AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೈನಲ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಪಾಕಿಸ್ತಾನ್!

ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಹೀನಾಯ ಸೋಲನುಭವಿಸಿತ್ತು. ಇದೀಗ ಮೂರನೇ ಮ್ಯಾಚ್​ನಲ್ಲೂ ಮುಗ್ಗರಿಸಿದೆ. ಈ ಸತತ ಮೂರು ಸೋಲುಗಳೊಂದಿಗೆ ಪಾಕ್ ಪಡೆಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಭಗ್ನಗೊಂಡಿದೆ. ಅದು ಕೂಡ 9 ಪಂದ್ಯಗಳೊಂದಿಗೆ!

ಫೈನಲ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಪಾಕಿಸ್ತಾನ್!
ಪಾಕಿಸ್ತಾನ್Image Credit source: GettyImages
ಝಾಹಿರ್ ಯೂಸುಫ್
|

Updated on:Sep 13, 2026 | 1:51 PM

Share

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಪಾಕಿಸ್ತಾನ್ ಕ್ರಿಕೆಟ್ ತಂಡದ ಕನಸು ನುಚ್ಚುನೂರಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನುಭವಿಸಿದ 3-0 ಅಂತರದ ಹೀನಾಯ ಸೋಲಿನೊಂದಿಗೆ ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ್ ತಂಡ, ಲಂಡನ್‌ನ ದಿ ಓವಲ್‌ನಲ್ಲಿ ನಡೆಯಲಿರುವ ಮಹತ್ವದ ಫೈನಲ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.

ಲಾರ್ಡ್ಸ್ ಟೆಸ್ಟ್ ಸೋಲಿನ ಆಘಾತ!

ಪಾಕಿಸ್ತಾನ್ ತಂಡವು ಎಡ್ಜ್​ಬಾಸ್ಟನ್​ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿತು. ಇದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 3-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಸರಣಿ ಸೋಲಿನೊಂದಿಗೆ ಪಾಕಿಸ್ತಾನ್ ತಂಡ ಅಧಿಕೃತವಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ರೇಸ್​ನಿಂದ ಹೊರಬಿದ್ದಂತಾಗಿದೆ.

ಪಾತಾಳದಲ್ಲಿ ಪಾಕಿಸ್ತಾನ್:

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಪಾಕಿಸ್ತಾನ್ ತಂಡ ಕೊನೆಯ ಸ್ಥಾನದಲ್ಲಿದೆ. ಈವರೆಗೆ ಆಡಿದ 9 ಪಂದ್ಯಗಳಲ್ಲಿ ಪಾಕ್ ಪಡೆ ಕೇವಲ 2 ಜಯ ಮತ್ತು 7 ಸೋಲುಗಳೊಂದಿಗೆ ತೀವ್ರ ಹಿನ್ನಡೆ ಅನುಭವಿಸಿದೆ. ಈ ಹಿನ್ನಡೆಯೊಂದಿಗೆ ಪಾಕಿಸ್ತಾನ್ ತಂಡ ಹೊಂದಿರುವ ಪಾಯಿಂಟ್ಸ್ ಪರ್ಸೆಂಟೇಜ್ ಕೇವಲ 14.81% ಮಾತ್ರ.

ಹೀಗಾಗಿಯೇ ಮುಂಬರುವ ಎಲ್ಲಾ ಪಂದ್ಯಗಳನ್ನು ಗೆದ್ದರೂ ಸಹ ಅಗ್ರ ಎರಡು ಸ್ಥಾನಕ್ಕೇರಲು ಅಗತ್ಯವಿರುವ ಕನಿಷ್ಠ ಸರಾಸರಿಯನ್ನು ತಲುಪಲು ಪಾಕಿಸ್ತಾನ್ ತಂಡಕ್ಕೆ ಸಾಧ್ಯವಿಲ್ಲ.

ಪಾಕ್ ಪಡೆ ಹೊರಬೀಳಲು ಕಾರಣಗಳೇನು?

ನಿಧಾನಗತಿಯ ಓವರ್ ರೇಟ್ ದಂಡ: ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್‌ನಲ್ಲಿ ಸೋತಿದ್ದಲ್ಲದೆ, ನಿಧಾನಗತಿಯ ಓವರ್ ರೇಟ್‌ಗಾಗಿ ಪಾಕಿಸ್ತಾನ್ ತಂಡದ 8 ಅಂಕಗಳನ್ನು ಕಡಿತಗೊಳಿಸಿತು. ಇದರಿಂದಾಗಿ ಪಾಕಿಸ್ತಾನ್ ತಂಡವು ಅಂಕಪಟ್ಟಿಯಲ್ಲಿ ತೀವ್ರ ಕುಸಿತ ಕಂಡು ಕೊನೆಯ ಸ್ಥಾನದತ್ತ ಮುಖ ಮಾಡಿದೆ.

