AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final 2023: ರೋಹಿತ್ ಟೆಸ್ಟ್ ನಾಯಕತ್ವಕ್ಕೆ ಕುತ್ತು! ಬಿಸಿಸಿಐ ಅಧಿಕಾರಿ ಹೇಳಿದ್ದೇನು?

WTC Final 2023: ಕಳೆದ ಎರಡು ವರ್ಷಗಳಲ್ಲಿ, ಭಾರತವು 19 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆದರೆ ಇದರಲ್ಲಿ ಇಂಜುರಿ ಕಾರಣ ನೀಡಿ ರೋಹಿತ್ 8 ಪಂದ್ಯಗಳಿಂದ ಹೊರಗುಳಿದಿದ್ದರು.

WTC Final 2023: ರೋಹಿತ್ ಟೆಸ್ಟ್ ನಾಯಕತ್ವಕ್ಕೆ ಕುತ್ತು! ಬಿಸಿಸಿಐ ಅಧಿಕಾರಿ ಹೇಳಿದ್ದೇನು?
ರೋಹಿತ್ ಶರ್ಮಾ
ಪೃಥ್ವಿಶಂಕರ
|

Updated on:Jun 03, 2023 | 10:31 AM

Share

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ (WTC Final 2023) ಇನ್ನು ಕೇವಲ ನಾಲ್ಕೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಉಭಯ ತಂಡಗಳು ಅಂತಿಮ ಹಂತಸ ಸಿದ್ಧತೆಗಳಲ್ಲಿವೆ. ಟೆಸ್ಟ್ ವಿಶ್ವಕಪ್‌ ಫೈನಲ್​ಗೆ ಭಾರತ ಸತತ ಎರಡನೇ ಬಾರಿಗೆ ಲಗ್ಗೆ ಇಟ್ಟಿದ್ದರೆ, ಇತ್ತ ಆಸ್ಟ್ರೇಲಿಯಾ (India vs Australia) ಮೊದಲ ಬಾರಿಗೆ ಫೈನಲ್ ಆಡುತ್ತಿದೆ. ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು (Team India) ಮುನ್ನಡೆಸುತ್ತಿದ್ದರೆ, ಪ್ಯಾಟ್ ಕಮ್ಮಿನ್ಸ್ ಕಾಂಗರೂ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಈ ಗ್ರ್ಯಾಂಡ್ ಫೈನಲ್‌ಗಾಗಿ ಎರಡೂ ತಂಡಗಳು ತೀವ್ರ ಅಭ್ಯಾಸ ನಡೆಸಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಟೆಸ್ಟ್ ನಾಯಕತ್ವದ ಬದಲಾವಣೆ ವಿಚಾರ ಮುಂಚೂಣಿಗೆ ಬಂದಿದ್ದು, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಬಳಿಕ ಹಾಲಿ ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ನಾಯಕತ್ವ ಕಳೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಪೂರಕವೆಂಬಂತೆ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಬಿಸಿಸಿಐ ಅಧಿಕಾರಿ ಮಹತ್ವದ ಮಾಹಿತಿ ನೀಡಿದ್ದಾರೆ.

2013ರ ಬಳಿಕ ಐಸಿಸಿ ಟ್ರೋಫಿ ಗೆದ್ದಿಲ್ಲ

2011 ರಿಂದ ಟೀಂ ಇಂಡಿಯಾ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾಗೆ ಆ ಅವಕಾಶ ಸಿಕ್ಕಿದೆ. ರೋಹಿತ್ ಶರ್ಮಾ ನಾಯಕನಾಗಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಲೇಬೇಕಾದ ಒತ್ತಡದಲ್ಲಿದ್ದಾರೆ. ಏಕೆಂದರೆ ರೋಹಿತ್ ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕತ್ವವಹಿಸಿಕೊಂಡ ನಂತರ ಟೆಸ್ಟ್ ಕ್ರಿಕೆಟ್​ನಲ್ಲಿ ಆಡಿದಕ್ಕಿಂತ, ವಿರಾಮ ತೆಗೆದುಕೊಂಡಿದ್ದೆ ಹೆಚ್ಚು. ರೋಹಿತ್ ಇದುವರೆಗೆ ಒಟ್ಟು 6 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ರೋಹಿತ್ ಎರಡೂ ಸರಣಿಗಳಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಆದರೆ ಈ ನಡುವೆ ರೋಹಿತ್ ಅವರ ವೈಯಕ್ತಿಕ ಪ್ರದರ್ಶನ ಕುಸಿತ ಕಂಡಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಬಳಿಕ ನಾಯಕನ ಬದಲಾವಣೆಯಾಗಲಿದೆ ಎಂಬುದು ಕ್ರಿಕೆಟ್ ಲೋಕದ ಟಾಕ್ ಆಗಿದೆ.

WTC Final 2023: ಕಿಂಗ್ ಕೊಹ್ಲಿ ಎಂದರೆ ಆಸೀಸ್ ಬೌಲರ್​ಗಳಿಗೆ ನಡುಕ! ಯಾಕೆ ಗೊತ್ತಾ?

