WI vs SA: ತವರಿನಲ್ಲಿ ಸರಣಿ ಸೋತ ಹರಿಣಗಳು; ಕೆರಿಬಿಯನ್ ದೈತ್ಯರ ಆಟಕ್ಕೆ ಸುಸ್ತಾದ ಸೌತ್ ಆಫ್ರಿಕಾ

WI vs SA: ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಏಳು ರನ್‌ಗಳಿಂದ ಗೆದ್ದು ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ.

WI vs SA: ತವರಿನಲ್ಲಿ ಸರಣಿ ಸೋತ ಹರಿಣಗಳು; ಕೆರಿಬಿಯನ್ ದೈತ್ಯರ ಆಟಕ್ಕೆ ಸುಸ್ತಾದ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ
Follow us
ಪೃಥ್ವಿಶಂಕರ
|

Updated on:Mar 29, 2023 | 10:59 AM

ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ (South Africa Vs West Indies) ನಡುವೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವೂ ರೋಚಕ ರೀತಿಯಲ್ಲಿ ಅಂತ್ಯಗೊಂಡಿದೆ. ಜೋಹಾನ್ಸ್‌ಬರ್ಗ್‌ನಲ್ಲಿ (Johannesburg) ನಡೆದ ಈ ರೋಚಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಏಳು ರನ್‌ಗಳಿಂದ ಗೆದ್ದು ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿಯೂ ಮತ್ತೊಮ್ಮೆ ಉಭಯ ತಂಡಗಳು ರನ್ ಹೊಳೆ ಹರಿಸಿದವಾದರೂ ವಿಂಡೀಸ್ ತಂಡ ಅಂತಿಮವಾಗಿ ಜಯದ ಮಾಲೆ ಹಾಕಿಕೊಂಡಿತು. ಟಿ20 ಸರಣಿಗೂ ಮುನ್ನ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ, ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಸರಣಿಯನ್ನು ಸೋತಿದ್ದರೆ, ಏಕದಿನ ಸರಣಿ 1-1ರಿಂದ ಸಮಬಲಗೊಂಡಿತ್ತು. ಇದೀಗ ಟಿ20 ಸರಣಿ (T20 series) ವಶಪಡಿಸಿಕೊಂಡಿರುವ ಕೆರಿಬಿಯನ್ನರು ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.

ಅಂತಿಮ ಪಂದ್ಯಕ್ಕೂ ಮುನ್ನ ನಡೆದ ಸರಣಿಯ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ಮೂರು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಎರಡನೇ ಪಂದ್ಯದಲ್ಲಿ ವಿಂಡೀಸ್ ನೀಡಿದ್ದ 258 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕರ ಆರ್ಭಟದಿಂದಾಗಿ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು. ಹೀಗಾಗಿ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದ್ದರಿಂದ ಮೂರನೇ ಪಂದ್ಯ ಕುತೂಹಲ ಹೆಚ್ಚಿಸಿತು. ಮೂರನೇ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಮಾಡಿ ಅಂತಿಮವಾಗಿ 220 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಆತಿಥೇಯ ತಂಡ ನಿಗದಿತ 20 ಒವರ್​ಗಳಲ್ಲಿ 213 ರನ್ ಗಳಿಸಲಷ್ಟೇ ಶಕ್ತವಾಯಿತು.

IPL 2023: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯ ನಾಯಕ! ರೋಹಿತ್ ಕಥೆ ಏನು?

ವೆಸ್ಟ್ ಇಂಡೀಸ್ ಬಿರುಸಿನ ಆಟ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 8 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತು. ಈ ಇನ್ನಿಂಗ್ಸ್‌ನಲ್ಲಿಯೂ ವಿಂಡೀಸ್ ಪಾಳಯದಿಂದ ಒಟ್ಟು 16 ಸಿಕ್ಸರ್‌ ಮತ್ತು 13 ಬೌಂಡರಿಗಳು ಸಿಡಿದವು. ಕೇವಲ ಮೂರು ಓವರ್‌ಗಳಲ್ಲಿಯೇ ತಂಡದ ಸ್ಕೋರ್ 40 ರನ್‌ಗಳ ಗಡಿ ದಾಟಿತ್ತು. ಆದರೆ ನಾಲ್ಕನೇ ಓವರ್‌ನಲ್ಲಿ ದಾಳಿಗಿಳಿದ ರಬಾಡ ಮೊದಲು ಕೈಲ್ ಮೇಯರ್ಸ್ (17) ಮತ್ತು ಚಾರ್ಲ್ಸ್ ಅವರನ್ನು ಖಾತೆ ತೆರೆಯದೆ ಪೆವಿಲಿಯನ್‌ಗೆ ಕಳುಹಿಸಿ, ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು.

