AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೈರ್ಯವಿದ್ದರೆ ನೇರವಾಗಿ ಹೇಳಿ: ಆಯ್ಕೆ ಸಮಿತಿ ವಿರುದ್ಧ ಮಂಜ್ರೇಕರ್ ವಾಗ್ದಾಳಿ

ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್​ರನ್ನು ಕೈ ಬಿಟ್ಟಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪ್ರಶ್ನೆಗಳನ್ನೆತ್ತಿದ್ದಾರೆ. ಈ ಪ್ರಶ್ನೆಗಳೊಂದಿಗೆ 2027ರ ಏಕದಿನ ವಿಶ್ವಕಪ್​ಗೆ 40 ವರ್ಷದ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡುತ್ತಿರುವ ಬಗ್ಗೆಯೂ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. 

ಧೈರ್ಯವಿದ್ದರೆ ನೇರವಾಗಿ ಹೇಳಿ: ಆಯ್ಕೆ ಸಮಿತಿ ವಿರುದ್ಧ ಮಂಜ್ರೇಕರ್ ವಾಗ್ದಾಳಿ
Rohit Sharma
ಝಾಹಿರ್ ಯೂಸುಫ್
|

Updated on: Jun 25, 2026 | 9:33 AM

Share

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಯುವ ದಾಂಡಿಗ ಯಶಸ್ವಿ ಜೈಸ್ವಾಲ್​ಗೆ ಸ್ಥಾನ ನೀಡಲಾಗಿಲ್ಲ. ಬದಲಾಗಿ ರೋಹಿತ್ ಶರ್ಮಾ ಹಾಗೂ ಶುಭ್​​ಮನ್ ಗಿಲ್ ಅವರನ್ನು ಆರಂಭಿಕರಾಗಿ ಆಯ್ಕೆಯಾಗಿದ್ದಾರೆ.  ಇಲ್ಲಿ ರೋಹಿತ್ ಶರ್ಮಾ ತಂಡಕ್ಕೆ ನೀಡುವ ಅನುಭವ ಮತ್ತು ಗುಣಮಟ್ಟ ಪ್ರಶ್ನಾತೀತವಾಗಿದ್ದರೂ, ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಬಿಸಿಸಿಐ ಆಯ್ಕೆ ಸಮಿತಿಯ ನಡೆಯನ್ನು ಪ್ರಶ್ನಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ತಮ್ಮ ಕೊನೆಯ ಮೂರು ಏಕದಿನ ಪಂದ್ಯಗಳಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ. ಆದರೆ ಬಿಸಿಸಿಐ ಆಯ್ಕೆದಾರರು ಅವರಿಗೆ ಯಾವುದೇ ಅವಕಾಶ ನೀಡಿಲ್ಲ. ಅದರಲ್ಲೂ ಕೊನೆಯ ಮ್ಯಾಚ್​ನಲ್ಲಿ ಜೈಸ್ವಾಲ್ ಅಫ್ಘಾನಿಸ್ತಾನ್ ವಿರುದ್ಧ 110 ರನ್​ಗಳ ಇನಿಂಗ್ಸ್ ಆಡಿದ್ದರು. ಇದಾಗ್ಯೂ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಈ ಬಗ್ಗೆ ಸಂಜಯ್ ಮಂಜ್ರೇಕರ್ ಪ್ರಶ್ನೆಗಳನ್ನೆತ್ತಿದ್ದಾರೆ.

ಯಶಸ್ವಿ ಜೈಸ್ವಾಲ್ ತಮ್ಮ ಕೊನೆಯ ಮೂರು ಏಕದಿನ ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಅವರು ಸೌತ್ ಆಫ್ರಿಕಾ ವಿರುದ್ಧ ಅಜೇಯ 116 ರನ್ ಬಾರಿಸಿದ್ದರು, ಇದೀಗ ಅಫ್ಘಾನ್ ವಿರುದ್ಧ ಕೂಡ ಸೆಂಚುರಿ ಸಿಡಿಸಿದ್ದಾರೆ. ಅಂದರೆ ಭಾರತ ಏಕದಿನ ತಂಡದಲ್ಲಿ ಆರಂಭಿಕನಾಗಿ ಸಿಕ್ಕ ಅವಕಾಶವನ್ನು ಜೈಸ್ವಾಲ್ ಸದುಪಯೋಗಪಡಿಸಿಕೊಂಡಿದ್ದಾರೆ. ಆದರೆ ದುರಾದೃಷ್ಟ ಅವರನ್ನು ಕಾಡುತ್ತಿದೆ ಎಂದು ಸಂಜಯ್ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಈ ದುರಾದೃಷ್ಟಕ್ಕೆ ಕಾರಣ ಬಿಸಿಸಿಐ ಆಯ್ಕೆ ಸಮಿತಿ. ಏಕೆಂದರೆ ಆಯ್ಕೆದಾರರು ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದರೆ, ಅವರು 2027 ರ ವಿಶ್ವಕಪ್ ಯೋಜನೆಗಳ ಭಾಗವಾಗಿದ್ದಾರೆ ಎಂದೇ ಅರ್ಥ. ಆದರೆ ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ ತಂಡದ ಆಡಳಿತವು ದೊಡ್ಡ ಹೆಸರನ್ನು ಮೀರಿ ನೋಡಬೇಕಾದ ಅಗತ್ಯವಿದೆ ಎಂದು ಮಂಜ್ರೇಕರ್ ಹೇಳಿದ್ದಾರೆ.