ಸರಣಿ ಸೋಲುಗಳು: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ತೀವ್ರ ಮುಖಭಂಗ ಅನುಭವಿಸಿದ ನಂತರ, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ 194 ರನ್‌ಗಳ ಹೀನಾಯ ಸೋಲು, ಕೊನೆಯ ಟೆಸ್ಟ್​ ಪಂದ್ಯದಲ್ಲಿನ 8 ವಿಕೆಟ್​ಗಳ ಪರಾಜಯ ಪಾಕಿಸ್ತಾನ್ ತಂಡದ ಫೈನಲ್​ ಲೆಕ್ಕಾಚಾರಗಳನ್ನು  ತಲೆಕೆಳಗಾಗಿಸಿದೆ.

ಯಾಕೆ ಫೈನಲ್​ಗೇರಲು ಸಾಧ್ಯವಿಲ್ಲ?

ಪಾಕಿಸ್ತಾನ್ ತಂಡಕ್ಕೆ ಇನ್ನು ಮುಂದೆ ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ವಿರುದ್ಧ ತಲಾ 2 ಪಂದ್ಯಗಳು ಬಾಕಿ ಇವೆ. ಆದರೆ, ಈ ಎಲ್ಲಾ ಪಂದ್ಯಗಳನ್ನು ಗೆದ್ದರೂ ಸಹ ಅಗ್ರ ಎರಡು ಸ್ಥಾನಕ್ಕೇರಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಐಸಿಸಿಯ ಅಂಕಗಳ ಶೇಕಡಾವಾರು ನಿಯಮ.

ಗರಿಷ್ಠ ಅಂಕಗಳ ಮಿತಿ: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸತತ ಸೋಲು ಕಂಡ ಬಳಿಕ ಪಾಕಿಸ್ತಾನದ PCT ಪಾತಾಳಕ್ಕೆ ಕುಸಿದಿದೆ. ಈಗ ಅವರಿಗಿರುವ ಪಂದ್ಯಗಳ ಸಂಖ್ಯೆ ತೀರಾ ಕಡಿಮೆ. ಪಾಕಿಸ್ತಾನ್ ತಂಡವು ತನ್ನ ಮುಂಬರುವ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದರೂ ಸಹ, ಅವರ ಗರಿಷ್ಠ PCT ಶೇಕಡಾ 50% ದಾಟಲು ಸಾಧ್ಯವಿಲ್ಲ.

ಟಾಪ್ ತಂಡಗಳ ಸದ್ಯದ ಸ್ಥಿತಿ: ಪ್ರಸ್ತುತ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ (80%) ಮತ್ತು ಸೌತ್ ಆಫ್ರಿಕಾ (75%) ತಂಡಗಳು ಈಗಾಗಲೇ ಪಾಕಿಸ್ತಾನ್ ತಂಡ ತಲುಪಬಹುದಾದ ಗರಿಷ್ಠ ಮಿತಿಗಿಂತ (50%) ಬಹುದೂರ ಮುನ್ನಡೆದಿವೆ.

ರೇಸ್‌ನಲ್ಲಿರುವ ಇತರ ತಂಡಗಳು: ನ್ಯೂಝಿಲೆಂಡ್, ಬಾಂಗ್ಲಾದೇಶ್ ಮತ್ತು ಭಾರತ ತಂಡಗಳು ಕೂಡ 50% ಕ್ಕಿಂತ ಹೆಚ್ಚಿನ PCT ಹೊಂದಿವೆ. ಹೀಗಾಗಿ ಪಾಕಿಸ್ತಾನ್ ಇನ್ನುಳಿದ ಪಂದ್ಯಗಳನ್ನು ಗೆದ್ದರೂ ಈ ತಂಡಗಳನ್ನು ಹಿಂದಿಕ್ಕಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ದಾದಾ, ಯುವಿ, ವಾಸ್… ಡೆಲ್ಲಿ ಕ್ಯಾಪಿಟಲ್ಸ್ ಹೊಸ ‘ಮಾಸ್ಟರ್ ಮೈಂಡ್ಸ್’

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಬೇಕಿದ್ದರೆ ಕನಿಷ್ಠ ಶೇ. 60 ರಿಂದ ಶೇ. 65 ರಷ್ಟು ಪಿಸಿಟಿ (PCT) ಅಂಕಗಳ ಅಗತ್ಯವಿರುತ್ತದೆ. ಆದರೆ ಪಾಕಿಸ್ತಾನ್ ತಂಡವು ತನ್ನ ಮುಂಬರುವ ಎಲ್ಲಾ ಪಂದ್ಯಗಳನ್ನು ಗೆದ್ದರೂ ಸಹ, ಗರಿಷ್ಠ ಪ್ರಯತ್ನದ ನಡುವೆಯೂ ಆ ಅಗತ್ಯ ಮಟ್ಟವನ್ನು ತಲುಪಲು ಸಾಧ್ಯವೇ ಇಲ್ಲ. ಅಲ್ಲಿಗೆ ಪಾಕಿಸ್ತಾನ್ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಸಂಪೂರ್ಣವಾಗಿ ನುಚ್ಚುನೂರಾದಂತಾಗಿದೆ.

Published On - 1:50 pm, Sun, 13 September 26

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