ಇಲ್ಲಿಂದ ವಿಂಡೀಸ್ ಇನ್ನಿಂಗ್ಸ್ ಕಟ್ಟಿದ ಬ್ರಾಂಡನ್ ಕಿಂಗ್ ಮತ್ತು ನಿಕೋಲಸ್ ಪೂರನ್ ಅರ್ಧಶತಕದ ಜೊತೆಯಾಟ ಹಂಚಿಕೊಂಡರು. ಈ ಇಬ್ಬರನ್ನು ಹೊರತುಪಡಿಸಿ ಅಲ್ಜಾರಿ ಜೋಸೆಫ್ ಮತ್ತು ರೊಮಾರಿಯಾ ಶೆಫರ್ಡ್ 26 ಎಸೆತಗಳಲ್ಲಿ 59 ರನ್​ಗಳ ಸ್ಫೋಟಕ ಜೊತೆಯಾಟ ನಡೆಸಿದರು. ಅದರಲ್ಲೂ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 26 ರನ್ ಚಚ್ಚಿದ ಈ ಜೋಡಿ ವಿಂಡೀಸ್​ ಬೃಹತ್ ಟಾರ್ಗೆಟ್ ಸೆಟ್ ಮಾಡುವಲ್ಲಿ ನೆರವಾದರು.

ತವರಿನಲ್ಲಿ ಸರಣಿ ಸೋತ ಆಫ್ರಿಕಾ

ವಿಂಡೀಸ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಅಲ್ಜಾರಿ ಜೋಸೆಫ್ ದಾಳಿಗೆ ತತ್ತರಿಸಿತು. ಹೀಗಾಗಿ ತಂಡದ ಆರಂಭ ಕಳೆದ ಪಂದ್ಯಕ್ಕೆ ತದ್ವಿರುದ್ದವಾಗಿತ್ತು. 2ನೇ ಪಂದ್ಯದಲ್ಲಿ ಆಫ್ರಿಕಾ ಪವರ್ ಪ್ಲೇನಲ್ಲಿಯೇ ಶತಕದ ಗಡಿ ದಾಟಿತ್ತು. ಆದರೆ ಈ ಬಾರಿ ಅಂತಹ ಆರಂಭ ಸಿಗಲಿಲ್ಲ. ಅಲ್ಲದೆ ಶೀಘ್ರದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಪತನವಾಯಿತು. ಇಲ್ಲಿಂದ ರೀಜಾ ಹೆಂಡ್ರಿಕ್ಸ್ ಮತ್ತು ರೈಲಿ ರುಸ್ಸೋ ಇನ್ನಿಂಗ್ಸ್ ನಿಭಾಯಿಸಿ, ಎರಡನೇ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿದರು. ರುಸ್ಸೋ ಅವರನ್ನು ಔಟ್ ಮಾಡುವ ಮೂಲಕ ಜೇಸನ್ ಹೋಲ್ಡರ್ ಈ ಜೊತೆಯಾಟವನ್ನು ಮುರಿದರು.

ಆ ಬಳಿಕ ಶತಕದಂಚಿನಲ್ಲಿ ಎಡವಿದ ಹೆಂಡ್ರಿಕ್ಸ್ 83 ವೈಯಕ್ತಿಕ ರನ್ಗಳಿರುವಾಗ​ ಅಲ್ಜಾರಿಗೆ ಬಲಿಯಾದರು. ಕೊನೆಯ ಹಂತದಲ್ಲಿ ಬಿರುಗಾಳಿಯ ಬ್ಯಾಟಿಂಗ್ ಮಾಡಿದ ಏಡನ್ ಮಾರ್ಕ್ರಾಮ್, 35 ರನ್ ಗಳಿಸಿದರು, ಆದರೆ ಅಷ್ಟು ಹೊತ್ತಿಗೆ ಪಂದ್ಯ ಆಫ್ರಿಕಾ ಕೈಯಿಂದ ಜಾರಿತ್ತು. ಈ ಪಂದ್ಯದಲ್ಲಿ ಮಾರಕ ದಾಳಿ ಮಾಡಿದ ಜೋಸೆಫ್, ಆಫ್ರಿಕಾ ತಂಡದ ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್ ಮತ್ತು ವೇಯ್ನ್ ಪಾರ್ನೆಲ್ ವಿಕೆಟ್ ಪಡೆದು, ವಿಂಡೀಸ್ ಗೆಲುವಿನ ರೂವಾರಿ ಎನಿಸಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:57 am, Wed, 29 March 23

ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