AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಡಗೌಟ್​ನಿಂದಲೇ ಹಾರ್ದಿಕ್​ಗೆ ನಾಯಕನ ಪಾಠ ಮಾಡಿದ ರೋಹಿತ್ ಶರ್ಮಾ

Rohit Sharma: ಗಾಯದ ಕಾರಣದಿಂದಾಗಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಆಡದೇ ಇರಬಹುದು, ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅವರ ಸಲಹೆಗಳು ಮುಂಬೈ ಇಂಡಿಯನ್ಸ್ ವಿಕೆಟ್ ಪಡೆಯಲು ಸಹಾಯ ಮಾಡಿದವು. ಶನಿವಾರ ನಡೆದ ಪಂದ್ಯದಲ್ಲಿ ರೋಹಿತ್ ಡಗೌಟ್​ನಿಂದಲೇ ಹಾರ್ದಿಕ್​ಗೆ ಹೇಗೆ ಸಲಹೆ ನೀಡಿದರು ಎಂಬುದನ್ನು ನೋಡಿ.

IPL 2026: ಡಗೌಟ್​ನಿಂದಲೇ ಹಾರ್ದಿಕ್​ಗೆ ನಾಯಕನ ಪಾಠ ಮಾಡಿದ ರೋಹಿತ್ ಶರ್ಮಾ
Rohit Sharma Csk Vs Mi
ಸಾಯಿನಂದಾ
| Edited By: |

Updated on: May 03, 2026 | 9:45 AM

Share

ಬೆಂಗಳೂರು (ಮೇ. 03): ಗಾಯದ ಕಾರಣದಿಂದಾಗಿ ರೋಹಿತ್ ಶರ್ಮಾ (Rohit Sharma) ಪ್ರಸ್ತುತ ಐಪಿಎಲ್ 2026 ರಲ್ಲಿ ಆಟದಿಂದ ಹೊರಗುಳಿದಿದ್ದಾರೆ. ಇಂಜುರಿ ಮಧ್ಯೆಯೂ ಅವರು ತಂಡದೊಂದಿಗೆ ಪ್ರತಿ ಪಂದ್ಯದಲ್ಲೂ ಕಾಣಿಸಿಕೊಳ್ಳುತ್ತಾರೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಲ್ಲದಿದ್ದರೂ ಡಗೌಟ್​ನಲ್ಲಿದ್ದು ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಆರ್‌ಸಿಬಿ ವಿರುದ್ಧದ ಋತುವಿನ 20 ನೇ ಪಂದ್ಯದ ಸಮಯದಲ್ಲಿ, ರೋಹಿತ್ ಮಂಡಿರಜ್ಜು ಗಾಯಕ್ಕೆ ತುತ್ತಾದರು. ಗಂಭೀರ ಗಾಯವಾಗಿಲ್ಲ ಎಂದು ವರದಿಯಾಗಿದ್ದರೂ ಅವರನ್ನು ಇನ್ನೂ ಸಂಪೂರ್ಣ ಫೀಟ್ ಆಗಿಲ್ಲ.

ರೋಹಿತ್ ಅವರ ಸಲಹೆಯಿಂದ ಸಿಎಸ್​ಕೆ ವಿಕೆಟ್‌ ಪತನ

ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ನೀಡಿದ ಸಲಹೆ ಬಹಳ ಉಪಯುಕ್ತವಾಗಿತ್ತು. ಸಂಜು ಸ್ಯಾಮ್ಸನ್ ಔಟಾದ ನಂತರವೂ ಚೆನ್ನೈ ಸೂಪರ್ ಕಿಂಗ್ಸ್ ಬಿರುಸಿನ ರನ್ ಕಲೆಹಾಕುತ್ತಿತ್ತು. ಈ ಸಂದರ್ಭ ಐದನೇ ಓವರ್‌ನಲ್ಲಿ, ರೋಹಿತ್ ಡಗೌಟ್‌ನಿಂದ ಸ್ಪಿನ್ನರ್​ಗೆ ಬೌಲಿಂಗ್ ನೀಡಲು ಹಾರ್ದಿಕ್​ಗೆ ಸಿಗ್ನಲ್ ನೀಡಿದರು. ಮುಂದಿನ ಓವರ್‌ನಲ್ಲಿ, ನಾಯಕ ಹಾರ್ದಿಕ್ ಪಾಂಡ್ಯ ಅಲ್ಲಾ ಅಜ್ನಾಫರ್ ಅವರನ್ನು ಕರೆತಂದರು. ಅದರಂತೆ ನಾಲ್ಕನೇ ಎಸೆತದಲ್ಲಿ ಉರ್ವಿಲ್ ಪಟೇಲ್ ಬೌಲ್ಡ್ ಆದರು. ಉರ್ವಿಲ್ 12 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 24 ರನ್ ಗಳಿಸಿದರು. ಸ್ಟಾರ್ ಸ್ಪೋರ್ಟ್ಸ್ ಕೂಡ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದೆ.

5 ಬಾರಿ ಚಾಂಪಿಯನ್ ನಾಯಕ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಅವರನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು 2013 ರಿಂದ 2023 ರವರೆಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿದ್ದರು. ಈ 11 ಸೀಸನ್‌ಗಳಲ್ಲಿ ಮುಂಬೈ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 2024 ರ ಸೀಸನ್‌ಗೆ ಮೊದಲು, ಮುಂಬೈ ಇಂಡಿಯನ್ಸ್ ರೋಹಿತ್ ಅವರನ್ನು ಬದಲಾಯಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿತು.

CSK vs MI: ಇದು ನಮ್ಮ ಸೀಸನ್ ಅಲ್ಲ: ಸಿಎಸ್​ಕೆ ವಿರುದ್ಧದ ಸೋಲಿನ ನಂತರ ದುಃಖಿತರಾದ ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್​ಗೆ 8 ವಿಕೆಟ್‌ಗಳ ಸೋಲು

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳಿಂದ ಸೋತಿತು. ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡವು 7 ವಿಕೆಟ್‌ಗಳಿಗೆ 159 ರನ್ ಗಳಿಸಿತು. 11 ನೇ ಓವರ್‌ನಲ್ಲಿ ತಂಡದ ಸ್ಕೋರ್ 99 ರನ್‌ಗಳಾಗಿತ್ತು. ಆದರೆ ಇದರ ನಂತರ, ಸಿಎಸ್‌ಕೆ ಬೌಲರ್‌ಗಳು ಬಲವಾದ ಪುನರಾಗಮನ ಮಾಡಿದರು. ಪವರ್‌ಪ್ಲೇನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ, ಸಿಎಸ್‌ಕೆ 8 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ನಾಯಕ ರುತುರಾಜ್ ಗಾಯಕ್ವಾಡ್ ಅಜೇಯ 67 ರನ್‌ಗಳನ್ನು ಮತ್ತು ಕಾರ್ತಿಕ್ ಶರ್ಮಾ ಅಜೇಯ 54 ರನ್‌ಗಳನ್ನು ಗಳಿಸಿದರು. ಇಬ್ಬರ ನಡುವೆ 98 ರನ್‌ಗಳ ಪಾಲುದಾರಿಕೆ ಇತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us