ಆಡಿದ್ದಕ್ಕಿಂತ ವಿರಾಮ ತೆಗೆದುಕೊಂಡಿದ್ದೆ ಹೆಚ್ಚು

ಇದಕ್ಕೆ ಕಾರಣವೂ ಇದ್ದು, ಕಳೆದ ಎರಡು ವರ್ಷಗಳಲ್ಲಿ, ಭಾರತವು 19 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆದರೆ ಇದರಲ್ಲಿ ಇಂಜುರಿ ಕಾರಣ ನೀಡಿ ರೋಹಿತ್ 8 ಪಂದ್ಯಗಳಿಂದ ಹೊರಗುಳಿದಿದ್ದರು. ಅಲ್ಲದೆ ರೋಹಿತ್ ನಾಯಕತ್ವದಲ್ಲಿ ಭಾರತ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಗೆಲ್ಲಲು ವಿಫಲವಾಗಿದೆ. ಇದಲ್ಲದೆ, ಬಾಂಗ್ಲಾದೇಶ ವಿರುದ್ಧ ಭಾರತ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಇವೆಲ್ಲವೂ ದೀರ್ಘಾವಧಿಯಲ್ಲಿ ರೋಹಿತ್ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಈಗ ಭಾರತ ಮತ್ತೊಂದು ಟ್ರೋಫಿಯನ್ನು ಕಳೆದುಕೊಂಡರೆ, ಡಬ್ಲ್ಯುಟಿಸಿ ಫೈನಲ್‌ನ ನಂತರ ರೋಹಿತ್ ತಕ್ಷಣವೇ ಟೆಸ್ಟ್‌ನಿಂದ ಕೆಳಗಿಳಿಯುವ ಸಾಧ್ಯತೆಯಿಲ್ಲ. ಆದರೆ ಏಷ್ಯಾಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಸೋಲು ಮತ್ತು ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲು ಸೇರಿದಂತೆ,  ಡಬ್ಲ್ಯುಟಿಸಿ ಫೈನಲ್‌ನ ಸೋಲು ಬಿಸಿಸಿಐ, ರೋಹಿತ್ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಇದೆಲ್ಲವುದರ ಜೊತೆಗೆ ರೋಹಿತ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲು ಪ್ರಮುಖ ಕಾರಣ ಅವರ ವಯಸ್ಸು. ರೋಹಿತ್​ಗೆ ಸದ್ಯ 36 ವರ್ಷ ವಯಸ್ಸಾಗಿದೆ. ಹೀಗಾಗಿ ವಯಸ್ಸಾದ ಕಾರಣ ರೋಹಿತ್ ಮುಂದಿನ ದಿನಗಳಲ್ಲಿ ನಾಯಕನಾಗಿ ಉಳಿಯುವುದು ಸವಾಲಾಗಿರಬಹುದು. ಈ ನಡುವೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ರೋಹಿತ್ ನಾಯಕತ್ವದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದು, ರೋಹಿತ್ ಎಷ್ಟು ಸಮಯದವರೆಗೆ ಟೆಸ್ಟ್ ಕ್ರಿಕೆಟ್ ಆಡುತ್ತಾರೆ ಎಂಬ ಬಗ್ಗೆ ಖಚಿತವಿಲ್ಲ ಎಂದಿದ್ದಾರೆ.

ಬಿಸಿಸಿಐ ಅಧಿಕಾರಿ ಹೇಳಿದ್ದೇನು?

ಬಿಸಿಸಿಐ ಅಧಿಕಾರಿಯೊಬ್ಬರು ಇನ್‌ಸೈಡ್ ಸ್ಪೋರ್ಟ್ಸ್‌ಗೆ, “ಸದ್ಯ ಟೆಸ್ಟ್ ನಾಯಕನನ್ನು ಹುಡುಕಲು ಯಾವುದೇ ಆತುರವಿಲ್ಲ. ರೋಹಿತ್ ಫಿಟ್ ಆಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಫಲಿತಾಂಶ ಏನೇ ಇರಲಿ, ರೋಹಿತ್ ನಾಯಕರಾಗಿ ಮುಂದುವರೆಯಲಿದ್ದಾರೆ. ಆದರೆ ರೋಹಿತ್‌ ಟೆಸ್ಟ್‌ ಕ್ರಿಕೆಟ್​ನಲ್ಲಿ ಎಲ್ಲಿ ಆಡಬೇಕೆಂದು ಖಚಿತವಾಗಿಲ್ಲ. ಈ ಬಗ್ಗೆ ನಾವು ಏನನ್ನೂ ಚರ್ಚಿಸಿಲ್ಲ. ಆದರೆ ಏಕದಿನ ವಿಶ್ವಕಪ್‌ ಬಳಿಕ ರೋಹಿತ್‌ ಜತೆ ಚರ್ಚೆ ನಡೆಸಲಿದ್ದೇವೆ ಎಂದಿದ್ದಾರೆ.

WTC ಫೈನಲ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕೆಎಸ್ ಭರತ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕಟ್.

ಮೀಸಲು ಆಟಗಾರರು | ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಮುಖೇಶ್ ಕುಮಾರ್

WTC ಫೈನಲ್‌ಗೆ ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ ಮತ್ತು ಮ್ಯಾಥ್ಯೂ ರೆನ್ಶಾ.

ಮೀಸಲು ಆಟಗಾರರು | ಮಿಚೆಲ್ ಮಾರ್ಷ್ ಮತ್ತು ಮ್ಯಾಥ್ಯೂ ರೆನ್ಶಾ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:30 am, Sat, 3 June 23

Follow Us