GT vs CSK, IPL 2023: ಗುಜರಾತ್ ಟೈಟಾನ್ಸ್ಗೆ ಸೋಲು: ಫೈನಲ್ಗೆ ಪ್ರವೇಶಿಸಿದ ಸಿಎಸ್ಕೆ
Gujarat Titans vs Chennai Super Kings Live Score in Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು.

GT vs CSK Live Score, IPL 2023: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. 173 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 157 ರನ್ಗಳಿಗೆ ಆಲೌಟ್ ಆಗುವ ಮೂಲಕ 15 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಸಿಎಸ್ಕೆ ಫೈನಲ್ ಪ್ರವೇಶಿಸಿದೆ.
ಹಾಗೆಯೇ ಈ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಆಡಬೇಕಿದೆ. ಅಂದರೆ ಬುಧವಾರ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ ಗುಜರಾತ್ ಟೈಟಾನ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಸಿಎಸ್ಕೆ ವಿರುದ್ಧ ಫೈನಲ್ ಆಡಲಿದೆ.
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭಮನ್ ಗಿಲ್, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ದಸುನ್ ಶಾನಕ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಗುಜರಾತ್ ಟೈಟಾನ್ಸ್ ತಂಡ ಹೀಗಿದೆ: ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ (ನಾಯಕ) , ಶುಭ್ಮನ್ ಗಿಲ್ , ದಸುನ್ ಶಾನಕ , ಡೇವಿಡ್ ಮಿಲ್ಲರ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಮೋಹಿತ್ ಶರ್ಮಾ , ನೂರ್ ಅಹ್ಮದ್ , ಮೊಹಮ್ಮದ್ ಶಮಿ , ಯಶ್ ದಯಾಳ್ , ವಿಜಯ್ ಶಂಕರ್ , ಶಿವಂ ಭರತ್ , ಶಿವಂ ಭರತ್ ಕಿಶೋರ್ , ಅಭಿನವ್ ಮನೋಹರ್ , ಓಡಿಯನ್ ಸ್ಮಿತ್ , ಅಲ್ಜಾರಿ ಜೋಸೆಫ್ , ಮ್ಯಾಥ್ಯೂ ವೇಡ್ , ಜೋಶುವಾ ಲಿಟಲ್ ,ದರ್ಶನ್ ನಲ್ಕಂಡೆ , ಉರ್ವಿಲ್ ಪಟೇಲ್ , ಸಾಯಿ ಸುದರ್ಶನ್ , ಜಯಂತ್ ಯಾದವ್ , ಪ್ರದೀಪ್ ಸಾಂಗ್ವಾನ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಾನ, ಮಿಚೆಲ್ ಸ್ಯಾಂಟರ್, ಶೇಕ್ ರಶೀದ್, ಆಕಾಶ್ ಸಿಂಗ್, ಸಿಸಂದಾ ಮಗಲಾ, ಡ್ವೈನ್ ಪ್ರಿಟೋರಿಯಸ್, ಬೆನ್ ಸ್ಟೋಕ್ಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.
LIVE NEWS & UPDATES
-
ಸಿಎಸ್ಕೆ ತಂಡಕ್ಕೆ ಭರ್ಜರಿ ಜಯ
CSK 172/7 (20)
GT 157 (20)
15 ರನ್ಗಳಿಂದ ಸೋಲನುಭವಿಸಿದ ಗುಜರಾತ್ ಟೈಟಾನ್ಸ್
-
ರಶೀದ್ ಖಾನ್ ಔಟ್
ತುಷಾರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ಆದ ರಶೀದ್ ಖಾನ್ (3))
CSK 172/7 (20)
GT 142/9 (18.3)
-
-
ಆಕರ್ಷಕ ಬೌಂಡರಿ
ತುಷಾರ್ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರಶೀದ್ ಖಾನ್
GT 142/8 (18.1)
-
35 ರನ್ಗಳ ಟಾರ್ಗೆಟ್
ಕೊನೆಯ 12 ಎಸೆತಗಳಲ್ಲಿ 35 ರನ್ಗಳ ಅವಶ್ಯಕತೆ
CSK 172/7 (20)
GT 138/8 (18)
ಕ್ರೀಸ್ನಲ್ಲಿ ರಶೀದ್ ಖಾನ್-ನೂರ್ ಅಹ್ಮದ್ ಬ್ಯಾಟಿಂಗ್
-
7ನೇ ವಿಕೆಟ್ ಪತನ
ಪತಿರಾನ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ವಿಜಯ್ ಶಂಕರ್…ಬೌಂಡರಿ ಲೈನ್ನಿಂದ ಓಡಿ ಬಂದು ಡೈವಿಂಗ್ ಕ್ಯಾಚ್ ಹಿಡಿದ ರುತುರಾಜ್…ವಿಜಯ್ ಶಂಕರ್ (14) ಔಟ್
GT 136/7 (17.3)
-
-
ಸ್ಟ್ರೈಟ್ ಹಿಟ್ ಸಿಕ್ಸ್
ತುಷಾರ್ ದೇಶಪಾಂಡೆ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರಶೀದ್ ಖಾನ್
GT 130/6 (16.4)
-
16 ಓವರ್ ಮುಕ್ತಾಯ
CSK 172/7 (20)
GT 115/6 (16)
ಕ್ರೀಸ್ನಲ್ಲಿ ರಶೀದ್ ಖಾನ್ – ವಿಜಯ್ ಶಂಕರ್ ಬ್ಯಾಟಿಂಗ್
-
ಶತಕ ಪೂರೈಸಿದ ಗುಜರಾತ್ ಟೈಟಾನ್ಸ್
CSK 172/7 (20)
GT 101/6 (14.5)
ಕ್ರೀಸ್ನಲ್ಲಿ ವಿಜಯ್ ಶಂಕರ್-ರಶೀದ್ ಖಾನ್ ಬ್ಯಾಟಿಂಗ್
-
GT 6ನೇ ವಿಕೆಟ್ ಪತನ
ಮಹೀಶ್ ತೀಕ್ಷಣ ಎಸೆತದಲ್ಲಿ ರಾಹುಲ್ ತೆವಾಟಿಯಾ (3) ಕ್ಲೀನ್ ಬೌಲ್ಡ್
GT 98/6 (14.3)
-
5ನೇ ವಿಕೆಟ್ ಪತನ
ದೀಪಕ್ ಚಹರ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್…ಶುಭ್ಮನ್ ಗಿಲ್ (42) ಔಟ್
GT 88/5 (13.1)
-
ಜಡ್ಡು ಮ್ಯಾಜಿಕ್
ಜಡೇಜಾ ಎಸೆತದಲ್ಲಿ ಡೇವಿಡ್ ಮಿಲ್ಲರ್ (4) ಬೌಲ್ಡ್
GT 88/4 (12.5)
-
12 ಓವರ್ ಮುಕ್ತಾಯ
GT 84/3 (12)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್
-
ಅರ್ಧಶತಕ ಪೂರೈಸಿದ ಗುಜರಾತ್ ಟೈಟಾನ್ಸ್
CSK 172/7 (20)
GT 54/2 (8.3)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ದಸುನ್ ಶಾನಕ ಬ್ಯಾಟಿಂಗ್ -
ಪವರ್ಪ್ಲೇ ಮುಕ್ತಾಯ
ಮೊದಲ 6 ಓವರ್ಗಳಲ್ಲಿ ಕೇವಲ 41 ರನ್ ನೀಡಿದ ಸಿಎಸ್ಕೆ
