Yuvraj Singh: ರೋಹಿತ್ ಶರ್ಮಾ ಉತ್ತಮ ನಾಯಕ, ಆದರೆ….
ODI World Cup 2023: ಅಕ್ಟೋಬರ್ 5 ರಿಂದ ಶುರುವಾಗಿ ನವೆಂಬರ್ 19 ರವರೆಗೆ ನಡೆಯಲಿರುವ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿ 2019ರ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh) ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ಈ ಅಭಿಪ್ರಾಯದಲ್ಲಿ ಯುವಿ, ಟೀಮ್ ಇಂಡಿಯಾ ನಾಯಕನನ್ನು ಹೊಗಳಿದರೂ, ಭಾರತ ತಂಡ ಗೆಲ್ಲುವ ಬಗ್ಗೆ ಸಂಪೂರ್ಣ ವಿಶ್ವಾಸವಿಲ್ಲ ಎಂದು ತಿಳಿಸಿದ್ದಾರೆ.
ಚಿಟ್ ಚಾಟ್ವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್, ರೋಹಿತ್ ಶರ್ಮಾ ಉತ್ತಮ ನಾಯಕ ಎಂಬುದು ನಿಜ. ಆದರೆ ನೀವು ಅವರಿಗೆ ಉತ್ತಮ ತಂಡವನ್ನು ಸಹ ನೀಡಬೇಕಾಗಿದೆ. ಉತ್ತಮ ತಂಡವಿಲ್ಲದೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.
ಎಂಎಸ್ ಧೋನಿ ಕೂಡ ಉತ್ತಮ ನಾಯಕರಾಗಿದ್ದರು. ಆದರೆ ಅವರು ಅನುಭವಿ ಆಟಗಾರರೊಂದಿಗೆ ಉತ್ತಮ ತಂಡವನ್ನು ಹೊಂದಿದ್ದರು. ಪ್ರಸ್ತುತ ತಂಡದಲ್ಲಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಶಮಿ ಅವರು 2019 ರ ವಿಶ್ವಕಪ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇವರೊಂದಿಗೆ ಸ್ವಂತ ಬಲದಿಂದ ಪಂದ್ಯಗಳನ್ನು ಗೆದ್ದು ಕೊಡಬಲ್ಲ ಸಾಮರ್ಥ್ಯವಿರುವ ಯುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಬೇಕಿದೆ ಎಂದು ಯುವರಾಜ್ ಸಿಂಗ್ ತಿಳಿಸಿದರು.
ಗಾಯದ ಸಮಸ್ಯೆ ಕೂಡ ಚಿಂತೆಗೆ ಕಾರಣ:
ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಗಾಯಗೊಂಡಿರುವುದು ಚಿಂತೆಯನ್ನು ಹೆಚ್ಚಿಸಿದೆ. ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಇಲ್ಲದೆ ಇದೀಗ ಸರಣಿಗಳನ್ನಾಡುತ್ತಿದೆ. ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿಲ್ಲ. ಅಂದರೆ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಆಟಗಾರರು ಗಾಯಗೊಂಡಿರುವುದು ಚಿಂತೆಯನ್ನು ಹೆಚ್ಚಿಸಿದೆ.
ಇದಾಗ್ಯೂ ರೋಹಿತ್ ಉತ್ತಮ ನಾಯಕನಾಗಿ ಬೆಳೆದಿರುವುದು ವಿಶೇಷ. ಅಲ್ಲದೆ ಒತ್ತಡದ ಸಂದರ್ಭಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಯುವರಾಜ್ ಸಿಂಗ್ ತಿಳಿಸಿದರು.
ರೋಹಿತ್ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ದೀರ್ಘಕಾಲದವರೆಗೆ ಮುನ್ನಡೆಸಿದ್ದರಿಂದ ಅವರು ಉತ್ತಮ ನಾಯಕರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಒತ್ತಡವನ್ನು ನಿಭಾಯಿಸುವಲ್ಲಿ ಬಹಳ ಸಂವೇದನಾಶೀಲ ವ್ಯಕ್ತಿ. ಹೀಗಾಗಿ ಅನುಭವಿ ನಾಯಕನಿಗೆ ಉತ್ತಮ ತಂಡವನ್ನು ನೀಡಬೇಕಾಗಿದೆ ಎಂದರು.
ಎಂಎಸ್ ಧೋನಿ ಉತ್ತಮ ನಾಯಕರಾಗಿದ್ದರು. ಆದರೆ ಅವರು ಉತ್ತಮ ತಂಡವನ್ನು ಸಹ ಪಡೆದರು. ಹೀಗಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು ಎಂದು ಇದೇ ವೇಳೆ ಯುವರಾಜ್ ಸಿಂಗ್ ತಿಳಿಸಿದರು.
ಇದನ್ನೂ ಓದಿ: Yuvraj Singh: ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್: ಯುವರಾಜ್ ಸಿಂಗ್
ಹೀಗಾಗಿ ಉತ್ತಮ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾಗೆ ಅತ್ಯುತ್ತಮ ತಂಡವನ್ನು ಕಟ್ಟಿ ಕೊಡಬೇಕಿದೆ. ಇಲ್ಲದಿದ್ದರೆ ವಿಶ್ವಕಪ್ ಗೆಲ್ಲುವುದು ಕಷ್ಟಕರವಾಗಲಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ 5 ರಿಂದ ಶುರುವಾಗಿ ನವೆಂಬರ್ 19 ರವರೆಗೆ ನಡೆಯಲಿರುವ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿ 2019ರ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ತನ್ನ ವಿಶ್ವಕಪ್ ಅಭಿಮಾನ ಆರಂಭಿಸಲಿರುವುದು ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಈ ಪಂದ್ಯವು ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಲಿದೆ.