ಕ್ಯಾಪ್ಟನ್ ಕೂಲ್ ಧೋನಿಯ ಹೃದಯ ವೈಶಾಲ್ಯತೆಗೆ Fans ಫುಲ್ ಫಿದಾ
ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳ ವ್ಯಕ್ತಿತ್ವದಿಂದ ಮತ್ತೊಮ್ಮೆ ಕ್ರಿಕೆಟ್ ಪ್ರಿಯರ ಹೃದಯಗಳನ್ನು ಗೆದ್ದಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಧೋನಿ ಮತ್ತು ಆಲ್‌ರೌಂಡರ್ ಸುರೇಶ್ ರೈನಾ UAEನಲ್ಲಿ ನಡೆಯಲಿರುವ IPL 2020 ಕ್ಕೆ ಶುಕ್ರವಾರ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದವರೊಂದಿಗೆ ವಿಮಾನದಲ್ಲಿ UAEಗೆ ತೆರಳಿದರು. ಈ ವೇಳೆ, ಧೋನಿ ತನ್ನ ಬಿಸಿನೆಸ್ ಕ್ಲಾಸ್ ಸೀಟನ್ನು ಫ್ರ್ಯಾಂಚೈಸ್ ನಿರ್ದೇಶಕರಾದ ಕೆ. ಜಾರ್ಜ್ […]
ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳ ವ್ಯಕ್ತಿತ್ವದಿಂದ ಮತ್ತೊಮ್ಮೆ ಕ್ರಿಕೆಟ್ ಪ್ರಿಯರ ಹೃದಯಗಳನ್ನು ಗೆದ್ದಿದ್ದಾರೆ.
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಧೋನಿ ಮತ್ತು ಆಲ್‌ರೌಂಡರ್ ಸುರೇಶ್ ರೈನಾ UAEನಲ್ಲಿ ನಡೆಯಲಿರುವ IPL 2020 ಕ್ಕೆ ಶುಕ್ರವಾರ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದವರೊಂದಿಗೆ ವಿಮಾನದಲ್ಲಿ UAEಗೆ ತೆರಳಿದರು.
ಈ ವೇಳೆ, ಧೋನಿ ತನ್ನ ಬಿಸಿನೆಸ್ ಕ್ಲಾಸ್ ಸೀಟನ್ನು ಫ್ರ್ಯಾಂಚೈಸ್ ನಿರ್ದೇಶಕರಾದ ಕೆ. ಜಾರ್ಜ್ ಜಾನ್‌ಗೆ ಬಿಟ್ಟುಕೊಟ್ಟು, ಅವರು ಕುಳಿತಿದ್ದ ಎಕಾನಮಿ ಕ್ಲಾಸ್ ಸೀಟ್ನಲ್ಲಿ ತಾವು ಕುಳಿತು UAEಗೆ ಪ್ರಯಾಣ ಬೆಳೆಸಿದ್ದಾರೆ. ಜಾರ್ಜ್ರ ಕಾಲುಗಳು ಬಹಳ ಉದ್ದವಾಗಿದ್ದು ಎಕಾನಮಿ ಕ್ಲಾಸ್ ಸೀಟ್ನಲ್ಲಿ ಕೂರಲು ಕಷ್ಟ ಪಡುತ್ತಿದ್ದುದ್ದನ್ನು ಕಂಡ ಧೋನಿ,ತಾವು ಕೂತಿದ್ದ ಬಿಸಿನೆಸ್ ಕ್ಲಾಸ್ ಸೀಟನ್ನು ಜಾರ್ಜ್ಗೆ ಬಿಟ್ಟುಕೊಟ್ಟಿದ್ದಾರೆ.ಈ ವಿಚಾರವನ್ನು ಖುದ್ದು ಜಾರ್ಜ್ ಜಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೇ IPL ನಲ್ಲಿ ಪಾಲ್ಗೊಳ್ಳಲು ಮೊನ್ನೆ RCB ತಂಡದ ನಾಯಕ ವಿರಾಟ್ ಕೊಹ್ಲಿ ಕೊವಿಡ್ ಮುಂಜಾಗ್ರತಾ ಕ್ರಮವಾಗಿ ಏಕಾಂಗಿಯಾಗಿ ಮುಂಬೈ ಟು ದುಬೈ ವಿಮಾನದಲ್ಲಿ ಹಾರಿದ್ದರು ಎಂಬುದು ಗಮನಾರ್ಹ.
When a man who’s seen it all, done it all in Cricket tells you, “Your legs are too long, sit in my seat (Business Class), I’ll sit in Economy.” The skipper never fails to amaze me. @msdhoni pic.twitter.com/bE3W99I4P6
— george (@georgejohn1973) August 21, 2020
Published On - 1:46 pm, Sun, 23 August 20