GT 41/2 (6)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ – ದಸುನ್ ಶಾನಕ ಬ್ಯಾಟಿಂಗ್
-
ಗುಜರಾತ್ ಟೈಟಾನ್ಸ್ 2ನೇ ವಿಕೆಟ್ ಪತನ
ಮಹೀಶ್ ತೀಕ್ಷಣ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ (8)
GT 41/2 (5.5)
-
5 ಓವರ್ ಮುಕ್ತಾಯ
CSK 172/7 (20)
GT 39/1 (5)
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ-ಶುಭ್ಮನ್ ಗಿಲ್ ಬ್ಯಾಟಿಂಗ್ -
ಮೊದಲ ವಿಕೆಟ್ ಪತನ
ದೀಪಕ್ ಚಹರ್ ಎಸೆತದಲ್ಲಿ ಸ್ಕ್ವೇರ್ ಲೆಗ್ನತ್ತ ಬಾರಿಸಿದ ವೃದ್ದಿಮಾನ್ ಸಾಹ…ನೇರವಾಗಿ ಫೀಲ್ಡರ್ ಕೈಗೆ ಚೆಂಡು…ಸಾಹ (12) ಔಟ್
GT 22/1 (3)
-
ವಾಟ್ ಎ ಶಾಟ್
ದೀಪಕ್ ಚಹರ್ ಎಸೆತದಲ್ಲಿ ಅತ್ಯಾಕರ್ಷಕ ಪಿಕ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ಗಿಲ್
GT 15/0 (2.1)
-
GT vs CSK Live Score, IPL 2023: ಮೊದಲ ಓವರ್ ಮುಕ್ತಾಯ
ಮೊದಲ ಓವರ್ನಲ್ಲಿ ಕೇವಲ 3 ರನ್ ನೀಡಿದ ದೀಪಕ್ ಚಹರ್
GT 3/0 (1)
ಕ್ರೀಸ್ನಲ್ಲಿ ವೃದ್ಧಿಮಾನ್ ಸಾಹ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್
-
GT vs CSK Live Score, IPL 2023: ಸಿಎಸ್ಕೆ ಇನಿಂಗ್ಸ್ ಅಂತ್ಯ
CSK 172/7 (20)
ಗುಜರಾತ್ ಟೈಟಾನ್ಸ್ ತಂಡಕ್ಕೆ 173 ರನ್ಗಳ ಸ್ಪರ್ಧಾತ್ಮಕ ಗುರಿ
-
ಭರ್ಜರಿ ಸಿಕ್ಸ್
ಶಮಿ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮೊಯೀನ್ ಅಲಿ
CSK 168/6 (19.3)
-
ಜಡ್ಡು ಹಿಟ್
ಶಮಿ ಎಸೆತದಲ್ಲಿ ಡೀಪ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ರವೀಂದ್ರ ಜಡೇಜಾ
CSK 161/6 (19.1)
-
ಕೊನೆಯ ಓವರ್ ಬಾಕಿ
CSK 157/6 (19)
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಮೊಯೀನ್ ಅಲಿ ಬ್ಯಾಟಿಂಗ್
-
ಧೋನಿ ಔಟ್
ಮೋಹಿತ್ ಶರ್ಮಾ ಎಸೆತದಲ್ಲಿ ಫ್ರಂಟ್ ಫೀಲ್ಡರ್ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ಹೊರನಡೆದ ಧೋನಿ (1)
CSK 155/6 (18.5)
-
5ನೇ ವಿಕೆಟ್ ಪತನ
ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಅಂಬಾಟಿ ರಾಯುಡು (17)
CSK 148/5 (18)
-
ಭರ್ಜರಿ ಸಿಕ್ಸ್
ರಶೀದ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಂಬಾಟಿ ರಾಯುಡು
CSK 148/4 (17.5)
-
ಶಮಿ ಮ್ಯಾಜಿಕ್
