
ಐರ್ಲೆಂಡ್ ಮತ್ತು ಇಂಗ್ಲೆಂಡ್ ಟಿ20 ಸರಣಿಯಲ್ಲಿ ಉಪನಾಯಕ ತಿಲಕ್ ವರ್ಮಾ (Tilak Varma) ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಅದರಲ್ಲೂ ಅವರ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ತಂಡ ಸೋಲಿಗೆ ಕೊರಳೊಡ್ಡಬೇಕಾಯಿತು. ಟಿ20 ಕ್ರಿಕೆಟ್ನಲ್ಲಿ ಅದರಲ್ಲೂ ನಿರ್ಣಾಯಕ ಹಂತದಲ್ಲಿ ದೊಡ್ಡ ಹೊಡೆತಗಳಿಗೆ ಕೈ ಹಾಕದ ತಿಲಕ್ ಅವರ ಸ್ಟ್ರೈಕ್ ರೇಟ್ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಇದೀಗ, ಜಿಂಬಾಬ್ವೆ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ತಿಲಕ್ ವರ್ಮಾ ತಮ್ಮ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ ತಾನು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಲಕ್ ವರ್ಮಾ ವಿವರಿಸಿದ್ದಾರೆ. ಆಟ ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿ ನನ್ನ ಬ್ಯಾಟಿಂಗ್ ಶೈಲಿ ಬದಲಾಗುತ್ತದೆ. ಇಂಗ್ಲೆಂಡ್ ಟಿ20 ಸರಣಿಯಲ್ಲಿ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ವಿಕೆಟ್ ಕಳೆದುಕೊಂಡರು. ಇದರಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಬ್ಯಾಟಿಂಗ್ ಮಾಡಲು ಬರಬೇಕಾಯಿತು.
ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಿಲಕ್ ವರ್ಮಾ, ‘ಈ ಪಂದ್ಯದಲ್ಲಿ, ನೀವು ವಿಭಿನ್ನ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಬೇಕು ಮತ್ತು ವಿಶೇಷವಾಗಿ ಅಂತಹ ಪರಿಸ್ಥಿತಿಗಳಲ್ಲಿ, ಅದು ಸುಲಭವಲ್ಲ. ನಾನು ಯಾವಾಗಲೂ ತಂಡದ ಅಗತ್ಯಗಳಿಗೆ ಅನುಗುಣವಾಗಿ ಆಡುತ್ತೇನೆ ಎಂದು ಹೇಳುತ್ತೇನೆ. ನಾನು ತಂಡದ ಇನ್ನಿಂಗ್ಸ್ ನಿಭಾಯಿಸುವ ಪರಿಸ್ಥಿತಿ ಇದ್ದರೆ, ನಾನು ಅದಕ್ಕೆ ತಕ್ಕಂತೆ ಆಡುತ್ತೇನೆ. ನಾನು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಬೇಕಾದರೆ, ಅದಕ್ಕೆ ಅನುಗುಣವಾಗಿ ಆಡುತ್ತೇನೆ. ಐರ್ಲೆಂಡ್‌ನಿಂದ ಇಂಗ್ಲೆಂಡ್‌ವರೆಗಿನ ಪರಿಸ್ಥಿತಿಗಳನ್ನು ನೀವು ನೋಡಿದರೆ, ಪವರ್‌ಪ್ಲೇನಲ್ಲಿ ಯಾವಾಗಲೂ ನಾಲ್ಕು ಅಥವಾ ಐದು ವಿಕೆಟ್‌ಗಳು ಬೀಳುತ್ತಿದ್ದವು. ಹೀಗಾಗಿ ಆ ಸಂದರ್ಭದಲ್ಲಿ ಹೋಗಿ ದೊಡ್ಡ ಹೊಡೆತಗಳನ್ನು ತಕ್ಷಣ ಆಡಲು ಪ್ರಯತ್ನಿಸುವುದು ಸರಿಯಲ್ಲ ಮತ್ತು ಆ ಯತ್ನದಲ್ಲಿ ಔಟ್ ಆಗುವುದು ಸರಿಯಲ್ಲ.
IND vs SA: ಮೊದಲ ಟಿ20ಯಲ್ಲಿ ಟೆಸ್ಟ್ ಆಡಿಯೂ ವಿಶಿಷ್ಟ ಮೈಲಿಗಲ್ಲು ದಾಟಿದ ತಿಲಕ್ ವರ್ಮಾ
ಆದಾಗ್ಯೂ ನಾನು ಮೊದಲ ಎಸೆತದಿಂದಲೇ ದಾಳಿ ಮಾಡಲು ಬಯಸುತ್ತೇನೆ. ಆದರೆ ಕೆಲವೊಮ್ಮೆ ಸಮಯಕ್ಕನುಗುಣವಾಗಿ ಆಡುವುದು ಮುಖ್ಯ. ಏಕೆಂದರೆ ನಾನು ದೇಶಕ್ಕಾಗಿ ಆಡುತ್ತಿರುತ್ತೇನೆ, ಆದ್ದರಿಂದ ಬಹಳಷ್ಟು ಜವಾಬ್ದಾರಿಗಳಿರುತ್ತವೆ. ನಿಮ್ಮ ಹೆಸರಿನೊಂದಿಗೆ ಉಪನಾಯಕನ ಸ್ಥಾನ ಲಗತ್ತಿಸಿದಾಗ, ಮ್ಯಾನೇಜ್‌ಮೆಂಟ್ ಸಾಕಷ್ಟು ಚರ್ಚೆಯ ನಂತರ ನಿಮಗೆ ಈ ಜವಾಬ್ದಾರಿಯನ್ನು ನೀಡಿರುತ್ತದೆ. ಆದ್ದರಿಂದ, ನನಗೆ ನೀಡಲಾದ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಪೂರೈಸಲು ನಾನು ಬಯಸುತ್ತೇನೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