AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2024: ರಣಜಿ ಟ್ರೋಫಿ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ

Ranji Trophy 2024 Schedule: ರಣಜಿ ಟ್ರೋಫಿ 2024 ರ ಪಂದ್ಯಗಳು ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಕರ್ನಾಟಕ ತಂಡವನ್ನು 127 ರನ್​ ಗಳಿಂದ ಮಣಿಸಿ ವಿದರ್ಭ ತಂಡವು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಹಾಗೆಯೇ ಬರೋಡಾ ವಿರುದ್ಧ ಡ್ರಾ ಸಾಧಿಸಿರುವ ಮುಂಬೈ ತಂಡವು ಸೆಮಿಫೈನಲ್​ಗೆ ಏರುವಲ್ಲಿ ಯಶಸ್ವಿಯಾಗಿದೆ.

Ranji Trophy 2024: ರಣಜಿ ಟ್ರೋಫಿ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ
Ranji Trophy 2024
TV9 Web
| Edited By: |

Updated on: Feb 28, 2024 | 8:06 AM

Share

ದೇಶೀಯ ಅಂಗಳದ ಟೆಸ್ಟ್​ ಪಂದ್ಯಾವಳಿ ರಣಜಿ ಟ್ರೋಫಿ ಟೂರ್ನಿಯು (Ranji Trophy 2024) ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 32 ತಂಡಗಳೊಂದಿಗೆ ಶುರುವಾದ ಟೂರ್ನಿಯಿಂದ ಈಗಾಗಲೇ 28 ತಂಡಗಳು ಹೊರಬಿದ್ದಿದೆ. ಇದೀಗ ನಾಲ್ಕು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮಾರ್ಚ್ 2 ರಿಂದ ಸೆಮಿಫೈನಲ್ ಪಂದ್ಯಗಳು ಶುರುವಾಗಲಿದೆ.

ಸೆಮಿಫೈನಲ್​ನಲ್ಲಿ ಕಣಕ್ಕಿಳಿಯುವ ತಂಡಗಳು:

  • ವಿದರ್ಭ
  • ತಮಿಳುನಾಡು
  • ಮುಂಬೈ
  • ಮಧ್ಯ ಪ್ರದೇಶ್

ಸೆಮಿಫೈನಲ್ ಹಾದಿ:

  • ಮೊದಲ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 127 ರನ್​ಗಳಿಂದ ಮಣಿಸಿ ವಿದರ್ಭ ತಂಡವು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.
  • ಮುಂಬೈ ಮತ್ತು ಬರೋಡಾ ನಡುವಣ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದಾಗ್ಯೂ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಪಡೆದುಕೊಂಡಿದ್ದ ಮುಂಬೈ ತಂಡವು ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
  • ಮೂರನೇ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 33 ರನ್​ಗಳಿಂದ ಮಣಿಸಿ ತಮಿಳುನಾಡು ತಂಡವು ಸೆಮಿಫೈನಲ್​​ಗೇರಿದೆ.
  • ಆಂಧ್ರ ಪ್ರದೇಶ ವಿರುದ್ಧದ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 4 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಮಧ್ಯ ಪ್ರದೇಶ್ ತಂಡವು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.

ಸೆಮಿಫೈನಲ್ ಮುಖಾಮುಖಿ:

  • ಮಾರ್ಚ್ 2 ರಿಂದ 6: ವಿದರ್ಭ vs ಮಧ್ಯ ಪ್ರದೇಶ್ (ಮೊದಲ ಸೆಮಿಫೈನಲ್)
  • ಮಾರ್ಚ್ 2 ರಿಂದ 6: ತಮಿಳುನಾಡು vs ಮುಂಬೈ (ಎರಡನೇ ಸೆಮಿಫೈನಲ್)
  • ಮಾರ್ಚ್ 10 ರಿಂದ 14: ಫೈನಲ್ ಪಂದ್ಯ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಎಲ್ಲಾ ಪಂದ್ಯಗಳನ್ನು ಜಿಯೋ ಸಿನಿಮಾ ಆ್ಯಪ್ ಮತ್ತು ಸ್ಪೋರ್ಟ್ಸ್​ 18 ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು.