ಮೊಹಮ್ಮದ್ ಶಮಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್…ಡೆವೊನ್ ಕಾನ್ವೆ (40) ಔಟ್
CSK 125/4 (15.1)
-
ರಾಯುಡು ರಾಕಿಂಗ್
ದರ್ಶನ್ ನಲ್ಕಂಡೆ ಎಸೆತದಲ್ಲಿ ಬೌಂಡರಿ ಬಾರಿಸಿ ರನ್ ಖಾತೆ ತೆರೆದ ಅಂಬಾಟಿ ರಾಯುಡು
CSK 125/3 (15)
-
3ನೇ ವಿಕೆಟ್ ಪತನ
ದರ್ಶನ್ ನಲ್ಕಂಡೆ ಎಸೆತದಲ್ಲಿ ಸ್ಕ್ವೇರ್ನಲ್ಲಿ ಗಿಲ್ಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ಅಜಿಂಕ್ಯ ರಹಾನೆ (17)
CSK 121/3 (14.5)
-
ರಾಕಿಂಗ್ ರಹಾನೆ
ದರ್ಶನ್ ನಲ್ಕಂಡೆ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಹಾನೆ
CSK 121/2 (14.4)
-
ವೆಲ್ಕಂ ಬೌಂಡರಿ
ದರ್ಶನ್ ನಲ್ಕಂಡೆ ಎಸೆತದಲ್ಲಿ ಕಾನ್ವೆ ಬ್ಯಾಟ್ ಎಡ್ಜ್..ವಿಕೆಟ್ ಕೀಪರ್ನ ವಂಚಿಸಿ ಚೆಂಡು ಬೌಂಡರಿಗೆ…ಫೋರ್
CSK 114/2 (14.2)
-
ಶತಕ ಪೂರೈಸಿದ ಸಿಎಸ್ಕೆ
CSK 100/2 (13.1)
ಕ್ರೀಸ್ನಲ್ಲಿ ಕಾನ್ವೆ ಹಾಗೂ ರಹಾನೆ ಬ್ಯಾಟಿಂಗ್
-
ಚೆನ್ನೈ ಸೂಪರ್ ಕಿಂಗ್ಸ್ 2ನೇ ವಿಕೆಟ್ ಪತನ
ನೂರ್ ಅಹ್ಮದ್ ಎಸೆತದಲ್ಲಿ ಶಿವಂ ದುಬೆ (1) ಕ್ಲೀನ್ ಬೌಲ್ಡ್
CSK 90/2 (11.3)
-
GT vs CSK Live Score, IPL 2023: ಚೆನ್ನೈ ಸೂಪರ್ ಕಿಂಗ್ಸ್ ಮೊದಲ ವಿಕೆಟ್ ಪತನ
ಮೋಹಿತ್ ಶರ್ಮಾ ಎಸೆತದಲ್ಲಿ ಕ್ಯಾಚ್ ನೀಡಿದ ರುತುರಾಜ್ ಗಾಯಕ್ವಾಡ್
44 ಎಸೆತಗಳಲ್ಲಿ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರುತುರಾಜ್
CSK 87/1 (10.3)
-
10 ಓವರ್ ಮುಕ್ತಾಯ
CSK 85/0 (10)
ಕ್ರೀಸ್ನಲ್ಲಿ ಕಾನ್ವೆ (24) ಹಾಗೂ ರುತುರಾಜ್ (60) ಬ್ಯಾಟಿಂಗ್
-
ಕಾನ್ವೆ ಸ್ಕ್ವೇರ್ ಕಟ್
ನೂರ್ ಅಹ್ಮದ್ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಫೋರ್ ಬಾರಿಸಿದ ಡೆವೊನ್ ಕಾನ್ವೆ
CSK 81/0 (9.2)
-
GT vs CSK Live Score, IPL 2023: ಅರ್ಧಶತಕ ಪೂರೈಸಿದ ರುತುರಾಜ್
36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರುತುರಾಜ್ ಗಾಯಕ್ವಾಡ್
CSK 70/0 (8.3)
-
ಪವರ್ಪ್ಲೇ ಮುಕ್ತಾಯ
ಮೊದಲ 6 ಓವರ್ಗಳಲ್ಲಿ 49 ರನ್ ಕಲೆಹಾಕಿದ ಸಿಎಸ್ಕೆ
ಕ್ರೀಸ್ನಲ್ಲಿ ಡೆವೊನ್ ಕಾನ್ವೆ (14) ಹಾಗೂ ರುತುರಾಜ್ ಗಾಯಕ್ವಾಡ್ (33) ಬ್ಯಾಟಿಂಗ್
CSK 49/0 (6)
-
ಸಖತ್ ಶಾಟ್
ನೂರ್ ಅಹ್ಮದ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕವಾಗಿ ಫೋರ್ ಬಾರಿಸಿದ ನೂರ್ ಅಹ್ಮದ್
