AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನಿಂದಲೇ ಸಲಹೆ ಕೇಳಿ ನನ್ನ ದೇಶದ ವಿರುದ್ಧವೇ ಮಾತಾಡ್ತಾನೆ’; ಪಠಾಣ್ ವಿರುದ್ಧ ಅಕ್ರಮ್ ಆಕ್ರೋಶ

ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್, ಇರ್ಫಾನ್ ಪಠಾಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಠಾಣ್ ನಿವೃತ್ತಿಯ ನಂತರ ಪಾಕಿಸ್ತಾನದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಅಕ್ರಮ್ ಹೇಳಿದ್ದಾರೆ. ವೃತ್ತಿಬದುಕಿನ ಆರಂಭದಲ್ಲಿ ಪಠಾಣ್‌ಗೆ ತಾನೇ ಸಲಹೆ ನೀಡಿದ್ದೆ ಎಂದು ಸ್ಮರಿಸಿರುವ ಅಕ್ರಮ್, ತಮ್ಮ ಅಭಿಮಾನಿಗಳು ತಿರುಗಿಬೀಳುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

‘ನನ್ನಿಂದಲೇ ಸಲಹೆ ಕೇಳಿ ನನ್ನ ದೇಶದ ವಿರುದ್ಧವೇ ಮಾತಾಡ್ತಾನೆ’; ಪಠಾಣ್ ವಿರುದ್ಧ ಅಕ್ರಮ್ ಆಕ್ರೋಶ
ಇರ್ಫಾನ್ ಪಠಾಣ್, ವಾಸಿಂ ಅಕ್ರಮ್
ಪೃಥ್ವಿಶಂಕರ
|

Updated on:Sep 03, 2026 | 7:52 PM

Share

ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್, ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ವಿರುದ್ಧ ಗಂಭೀರ ಆರೋಪವೊಂದನ್ನು ಹೊರಿಸಿದ್ದಾರೆ. ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಮಾತನಾಡಿರುವ ಅಕ್ರಮ್, ಇರ್ಫಾನ್ ಪಠಾಣ್ ಅವರ ವೃತ್ತಿಬದುಕಿನ ಆರಂಭದಲ್ಲಿ ನಾನು ಅವರಿಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೆ. ಬೌಲಿಂಗ್​ನಲ್ಲಿ ಮಾಡಬೇಕಾದ ವ್ಯತ್ಯಾಸಗಳ ಮಹತ್ವದ ಬಗ್ಗೆ ನಾನು ಪಠಾಣ್​​ಗೆ ವಿವರಿಸಿದ್ದೆ. ಆದರೀಗ ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಪಠಾಣ್ ಪಾಕಿಸ್ತಾನದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಮಾಡುತ್ತಿರುತ್ತಾರೆ. ಇದು ಸರಿಯಲ್ಲ. ನಮಗೂ ಅಭಿಮಾನಿಗಳಿದ್ದಾರೆ ಅವರು ತಿರುಗಿಬಿದ್ದರೆ ಪಠಾಣ್​ಗೆ ಸಂಕಷ್ಟ ತಪ್ಪಿದಲ್ಲ ಎಂಬರ್ಥದಲ್ಲಿ ಅಕ್ರಮ್ ಮಾತನಾಡಿದ್ದಾರೆ.

