AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL 2022: ಬಿಗ್ ಬ್ಯಾಷ್​ ಲೀಗ್ ಆಡಲಿದ್ದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ

Unmukt Chand: ಒಂದಷ್ಟು ವರ್ಷಗಳ ಕಾಲ ದೆಹಲಿ ಪರ ರಣಜಿ ಆಡಿದ್ದ ಉನ್ಮುಕ್ತ್ ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಅಷ್ಟೇ ಅಲ್ಲದೆ ಅಮೆರಿಕ ಲೀಗ್​ನಲ್ಲಿ ಆಡುವ ಮೂಲಕ ಭವಿಷ್ಯದಲ್ಲಿ ಅಮೆರಿಕ ತಂಡದ ಪರ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದರು.

BBL 2022: ಬಿಗ್ ಬ್ಯಾಷ್​ ಲೀಗ್ ಆಡಲಿದ್ದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ
Unmukt Chand
TV9 Web
| Edited By: |

Updated on:Nov 04, 2021 | 9:10 PM

Share

ಟೀಮ್ ಇಂಡಿಯಾದ ಮಾಜಿ ಆಟಗಾರ ಉನ್ಮುಕ್ತ್ ಚಂದ್ (Unmukt Chand) ಬಿಗ್ ಬ್ಯಾಷ್ ಲೀಗ್​ನಲ್ಲಿ (BBL 2022) ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಬಿಬಿಎಲ್​ ಆಡಲಿರುವ ಮೊದಲ ಭಾರತೀಯ ಆಟಗಾರರ ಎಂಬ ಹೆಗ್ಗಳಿಕೆ ಉನ್ಮುಕ್ತ್ ಚಂದ್ ಪಾಲಾಗಲಿದೆ. ಈ ಹಿಂದೆ ಟೀಮ್ ಇಂಡಿಯಾ (Team India) ಅಂಡರ್-19 ತಂಡವನ್ನು ಉನ್ಮುಕ್ತ್ ಚಂದ್ ಮುನ್ನಡೆಸಿದ್ದರು ಎಂಬುದು ವಿಶೇಷ. ಅಷ್ಟೇ ಅಲ್ಲದೆ 2012 ರಲ್ಲಿ ಅಂಡರ್​-19 ವಿಶ್ವಕಪ್​ ಗೆದ್ದ ತಂಡದ ನಾಯಕರಾಗಿದ್ದರು.

ಇದಾದ ಬಳಿಕ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದ ಉನ್ಮುಕ್ತ್ ಭವಿಷ್ಯದ ಟೀಮ್ ಇಂಡಿಯಾ ಆಟಗಾರ ಎಂದು ಗುರುತಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಪಿಎಲ್​ನಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಪರ ಕೂಡ ಕಣಕ್ಕಿಳಿದಿದ್ದರು. ಆದರೆ ಆ ಬಳಿಕ ಫಾರ್ಮ್​ ಕಳೆದುಕೊಂಡ ಯುವ ಆಟಗಾರ ತಂಡದಿಂದ ಹೊರಬಿದ್ದಿದ್ದರು.

ಇದಾಗ್ಯೂ ಒಂದಷ್ಟು ವರ್ಷಗಳ ಕಾಲ ದೆಹಲಿ ಪರ ರಣಜಿ ಆಡಿದ್ದ ಉನ್ಮುಕ್ತ್ ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಅಷ್ಟೇ ಅಲ್ಲದೆ ಅಮೆರಿಕ ಲೀಗ್​ನಲ್ಲಿ ಆಡುವ ಮೂಲಕ ಭವಿಷ್ಯದಲ್ಲಿ ಅಮೆರಿಕ ತಂಡದ ಪರ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದೀಗ ಆಸ್ಟ್ರೇಲಿಯಾದ ಬಿಗ್ ಬ್ಯಾಷ್​ ಲೀಗ್​ನಲ್ಲಿ ಉನ್ಮುಕ್ತ್​ ಚಂದ್​ ಅವಕಾಶ ಪಡೆದಿದ್ದಾರೆ. ಮುಂದಿನ ಸೀಸನ್ ಬಿಬಿಎಲ್​ಗಾಗಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 28 ವರ್ಷದ ಉನ್ಮುಕ್ತ್ ಚಂದ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಈ ಬಾರಿಯ ಬಿಬಿಎಲ್​ನಲ್ಲಿ ಉನ್ಮುಕ್ತ್ ಕಣಕ್ಕಿಳಿದರೆ ಬಿಗ್​ ಬ್ಯಾಷ್​ ಲೀಗ್​ನಲ್ಲಿ ಕಣಕ್ಕಿಳಿದ ಮೊದಲ ಭಾರತೀಯ ಕ್ರಿಕೆಟಿಗ ಎಂದೆನಿಸಿಕೊಳ್ಳಲಿದ್ದಾರೆ.

ಉನ್ಮುಕ್ತ್ ತಮ್ಮ ವೃತ್ತಿ ಜೀವನದಲ್ಲಿ ದೆಹಲಿ ಹಾಗೂ ಉತ್ತರಾಖಂಡ್ ಪರವಾಗಿ 67 ಪ್ರಥಮ ದರ್ಜೆ ಪಂದ್ಯಗಳು, 120 ಲಿಸ್ಟ್ ಎ ಪಂದ್ಯಗಳು ಮತ್ತು 77 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(Unmukt Chand signs up with Melbourne Renegades, becomes first Indian BBL player)

Published On - 9:01 pm, Thu, 4 November 21

Follow Us
TV9 Web
TV9 Web

TV9 Kannada

Read More
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