CSK 44/0 (5.1)
-
5 ಓವರ್ ಮುಕ್ತಾಯ
CSK 40/0 (5)
ರುತುರಾಜ್ (28) ಹಾಗೂ ಕಾನ್ವೆ (10) ಬ್ಯಾಟಿಂಗ್
-
ಆಕರ್ಷಕ ಬೌಂಡರಿ
ದರ್ಶನ್ ನಲ್ಕಂಡೆಯ ಕೊನೆಯ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಡೆವೊನ್ ಕಾನ್ವೆ
CSK 31/0 (4)
-
ಕವರ್ ಡ್ರೈವ್
ಶಮಿ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ರುತುರಾಜ್ ಗಾಯಕ್ವಾಡ್
CSK 23/0 (2.4)
-
2 ಓವರ್ ಮುಕ್ತಾಯ
CSK 18/0 (2)
ಕ್ರೀಸ್ನಲ್ಲಿ ಕಾನ್ವೆ-ಗಾಯಕ್ವಾಡ್ ಬ್ಯಾಟಿಂಗ್
-
GT vs CSK Live Score, IPL 2023: ಭರ್ಜರಿ ಸಿಕ್ಸ್
ದರ್ಶನ್ ನಲ್ಕಂಡೆ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರುತುರಾಜ್
CSK 12/0 (1.3)
-
GT vs CSK Live Score, IPL 2023: ಮೊದಲ ಓವರ್ ಮುಕ್ತಾಯ
ಮೊದಲ ಓವರ್ನಲ್ಲಿ ಕೇವಲ 4 ರನ್ ನೀಡಿದ ಶಮಿ
CSK 4/0 (1)
ಕ್ರೀಸ್ನಲ್ಲಿ ಕಾನ್ವೆ-ಗಾಯಕ್ವಾಡ್ ಬ್ಯಾಟಿಂಗ್
-
GT vs CSK Live Score, IPL 2023: ಸಿಎಸ್ಕೆ ಇನಿಂಗ್ಸ್ ಆರಂಭ
ಮೊದಲ ಓವರ್: ಮೊಹಮ್ಮದ್ ಶಮಿ
ಆರಂಭಿಕರು: ರುತುರಾಜ್ ಗಾಯಕ್ವಾಡ್-ಡೆವೊನ್ ಕಾನ್ವೆ
-
GT vs CSK Live Score, IPL 2023: ಉಭಯ ತಂಡಗಳು ಹೀಗಿವೆ
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭಮನ್ ಗಿಲ್, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ದಸುನ್ ಶಾನಕ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
-
GT vs CSK Live Score, IPL 2023: ಟಾಸ್ ಗೆದ್ದ ಗುಜರಾತ್ ಟೈಟಾನ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
GT vs CSK Live Score, IPL 2023: ಮೊದಲ ಕ್ವಾಲಿಫೈಯರ್ ಪಂದ್ಯ
Hello from Chennai ?
It’s time for #Qualifier1 ? #TATAIPL | #GTvCSK
Gujarat Titans or Chennai Super Kings?
Let’s hear who you’re rooting for ? pic.twitter.com/gR8AjwPXm4
— IndianPremierLeague (@IPL) May 23, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು: 7.30 ಕ್ಕೆ
ಸ್ಥಳ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
Published On - May 23,2023 6:29 PM