- TV9 Kannada Photo gallery Cricket photos Dhruv Jurel's Second Test Century: 115* Against SL, Emotional Tattoo Tribute Viral
IND vs SL: ‘ಜೈ ಜವಾನ್, ಜೈ ಕಿಸಾನ್’; ಧ್ರುವ್ ಜುರೇಲ್ ಟ್ಯಾಟೂಗೆ ಭಾರಿ ಮೆಚ್ಚುಗೆ
Dhruv Jurel tattoo meaning: ಧ್ರುವ್ ಜುರೇಲ್ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ನಲ್ಲಿ 115* ರನ್ ಗಳಿಸಿ ಎರಡನೇ ಶತಕ ಬಾರಿಸಿದರು. ಈ ಮೂಲಕ MS ಧೋನಿ ದಾಖಲೆ ಮುರಿದರು. ಶತಕದ ಸಂಭ್ರಮದಲ್ಲಿ 'ಜೈ ಜವಾನ್, ಜೈ ಕಿಸಾನ್' ಟ್ಯಾಟೂ ಪ್ರದರ್ಶಿಸಿ ವೈರಲ್ ಆದರು. ಸೈನಿಕ ತಂದೆ, ರೈತ ಅಜ್ಜನಿಗೆ ಅರ್ಪಿಸಿದ ಈ ಟ್ಯಾಟೂ, ಅವರ ಪಾಲಿನ ಹೆಮ್ಮೆಯ ಪ್ರತೀಕವಾಗಿದೆ.
Updated on: Aug 24, 2026 | 10:49 PM

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೇಲ್ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದರು. ಇದು ಟೆಸ್ಟ್ ವೃತ್ತಿಜೀವನದಲ್ಲಿ ಅವರ ಎರಡನೇ ಟೆಸ್ಟ್ ಶತಕವಾಗಿದೆ. ಈ ಶತಕದ ಬಳಿಕ ಜುರೇಲ್ ತಮ್ಮ ಎಡಗೈ ಬೈಸೆಪ್ಸ್ ತೋರಿಸುವ ಮೂಲಕ ಸಂಭ್ರಮಿಸಿದರು. ಇದೀಗ ಆ ಸಂಭ್ರಮದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ(PC-BCCI).

ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಆಡಿದ ಜುರೆಲ್ 177 ಎಸೆತಗಳಲ್ಲಿ ಅಜೇಯ 115 ರನ್ಗಳ ಇನ್ನಿಂಗ್ಸ್ ಆಡಿದರು. ಶತಕ ಬಾರಿಸಿದ ನಂತರ ಜುರೇಲ್ ತಮ್ಮ ಎಡಗೈ ಬೈಸೆಪ್ಸ್ ತೊರಿಸಿ ಸಂಭ್ರಮಿಸಿದರು. ವಾಸ್ತವವಾಗಿ ಜುರೇಲ್ ತಮ್ಮ ಎಡಗೈ ಬೈಸೆಪ್ಸ್ ಮೇಲೆ ಜೈ ಜವಾನ್, ಜೈ ಕಿಸಾನ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು, ಆ ಟ್ಯಾಟೂ ಫೋಟೋ ಇದೀಗ ವೈರಲ್ ಆಗಿದೆ(PC-BCCI).

ಧ್ರುಲ್ ಜುರೇಲ್ ಈ ರೀತಿಯ ಟ್ಯಾಟೂ ಹಾಕಿಸಿಕೊಳ್ಳಲು ಕಾರಣವೂ ಇದೆ. ಎರಡನೇ ದಿನದಾಟ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜುರೇಲ್ ತಮ್ಮ ಟ್ಯಾಟೂ ಹಿಂದಿರುವ ಸತ್ಯವನ್ನು ಬಹಿರಂಗಪಡಿಸಿದರು. ನನ್ನ ಅಜ್ಜ ಒಬ್ಬ ರೈತ ಮತ್ತು ನನ್ನ ತಂದೆ ಸೈನಿಕ. ಆದ್ದರಿಂದ ನಾನು ಎಲ್ಲಿಂದ ಬಂದೆ ಎಂಬುದರ ಅಡಿಪಾಯ ಅದು. ನಾನು ಅದನ್ನು ಮರೆಯಲು ಬಯಸುವುದಿಲ್ಲ. ಹೀಗಾಗಿ ನಾನು ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಅಲ್ಲದೆ ಈ ಸಂಭ್ರಮಾಚರಣೆ ನನ್ನ ಅಜ್ಜ ಮತ್ತು ನನ್ನ ತಂದೆಗಾಗಿ ಎಂದು ಜುರೇಲ್ ಹೇಳಿಕೊಂಡಿದ್ದಾರೆ(PC-PTI).

ಇನ್ನು ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಜುರೇಲ್ ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯನ್ನು ಮುರಿದರು. ವಾಸ್ತವವಾಗಿ, ಜುರೆಲ್ ಶ್ರೀಲಂಕಾದಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅತಿ ಹೆಚ್ಚು ರನ್ಗಳ ಇನ್ನಿಂಗ್ಸ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಈ ದಾಖಲೆಯನ್ನು 76 ರನ್ ಬಾರಿಸಿದ್ದ ಧೋನಿ ಹೊಂದಿದ್ದರು(PC-PTI).

ಈ ಸರಣಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡಿರುವ ಧ್ರುವ್ ಜುರೆಲ್ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿಯೂ ಅದ್ಭುತ ಇನ್ನಿಂಗ್ಸ್ ಆಡಿ 51 ರನ್ ಬಾರಿಸಿದ್ದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಜುರೇಲ್ ಕೇವಲ 7 ರನ್ಗಳಿಗೆ ಔಟಾಗಿದ್ದರು. ಆದರೀಗ ಜುರೆಲ್ ಕೊಲಂಬೊದಲ್ಲಿ ಶತಕ ಬಾರಿಸುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ(PC-PTI).