4 ತಂಡಗಳು ಹೀಗಿವೆ:

ವಿದರ್ಭ ತಂಡ: ಶುಭಂ ದುಬೆ , ಫೈಜ್ ಫಜಲ್ , ಕರುಣ್ ನಾಯರ್ , ಧ್ರುವ ಶೋರೆ , ದರ್ಶನ್ ನಲ್ಕಂಡೆ , ಅಕ್ಷಯ್ ವಾಖರೆ , ಉಮೇಶ್ ಯಾದವ್ , ಯಶ್ ಠಾಕೂರ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಹರ್ಷ್ ದುಬೆ , ಲಲಿತ್ ಯಾಶ್ ಯಹದ್ ಕಾಳೆ , ಆದಿತ್ಯ ಠಾಕರೆ , ಸಿದ್ಧೇಶ್ ವಾಥ್ , ರಜನೀಶ್ ಗುರ್ಬಾನಿ , ಜಿತೇಶ್ ಶರ್ಮಾ , ಅಥರ್ವ ತೈಡೆ.

ಮಧ್ಯ ಪ್ರದೇಶ್ ತಂಡ: ವೆಂಕಟೇಶ್ ಅಯ್ಯರ್ , ಶುಭಂ ಎಸ್ ಶರ್ಮಾ , ಅವೇಶ್ ಖಾನ್ , ಕುಮಾರ್ ಕಾರ್ತಿಕೇಯ , ಕುಲವಂತ್ ಖೇಜ್ರೋಲಿಯಾ , ಆದಿತ್ಯ ಶ್ರೀವಾಸ್ತವ (ನಾಯಕ) , ಅನುಭವ್ ಅಗರ್ವಾಲ್ , ಅಮರ್ಜೀತ್ ಸಿಂಗ್ , ರಿಷಭ್ ಚೌಹಾನ್ , ಯಶ್ ದುಬೆ , ಹರ್ಷ್ ಮನ್ ಹಿರ್ ಮಾನ್ , ಹರ್ಶ್ ಮಾನ್ ಹಿರ್ವಾ , ಹರ್ಶ್ ಮಾನ್ ಹಿರ್ವಾಲಿ ಪಾಂಡೆ , ಸುಮಿತ್ ಕುಶ್ವಾ.

ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ) , ಸುವೇದ್ ಪಾರ್ಕರ್ , ಶಿವಂ ದುಬೆ , ತನುಷ್ ಕೋಟ್ಯಾನ್ , ಶಮ್ಸ್ ಮುಲಾನಿ , ಮೋಹಿತ್ ಅವಸ್ತಿ , ತುಷಾರ್ ದೇಶಪಾಂಡೆ , ಧವಳ್ ಕುಲಕರ್ಣಿ , ಅಥರ್ವ ಅಂಕೋಲೇಕರ್ , ಜಯ್ ಗೋಕುಲ್ ಬಿಸ್ತಾ , ಪ್ರಸಾದ್ ತಮೋರ್ , ಪ್ರಸಾದ್ ಲ್ ಡಿಯಾಸ್ ಅಯ್ಯರ್ , ಸಿಲ್ವೆಸ್ಟರ್ ಡಿಸೋಜಾ , ಸೂರ್ಯಾಂಶ್ ಶೆಡ್ಗೆ , ಪೃಥ್ವಿ ಶಾ , ಶಾರ್ದೂಲ್ ಠಾಕೂರ್ , ಅಮೋಘ್ ಭಟ್ಕಳ್ , ಮುಶೀರ್ ಖಾನ್.

ಇದನ್ನೂ ಓದಿ: IPL 2024: RCB ಗೆದ್ದರೆ ಹೊಸ ಇತಿಹಾಸ

ತಮಿಳುನಾಡು ತಂಡ: ಸಾಯಿ ಸುದರ್ಶನ್ , ಬಿ ಸಚಿನ್ , ವಿಜಯ್ ಶಂಕರ್ , ಪ್ರದೋಶ್ ಪೌಲ್ , ಎನ್ ಜಗದೀಸನ್ , ಸುರೇಶ್ ಲೋಕೇಶ್ವರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ (ನಾಯಕ) , ಎಸ್ ಅಜಿತ್ ರಾಮ್ , ಎಂ ಮೊಹಮ್ಮದ್ , ಸಂದೀಪ್ ವಾರಿಯರ್ , ಟಿ ನಟರಾಜನ್ , ತ್ರಿಲೋಕ್ ನಾಗ್ , ಬಾಬಾ ಇಂದ್ರಜಿತ್ , ಮೊಹಮ್ಮದ್ ಅಜಿತ್ ಕುಮಾರ್ , ಮೊಹಮ್ಮದ್ ಅಜಿತ್ ಕುಮಾರ್ ಅಜಯ್ ಕೃಷ್ಣ , ವಿಮಲ್ ಕುಮಾರ್ , ಕುಲದೀಪ್ ಸೇನ್ , ಆರ್ ಎಸ್ ಮೋಕಿತ್ ಹರಿಹರನ್.

Follow Us
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!