ಪಠಾಣ್ ನನ್ನ ದೊಡ್ಡ ಅಭಿಮಾನಿ

ದಶಕಗಳ ಕಾಲ ಪಾಕ್ ಕ್ರಿಕೆಟ್​ನಲ್ಲಿ ಮಿಂಚಿದ ಅಕ್ರಮ್ ಬೌಲರ್ ಆಗಿ ಮಾತ್ರವಲ್ಲದೆ ನಾಯಕನಾಗಿಯೂ ಮಿಂಚಿದವರು. ಆದಾಗ್ಯೂ ಅಕ್ರಮ್ 2003 ರಲ್ಲಿ ವೃತ್ತಿಬದುಕಿಗೆ ವಿದಾಯ ಹೇಳಿದರು. ಇತ್ತ ಅದೇ ವರ್ಷ ಇರ್ಫಾನ್ ಪಠಾಣ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಒಂದೆಡೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇರ್ಫಾನ್ ಪಠಾಣ್ ತಮ್ಮ ಚೊಚ್ಚಲ ಪಂದ್ಯವನ್ನಾಡಿದರೆ, ಇತ್ತ ವಾಸಿಂ ಅಕ್ರಮ್ ಅದೇ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರನಾಗಿದ್ದರು. ಈ ಸಮಯದಲ್ಲಿ ಇರ್ಫಾನ್ ಪಠಾಣ್ ಜೊತೆಗಿನ ಸಂಭಾಷಣೆಯನ್ನು ಇಲ್ಲಿ ಬಹಿರಂಗಪಡಿಸಿರುವ ಅಕ್ರಮ್, ‘ಇರ್ಫಾನ್ ಪಠಾಣ್ ನನ್ನನ್ನು ಮೊದಲು ಭೇಟಿಯಾದದ್ದು 2004 ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ. ಆಗ ನಾನು ಇಎಸ್‌ಪಿಎನ್ ಸ್ಟಾರ್‌ಗೆ ವ್ಯಾಖ್ಯಾನಕಾರನಾಗಿದ್ದೆ. ಅವರು ನನ್ನ ದೊಡ್ಡ ಅಭಿಮಾನಿ. ಅವರು ನಮ್ಮ ಆಟವನ್ನು ನೋಡುತ್ತಾ ಬೆಳೆದವರು. ಆ ಸರಣಿಯಲ್ಲಿ ನಾನು ಅವರಿಗೆ ಕೆಲವು ಸಲಹೆಗಳನ್ನು ನೀಡಿದ್ದೇನೆ. ಇರ್ಫಾನ್ ತಮ್ಮ ವೃತ್ತಿಜೀವನದ ಆರಂಭದಿಂದಲೂ ಅದ್ಭುತವಾಗಿ ಆಡುತ್ತಿದ್ದಾರೆ. ಆರಂಭದಲ್ಲಿ, ಅವರ ಬೌಲಿಂಗ್ ಶೈಲಿ ನನ್ನಂತೆಯೇ ಇತ್ತು.

‘ಆರ್​ಸಿಬಿ ಹೊರಹಾಕಿದ ದುಬಾರಿ ವೇಗಿಯನ್ನು ಸಿಎಸ್​ಕೆ ಖರೀದಿಸಬೇಕು’; ಇರ್ಫಾನ್ ಪಠಾಣ್

ಇರ್ಫಾನ್ ಒಳ್ಳೆಯ ವ್ಯಕ್ತಿ

ಹುಡುಗರು ನಮ್ಮಿಂದ ಸಲಹೆ ಕೇಳಿದಾಗ, ನಾವು ಮುಖ್ಯವಾಗಿ ಮನಸ್ಥಿತಿಯ ಬಗ್ಗೆ ಮಾತನಾಡುತ್ತೇವೆ. ನಾವು ಮಣಿಕಟ್ಟಿನ ಸ್ಥಾನ ಮತ್ತು ಎದುರಾಳಿಯ ಬ್ಯಾಟರ್ ಅನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದರ ಬಗ್ಗೆ ಮಾತನಾಡುತ್ತೇವೆ. ಇರ್ಫಾನ್ ಒಳ್ಳೆಯ ವ್ಯಕ್ತಿ. ನಾವು ಈಗಲೂ ಆಗಾಗ್ಗೆ ಭೇಟಿಯಾಗುತ್ತೇವೆ. ಆದಾಗ್ಯೂ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ವಿರುದ್ಧ ಆಗಾಗ್ಗೆ ಪೋಸ್ಟ್ ಮಾಡುತ್ತಾರೆ. ನಮ್ಮ ಅಭಿಮಾನಿಗಳು ಸಹ ಅದಕ್ಕೆ ಸಿದ್ಧರಿದ್ದಾರೆ. ಅವರು ಅಂತಹ ವಿಷಯಗಳಿಗೆ ಉತ್ತರಿಸುತ್ತಾರೆ’ ಎಂದು ಅಕ್ರಮ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 pm, Thu, 3 September 26

Follow Us
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ
‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!
ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!
ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?
ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ
ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ
ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?
ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?
ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ
ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