ದೊಡ್ಡ ಆಟಗಾರರ ಸುತ್ತಲಿನ ಸಂಸ್ಕೃತಿ ನಮಗೆಲ್ಲರಿಗೂ ತಿಳಿದಿದೆ. ಕ್ರಿಕೆಟ್‌ನ ಅರ್ಹತೆಯ ಮೇಲೆ ನಿರ್ಣಯಿಸುವಷ್ಟು ಸರಳ ನಿರ್ಧಾರಗಳು ಅಪರೂಪ. ರೋಹಿತ್ ವಿಷಯದಲ್ಲೂ ಹಾಗೆಯೇ ಇದೆ ಎಂದು ತೋರುತ್ತದೆ. ಆಯ್ಕೆದಾರರು ರೋಹಿತ್ ಶರ್ಮಾ ದೀರ್ಘಾವಧಿಯ ಯೋಜನೆಯ ಭಾಗ ಎಂದು ನಂಬಿದರೆ, ಅವರು ಹಾಗೆ ಹೇಳಬೇಕು. ನೀವುಗಳು ಧೈರ್ಯವಾಗಿ ನಿಮ್ಮ ನಿಲುವುಗಳನ್ನು ಸ್ಪಷ್ಟಪಡಿಸಬೇಕು.

ಇಲ್ಲಾ, ರೋಹಿತ್ ಶರ್ಮಾ ಅವರನ್ನು ಕೈಬಿಡಲು ಸಿದ್ಧರಿಲ್ಲದ ಕಾರಣ ಅವರನ್ನು ಆಯ್ಕೆ ಮಾಡಲಾಗುತ್ತಿದ್ದರೆ, ಅದು ಭಾರತೀಯ ಕ್ರಿಕೆಟ್ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ.  ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಜಸ್​ಪ್ರೀತ್ ಬುಮ್ರಾ ಅವರಿಗೆ ಯಾವುದು ಉತ್ತಮ ಎಂಬುದರ ಮೇಲೆ ಆಯ್ಕೆ ಎಂದಿಗೂ ಇರಬಾರದು. ಆಯ್ಕೆಯು ಯಾವಾಗಲೂ ಭಾರತೀಯ ಕ್ರಿಕೆಟ್‌ಗೆ ಯಾವುದು ಉತ್ತಮ ಎಂಬುದರ ಮೇಲೆ ನಿರ್ಧಾರವಾಗಬೇಕು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಸಂಜಯ್ ಮಂಜ್ರೇಕರ್ ಆಯ್ಕೆದಾರರ ನಿಲುವುಗಳ ಪ್ರಶ್ನೆಗಳನ್ನೆತ್ತಲು ಮುಖ್ಯ ಕಾರಣ ಆಟಗಾರರ ವಯಸ್ಸು. ಅಂದರೆ ರೋಹಿತ್ ಶರ್ಮಾ ಈಗಲೂ ಏಕದಿನ ತಂಡದ ಭಾಗವಾಗುತ್ತಿರುವ ಕಾರಣ ಅವರು 2027ರ ಏಕದಿನ ವಿಶ್ವಕಪ್ ಆಡುವುದು ಬಹುತೇಕ ಖಚಿತ. ಆದರೆ 2027ರ ವಿಶ್ವಕಪ್ ವೇಳೆಗೆ ರೋಹಿತ್‌ ಶರ್ಮಾ ವಯಸ್ಸು 40 ವರ್ಷ ಆಗಿರಲಿದೆ.

ಇದನ್ನೂ ಓದಿ: ವೈಭವ್ ವಿಷಯದಲ್ಲಿ ತಾಳ್ಮೆ ಇರಲಿ, 22 ವರ್ಷದವರೆಗೆ ಕಾಯಿರಿ: ಕಪಿಲ್ ದೇವ್

ಅಂದರೆ ಪ್ರಮುಖ ಟೂರ್ನಿಗೆ ಯುವ ಆಟಗಾರರನ್ನು ಕಡೆಗಣಿಸಿ, 40 ವರ್ಷದ ಹಿರಿಯ ಆಟಗಾರರನ್ನು ಆಯ್ಕೆ ಮಾಡುತ್ತಿರುವುದು ಆಯ್ಕೆ ಸಮಿತಿಯಲ್ಲಿನ ವೈಫಲ್ಯಕ್ಕೆ ಸಾಕ್ಷಿ. ಹೀಗಾಗಿಯೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಜಸ್​ಪ್ರೀತ್ ಬುಮ್ರಾ ಅವರಿಗೆ ಯಾವುದು ಉತ್ತಮ ಎಂಬುದರ ಮೇಲೆ ಆಯ್ಕೆ ನಡೆಯಬಾರದು. ಆಯ್ಕೆಯು ಯಾವಾಗಲೂ ಭಾರತೀಯ ಕ್ರಿಕೆಟ್‌ಗೆ ಯಾವುದು ಉತ್ತಮ ಎಂಬುದರ ಮೇಲೆ ನಿರ್ಧಾರವಾಗಬೇಕು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

Follow Us