ಭಾರತ vs ಆಸ್ಟ್ರೇಲಿಯಾ: ಸರಣಿ ಗೆಲ್ಲಲು ಟೀಂ ಇಂಡಿಯಾಗೆ 287 ರನ್ ಟಾರ್ಗೆಟ್
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಹಾಗು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 287 ರನ್ಗಳ ಅಗತ್ಯವಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 50 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 3ರನ್, ಆ್ಯರನ್ ಫಿಂಚ್ 19, ಸ್ಟೀವ್ ಸ್ಮಿತ್ 131, ಮಾರ್ನಸ್ ಲಾಬುಶೇನ್ 54, ಮಿಚೆಲ್ ಸ್ಟಾರ್ಕ್ 0, ಅಲೆಕ್ಸ್ ಕ್ಯಾರಿ 35, ಆಷ್ಟನ್ ಟರ್ನರ್ 4, ಆ್ಯಡಂ ಜಂಪಾ […]
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಹಾಗು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 287 ರನ್ಗಳ ಅಗತ್ಯವಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 50 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 3ರನ್, ಆ್ಯರನ್ ಫಿಂಚ್ 19, ಸ್ಟೀವ್ ಸ್ಮಿತ್ 131, ಮಾರ್ನಸ್ ಲಾಬುಶೇನ್ 54, ಮಿಚೆಲ್ ಸ್ಟಾರ್ಕ್ 0, ಅಲೆಕ್ಸ್ ಕ್ಯಾರಿ 35, ಆಷ್ಟನ್ ಟರ್ನರ್ 4, ಆ್ಯಡಂ ಜಂಪಾ 1, ಪ್ಯಾಟ್ ಕಮಿನ್ಸ್ 0, ಔಟಾಗದೆ ಆಷ್ಟನ್ ಅಗರ್ 11 ಹಾಗು ಜೋಶ್ ಹ್ಯಾಜಲ್‌ವುಡ್ 1 ರನ್ ಗಳಿಸಿದ್ದಾರೆ.
ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದಿದ್ದಾರೆ. ರವೀಂದ್ರ ಜಡೇಜಗೆ 2 ವಿಕೆಟ್, ಕುಲದೀಪ್ ಯಾದವ್ , ನವದೀಪ್ ಸೈನಿ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಪಂದ್ಯ ಗೆದ್ದಿರುವ ಉಭಯ ತಂಡಗಳಿಗೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ.
Published On - 5:31 pm, Sun, 19 January 20