಿಕ್ನರ್‌ಗೆ ಬೌಲಿಂಗ್ ವಿಭಾಗದಲ್ಲಿ ಪರ್ಯಾಯ ಆಟಗಾರನಾಗಿ ಕ್ರಿಸ್ಟಿಯನ್ ಕ್ಲಾರ್ಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.

ಇನ್ನು ಲಾಕಿ ಫರ್ಗ್ಯುಸನ್ ಕೂಡ ಉಳಿದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಟಿ20 ಸರಣಿಯ ವೇಳೆ ಅವರ ಬಲಗಾಲಿನಲ್ಲಿ ಸಣ್ಣ ಪ್ರಮಾಣದ ಗಾಯವಾಗಿತ್ತು. ಇದರಿಂದ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ನಾಲ್ಕನೇ ಮತ್ತು ಐದನೇ ಏಕದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಮ್ಯಾಟ್ ಹೆನ್ರಿ ಕೂಡ ಅಲಭ್ಯ

ಮತ್ತೊಂದೆಡೆ, ಅಭ್ಯಾಸದ ವೇಳೆ ಸಹ ಆಟಗಾರ ಡೆವೊನ್ ಕಾನ್ವೇ ಅವರೊಂದಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಮ್ಯಾಟ್ ಹೆನ್ರಿ ಕೂಡ ಮೂರನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರು ನಾಲ್ಕನೇ ಪಂದ್ಯಕ್ಕೆ ತಂಡಕ್ಕೆ ಮರಳುವ ಗುರಿ ಹೊಂದಿದ್ದಾರೆ. ಆರಂಭದಲ್ಲಿ ಆಕ್ಲೆಂಡ್‌ನಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಕನ್ಕಶನ್ ಇಲ್ಲ ಎಂದು ತಿಳಿಸಲಾಗಿತ್ತು. ಆದರೆ, ವೆಲ್ಲಿಂಗ್ಟನ್‌ನಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿದ ಬಳಿಕ ನಾಲ್ಕನೇ ಪಂದ್ಯಕ್ಕೆ ಮರಳುವಂತೆ ಸಲಹೆ ನೀಡಲಾಗಿದೆ. ಮ್ಯಾಟ್ ಹೆನ್ರಿ ಮತ್ತು ಕೈಲ್ ಜೇಮಿಸನ್ ಅವರು ಮೂರನೇ ಏಕದಿನ ಪಂದ್ಯದ ಬಳಿಕ ಟೆಸ್ಟ್ ತಂಡದ ಶಿಬಿರಕ್ಕೆ ತೆರಳಬೇಕಿತ್ತು. ಆದರೆ, ಇದೀಗ ನಾಲ್ಕನೇ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡದೊಂದಿಗೆ ಉಳಿಯಲಿದ್ದಾರೆ.

ಐವರು ಅಂತಿಮ ಪಂದ್ಯಕ್ಕೆ ಅಲಭ್ಯ

ಐದನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ನ್ಯೂಜಿಲೆಂಡ್ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಆದರೆ, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್ ಮತ್ತು ನಾಥನ್ ಸ್ಮಿತ್ ಬುಧವಾರ ಹ್ಯಾಮಿಲ್ಟನ್‌ನಿಂದ ವೆಲ್ಲಿಂಗ್ಟನ್‌ಗೆ ತೆರಳಿ ಭಾರತದ ವಿರುದ್ಧದ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಗೆ ಸಿದ್ಧತೆ ಆರಂಭಿಸಲಿದ್ದಾರೆ. ಹೀಗಾಗಿ ಈ ಐವರು ಅಂತಿಮ ಏಕದಿನ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಐದನೇ ಪಂದ್ಯಕ್ಕೂ ಮುನ್ನ ತಂಡಕ್ಕೆ ಇಬ್ಬರು ಹೊಸ ಆಟಗಾರರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಭಾರತ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಭಾರತ-ಕಿವೀಸ್ 3ನೇ ಏಕದಿನ ಪಂದ್ಯಕ್ಕೆ ವರುಣನ ಕಾಟ; ಟಾಸ್ ನಡೆಯುವುದೂ ಅನುಮಾನ

3ನೇ ಏಕದಿನ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಶರ್, ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ನಾಥನ್ ಸ್ಮಿತ್ ಮತ್ತು ವಿಲ್ ಯಂಗ್.

4ನೇ ಏಕದಿನ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಶರ್, ಡೀನ್ ಫಾಕ್ಸ್‌ಕ್ರಾಫ್ಟ್, ಮಿಚ್ ಹೇ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಟಿಮ್ ಸೀಫರ್ಟ್ ಮತ್ತು ವಿಲ್ ಯಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Mon, 9 November 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು