AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB VS MI Highlights IPL 2023: ಕೊಹ್ಲಿ- ಫಾಫ್ ಶತಕದ ಜೊತೆಯಾಟ; ಆರ್​ಸಿಬಿಗೆ ಗೆಲುವಿನ ಶುಭಾರಂಭ

Royal Challengers Bangalore team vs Mumbai Indians Highlights in Kannada: ಮುಂಬೈ ಇಂಡಿಯನ್ಸ್ ತಂಡವನ್ನು ಬರೋಬ್ಬರಿ 8 ವಿಕೆಟ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

RCB VS MI Highlights IPL 2023: ಕೊಹ್ಲಿ- ಫಾಫ್ ಶತಕದ ಜೊತೆಯಾಟ; ಆರ್​ಸಿಬಿಗೆ ಗೆಲುವಿನ ಶುಭಾರಂಭ
ಆರ್​ಸಿಬಿ- ಮುಂಬೈ ಮುಖಾಮುಖಿ
ಪೃಥ್ವಿಶಂಕರ
|

Updated on:Apr 02, 2023 | 11:24 PM

Share

ಡಬಲ್ ಹೆಡರ್ ದಿನವಾದ ಇಂದು ನಡೆದ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬರೋಬ್ಬರಿ 8 ವಿಕೆಟ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ತಂಡದ ಪರ 148 ರನ್​ಗಳ ಶತಕದ ಜೊತೆಯಾಟ ನಡೆಸಿದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಆರ್​ಸಿಬಿಯ ದಾಖಲೆಯ ಗೆಲುವಿನ ಹೀರೋಗಳಾದರು. ಮೂರು ವರ್ಷಗಳ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಪಂದ್ಯ ಆರ್​ಸಿಬಿ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ, ಆರ್​ಸಿಬಿ ಬೌಲರ್​ಗಳ ದಾಳಿಗೆ ನಲುಗಿತು. ಆದರೆ ಒಂದು ತುದಿಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ ನೆರವಿನಿಂದಾಗಿ 20 ಓವರ್​ಗಳಲ್ಲಿ 172 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಆರಂಭಿಕರು ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿ, ಮುಂಬೈ ತಂಡವನ್ನು ಪಂದ್ಯದಿಂದಲೇ ಹೊರಹಾಕಿದರು.

LIVE NEWS & UPDATES

The liveblog has ended.
  • 02 Apr 2023 11:04 PM (IST)

    ಗೆಲುವಿನ ರನ್ ಬಾರಿಸಿದ ಕೊಹ್ಲಿ

    17ನೇ ಓವರ್​ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಕೊಹ್ಲಿ, 2ನೇ ಎಸೆತವನ್ನು ಲಾಂಗ್​ ಆನ್​ನಲ್ಲಿ ಸಿಕ್ಸರ್​ಗಟ್ಟುವ ಮೂಲಕ ಆರ್​ಸಿಬಿಗೆ 8 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.

  • 02 Apr 2023 11:01 PM (IST)

    ಮ್ಯಾಕ್ಸ್​ವೆಲ್ 2 ಸಿಕ್ಸ್

    ಕಾರ್ತಿಕ್ ವಿಕೆಟ್ ಬಳಿಕ ಬಂದ ಮ್ಯಾಕ್ಸ್​ವೆಲ್, ಗ್ರೀನ್ ಅವರ 16ನೇ ಓವರ್​ನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್​ಗಟ್ಟಿದರು.

  • 02 Apr 2023 10:58 PM (IST)

    ಶೂನ್ಯಕ್ಕೆ ಕಾರ್ತಿಕ್ ಔಟ್

    ನಾಯಕ ಫಾಫ್ ವಿಕೆಟ್ ಬಳಿಕ ಬಂದಿದ್ದ ದಿನೇಶ್ ಕಾರ್ತಿಕ್ ಕೇವಲ 3 ಎಸೆತಗಳನ್ನು ಎದುರಿಸಿ ಡೀಪ್ ಸ್ಕ್ವೈರ್​ನಲ್ಲಿ ಕ್ಯಾಚಿತ್ತು ಔಟಾದರು.

  • 02 Apr 2023 10:53 PM (IST)

    ಫಾಫ್ ಔಟ್

    148 ರನ್​ಗಳ ಜೊತೆಯಾಟ ಅಂತ್ಯಗೊಂಡಿದೆ. 73 ರನ್ ಬಾರಿಸಿದ್ದ ನಾಯಕ ಫಾಫ್ 15ನೇ ಓವರ್​ನಲ್ಲಿ ಕ್ಯಾಚಿತ್ ಔಟಾದರು.

  • 02 Apr 2023 10:52 PM (IST)

    ಕೊಹ್ಲಿ ಸಿಕ್ಸ್

    ಅರ್ಷದ್ 15ನೇ ಓವರ್​ನಲ್ಲಿ ಕಿಂಗ್ ಕೊಹ್ಲಿ ಮಿಡ್ ವಿಕೆಟ್​ ಮೇಲೆ ಭರ್ಜರಿ ಸಿಕ್ಸರ್ ಹೊಡೆದರು.

  • 02 Apr 2023 10:46 PM (IST)

    ಕೊಹ್ಲಿ ಸಿಕ್ಸರ್, ಆರ್​ಸಿಬಿ 139/0

    ಆರ್ಚರ್ ಎಸೆದ 14ನೇ ಓವರ್​ನಲ್ಲಿ ಕಿಂಗ್ ಕೊಹ್ಲಿ, ಫೈನ್ ಲೆಗ್​ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಓವರ್​ನಲ್ಲಿ ಒಟ್ಟು 10 ರನ್ ಬಂದವು.

  • 02 Apr 2023 10:42 PM (IST)

    ಆರಂಭಿಕರ ಅಬ್ಬರ

    13ನೇ ಓವರ್​ನಲ್ಲಿ ಉಗ್ರರೂಪ ತಾಳಿದ ಕೊಹ್ಲಿ ಹಾಗೂ ಫಾಫ್ ಈ ಓವರ್​ನಲ್ಲಿ 16 ರನ್ ಕಲೆಹಾಕಿದರು. ಕೊಹ್ಲಿ 1 ಬೌಂಡರಿ ಬಾರಿಸಿದರೆ, ಫಾಫ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.

  • 02 Apr 2023 10:37 PM (IST)

    ಕೊಹ್ಲಿ 50ನೇ ಅರ್ಧಶತಕ

    12ನೇ ಓವರ್​ನಲ್ಲಿ ಕೇವಲ 7 ರನ್​ಗಳು ಬಂದವು ಈ ಓವರ್​ನಲ್ಲಿ 3 ಡಬಲ್ ರನ್ ಕದ್ದ ಕೊಹ್ಲಿ ತಮ್ಮ 50ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು.

  • 02 Apr 2023 10:27 PM (IST)

    ಫಾಫ್ ಅರ್ಧಶತಕ

    ನಾಯಕ ಫಾಫ್ ಕೇವಲ 29 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. 10ನೇ ಓವರ್ ಎಸೆದ ಹೃತಿಕ್ ಅವರ ಓವರ್​ನಲ್ಲಿ ಫಾಫ್ 3 ಮತ್ತು 4ನೇ ಎಸೆತವನ್ನು ಸಿಕ್ಸರ್ಗಟ್ಟಿದರು.

  • 02 Apr 2023 10:18 PM (IST)

    ಫಾಫ್ ಬೌಂಡರಿ, ಆರ್​ಸಿಬಿ 75/0

    8ನೇ ಓವರ್ ಎಸೆದ ಗ್ರೀನ್​ಗೆ ಫಾಫ್ ಎರಡು ಬೌಂಡರಿ ಬಾರಿಸಿದರು. ಎರಡೂ ಬೌಂಡರಿಗಳು ಕೂಡ ಡೀಪ್ ಎಕ್ಸ್ಟ್ರಾ ಕವರ್​ನಲ್ಲಿಯೇ ಬಂದವು. ಹಾಗೆಯೇ ಕೊನೆಯ ಎಸೆತದಲ್ಲಿ ಸಿಕ್ಸರ್ ಕೂಡ ಬಂತು.

  • 02 Apr 2023 10:10 PM (IST)

    ಪವರ್ ಪ್ಲೇ ಅಂತ್ಯ

    6 ಓವರ್​ಗಳಲ್ಲಿ ಆರ್​ಸಿಬಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 53 ರನ್ ಗಳಿಸಿದೆ. 6ನೇ ಓವರ್​ನಲ್ಲಿ ಕೊಹ್ಲಿ ಮಿಡ್ ಆಫ್ ತಲೆಯ ಮೇಲೆ ಭರ್ಜರಿ ಬೌಂಡರಿ ಬಾರಿಸಿದರು.

  • 02 Apr 2023 10:06 PM (IST)

    ಚಾವ್ಲಾ ಉತ್ತಮ ಓವರ್

    5ನೇ ಓವರ್ ಎಸೆದ ಚಾವ್ಲಾ ಕೇವಲ 1 ಬೌಂಡರಿ ಬಿಟ್ಟುಕೊಟ್ಟು ಒಟ್ಟು 5 ರನ್ ನೀಡಿದರು. ಮುಂಬೈಗೆ ಇದು ಉತ್ತಮ ಓವರ್

  • 02 Apr 2023 10:02 PM (IST)

    ಆರ್ಚರ್​ಗೆ ಸಿಕ್ಸರ್

    4ನೇ ಓವರ್ ಎಸೆದ ಆರ್ಚರ್ ಅವರ 2ನೇ ಎಸೆತವನ್ನು ಕೊಹ್ಲಿ ಬೌಂಡರಿಗಟ್ಟಿದರೆ, 5ನೇ ಎಸೆತವನ್ನು ಲಾಂಗ್ ಆಫ್​ನಲ್ಲಿ ಸಿಕ್ಸರ್​ಗಟ್ಟಿದರು.

  • 02 Apr 2023 09:57 PM (IST)

    ಫಾಫ್ ಸಿಕ್ಸರ್

    ಬೆಹ್ರೆನ್​ಡ್ರಾಫ್ ಎಸೆದ 3ನೇ ಓವರ್​ನಲ್ಲಿ ನಾಯಕ ಫಾಫ್ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಮೊದಲ ಸಿಕ್ಸರ್ ಮಿಡ್ ಆನ್​ ಕಡೆ ಇಂದ ಬಂದರೆ, ಎರಡನೆ ಸಿಕ್ಸರ್ ಮಿಡ್ ಅಫ್ ಕಡೆ ಇಂದ ಬಂತು.

  • 02 Apr 2023 09:54 PM (IST)

    ಕೊಹ್ಲಿ ಬೌಂಡರಿ

    ಅರ್ಷದ್ ಎಸೆದ 2ನೇ ಓವರ್​ನಲ್ಲಿ ಮೊದಲು ಹ್ಯಾಟ್ರಿಕ್ ವೈಡ್ ಬಂದವು. ಆ ನಂತರ ಎರಡನೇ ಎಸೆತದಲ್ಲಿ ಕೊಹ್ಲಿ ಫೈನ್​ ಲೆಗ್​ನಲ್ಲಿ ಬೌಂಡರಿ ಬಾರಿಸಿದರು.

  • 02 Apr 2023 09:47 PM (IST)

    ಆರ್​ಸಿಬಿ ಬ್ಯಾಟಿಂಗ್ ಆರಂಭ

    ಆರ್​ಸಿಬಿ ಪರ ಕೊಹ್ಲಿ ಹಾಗೂ ಡು ಪ್ಲೆಸಿಸ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮುಂಬೈ ಪರ ಬೆಹ್ರೆನ್​ಡ್ರಾಫ್ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ. ಈ ಓವರ್​ನಲ್ಲಿ 5 ರನ್ ಬಂತು

  • 02 Apr 2023 09:29 PM (IST)

    ಹರ್ಷಲ್ ಕೂಡ ದುಬಾರಿ

    20ನೇ ಓವರ್ ಎಸೆದ ಹರ್ಷಲ್ ಕೂಡ ಈ ಓವರ್​ನಲ್ಲಿ ಬರೋಬ್ಬರಿ 22 ರನ್ ಬಿಟ್ಟುಕೊಟ್ಟರು. ಮುಂಬೈ ಪರ ತಿಲಕ್ ವರ್ಮಾ ಅಜೇಯ 84 ರನ್ ಬಾರಿಸಿದರು. ಅಂತಿಮವಾಗಿ ಮುಂಬೈ 20 ಓವರ್​ಗಳಲ್ಲಿ 174 ರನ್ ಗಳಿಸಿದೆ.

  • 02 Apr 2023 09:22 PM (IST)

    ಸಿರಾಜ್ ದುಬಾರಿ

    19ನೇ ಓವರ್ ಎಸೆದ ಸಿರಾಜ್ ಬರೋಬ್ಬರಿ 5 ವೈಡ್ ಜೊತೆಗೆ 2 ಬೌಂಡರಿ ನೀಡಿ, ಒಟ್ಟು 16 ರನ್ ಬಿಟ್ಟುಕೊಟ್ಟರು.

  • 02 Apr 2023 09:13 PM (IST)

    ಹೃತಿಕ್ ಔಟ್

    ಹರ್ಷಲ್ ಪಟೇಲ್ 18ನೇ ಓವರ್‌ನ ಮೊದಲ ಎಸೆತದಲ್ಲಿ ಹೃತಿಕ್ ಶೋಕಿನ್ ಅವರ ವಿಕೆಟ್ ಪಡೆದರು. ಫಾಫ್ ಡು ಪ್ಲೆಸಿಸ್ ಅದ್ಭುತ ಕ್ಯಾಚ್ ಹಿಡಿದರು.

  • 02 Apr 2023 09:07 PM (IST)

    ತಿಲಕ್ ವರ್ಮಾ ಅರ್ಧಶತಕ

    ತಿಲಕ್ ವರ್ಮಾ 17ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದ್ದಾರೆ. ಇದಕ್ಕಾಗಿ ಅವರು 32 ಎಸೆತಗಳನ್ನು ತೆಗೆದುಕೊಂಡರು.

  • 02 Apr 2023 08:59 PM (IST)

    ಡೇವಿಡ್ ಔಟ್

    16ನೇ ಓವರ್ ಎಸೆಯಲು ಬಂದ ಕರ್ಣ್​ ಶರ್ಮಾ, ಮುಂಬೈನ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

  • 02 Apr 2023 08:47 PM (IST)

    ವಧೀರಾ ಔಟ್

    14ನೇ ಓವರ್ ಎಸೆಯಲು ಬಂದ ಕರ್ಣ್​ ಶರ್ಮಾ ಅವರ 3 ಮತ್ತು 4 ನೇ ಎಸೆತವನ್ನು ವದೀರಾ ಲಾಂಗ್ ಆಫ್​ನಲ್ಲಿ ಭರ್ಜರಿ ಸಿಕ್ಸರ್​ಗಟ್ಟಿದರು. ಆದರೆ ಅದರ ಮುಂದಿನ ಎಸೆತದಲ್ಲೇ ಮತ್ತೊಂದು ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.

  • 02 Apr 2023 08:37 PM (IST)

    ಮ್ಯಾಕ್ಸ್​ವೆಲ್ ದುಬಾರಿ

    12ನೇ ಓವರ್ ಎಸೆದ ಮ್ಯಾಕ್ಸ್ವೆಲ್ 12 ರನ್ ಬಿಟ್ಟುಕೊಟ್ಟರು. ಈ ಓವರ್​ನಲ್ಲಿ ತಿಲಕ್ ಲಾಂಕ್ ಆಫ್​ನಲ್ಲಿ 1 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು.

  • 02 Apr 2023 08:29 PM (IST)

    10 ಓವರ್ ಅಂತ್ಯ

    ಮುಂಬೈ ಇನ್ನಿಂಗ್ಸ್​ನ 10 ಓವರ್​ ಮುಗಿದಿದೆ. ಇದರಲ್ಲಿ ತಂಡದ ಪ್ರಮುಖ 4 ಬ್ಯಾಟರ್​ ಪೆವಿಲಿಯನ್ ಸೇರಿಕೊಂಡಿದ್ದರೆ, ತಿಲಕ್ ಹಾಗೂ ವದೇರಾ ಸದ್ಯ ಕ್ರೀಸ್​ನಲ್ಲಿದ್ದಾರೆ. 10 ಓವರ್​ ಅಂತ್ಯಕ್ಕೆ ಮುಂಬೈ 55 ರನ್ ಬಾರಿಸಿದೆ.

  • 02 Apr 2023 08:20 PM (IST)

    ಸೂರ್ಯ ಔಟ್

    ಬ್ರೆಸ್​ವೆಲ್ ಎಸೆದ 9ನೇ ಓವರ್​ನ 3ನೇ ಎಸೆದಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದ ಸೂರ್ಯಕುಮಾರ್ ಯಾದವ್, ಮುಂದಿನ ಎಸೆತದಲ್ಲೂ ಅದೇ ಯತ್ನ ಮಾಡಿ, ಪಾಯಿಂಟ್​ನಲ್ಲಿ ನಿಂತಿದ್ದ ಫಿಲ್ಡರ್​ಗೆ ಕ್ಯಾಚಿತ್ತು ಔಟಾದರು.

  • 02 Apr 2023 08:10 PM (IST)

    ತಿಲಕ್ ಬೌಂಡರಿ

    ಹರ್ಷಲ್ ಪಟೇಲ್ ಎಸೆದ 7ನೇ ಓವರ್​ನಲ್ಲಿ ತಿಲಕ್ ವರ್ಮಾ ಥರ್ಡ್​ ಮ್ಯಾನ್​ ಕಡೆ ಬೌಂಡರಿ ಬಾರಿಸಿದರು. 7 ಓವರ್ ಅಂತ್ಯಕ್ಕೆ ಮುಂಬೈ 37/3

  • 02 Apr 2023 08:04 PM (IST)

    ಪವರ್ ಪ್ಲೇ ಅಂತ್ಯ

    ಮುಂಬೈ ಪಾಳಯದ ಪವರ್ ಪ್ಲೇ ಅಂತ್ಯವಾಗಿದ್ದು, ಈ 6 ಓವರ್​ಗಳಲ್ಲಿ ಮುಂಬೈ 3 ವಿಕೆಟ್ ಕಳೆದುಕೊಂಡು 29 ರನ್ ಗಳಿಸಿದೆ. 6ನೇ ಓವರ್​ನಲ್ಲಿ ತಿಲಕ್ ವರ್ಮಾ ಲಾಂಗ್ ಆಫ್​ನಲ್ಲಿ ಭರ್ಜರಿ ಸಿಕ್ಸರ್ ಭಾರಿಸಿದರು.

  • 02 Apr 2023 08:00 PM (IST)

    ರೋಹಿತ್ ಔಟ್

    ಸಿಕ್ಕ ಜೀವದಾನವನ್ನು ಬಳಸಿಕೊಳ್ಳುವಲ್ಲಿ ರೋಹಿತ್ ಯಡವಿದ್ದಾರೆ. 5ನೇ ಓವರ್​ನಲ್ಲಿ ಜೀವದಾನ ಸಿಕ್ಕರೆ, 6ನೇ ಓವರ್​ನಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ರೋಹಿತ್, ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು.

  • 02 Apr 2023 07:56 PM (IST)

    ರೋಹಿತ್​​ಗೆ ಜೀವದಾನ

    5ನೇ ಓವರ್ ಎಸೆದ ಸಿರಾಜ್​ ರನ್​ಗೆ ಕಡಿವಾಣ ಹಾಕಿದರು. ಇದರಿಂದ ಬಿಗ್ ಶಾಟ್ ಹೊಡೆಯಲು ಯತ್ನಿಸಿದ ರಾಹುಲ್ ಚೆಂಡನ್ನು ಗಾಳಿಯಲ್ಲಿ ಆಡಿದರು. ಇಲ್ಲಿ ಸುಲಭ ಕ್ಯಾಚ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ಕಮ್ಯುನಿಕೆಷನ್ ಗ್ಯಾಪ್​ನಿಂದಾಗಿ ಕ್ಯಾಚ್ ಕೈಚೆಲ್ಲಿದರು.

  • 02 Apr 2023 07:47 PM (IST)

    ಗ್ರೀನ್ ಔಟ್

    ಮುಂಬೈ ತಂಡದ 2ನೇ ವಿಕೆಟ್ ಪತನವಾಗಿದೆ. ಕಿಶನ್ ವಿಕೆಟ್ ಬಳಿಕ ಬಂದಿದ್ದ ಗ್ರೀನ್ ಒಂದು ಬೌಂಡರಿ ಬಾರಿಸಿ, ಮುಂದಿನ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಟೋಪ್ಲಿಗೆ ಇದು ಮೊದಲ ವಿಕೆಟ್

  • 02 Apr 2023 07:42 PM (IST)

    ಕಿಶನ್ ಔಟ್

    3ನೇ ಓವರ್ ಎಸೆದ ಸಿರಾಜ್ ಅವರ 3ನೇ ಎಸೆತವನ್ನು ಬಿಗ್ ಶಾಟ್ ಆಡಲು ಯತ್ನಿಸಿದ ಕಿಶನ್ ಫೈನ್​ ಲೆಗ್​ನಲ್ಲಿ ನಿಂತಿದ್ದ ಹರ್ಷಲ್ ಪಟೇಲ್​ಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 02 Apr 2023 07:38 PM (IST)

    ಕಿಶನ್ 2 ಬೌಂಡರಿ

    ಟೋಪ್ಲಿ ಎಸೆದ 2ನೇ ಓವರ್​ನಲ್ಲಿ ಕಿಶನ್ 2 ಬೌಂಡರಿ ಬಾರಿಸಿದರು. ಈ ಓವರ್​ನಲ್ಲಿ ಒಟ್ಟು 9 ರನ್ ಬಂದವು

  • 02 Apr 2023 07:35 PM (IST)

    ಮುಂಬೈ ಬ್ಯಾಟಿಂಗ್ ಆರಂಭ

    ಮುಂಬೈ ಬ್ಯಾಟಿಂಗ್ ಆರಂಭಿಸಿದ್ದು, ನಾಯಕ ರೋಹಿತ್ ಹಾಗೂ ಕಿಶನ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆರ್​ಸಿಬಿ ಪರ ಸಿರಾಜ್ ಮೊದಲ ಓವರ್ ಎಸೆದರು. ಈ ಓವರ್​ನಲ್ಲಿ ಕೇವಲ 2 ರನ್ ಬಂದವು.

  • 02 Apr 2023 07:24 PM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

    ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕಲ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ರೀಸ್ ಟೋಪ್ಲಿ, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್,

  • 02 Apr 2023 07:21 PM (IST)

    ಮುಂಬೈ ತಂಡ

    ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಜೋಫ್ರಾ ಆರ್ಚರ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಅರ್ಷದ್ ಖಾನ್

  • 02 Apr 2023 07:14 PM (IST)

    ಉಭಯ ತಂಡಗಳು

  • 02 Apr 2023 07:05 PM (IST)

    ಆರ್​ಸಿಬಿ ಬೌಲಿಂಗ್

    ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಮುಂಬೈ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - Apr 02,2023 7:01 PM

Follow Us
ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ
ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ
ಪಂಚಮಸಾಲಿ ಪೀಠದ ಲೆಕ್ಕಪತ್ರ ಮಂಡನೆ ವೇಳೆ ಗಲಾಟೆ, ಹಲ್ಲೆ!
ಪಂಚಮಸಾಲಿ ಪೀಠದ ಲೆಕ್ಕಪತ್ರ ಮಂಡನೆ ವೇಳೆ ಗಲಾಟೆ, ಹಲ್ಲೆ!
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್