AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್​ಗೆ ಭಾರತ ಎ ತಂಡದ ಪ್ರವಾಸ; ವೇಳಾಪಟ್ಟಿ ಪ್ರಕಟ

ನವೆಂಬರ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಐದು ಟಿ20, ಐದು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಡಬ್ಲ್ಯೂಟಿಸಿ ಫೈನಲ್ ದೃಷ್ಟಿಯಿಂದ ಟೆಸ್ಟ್ ಸರಣಿ ನಿರ್ಣಾಯಕವಾಗಿದ್ದು, ಭಾರತ ಗೆಲ್ಲಲೇಬೇಕು. ಇದಕ್ಕೆ ಸಿದ್ಧತೆಯಾಗಿ ಭಾರತ 'ಎ' ತಂಡ ಮೂರು ನಾಲ್ಕು ದಿನಗಳ ಪಂದ್ಯಗಳನ್ನು ನ್ಯೂಜಿಲೆಂಡ್ 'ಎ' ವಿರುದ್ಧ ಆಡಲಿದೆ. ಸಂಪೂರ್ಣ ವೇಳಾಪಟ್ಟಿ ಇಲ್ಲಿವೆ.

ನ್ಯೂಜಿಲೆಂಡ್​ಗೆ ಭಾರತ ಎ ತಂಡದ ಪ್ರವಾಸ; ವೇಳಾಪಟ್ಟಿ ಪ್ರಕಟ
ಭಾರತ ತಂಡ
ಪೃಥ್ವಿಶಂಕರ
|

Updated on: Sep 02, 2026 | 6:29 PM

Share

ನವೆಂಬರ್ ತಿಂಗಳಲ್ಲಿ ಟೀಂ ಇಂಡಿಯಾ ಬಹು ಮಾದರಿಯ ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಐದು ಟಿ20 ಪಂದ್ಯಗಳು, ಐದು ಏಕದಿನಗಳು ಮತ್ತು ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಅದರಲ್ಲೂ ಎರಡು ಪಂದ್ಯಗಳ ಟೆಸ್ಟ್ ಸರಣಿ, ಡಬ್ಲ್ಯೂಟಿಸಿ ಫೈನಲ್ ದೃಷ್ಟಿಯಿಂದ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತರೂ ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್ ರೇಸ್​ನಿಂದ ಹೊರಬೀಳಲಿದೆ. ಹೀಗಾಗಿ ಗಿಲ್ ಪಡೆ ಶತಾಯಗತಾಯ ಈ ಸರಣಿಯನ್ನು ಗೆಲ್ಲಲೇಬೇಕಿದೆ. ಹೀಗಾಗಿ ಈ ಟೆಸ್ಟ್ ಸರಣಿಗೆ ತಯಾರಿ ನಡೆಸುವ ತೃಷ್ಟಿಯಿಂದ ಭಾರತ ಎ ತಂಡ ಮುನ್ನ ಭಾರತ ಎ ತಂಡ, ನ್ಯೂಜಿಲೆಂಡ್ ಎ ವಿರುದ್ಧ ನಾಲ್ಕು ದಿನಗಳ ಮೂರು ಪಂದ್ಯಗಳನ್ನು ಆಡಲಿದೆ.

ಭಾರತ ‘ಎ’ ಪ್ರವಾಸದ ವೇಳಾಪಟ್ಟಿ ಪ್ರಕಟ

ಭಾರತ ‘ಎ’ ತಂಡದ ಈ ಪ್ರವಾಸವು ಟೀಂ ಇಂಡಿಯಾದ ಟಿ20 ಮತ್ತು ಏಕದಿನ ಸರಣಿಗಳು ಹಾಗೂ ನಾಲ್ಕು ಭಾರತ A-ಮಟ್ಟದ ಪಂದ್ಯಗಳನ್ನು ಒಳಗೊಂಡಿರುತ್ತದೆ, ಇವುಗಳನ್ನು NZC ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈ ಮೂರು ಪಂದ್ಯಗಳು ಅಕ್ಟೋಬರ್ 24 ರಂದು ಪ್ರಾರಂಭವಾಗಿ ನವೆಂಬರ್ 10 ರವರೆಗೆ ನಡೆಯಲಿವೆ. ಮೊದಲ ಮತ್ತು ಮೂರನೇ ಪಂದ್ಯಗಳು ಲಿಂಕನ್‌ನ ಬರ್ಟ್ ಸಟ್‌ಕ್ಲಿಫ್ ಓವಲ್‌ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯವು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿದೆ.

ವೇಳಾಪಟ್ಟಿ ಇಂತಿದೆ

  • ಮೊದಲ 4 ದಿನಗಳ ಪಂದ್ಯ: ಅಕ್ಟೋಬರ್ 24 ರಿಂದ 27 (ಬರ್ಟ್ ಸಟ್‌ಕ್ಲಿಫ್ ಓವಲ್, ಲಿಂಕನ್)
  • ಎರಡನೇ 4 ದಿನಗಳ ಪಂದ್ಯ: ಅಕ್ಟೋಬರ್ 31 ರಿಂದ ನವೆಂಬರ್ 3 (ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್)
  • ಮೂರನೇ 4-ದಿನಗಳ ಪಂದ್ಯ: ನವೆಂಬರ್ 7–10 (ಬರ್ಟ್ ಸಟ್‌ಕ್ಲಿಫ್ ಓವಲ್, ಲಿಂಕನ್)

2019 ರ ನಂತರ ಭಾರತದ ಪ್ರವಾಸ

2019 ರ ನಂತರ ಭಾರತ ತಂಡವು ಮೊದಲ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಅಲ್ಲದೆ ಇದು 2022 ರ ನಂತರ ಟೀಂ ಇಂಡಿಯಾ ದ ನ್ಯೂಜಿಲೆಂಡ್ ತಂಡಕ್ಕೆ ಮೊದಲ ಬಿಳಿ ಚೆಂಡಿನ ಪ್ರವಾಸವಾಗಿದೆ. ಈ ಪ್ರವಾಸವು ಟಿ20 ಸರಣಿಯೊಂದಿಗೆ ಪ್ರಾರಂಭವಾಗುತ್ತದೆ, ಮೊದಲ ಪಂದ್ಯವು ಅಕ್ಟೋಬರ್ 22 ರಂದು ನಡೆಯಲಿದೆ. ಮುಂದಿನ ನಾಲ್ಕು ಪಂದ್ಯಗಳು ಅಕ್ಟೋಬರ್ 24, 27, 30 ಮತ್ತು ನವೆಂಬರ್ 1 ರಂದು ನಡೆಯಲಿವೆ.

ನವೆಂಬರ್ 4 ರಂದು ಏಕದಿನ ಸರಣಿ ಆರಂಭವಾಗಲಿದ್ದು, ನವೆಂಬರ್ 7, 10, 13 ಮತ್ತು 15 ರಂದು ಉಳಿದ ಪಂದ್ಯಗಳು ನಡೆಯಲಿವೆ. ಅಂತಿಮವಾಗಿ, ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಯಿಂದ ಭಾರತಕ್ಕೆ ನಿರ್ಣಾಯಕವಾಗಿದೆ. ಭಾರತ ಈ ಎರಡೂ ಪಂದ್ಯಗಳನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್